ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಇಂದು ಅಮಿತ್ ಶಾ ಸಭೆ

ಹೊಸದಿಲ್ಲಿ: ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ರಾಜ್ಯ ಅಧ್ಯಕ್ಷರುಗಳ ಸಭೆ ಗುರುವಾರ ಹೊಸದಿಲ್ಲಿಯಲ್ಲಿ ನಡೆಯಲಿದ್ದು, ಅಮಿತ ಶಾ ಅಧ್ಯಕ್ಷತೆ ವಹಿಸಲಿದ್ದಾರೆ.

ಹೊಸದಿಲ್ಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ವಿವಿಧ ರಾಜ್ಯಗಳ ುಸ್ತುವಾರಿಗಳು ಮತ್ತು ಇತರೆ ಮುಖಂಡರೂ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಂಪಾದಿಸಿದ ನಂತರ ರಾಜ್ಯಗಳ ಮುಖ್ಯಸ್ಥರೊಂದಿಗೆ ಅಮಿತ ಶಾ ನಡೆಸುತ್ತಿರು ಪ್ರಥಮ ಸಭೆ ಇದಾಗಿದೆ.

ಬುಧವಾರವಷ್ಟೇ ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯನ್ನು ಪುನಾರಚನೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸದಸ್ಯರಾಗಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಲೋಕಸಭೆಯ ಉಪನಾಯಕರನ್ನಾಗಿ ನಿಯೋಜಿಸಲಾಗಿದೆ.


Leave a Reply

Your email address will not be published.