ಅಧಿವೇಶನಕ್ಕೆ ಸಿದ್ದತೆ: ಇಂದು ಸಂಜೆ ” ಕೈ ” ನಾಯಕರ ಸಭೆಯಲ್ಲಿ ಸೋನಿಯಾ ಪಾಲ್ಗೊಳ್ಳುತ್ತಿಲ್ಲ ಏಕೆ ಗೊತ್ತಾ…?!

ಹೊಸದಿಲ್ಲಿ:ಜೂನ್ 17 ರಂದು ಆರಂಭವಾಗಲಿರುವ ಲೋಕಸಭೆ ಅಧಿವೇಶನದ ಸಿದ್ದತೆಗಾಗಿ ಚರ್ಚಿಸಲು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಬುಧವಾರ ಸಂಜೆ ಮಹತ್ವದ ಸಭೆ ನಡೆಸಲಿದ್ದಾರೆ.

ಗುಲಾಂ ನಬಿ ಆಝಾದ, ಪಿ. ಚಿದಂಬರಂ,ಅಶೋಕ ಗೆಲ್ಹೋಟ, ಮಲ್ಲಿಕಾರ್ಜುನ ಖರ್ಗೆ, ಅಹ್ಮದ ಪಟೇಲ್, ಜಯರಾಂ ರಮೇಶ,ರಣದೀಪ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ ಸೇರಿದಂತೆ ಹಲವು ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸುವರು.ಇಲ್ಲಿಯ ರಕಬಗಂಜ್ ರಸ್ತೆಯಲ್ಲಿರುವ ಕಾಂಗ್ರೆಸ್ ವಾರ್ ರೂಂ ನಲ್ಲಿ ಇಂದು ಸಂಜೆ ಈ ಸಭೆ ನಡೆಯುವುದು.ಆದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಸ್ವಕ್ಷೇತ್ರರಾಯ್ ಬರೇಲಿಗೆ ಮೊದಲ ಬಾರಿ ಭೇಟಿ ನೀಡುತ್ತಿರುವುದರಿಮದ ೀ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಯಾರಾಗಬೇಕು ? ಹಾಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ರಾಹುಲ್ ಗಾಂಧಿ ನಿರಾಕರಿಸುತ್ತಿರುವುದರಿಂದ ಻ದಕ್ಕೆ ಏನು ಪರಿಹಾರ ಹುಡುಕಬೇಕು ಎಂಬ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ. .ರಾಹುಲ್ ಗಾಂಧಿ, ತಿರುವನಂತಪುರಂ ಸಂಸದ ಶಶಿ ತರೂರ್, ಆನಂದಪುರ ಸಾಹೀಬ್ ಸಂಸದ ಮನೀಷ್ ತಿವಾರಿ, ಬೆರಹಾಂಪುರ ಸಂಸದ ಅಧೀರ್ ರಂಜನ್ ಚೌಧರಿ ಹಾಗೂ ಕಾಲಿಯಾಬೋರ್ ಸಂಸದಗೌರವ್ ಗೋಗೊಯಿಅವರ ಹೆಸರುಗಳು ಲೋಕಸಭೆಯ ಕಾಂಗ್ರೆಸ್ ನಾಯಕನ ಹುದ್ದೆಗೆ ಕೇಳಿಬರುತ್ತಿವೆ. ಸೋನಿಯಾ ಗಾಂಧಿಯವರೇ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.2014-19 ರ ಅವಧಿಯಲ್ಲಿ ಲೋಖಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಕಲಬುರಗಿ ಕ್ಷೇತ್ರದಲ್ಲಿ ಸೋಲುಂಡ ಬಳಿ ಕ ಆ ಹುದ್ದೆಯ ರೇಸ್ ನಲ್ಲಿ ಇಲ್ಲ. ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿ, ಚೀಫ್ ವ್ಹಿಪ್ ಹಾಗೂ ಇತರೆ ಇಬ್ಬರು ವ್ಹಿಪ್ ಗಳು ಮತ್ತು ಉಪನಾಯಕನ ಹುದ್ದೆಗೆ ಯಾರನ್ನು ನೇಮಮಿಸಬೇಕಂಬ ಬಗ್ಗೆಯೂ ಸಭೆ ನಿರ್ಧರಿಸಲಿದೆ. ಜೂನ್ 1 ರಂದು ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರ಻ಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ . ಜೂನ್ 17 ರಂದು 17 ಲೋಕಸಭೆಯ ನೂತನ ಸದಸ್ಯರ ಮೊದಲ ಸಭೆ ನಡೆಯಲಿದೆ. ನೂತನ ಸಂಸದರು 17 ಮತ್ತು 18 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, 19 ರಂದು ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.ಹೊಸ ಸರಕಾರದ ಬಜೆಟ್ ಮಂಡನೆ ಜುಲೈ 5 ರಂದು ಆಗಲಿದೆ.

ಗುಲಾಂ

Leave a Reply

Your email address will not be published.