ಆತ್ಮಾವಲೋಕನ ಸಭೆಗಾಗಿ ರಾಯಬರೇಲಿಗೆ ಆಗಮಿಸಿದ ಸೋನಿಯಾ , ಪ್ರಿಯಾಂಕಾ…!

ಆತ್ಮಾವಲೋಕನ ಸಭೆಗಾಗಿ ರಾಯಬರೇಲಿಗೆ ಆಗಮಿಸಿದ ಸೋನಿಯಾ , ಪ್ರಿಯಾಂಕಾ…!

ರಾಯ್ ಬರೇಲಿ (ಉತ್ತರ ಪ್ರದೇಶ) : ಿತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಪುನರಾಯ್ಕೆಯಾದ ನಂತರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇದೇ ಮೊದಲ ಬಾರಿ ಭೇಟಿಗಾಗಿ ಪುತ್ರಿ ಪ್ರಿಯಾಂಕಾ ಗಾಂಧಿಯೊಂದಿಗೆ ಇಂದು ರಾಯ ಬರೇಲಿಗೆ ಆಗಮಿಸಿದ್ದಾರೆ.

ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಮುಖಂಡರನ್ನು ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ರಾಯ್ ಬರೇಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶಸಿಂಗ್ ಅವರನ್ನು 1. 67ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸುವ ಮೂಲಕ ಸೋನಿಯಾ ಪುನರಾಯ್ಕೆಯಾಗಿದ್ದಾರೆ.ಉತ್ತರ ಪ್ರದೇಶದಲ್ಲಿ ಅವರ ಜಯವೊಂದೇ ಪಕ್ಷಕ್ಕೆ ಒಂದಿಷ್ಟು ಜೀವ ುಳಿಸಿದೆ.

ಚುನಾವಣೆ ಸೋಲಿನ ನಂತರ ಪ್ರಿಯಾಂಕಾ ಗಾಂಧಿಯವರದ್ದೂ ಕ್ಷೇತ್ರಕ್ಕೆ ಮೊದಲ ಭೇಟಿ.ರಾಜ್ಯದಲ್ಲಿ ಪಕ್ಷದ ತೀವ್ರ ಹಿನ್ನಡೆಗೆ ಕಾರನ ತಿಳಿದುಕೊಳ್ಳುವ ಆತ್ಮಾವಲೋಕನ ಸಭೆಯಲ್ಲಿಯೂ ಅವರು ಪಾ್ಲ್ಗೊಳ್ಳುವರು.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತೀವ್ರ ಹಿನ್ನೆಡೆ ಅನುಭವಿಸಿದ್ದು, ದೇಶಾದ್ಯಂತ ಕೇವಲ 52 ಸ್ಥಾನಗಳಲ್ಲಿ ಜಯಗಳಿಸಿದ್ದರೆ ಉತ್ತರ ಪ್ರದೇಶದಲ್ಲಿ ಒಂದೇ ಒಮದು ಸ್ಥಾನ ಉಳಿಸಿಕೊಂಡಿದೆ.

Leave a Reply

Your email address will not be published.