ಮಕ್ಕಳಾಗದಿದ್ದಕ್ಕೆ ಮನನೊಂದು ಕೃಷ್ಣಾ ನದಿಗೆ ಹಾರಿದ ದಂಪತಿ!!

ವಿಜಯಪುರ: ಮಕ್ಕಳಾಗದಿದ್ದಕ್ಕೆ ಮನನೊಂದು ದಂಪತಿ ಜಿಲ್ಲೆಯ ಕೋಲ್ಹಾರ್ ಬಳಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದ ರಮೇಶ ಮಳ್ಳೆಪ್ಪ , ಪತ್ನಿ ಮಲ್ಲಮ್ಮ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ರಮೇಶ ಸಾವನ್ನಪ್ಪಿದ್ದಾನೆ. ಆತನ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಮಲ್ಲಮ್ಮ ಸೇತುವೆ ಮೇಲಿಂದ ಹಾರುವಾಗ ಸೀರೆ ಸೆರಗು ಸಿಕ್ಕಿಹಾಕಿಕೊಂಡಿದ್ದರಿಂದ ಬದುಕುಳಿದಿದ್ದಾರೆ. ಮದುವೆಯಾಗಿ 4 ವರ್ಷ ಕಳೆದರು ಸಹ ಮಕ್ಕಳಾಗದಿದ್ದಕ್ಕೆ ಮನನೊಂದು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋಲ್ಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.