ಮಾಧ್ಯಮಗಳ ಬದಲು ಎಸ್ ಐಟಿ ಮುಂದೆ ಮಾತನಾಡು: ರೋಷನ್ ಬೇಗ್ ವಿರುದ್ಧ ಸಿದ್ಧು ಕಿಡಿ

ಮೈಸೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಹೇಳಿಕೆಗೆ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ ರೊಷನ್ ಬೇಗ್ ಐಎಂಎ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಧವಿಲ್ಲ. ನನಗೆ ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದೂ ನೇರ ಆರೋಪ ಮಾಡಿದ್ದರು.

ಈ ಕುರಿತು ಇಂದು ಸಿದ್ಧರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ ರೋಷನ್ ಬೇಗ್ ಗೆ ತರಾಟೆಗೆ ತೆಗೆದುಕೊಂಡರು. ಮಾಧ್ಯಮಗಳ ಮುಂದೆ ಹೇಳುತ್ತಿದ್ದೀಯಾ? ಇದನ್ನೆ ಎಸ್ ಐಟಿ ಮುಂದೆ ಹೇಳು ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published.