ಶಿವಯೋಗಿ ಧ್ಯಾನ ಮಂದಿರ ಕಟ್ಟಡ ಕಾಮಗಾರಿಗೆ ತೋಂಟದ ಶ್ರೀಯಿಂದ ಚಾಲನೆ

ಬೆಳಗಾವಿ: ಹೊರವಲಯದ ಭೂತರಾಮನಹಟ್ಟಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿ ಧ್ಯಾನ ಮಂದಿರ ಕಟ್ಟಡ ಕಾಮಗಾರಿಗೆ ಗದಗ ತೋಂಟದ ಡಾ. ಸಿದ್ದರಾಮ ಸ್ವಾಮೀಜಿಗಳು ಇಂದು ಚಾಲನೆ ನೀಡಿದರು.

ಮುರುಘೇಂದ್ರ ಶಿವಯೋಗಿ ಧ್ಯಾನ ಮಂದಿರದಿಂದ ಟ್ರಸ್ಟ್ ವತಿಯಿಂದ ಧ್ಯಾನ ಮಂದಿರ ನಿರ್ಮಿಸಲಾಗುತ್ತಿದೆ. ಇಂದು ತೋಂಟದ ಶ್ರೀಗಳು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಗಳು, ಹಿಟ್ನಿಯ ಪ್ರಭುಲಿಂಗ ಶಿವಾಚಾರ್ಯ ಸ್ವಾಮಿಗಳು,ನಾಗನೂರು ರುದ್ರಾಕ್ಷಿ ಮಠದ ಡಾ. ಸಾವಳಗಿ ದೇವರು, ಶೇಗುಣಸಿ ವಿರಕ್ತ ಮಠದ ಮಹಾಂತ ದೇವರು, ಅಥಣಿ ಮೋಗಟಿಮಠದ ಪ್ರಭುಚನ್ನಬಸವ ಸ್ವಾಮೀಜಿ,ಹೊಸ ವಂಟಮುರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹಾದೇವಿ ಚೌಗಲಾ, ಧ್ಯಾನ ಮಂದಿರ ಟ್ರಸ್ಟ್ ನ ಸಮಸ್ತ ಪದಾಧಿಕಾರಿಗಳು, ಶ್ರೀ ಶಿವಯೋಗಿ ಕೋಟಿ ಆಪ್ ಸೊಸೈಟಿ, ಅಥಣಿ ಶ್ರೀ ಶಿವಯೋಗಿ ಮುರುಘೇಂದ್ರ ಅರ್ಬನ್ ಬ್ಯಾಂಕ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.