ವಂಚಕ ಐಎಂಎ ಗೂ ತಮಗೂ ಸಂಬಂಧವಿಲ್ಲ ಎಂದ್ರು ರೋಷನ್ ಬೇಗ್….!

ಬೆಂಗಳೂರು: ಚಿನ್ನದ ವ್ಯಾಪಾರದ ಹೆಸರಿನಲ್ಲಿ ಸಾವಿರಾರು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಐಎಂಎ ಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಮಾಜಿ ಸಚಿವ ರೋಷನ್ ಬೇಗ್ ಸ್ಪಷ್ಟಪಡಿಸಿದ್ದಾರೆ.

ಐಎಂ ಎ ಸಂಸ್ಥಾಪಕ ಮೊಹ್ಮದ ಮನ್ಸೂರ್ ಬಿಡುಗಡೆ ಮಾಡಿದ್ದಾನೆ ಎನ್ನಲಾದ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಇಲ್ಲಿಯ ಪ್ರೆಸ್ ಕ್ಲಬ್ ನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ರೋಷನ್ ಬೇಗ್, ತಮ್ಮ ಸ್ನೇಹಿತವರ್ಗವಾಗಲೀ, ಕುಟುಂಬಸ್ಥರಾಗಲೀ ಐಎಂಎ ಸಂಸ್ಥೆ ಜತೆಗೆ ಯಾವುದೇ ವ್ಯವಹಾರ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣ ಗಂಭೀರವಾಗಿದ್ದು, ಸೂಕ್ತ ತನಿಖೆಯಾಗಬೇಕು. ತಾವು ಸಂಸ್ಥೆಯಿಂದ ಹಣ ಪಡೆದಿಲಲ್, ಸಾಲವನ್ನೂ ಮಾಡಿಲ್ಲ. ಸುಮ್ಮನೆ ನನ್ನ ಹೆಸರು ಥಳಕು ಹಾಕಲಾಗಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡದ ಬಗ್ಗೆ ತಮಗೆ ನಂಬಿಕೆ ಇದೆ. ತನಿಖೆಗೆ ತಾವು ಸಂಪೂರ್ಣ ಸಹಕಾರ ಕೊಡುವುದಾಗಿಯೂ ಅವರು ಭರವಸೆ ನೀಡಿದರು.

ಆದರೆ, ತನಿಖೆಯನ್ನು ಸಿಬಿಐಗೆ ವಹಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.

ಮನಸ್ಊರಗೆ ಸೇರಿರುವ ಾಸ್ತಿಯನ್ನು ಜಪ್ತಿ ಮಾಡಿ, ಸಂತ್ರಸ್ತರಿಗೆ ಪರಿಹಾರ ವಿತರಿಸುವಂತೆಯೂ ಅವರು ಸಲಹೆ ಮಾಡಿದರುಮನಸ್ಸೂರ ೆಲ್ಲಿ ಹೋದರು, ಯಾವಾಗಿನಿಂದ ನಾಪತ್ತೆಯಾಗಿದ್ದಾರೆ? ಅವರ ಜತೆ ಯಾರ ಸಂಪರ್ಕದಲ್ಲಿದ್ದರು ಎಂಬುದೆಲ್ಲ ಻ವರ ಮೊಬೈಲ್ ತಪಾಸಣೆ ಮಾಡಿದರೆ ಸಿಕ್ಕೇ ಸಿಗುತ್ತದೆ. ಆ ಮೂಲಕ ಅವರನ್ನು ಪತತೆ ಹಚ್ಚಿ ಹಣ ಕಳೆದುಕೊಂಡವರಿಗೆ ಆದಷ್ಟು ಬೇಗ ನ್ಯಾಯ ೊದಗಿಸಿಕೊಡಬೇಕು ಎಂದೂ ಅವರು ಮನವಿ ಮಾಡಿದರು.

Leave a Reply

Your email address will not be published.