ಐಎಂಎ ಜ್ಯುವೆಲ್ಲರ್ಸ್ ಹಗರಣ: ವಿಶೇಷತನಿಖಾ ತಂಡ ರಚನೆ

ಐಎಂಎ ಜ್ಯುವೆಲ್ಲರ್ಸ್ ಹಗರಣ: ವಿಶೇಷತನಿಖಾ ತಂಡ ರಚನೆ

ಬೆಂಗಳೂರು:ಗ್ರಾಹಕರಿಗೆ ಬಹುಕೋಟಿ ರೂ. ವಂಚಿಸಿದ ಐಎಂಎ ಜ್ಯುವೆಲ್ಲರ್ಸ್ ಪ್ರಕರಣದ ತನಿಖೆ ನಡೆಸಲು ಡಿಐಜಿ ಬಿ. ಆರ್. ರವಿಕಾಂತೇಗೌಡರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸುವುದಾಗಿ ಮೊದಲು ಪ್ರಕಟಿಸಿದ್ದ ಸಿಎಂ ಕುಮಾರಸ್ವಾಮಿ ನಂತರ ನಿರ್ಧಾರ ಬದಲಿಸಿ ವಿಶೇಷ ತನಿಖಾ ತಂಡ ರಚಿಸುವುದಾಗಿ ಹೇಳಿದ್ದರು.

ಐಎಂಎ ಸಂಸ್ಥಾಪಕ ಮೊಹ್ಮದ ಮನ್ಸೂರನದು ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ಒಂದು ವೈರಲ್ ಆದ ನಂತರ ಶಿವಾಜಿನಗರದ ಐಎಂ ಎ ಕಚೇರಿ ಬಳಿ ನಾಲ್ಕು ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published.