ನೀರವ್ ಮೋದಿಗೆ ನಾಲ್ಕನೇ ಬಾರಿಯೂ ಜಾಮೀನು ನಿರಾಕರಣೆ!

ನೀರವ್ ಮೋದಿಗೆ ನಾಲ್ಕನೇ ಬಾರಿಯೂ ಜಾಮೀನು ನಿರಾಕರಣೆ!

ಲಂಡನ್ (ಯುಕೆ):ಬ್ಯಾಂಕಿಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ನೀರವ್ ಮೋದಿಗೆ ಜಾಮೀನು ನೀಡಲು ಇಲ್ಲಿಯ ರಾಯಲ್ ಕೋರ್ಟ್ ಬುಧವಾರ ನಿರಾಕರಿಸಿದೆ. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಹಿಂದೆ ಮೋದಿಯ ಮೂರು ಜಾಮೀನು ಅರ್ಜಿಗಳು ತಿರಸ್ಕಾರಗೊಂಡಿದ್ದವು.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾಲ ಮರುಪಾವತಿಸದ ಕಾರಣಕ್ಕಾಗಿ ಮಾರ್ಚ್ 19 ರಂದು ನೀರವ್ ಮೋದಿಯನ್ನು ಸ್ಕಾಟ್ ಲ್ಯಂಡ್ ಯಾರ್ಡ ಪೊಲೀಸರು ಬಂಧಿಸಿದ್ದರು.

ಮೋದಿ ಪರವಾಗಿ ವಾದ ಮಂಡಿಸಿದ್ದ ನ್ಯಾಯವಾದಿ ಕ್ಲೇರ್ ಮಂಟಗೋಮರಿ, ಜಾಮೀನು ಸಿಕ್ಕರೆ ಮೋದಿಗೆ ಇಲೆಕ್ಟ್ರಾನಿಕ್ ಉಪಕರಣ ಅಳವಡಿಸುವ ಮೂಲಕ ಅವರ ಚಲನವಲನಗಳ ಮೇಲೆ ನಿಗಾ ಇಡಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.


don. (ANI)

Leave a Reply

Your email address will not be published.