ಮಾಜಿ ಕಾರ್ಪೋರೇಟರ್ ಪುತ್ರನ ಚಳಿ ಬಿಡಿಸಿದ ಪಾಲಿಕೆ ಆಯುಕ್ತ

ತುಮಕೂರು: ಶುದ್ದ ಕುಡಿಯುವ ನೀರಿನ ಘಟಕ ಸರಿಯಾಗಿ ನಿರ್ವಹಿಸದ, ವಿದ್ಯುತ್ ಬಿಲ್ ತುಂಬದ ಮಾಜಿ ಕಾರ್ಪೋರೇಟರ್ ಪುತ್ರನನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ತೀವ್ರ ತರಾಟೆಗೆ ತಗೆದುಕೊಂಡ ಘಟನೆ ನಡೆದಿದೆ.

ನಗರದ 24 ನೇ ವಾರ್ಡ್ ನಲ್ಲಿನ ಶುದ್ದ ಕುಡಿಯುವ ನೀರಿನ ಘಟಕ ಸರಿಯಾಗಿ ನಿರ್ವಹಿಸದ ಹಿನ್ನಲೆ ಮಹಾನಗರ ಪಾಲಿಕೆ ಆಯುಕ್ತರು ಘಟಕ ವಶಕ್ಕೆ ಮುಂದಾಗಿದ್ದರು. ಘಟಕದ ನಿರ್ವಹಣೆಯ ಉಸ್ತುವಾರಿವಹಿಸಿರುವ ವಸೀಂಖಾನ್ ಶೇರಾನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ‘ನಾನು ಮಾಜಿ ಕಾರ್ಪೋರೇಟರ್ ಮಗ’ ಎಂದು ಧಮಕಿ ಹಾಕಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಪಾಲಿಕೆ ಆಯುಕ್ತ ಏನಿವಾಗ ಮಾಜಿ ಕಾರ್ಪೋರೇಟರ್ ಮಗ ಅಂದ್ರೆ ಕೊಂಬಿದಿಯಾ’ ಎಂದು ಚಳಿ ಬಿಡಿಸಿದರು.

Leave a Reply

Your email address will not be published.