ಹೆತ್ತವರನ್ನು ತೊರೆದವರಿಗೆ ಜೈಲು ಸೇರಿಸಲು ಬಿಹಾರ ಸರ್ಕಾರ ನಿರ್ಧಾರ

ಪಾಟ್ನಾ: ಇಳಿ ವಯಸ್ಸಿನ ತಂದೆ-ತಾಯಿಗೆ ತೊರೆಯುವ ಮಕ್ಕಳನ್ನು ಜೈಲು ಶಿಕ್ಷೆ ನೀಡುವ ಮಹತ್ವದ ನಿರ್ಧಾರವನ್ನು ಬಿಹಾರ ಸಿಎಂ ನೀತಿಶ ಕುಮಾರ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ.

ಬಿಹಾರ ಸರ್ಕಾರ ಇಳಿ ವಯಸ್ಸಿನ ತಂದೆ ತಾಯಿಯನ್ನು ಅನಾಥಾಶ್ರಾಮಕ್ಕೆ ಸೇರಿಸುವ ಅಥವಾ ತೊರೆಯುವ ಮಕ್ಕಳನ್ನು ಜೈಲು ಶಿಕ್ಷೆ ವಿಧಿಸಲಿದೆ.

ಶೋಷಿತ ತಂದೆ ತಾಯಿ ಮಗ ಅಥವಾ ಮಗಳು ವಿರುದ್ಧ ದೂರು ನೀಡಿದ್ದಲ್ಲಿ ಜಾಮೀನು ರಹಿತ ಸೆಕ್ಷನ ಅಡಿ ಪ್ರಕರಣ ದಾಖಲಿಸಲಾಗುವುದು.

ರಾಜ್ಯ ಸಮಾಜ ಕಲ್ಯಾಣ ಇಲಾಖೆ ಈ ಪ್ರಸ್ತಾವಣೆಯನ್ನು ಸರ್ಕಾರದ ಸಂಪುಟದಲ್ಲಿ ತಂದಿದ್ದು ಮಂಗಳವಾರ ಇದಕ್ಕೆ ಅನುಮೋದನೆ ಸಿಕ್ಕಿದೆ.

Leave a Reply

Your email address will not be published.