ಕೊಲೆ ಯತ್ನ, ಕೊಲೆ ಬೆದರಿಕೆ ಆರೋಪಿಗೂ ನಮಗೂ ಸಂಬಂಧವಿಲ್ಲ : ಮಾಲತಿ ನಾಯಕ

ಕೊಲೆ ಯತ್ನ, ಕೊಲೆ ಬೆದರಿಕೆ ಆರೋಪಿಗೂ ನಮಗೂ ಸಂಬಂಧವಿಲ್ಲ : ಮಾಲತಿ ನಾಯಕ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ‘ಕೊಲೆ ಯತ್ನ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿರುವ ಆರೋಪಿಗೆ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆರೋಪಿ ಪಿಎಸ್‌ಐ ಮನೆಯಲ್ಲಿ’ ಎಂಬ ಸುದ್ದಿ ಪ್ರಕಟವಾಗಿರುವ ಹಿನ್ನಲೆಯಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿತನ ಮೇಲೆ ಪ್ರಕರಣ ದಾಖಲಾಗಿರುವುದು ನನಗಾಗಲಿ, ನನ್ನ ಪತಿ ಪಿಎಸ್‌ಐ ರಾಮಣ್ಣ ಅವರಿಗೆಯಾಗಲಿ ಯಾವುದೇ ಮಾಹಿತಿ ಗೊತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಈ ಹಿಂದೆ ಕೊಪ್ಪಳ ಜಿಲ್ಲೆಯ ಸೇವೆ ಸಲ್ಲಿಸಿದ್ದ ಕೃಷ್ಣವೇಣಿ ನಮಗೆ ಮುಂಚಿನಿಂದಲೂ ಪರಿಚಯ. ಅವರ ಜೊತೆ ನಮ್ಮ ಮನೆಗೆ ಶರಣಪ್ಪ ಕೊತ್ವಾಲ್ ಬಂದಿದ್ದರು. ಅದು ಅಷ್ಟೇ ಸತ್ಯ’ ಉಳಿದಂತೆ ಆರೋಪಿಗೂ ನಮಗೂ ಯಾವುದೇ ಸಂಬಂಧಗಳು ಇಲ್ಲ, ರಾಜಕೀಯ ದುರುದ್ದೇಶದಿಂದ ಆರೋಪಿಯನ್ನು ತಮ್ಮ ಮನೆಗೆ ಕಳುಹಿಸಿರುವ ಅನುಮಾನವಿದೆ ಎಂದರು.

ಗಜೇಂದ್ರಗಡದ ನಮ್ಮ ಮನೆಯಲ್ಲಿ ’15 ದಿನಗಳ ಕಾಲ ಶರಣು ಕೊತ್ವಾಲ್ ಇದ್ದರು ಎಂದು ವರದಿಯಾಗಿದೆ. ‘ಈ ಪ್ರಕರಣದಿಂದ ನಮ್ಮ ಕುಟುಂಬಕ್ಕೆ ಮಾನಸಿಕ ಕಿರುಕುಳವಾಗುತ್ತಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ನಾನು ದಲಿತ ವರ್ಗಕ್ಕೆ ಸೇರಿದ್ದರಿಂದ ಅದರಲ್ಲೂ ಮಹಿಳೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಅಪಪ್ರಚಾರ ಮಾಡಲು ಸುಳ್ಳು ಮಾಹಿತಿಗಳನ್ನು ಹಬ್ಬಿಸಲಾಗುತ್ತದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಅರ್ಜುನ ನಾಯಕ, ಶಿವಪುತ್ರಪ್ಪ ಗುಮಗೇರಿ, ಮಕ್ಬೂಲ್‌ಸಾಬ್ ಮತ್ತು ವಾಲ್ಮೀಕಿ ಸಮಾಜದ ಇತರರು ಇದ್ದರು

ಮಾಲತಿ ನಾಯಕ ಅವರ ಮೇಲಿನ ಆರೋಪ ಸತ್ಯಕ್ಕೆ ದೂರವಾದದು. ವಾಲ್ಮೀಕಿ ಸಮಾಜದ ಮಹಿಳೆ ರಾಜಕೀಯ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿರು ಅವರನ್ನು ರಾಜಕೀಯವಾಗಿ ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಸುದ್ದಿ ಹರಡಲಾಗುತ್ತಿದೆ’, ಸತ್ಯಾಸತ್ಯೆಯ ಬಗ್ಗೆ ಮುಖಂಡರು ಚರ್ಚಿಸಿ, ಮುಂದಿನ ತೀರ್ಮಾನಕೈಗೊಳ್ಳುತ್ತೇವೆ- ಟಿ.ರತ್ನಾಕರ, ವಾಲ್ಮೀಕಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರು

Leave a Reply

Your email address will not be published.