ಶಹಾಪುರ: ನೀರಿನ ಅಭಾವದ ನಡುವೆಯೂ ಒಡೆದ ಪೈಪ್ ಲೈನ್ ದುರಸ್ಥಿ ಮಾಡದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಶಹಾಪುರ: ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ತಾರಕಕ್ಕೇ ಏರಿದೆ. ಆದ್ರೆ ಈ ನಡುವೆ ಅಧಿಕಾರಿಗಳ ನಿರ್ಲಕ್ಷದಿಂದ ನೀರಿನ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿರುವ ದೃಶ್ಯ ಶಹಾಪುರ ನಗರದ ವಾರ್ಡ್ ನಂಬರ್ 8 ಚರಬಸವೇಶ್ವರ ಕಾಲೊನಿಯಲ್ಲಿ ಕಂಡು ಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. .

ನೀರು ಪೋಲಾಗುತ್ತಿರುವ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಕಳೆದ 5 ತಿಂಗಳ ಹಿಂದೆ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಭಾವಚಿತ್ರ ತೆಗೆದುಕೊಂಡು ಮತ್ತು ವರದಿಯನ್ನು ಮಾಡಿಕೊಂಡು ಹೋದವರು ಇತ್ತ ಕಡೆ ಗಮನ ಹರಿಸಿಲ್ಲ ಎಂದು ದೂರಿದ್ದಾರೆ.

ಬೇಸಿಗೆಯಲ್ಲಿ ಕೆಲವೊಂದು ಕಡೆ ನೀರಿನ ಅಭಾವ ತೋರಿದೆ ಆದರೆ ಇಲ್ಲಿ ನೀರು ಪೋಲಾಗುತ್ತಿರುವುದನ್ನು ಕಣ್ಣಾರೆ ಕಂಡು ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.

ಪೋಲಾಗುತ್ತಿರುವ ನೀರು ರಸ್ತೆಯ ಮೇಲೆ ನಿಂತು ಕೆಸರು ಗದ್ದೆಯಂತಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಕೂಡಲೇ ನಗರಸಭೆಯ ಸಿಬ್ಬಂದಿಗಳು ಇತ್ತ ಕಡೆ ಗಮನ ಹರಿಸಿ ಒಡೆದಿರುವ ಪೈಪ್ ಲೈನನ್ನು ದುರಸ್ತಿ ಮಾಡಿ ಪೋಲಾಗುತ್ತಿರುವ ಜೀವಜಲವನ್ನು ಸಂರಕ್ಷಣೆ ಮಾಡಬೇಕೆಂದು ಕಾಲೋನಿಯ ಪ್ರಗತಿಪರ ಚಿಂತಕರು ಈ ಮೂಲಕ ಎಚ್ಚರಿಕೆ ನೀಡಿದರು.

Leave a Reply

Your email address will not be published.