ವಂದೇಮಾತರಂ ಹಾಡಲು ರಾಷ್ಟ್ರಗೀತೆ ಅರ್ಧಕ್ಕೆ ನಿಲ್ಲಿಸಿದ ಬಿಜೆಪಿ ಸದಸ್ಯರು: ವಿಡಿಯೋ ವೈರಲ್

ಇಂಧೋರ್: ಇಲ್ಲಿನ ಬಿಜೆಪಿ ಬೆಂಬಲಿತ ಮಹಾನಗರಪಾಲಿಕೆಯ ಸದಸ್ಯರ ವಿರುದ್ಧ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಆರೋಪ ಕೇಳಿಬಂದಿದೆ.

ನಿನ್ನೆ ಇಂದೋರ್ ಮಹಾನಗರಪಾಲಿಕೆಯ ಬಜೆಟ್ ಅಧಿವೇಶನ ಮುನ್ನ ಎಲ್ಲ ಸದಸ್ಯರು ರಾಷ್ಟ್ರ ಗೀತೆ ಹಾಡುತ್ತಿದ್ದರು. ಆದ್ರೆ ರಾಷ್ಟ್ರಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ವಂದೇಮಾತರಂ ಹಾಡಲು ಪ್ರಾರಂಭಿಸಿದ ಸದಸ್ಯರು ವಂದೇಮಾತರಂ ಹಾಡನ್ನು ಕೊನೆಯವರೆಗೂ ಹಾಡಿದ್ದಾರೆ ಎನ್ನಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗೊಂಡಿದ್ದು ವ್ಯಾಪಕ ಆಕ್ರೋಷ ವ್ಯಕ್ತವಾಗುತ್ತಿದೆ.

ವಿರೋಧ ಪಕ್ಷದ ಸದಸ್ಯರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ವಿಡಿಯೋದಲ್ಲಿ ಮೇಯರ್ ಮಾಲಿನಿ ಗೌಡ ಜೊತೆ ಬಿಜೆಪಿ ಶಾಸಕರೊಬ್ಬರು ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.