ಮಾಲೀಕಯ್ಯ ದುರಹಂಕಾರ ನಡೆಗೆ ಜನ ತಕ್ಕ ಪಾಠ ಕಲಿಸಿದ್ದಾರೆ: ಶಾಸಕ ಎಂ. ವೈ. ಪಾಟೀಲ್

ಮಾಲೀಕಯ್ಯ ದುರಹಂಕಾರ ನಡೆಗೆ ಜನ ತಕ್ಕ ಪಾಠ ಕಲಿಸಿದ್ದಾರೆ: ಶಾಸಕ ಎಂ. ವೈ. ಪಾಟೀಲ್

ಕಲಬುರಗಿ: ಶೀಘ್ರವೇ ಅಫಜಲಪುರ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನಿಡಿ ಜನರ ಕುಂದುಕೊರತೆ ಆಲಿಸುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದ್ದಾರೆ. ಇಲ್ಲಿನ ಪ್ರತಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾಯಿತನಾದ ಮೇಲೆ ಕ್ಷೇತ್ರದ ಹಳ್ಳಿಗಳಿಂದ ಮುಖಂಡರು ಭೇಟಿ ಮಾಡಿ ತಮ್ಮ ಗ್ರಾಮಕ್ಕೆ ಆಗಮಿಸುವಂತೆ ಒತ್ತಾಯಿಸುತ್ತಿದ್ದಾರೆ. ಐದಾರು ದಿನಗಳಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡು ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಸಂಸದ ಮಲ್ಲಿಕಾರ್ಜುನ […]

ಸಾಲಮನ್ನಾ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಶಾಸಕ ಖಾದರ್ ಆರೋಪ

ಸಾಲಮನ್ನಾ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಶಾಸಕ ಖಾದರ್ ಆರೋಪ

ಮಂಗಳೂರು: ರೈತರ ಸಾಲಮನ್ನಾ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಇದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡವುದಾಗಿ ಹೇಳಿದ್ದಾರೆ. ಸಚಿವ ಸಂಪುಟ ರಚನೆಯಾಗಿಲ್ಲ. ಸಚಿವ ಸಂಪುಟ ಸಭೆಯೂ ಆಗಿಲ್ಲ. ಆದರೆ ಅದಕ್ಕೆ ಮೊದಲೇ ಸಾಲಮನ್ನಾ ಮಾಡಿ ಎಂದು ಹೇಳಿ ಪ್ರತಿಭಟನೆಗೆ ಕರೆ ನೀಡುತ್ತಾರೆ. ಆದರೆ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದ್ದರೂ ಅದರ ಬಗ್ಗೆ […]

ಬಿಎಸ್ ವೈ ಯೂಟರ್ನ್: ಬಿಜೆಪಿ ಬಂದ್ ಠುಸ್

ಬಿಎಸ್ ವೈ ಯೂಟರ್ನ್: ಬಿಜೆಪಿ ಬಂದ್ ಠುಸ್

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೂಡಲೇ ರೈತರ ಸಾಲಮನ್ನಾ ಮಾಡದಿದ್ದಲ್ಲಿ ಸೋಮವಾರ  ಬಂದ್ ಕರೆ ನೀಡಿದ್ದ ಬಿಜೆಪಿ ನಾಯಕ ಬಿಎಸ್ ವೈ  ಇಂದು ಯೂ ಟರ್ನ್ ಹೊಡೆದಿದ್ದಾರೆ. ನಿನ್ನೆ ವಿಧಾನಸಭೆ ಕಲಾಪದಲ್ಲಿ ಭಾಷಣ ಮಾಡಿ, ಸೋಮವಾರದೊಳಗೆ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿದ್ದರು. ಅಲ್ಲದೇ ಸಾಲಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಬಿಜೆಪಿಯಿಂದ ಬಂದ್ ಕರೆ ಮಾಡುವುದಾಗಿ  ಹೇಳಿ ಕಲಾಪದಿಂದ ಹೊರ ನಡೆದಿದ್ದರು. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರೈತರು ಬಂದ್ ಕರೆ ನೀಡಿದರೆ ಮಾತ್ರ ಬೆಂಬಲ ನೀಡುವುದಾಗಿ […]

ನಟ ಚಿಕ್ಕಣ್ಣ ಕಾರಿಗೆ ಕನ್ನ ಹಾಕಿದ ಖದೀಮರು

ನಟ ಚಿಕ್ಕಣ್ಣ ಕಾರಿಗೆ ಕನ್ನ ಹಾಕಿದ ಖದೀಮರು

ಬೆಂಗಳೂರು: ಸ್ಯಾಂಡಲ್ ವುಡ್ ಹಾಸ್ಯನಟ ಚಿಕ್ಕಣ್ಣ ಅವರ ಕಾರಿಗೆ ಖದೀಮರು ಕನ್ನ ಹಾಕಿರುವ ಘಟನೆ ನಾಗರಭಾವಿ ಎಂ.ಆರ್. ಕೆ. ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ನ ಕಾರ ಪಾರ್ಕಿಂಗ್ ನಲ್ಲಿ ಚಿಕ್ಕಣ್ಣ ತಮ್ಮ ಕಾರನ್ನು ಪಾರ್ಕ ಮಾಡಿದ್ದರು. ಈ ವೇಳೆ ಅವರ ಕಾರಿಗೆ ಕನ್ನ ಹಾಕಿದ ಖದೀಮರು ಕಾರಿನ ಗಾಜು ಒಡೆದು ಸುಮಾರು 40 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಮೇ 20 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಈ ಸಂಬಂಧ ಚಿಕ್ಕಣ ಅನ್ನಪೂರ್ಣೇಶ್ವರಿ ಪೊಲೀಸ್ […]

ಅಕ್ರಮ ಚುಟುವಟಿಕೆ: ಮೂವರು ಪೇದೆಗಳ ಸಸ್ಪೆಂಡ್

ಅಕ್ರಮ ಚುಟುವಟಿಕೆ: ಮೂವರು ಪೇದೆಗಳ ಸಸ್ಪೆಂಡ್

ಬೆಳಗಾವಿ: ಅಕ್ರಮ ಮರಳು ಸಾಗಾಣಿಕೆ ಹಾಗೂ  ಅವ್ಯವಹಾರದಲ್ಲಿ ತೊಡಗಿದ್ದ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ಠಾಣೆಯ ಸತೀಶ್, ಗೋಕಾಕ ಗ್ರಾಮೀಣ ಠಾಣೆಯ ಲಕ್ಷ್ಮಣ ದೇವರ ಹಾಗೂ ಮನೋಹರ ಅಮಾನತುಗೊಂಡ ಪೇದೆಗಳು. ಅಕ್ರಮ‌ ಮರಳು ಸಾಗಾಣಿಕೆ ಹಾಗೂ ಆರ್ಥಿಕ ವ್ಯವಹಾರವೊಂದರಲ್ಲಿ ಹಣ ಪಡೆದ ಆರೋಪ ಈ ಮೂವರ ಮೇಲಿದೆ. Ameet ingalganvihttp://udayanadu.com

ಸಾಲಮನ್ನಾ ಮಾಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ: ಭೀಮಶಿ ಗದಾಡಿ

ಸಾಲಮನ್ನಾ ಮಾಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ: ಭೀಮಶಿ ಗದಾಡಿ

ಗೋಕಾಕ: ಚುನಾವಣೆಗೆ ಮುನ್ನ ರೈತರ ಸಾಲಮನ್ನಾ ಮಾಡುವದಾಗಿ ಹೇಳಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ನಂತರ ಉಲ್ಟಾ ಹೊಡೆಯುತ್ತಿರುವುದು ರೈತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ ಎಂದು ರೈತ ಸಂಘದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಅಸಮಧಾನ ವ್ಯಕ್ತಪಡಿಸಿದರು. ನಗರದಲ್ಲಿ ಶುಕ್ರವಾರ ಸದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ಮುನ್ನ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರೈತ ಸಮುದಾಯಕ್ಕೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ ಎಚ್‍ಡಿಕೆ ಅವರು, ನಮ್ಮ ಜೆಡಿಎಸ್ ಪಕ್ಷಕ್ಕೆ ಪೂರ್ಣ ಪ್ರಮಾಣದ ಬಹುಮತ ಬಂದಿಲ್ಲವೆಂದು […]

ತಮಿಳುನಾಡಿನಲ್ಲಿ ನಡೆದ ಗೋಲಿಬಾರ್ ಖಂಡಿಸಿ ರೈತ ಸಂಘಟನೆಯಿಂದ ಪ್ರತಿಭಟನೆ

ತಮಿಳುನಾಡಿನಲ್ಲಿ ನಡೆದ ಗೋಲಿಬಾರ್ ಖಂಡಿಸಿ ರೈತ ಸಂಘಟನೆಯಿಂದ ಪ್ರತಿಭಟನೆ

ಗೋಕಾಕ: ತಮಿಳುನಾಡಿನ ತುತುಕುಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇಬೆ ಕಾರ್ಯಕರ್ತರು  ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ತಹಸೀಲ್ದಾರ್  ಕಚೇರಿ ಆವರಣದಲ್ಲಿ ಸೇರಿದ ಕಾರ್ಯಕರ್ತರು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್  ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು. ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ ಮಾತನಾಡಿ, ತುತುಕುಡಿಯ ಸ್ಪೆರ್‍ಲೈಟ್ ಕಾರ್ಖಾನೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಕಾರ್ಖಾನೆಯನ್ನು ಮುಚ್ಚಿಸುವಂತೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜನರ […]

ನೀಫಾ ವೈರಾಣು: ಧಾರವಾಡ ಜಿಲ್ಲಾಡಳಿತದಿಂದ ಪೂರ್ವಭಾವಿ ಸಭೆ

ನೀಫಾ ವೈರಾಣು: ಧಾರವಾಡ ಜಿಲ್ಲಾಡಳಿತದಿಂದ ಪೂರ್ವಭಾವಿ ಸಭೆ

ಧಾರವಾಡ:  ಜಿಲ್ಲೆಯಲ್ಲಿ ನೀಫಾ ವೈರಾಣು ತಡೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು. ಜಿಲ್ಲೆಯಲ್ಲಿ ನೀಫಾ ವೈರಾಣು ಕಂಡು ಬಂದಿಲ್ಲ ಹಾಗೂ ನೀಫಾ ವೈರಾಣು ಕಂಡು ಬಂದಿರುವುದು ಕೇರಳ ರಾಜ್ಯದಲ್ಲಿ. ಕೇರಳ ರಾಜ್ಯದಿಂದ ಧಾರವಾಡಕ್ಕೆ ವಲಸೆ ಬಂದವರು ಯಾರೂ ಇಲ್ಲ. ನೀಫಾ ವೈರಾಣು ಬಾವಲಿಗೆ ಬಂದ ಕಾಯಿಲೆಯಿಂದ ಬರುತ್ತದೆ. ಅಂತಹ ಘಟನೆಗಳು ಧಾರವಾಡದಲ್ಲಿ ಇಲ್ಲ ಎಂದು ಧಾರವಾಡ ಜಿಲ್ಲಾ ಆರೋಗ್ಯ ಮತ್ತು […]

ಮೇ. 26 ರಿಂದ ಪೇಡಾನಗರಿಯಲ್ಲಿ ಗಮಗಮಿಸಲಿವೆ ತಹರೇವಾರಿ ಮಾವುಗಳು

ಮೇ. 26 ರಿಂದ ಪೇಡಾನಗರಿಯಲ್ಲಿ ಗಮಗಮಿಸಲಿವೆ ತಹರೇವಾರಿ ಮಾವುಗಳು

ಧಾರವಾಡ: ಮೇ 26 ರಿಂದ 28ರವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮಾವು ಮೇಳ ಜರುಗಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ಮಡಿವಾಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ರೈತರ ತೋಟದಿಂದ ನೇರವಾಗಿ ಗ್ರಾಹಕರ ಕೈಗೆ ಮಾವು ತಲುಪುವಂತೆ ಮತ್ತು ರೈತ ಮತ್ತು ಗ್ರಾಹಕರ ಮಧ್ಯ ಉತ್ತಮ ಭಾಂದವ್ಯ ಮೂಡಿಸುವ ಉದ್ದೇಶದಿಂದ ಮೇ 26 ರಿಂದ 28ರವರೆಗೆ ಮೂರು […]

ಕಾಲು ಬಾಯಿ ರೋಗ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ

ಕಾಲು ಬಾಯಿ ರೋಗ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ

ಬೆಳಗಾವಿ: 14 ನೇ ಸುತ್ತಿನ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ 14ನೇ ಸುತ್ತಿನ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂನ್ 1 ರಿಂದ ಒಂದು ತಿಂಗಳ ಕಾಲ ಜಿಲ್ಲಾದ್ಯಂತ 14ನೇ ಸುತ್ತಿನ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮ ಜರುಗಲಿದ್ದು, […]