ಜೆಡಿಎಸ್ ಕಳಪೆ ಪ್ರದರ್ಶನ: ಎಚ್. ವಿಶ್ವನಾಥ ಬೇಸರ

ಜೆಡಿಎಸ್  ಕಳಪೆ ಪ್ರದರ್ಶನ: ಎಚ್. ವಿಶ್ವನಾಥ ಬೇಸರ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ? ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಕಳಪೆ ಪ್ರದರ್ಶನ ಹಿನ್ನಲೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವಾನಥ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೀರಾ ಕಳಪೆ ಪ್ರದರ್ಶನ ನೀಡಿದರಿಂದ ಬೇಸರಗೊಂಡಿರುವ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಅನಾರೋಗ್ಯ ಕಾರಣ ಹೇಳಿ ಎಚ್. ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. Views: 17

40 ಸಾವಿರ ಮತಗಳ ಲೀಡ್ ನಲ್ಲಿ ಸುಮಲತಾ ಅಂಬರೀಷ್

40 ಸಾವಿರ ಮತಗಳ ಲೀಡ್ ನಲ್ಲಿ ಸುಮಲತಾ ಅಂಬರೀಷ್

ಮಂಡ್ಯ:ಲೋಕಸಭಾ ಮತ ಕ್ಷೇತ್ರದ 11 ನೇ ಹಂತದ ಮತ ಏಣಿಕೆ ಮುಕ್ತಾಯಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 10 ನೇ ಸುತ್ತಿನವರೆಗೂ ಸಮಲತಾ ಅವರಿಗೆ ಭಾರಿ ಪೈಪೋಟಿ ನೀಡಿದ್ದರು. ಬಳಿಕ 11 ನೇ ಹಂತದ ಮತ ಏಣಿಕೆಯಲ್ಲಿ ಸುಮಲತಾ ಅವರು ಸುಮಾರು 40 ಸಾವಿರ ಮತಗಳ ಅಂತರದಿಂದ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇಬ್ಬರು ಸಿನಿ ನಾಯಕರ ಮಧ್ಯೆ ಹಾವು ಏಣಿ ಆಟ ನಡೆಯುತ್ತಿದ್ದು, […]

ಮೊದಲ ಸುತ್ತಿನಿಂದ ಭಾರೀ ಮುನ್ನಡೆ ಸಾಧಿಸಿರುವ ಸಂಗಣ್ಣ ಕರಡಿ

ಮೊದಲ ಸುತ್ತಿನಿಂದ ಭಾರೀ ಮುನ್ನಡೆ ಸಾಧಿಸಿರುವ  ಸಂಗಣ್ಣ ಕರಡಿ

ಕೊಪ್ಫಳ: ಲೋಕಸಭಾ ಕ್ಷೇತ್ರದ 14 ನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮೊದಲ ಸುತ್ತಿನಿಂದಲೂ ಭಾರಿ ಮುನ್ನಡೆ ಸಾಧಿಸಿದ್ದಾರೆ. ಸಂಗಣ್ಣ ಕರಡಿಗೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪೈಪೋಟಿ ನೀಡುತ್ತಿದ್ದು, 420354 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 454401 ಮತಗಳ ಪಡೆದು 34047 ಮತಗಳ ಲೀಡ್ ನಲ್ಲಿ ಮುನ್ನುಗ್ಗುತ್ತಿದ್ದಾರೆ. Views: 34

ದೋಸ್ತಿ ಸರಕಾರದ ಮೇಲೆ ಭಾರೀ ಏಫೆಕ್ಟ್ ಆಗಲಿದೆಯಾ ಲೋಕಸಭೆ ಫಲಿತಾಂಶ?

ದೋಸ್ತಿ ಸರಕಾರದ ಮೇಲೆ ಭಾರೀ ಏಫೆಕ್ಟ್ ಆಗಲಿದೆಯಾ ಲೋಕಸಭೆ ಫಲಿತಾಂಶ?

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದ್ದು, ರಾಜ್ಯ ದೋಸ್ತಿ ಸರಕಾರದ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಹೌದು… ದೋಸ್ತಿ ಸರಕಾರ ರಚನೆಯಾಗಿ ಇಂದಿಗೆ ಒಂದು ವರ್ಷ ಕಳೆದಿದ್ದು, ಇಂದಿಗೆ ಲೋಕಸಭಾ ಚುನಾವಣೆ ಫಲಿತಾಂಶವೂ ಹೊರ ಬೀಳುತ್ತಿದೆ. ರಾಜ್ಯದ 23 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮುನ್ನಡೆ ಸಾಧಿಸಿದ್ದು, ದೋಸ್ತಿ ಸರಕಾರದ ಮೇಲೆ ಏಫೆಕ್ಟ್ ಆಗಲಿದೆ. ರಾಜ್ಯದ ಮತದಾರ ಬಿಜೆಪಿ ಪರ ಒಲಿದಿದ್ದು, ಕಳೆದ ಬಾರಿಗಿಂತ ಈ ಭಾರಿ ಕಾಂಗ್ರೆಸ್ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. […]

ಪೋಲಿಂಗ್ ನಲ್ಲಿ ಎಲ್ಲೆಂದರಲ್ಲಿ ಓಡಾಟ: ಬಿಜೆಪಿ ಕಾರ್ಯಕರ್ತರ ಹೊರ ಕಳುಹಿಸಿದ ಡಿಸಿ ವಿಶಾಲ್

ಪೋಲಿಂಗ್ ನಲ್ಲಿ ಎಲ್ಲೆಂದರಲ್ಲಿ ಓಡಾಟ: ಬಿಜೆಪಿ ಕಾರ್ಯಕರ್ತರ ಹೊರ ಕಳುಹಿಸಿದ ಡಿಸಿ ವಿಶಾಲ್

ಬೆಳಗಾವಿ: ಪೋಲಿಂಗ್ ನಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಬಿಜೆಪಿ ಏಜೆಂಟರನ್ನು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಆರ್ ವಿಶಾಲ್ ಅವರು ಹೊರ ಹಾಕಿದ ಪ್ರಸಂಗ ನಡೆದಿದೆ. ಇಲ್ಲಿನ ಆರ್ ಪಿಡಿ ಕಾಲೇಜಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಏಣಿಕೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಭಾರಿ ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಪೊಲೀಂಗ್ ನಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಗರಂ ಆದ ಜಿಲ್ಲಾಧಿಕಾರಿ ಕಾರ್ಯಕರ್ತರನ್ನು ತರಾಟೆಗೆ ಗೆದುಕೊಂಡು ಪೊಲೀಂಗ್ ನಿಂದ ಹೊರ ಹಾಕಿದ್ದಾರೆ. […]

ಕೈಕೊಟ್ಟ ಅರಭಾವಿ ಇವಿಎಂ ಮಷಿನ್ : ವಿವಿ ಪ್ಯಾಟ್​ ಚೀಟಿ ಎಣಿಸಲು ನಿರ್ಧಾರ

ಕೈಕೊಟ್ಟ ಅರಭಾವಿ ಇವಿಎಂ ಮಷಿನ್ : ವಿವಿ ಪ್ಯಾಟ್​ ಚೀಟಿ ಎಣಿಸಲು ನಿರ್ಧಾರ

ಬೆಳಗಾವಿ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅರಭಾವಿ ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ಮಷಿನ್ ಕೈಕೊಟ್ಟಿದೆ. ಇವಿಎಂ ಮಷಿನ್​ ಕೆಟ್ಟಿದದ್ದರಿಂದ ವಿವಿ ಪ್ಯಾಟ್​ ಚೀಟಿಗಳನ್ನು ಎಣಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಇವಿಎಂ ಮಷಿನ್ ಓಪನ್ ಮಾಡುವ ಬಟನ್ ಸ್ಟ್ರಕ್ ಆಗಿದೆ. ಇದನ್ನು ತೆರೆಯಲು ಚುನಾವಣಾ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ತಾಂತ್ರಿಕ ದೋಷ ನಿವಾರಣೆ ಆಗದ ಹಿನ್ನೆಲೆ ಬೇರೆ ಯಂತ್ರದ ಮತ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರಿಗಳು ಆರಂಭಿಸಿದ್ದಾರೆ. ದೋಷವಿರುವ ಯಂತ್ರದ ವಿವಿ ಪ್ಯಾಟ್​ ಚೀಟಿಗಳನ್ನು ಎಣಿಸಿ ಫೈನಲ್​ ಮಾಡಲು […]

ದೇವೇಗೌಡ ಸೇರಿ ಕಾಂಗ್ರೆಸ್ ಘಟಾನುಘಟಿ ನಾಯಕರಿಗೆ ಆಘಾತ ಕಾದಿದೆಯಾ?

ಬೆಂಗಳೂರು: ಲೋಕಸಭಾ ಚುನಾವಣೆ ಮತ ಏಣಿಕೆ ತೀವ್ರ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್, ಜೆಡಿಎಸ್ ನ ಘಟಾನುಘಟಿ ನಾಯಕರು ಭಾರಿ ಹಿನ್ನಡೆಯಲ್ಲಿದ್ದಾರೆ. ಸೋಲಿಲಿದ ಸರದಾರ ಎಂಬ ಹೆಗ್ಗಳಿಕೆ ಪಡೆದಿದ್ದ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೋಲಾರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಆಯ್ಕೆಯಾದ ಹೆಚ್. ಕೆ. ಮುನಿಯಪ್ಪ , ಮಾಜಿ ಸಿಎಂ ವೀರಪ್ಪ ಮೋಯ್ಲಿ ಸೇರಿ ಹಲವು ಘಟಾನುಘಟಿ ನಾಯಕರು ಹಿನ್ನಡೆಯಲ್ಲಿದ್ದಾರೆ. ಇತ್ತ ತುಮಕೂರಿನಲ್ಲಿಯೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಸಹ ಹಿನ್ನಡೆ ಸಾಧಿಸಿದ್ದಾರೆ. ರಾಜ್ಯದ […]

ಮಲ್ಲಿಕಾರ್ಜುನ ಖರ್ಗೆಗೆ ಹಿನ್ನಡೆ

ಮಲ್ಲಿಕಾರ್ಜುನ ಖರ್ಗೆಗೆ ಹಿನ್ನಡೆ

ಕಲಬುರಗಿ: ಲೋಕಸಭಾ ಕ್ಷೇತ್ರದಲ್ಲಿ ಗುರು ಶಿಷ್ಯರ ವಿರುದ್ದ ಪೈಪೋಟಿ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 74316 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ 96783 ಮತಗಳ ಪಡೆದು 22467 ಮತಗಳ ಅಂತದಿಂದ ಮುನ್ನಡೆ ಸಾಧಿಸಿದ್ದಾರೆ. ಗುರು ಶಿಷ್ಯರ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಸೋಲಿಲ್ಲದ ಸರದಾರ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಿನ್ನಡೆಯಾಗಿದೆ. Views: 121

ಕೊಪ್ಪಳದಲ್ಲಿ ಸಂಗಣ್ಣ ಕರಡಿಗೆ ಮುನ್ನಡೆ

ಕೊಪ್ಪಳ: ಲೋಕಸಭಾ ಕ್ಷೇತ್ರ ಆರನೇ ಸುತ್ತಿನ ಮತ ಏಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ 171392 ಮತಗಳ ಪಡೆದು ಪೈಪೋಟಿ ನೀಡುತ್ತಿದ್ದರೆ ಇತ್ತ ಬಿಜೆಪಿ ಅಭ್ಯರ್ಥಿ 197138 ಮತಗಳ ಪಡೆದು 25746 ಮತಗಳ ಮುನ್ನಡೆ ಇದೆ. Views: 45

ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಮುನ್ನಡೆ

ಚಿಂಚೋಳಿಯಲ್ಲಿ  ಅವಿನಾಶ್ ಜಾಧವ್ ಮುನ್ನಡೆ

ಕಲಬುರಗಿ: ಚಿಂಚೋಳಿ ಉಪ ಚುನಾವಣಾ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡಿದ್ದು, 4, 514 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿಯಾಗಿ ಇಲ್ಲಿ ಕಾಂಗ್ರೆಸ್ ನಿಂದ ಸುಭಾಷ ರಾಠೋಡ ಪೈಪೋಟಿ ನೀಡುತ್ತಿದ್ದಾರೆ. Views: 64

1 2 3 528