ಮಗುವಿನ ಕತ್ತು ಕೊಯ್ದು ಪೈಶಾಚಿಕ ವರ್ತನೆ: ಶಿಕ್ಷಕಿಯೋ, ರಾಕ್ಷಸಿಯೋ?

ಮಗುವಿನ ಕತ್ತು ಕೊಯ್ದು ಪೈಶಾಚಿಕ ವರ್ತನೆ: ಶಿಕ್ಷಕಿಯೋ, ರಾಕ್ಷಸಿಯೋ?

ದೊಡ್ಡಬಳ್ಳಾಪುರ: ಪೆನ್ನು, ಪೆನ್ಸಿಲ್ ಹಿಡಿದು ಪಾಠ ಹೇಳಿಕೊಡಬೇಕಾದ ಅಂಗನವಾಡಿ ಶಿಕ್ಷಕಿಯೊಬ್ಬಳು ಬ್ಲೇಡ್ ಹಿಡಿದು ಮಗುವಿನ ಕತ್ತು ಕೊಯ್ದು ಪೈಶಾಚಿಕವಾಗಿ ವರ್ತಿಸಿದ ಘಟನೆ ದೊಡ್ಡಬಳ್ಳಾಪುರದ ಕಸಘಟ್ಟ ಗ್ರಾಮದಲ್ಲಿ ನಡೆದಿದೆ. ಕಸಘಟ್ಟ ಗ್ರಾಮದ ಮುನಿರತ್ನ, ಅಂಜನ್ ಕುಮಾರ್ ಎಂಬುವವರ ಪುತ್ರ ಪೃಥ್ವಿರಾಜ್(5) ಶಿಕ್ಷಕಿಯಿಂದ ಹಲ್ಲೆಗೊಳಗಾದ ಬಾಲಕ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಸಘಟ್ಟದ ಅಂಗನವಾಡಿ ಶಿಕ್ಷಕಿ ಮಗುವಿಗೆ ಪಾಠ ಹೇಳಿಕೊಡುವುದನ್ನು ಬಿಟ್ಟು ಕ್ರೂರತೆಯನ್ನು ಮರೆದಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Views: 298

ಒಂದೇ ಮನೆಯ ನಾಲ್ವರು ಸುಟ್ಟ ಸ್ಥಿತಿಯಲ್ಲಿ: ಆತ್ಮಹತ್ಯೆಯೋ, ಕೊಲೆಯೋ? ಕಾರಣ ನಿಗೂಢ

ಒಂದೇ ಮನೆಯ ನಾಲ್ವರು ಸುಟ್ಟ ಸ್ಥಿತಿಯಲ್ಲಿ: ಆತ್ಮಹತ್ಯೆಯೋ, ಕೊಲೆಯೋ? ಕಾರಣ ನಿಗೂಢ

ಕಲಬುರಗಿ: ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸುಟ್ಟು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದು, ಅವರ ಚೀರಾಟ ಕೇಳಿ ನೆರೆಹೊರೆಯವರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿನ ಎಂಎಸ್ ಕೆ ಮಿಲ್ ಹುಸೇನಿ  ಗಾರ್ಡನ ಇಕ್ಬಾಲ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಕ್ಬರ್ (37), ಇವರ ಪತ್ನಿ ಶನ್ನು (35) ಮತ್ತು ಮಕ್ಕಳಾದ ಮಹ್ಮದ್ ಯಾಸಿನ್ (13) ಹಾಗೂ ಸಾನಿಯಾ (10) ಗಂಭೀರ ಗೊಂಡವರು. ನಸುಕಿನ ಜಾವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಯಾಳುಗಳ ಚೀರಾಟ ಕೇಳಿದ ನೆರೆ […]

ಖತರ್ನಾಕ ಖದೀಮನ ಬಂಧನ: 15 ತೊಲೆ ಚಿನ್ನಾಭರಣ ಜಪ್ತಿ

ಖತರ್ನಾಕ ಖದೀಮನ ಬಂಧನ: 15 ತೊಲೆ ಚಿನ್ನಾಭರಣ ಜಪ್ತಿ

ಬೆಳಗಾವಿ: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಖದೀಮನನ್ನು ಕ್ಯಾಂಪ್ ಪೊಲೀಸರು ಬಂಧಿಸಿ ಆತನಿಂದ ಸ15 ತೊಲೆ ಚಿನ್ನವನ್ನು ವಶಕ್ಕೆ ಪಡೆದ್ದಾರೆ. ಇಲ್ಲಿನ ಕೊತವಾಲ್ ಗಲ್ಲಿ ನಿವಾಸಿ ನಗರದ ನಾಜಿಮ್ ಮುಲ್ಲಾ ಬಂಧಿತ. ನಗರದ ವಿವಿಧೆಡೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ಹೊತ್ತು, ಕಳ್ಳತನ ಮಾಡುತ್ತಿದ್ದ. ನಗರದ ವಿವಿಧ ಠಾಣೆಯಲ್ಲಿ ಈತನ ಮೇಲೆ ಮನೆ ಕಳ್ಳತನ ಪ್ರಕರಣ ದಾಖಲಾಗಿವೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   Views: 167

ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಅವಶ್ಯ: ಕುಲಕರ್ಣಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಅವಶ್ಯ:  ಕುಲಕರ್ಣಿ

ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಆಧುನಿಕತೆಗೆ ತಕ್ಕಂತೆ ಸ್ಪರ್ಧಾ ಮನೋಭಾವನೆ ರೂಢಿಸಿಕೊಳ್ಳಬೇಕು ಅಂದಾಗ ಮಾತ್ರ ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಾಧ್ಯ ಎಂದು ಮುಖ್ಯ ಶಿಕ್ಷಕಿ ಎಂ.ಟಿ ಕುಲಕರ್ಣಿ ಹೇಳಿದರು. ಪಟ್ಟಣದ ಎಸ್.ಎಂ ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ 2018-19ನೇ ಸಾಲಿನ ಕ್ರೀಯಾ ಯೋಜನೆ ಅನ್ವಯ ಶೈಕ್ಷಣಿಕ ವರ್ಷದ ವಿಷಯವಾರು ಸ್ಪರ್ಧಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಣ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಇಂದು ಶೈಕ್ಷಣಿಕ ಕ್ಷೇತ್ರ […]

ಪತ್ನಿ ಮೇಲೆ ಗೂಢಚಾರಿಕೆ ಮಾಡಿ ಪತಿ ಆತ್ಮಹತ್ಯೆ: ಹೈಸ್ಕೂಲು ಪ್ರೀತಿಯೊಂದು ದುರಂತದಲ್ಲಿ ಅಂತ್ಯ

ಪತ್ನಿ ಮೇಲೆ ಗೂಢಚಾರಿಕೆ ಮಾಡಿ ಪತಿ ಆತ್ಮಹತ್ಯೆ: ಹೈಸ್ಕೂಲು ಪ್ರೀತಿಯೊಂದು ದುರಂತದಲ್ಲಿ ಅಂತ್ಯ

ವಿಜಯವಾಡ:  ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗೂಢಚಾರಿಕೆ ನಡೆಸಿ ಆಕೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡದಲ್ಲಿ ನಡೆದಿದ್ದು, ಆ ಮೂಲಕ ಐದು ವರ್ಷದ ಹಿಂದಿನ ಹೈಸ್ಕೂಲು ಪ್ರೀತಿಯೊಂದು ದುರಂತದಲ್ಲಿ ಅಂತ್ಯ ಕಂಡಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮೊರಾ ಗುರವ ರೆಡ್ಡಿ(27) ಅಂತಾ ಗುರುತಿಸಾಗಿದೆ. ಈತ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಚಿತ್ರಿಕರಿಸಿದ್ದು, ಪೊಲೀಸರು ಆತನ ಜೇಬು ಪರಿಶೀಲಿಸಿದ್ದಾಗ ಬೆಳಕಿಗೆ ಬಂದಿದೆ.  ಮೊರಾ ರೆಡ್ಡಿ ಸಾಯುವ […]

ಗಂಗಾಧರ ಹತ್ಯೆ ಪ್ರಕರಣ: ಸ್ಕಾರ್ಪಿಯೋ ಗೆ ನಕಲಿ ನಂಬರ್ ಪ್ಲೇಟ್ ಬಳಸಿದ ಆರೋಪಿಗಳು

ಗಂಗಾಧರ ಹತ್ಯೆ ಪ್ರಕರಣ: ಸ್ಕಾರ್ಪಿಯೋ ಗೆ ನಕಲಿ ನಂಬರ್ ಪ್ಲೇಟ್ ಬಳಸಿದ ಆರೋಪಿಗಳು

ವಿಜಯಪುರ:  ಭೀಮಾ ತೀರದ ಹಂತಕ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ ಸಿಐಡಿ ಅಧಿಕಾರಿಗಳು  ತನಿಖೆಯನ್ನು  ಮತ್ತಷ್ಟು ಚುರುಕುಗೊಳಿಸಿದ್ದು, ಆರೋಪಿಗಳು ಗಂಗಾಧರನನ್ನು ಕರೆದೊಯ್ದ ಸ್ಕಾರ್ಪಿಯೋ ವಾಹನದ ನಂಬರ್ ಪ್ಲೇಟ್ ನ್ನು ನಕಲಿ ಬಳಸಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. ಗಂಗಾಧರನನ್ನು ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸುವಾಗ ಸೊಲ್ಲಾಪೂರ ಮೂಲದ ಆರಾದ್ಯ ಎಂಬುವವರಿಗೆ ಸೇರಿದ M 13 CU 3699 ಕಾರಿನ ನಂಬರ್ ಬಳಸಿದ್ದರು. ಸಿಐಡಿ ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್ ಬಳಸಿದ್ದು ತಿಳಿದು ಬಂದಿದೆ. ಅಸಲಿ ನಂಬರ್ ಗಾಗಿ […]

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್

ಬೆಂಗಳೂರು: ನಿರೀಕ್ಷೆಯಂತೆ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಡಾ. ಜಿ. ಪರಮೇಶ್ವರ್ ಅವರು ದೋಸ್ತಿ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾದ ಬಳಿಕ ತೆರವಾಗಿದ್ದ ಸ್ಥಾನ ದಿನೇಶ್ ಗುಂಡೂರಾವ್ ಅವರಿಗೆ ಒಲಿದು ಬಂದಿದೆ.  ಕಳೆದ ಎರಡು ವರ್ಷಗಳಿಂದ ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ದಿನೇಶ್ ಗುಂಡೂರಾವ್ ಈಗ ಅಧ್ಯಕ್ಷ ಏರಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ, ಶಾಸಕ ಈಶ್ವರ್ ಖಂಡ್ರೆ ಅವರು ನೇಮಕವಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಅಧಿಕೃತ ಘೋಷಣೆಯಾಗಲಿದೆ ಎಂದು […]

ಗೋವಾದಲ್ಲಿ ಹೊತ್ತಿ ಉರಿದ ಕೆಎಸ್ಆರ್ ಟಿಸಿ ಬಸ್..!

ಗೋವಾದಲ್ಲಿ ಹೊತ್ತಿ ಉರಿದ ಕೆಎಸ್ಆರ್ ಟಿಸಿ ಬಸ್..!

  ಬೆಳಗಾವಿ:  ಕೆಎಸ್ಆರ್ ಟಿಸಿ ಬಸ್ ಏಕಾಏಕಿ ಹೊತ್ತಿ ಉರಿದ ಘಟನೆ ಗೋವಾದ ಪೋಂಡಾ ನಗರದಲ್ಲಿ ಮಂಗಳವಾರ ರಾತ್ರಿ  ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾಹತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಣಜಿಯಿಂದ ರಾತ್ರಿ ಗದಗನ ಮುಂಡರಗಿಯತ್ತ ಈ ಬಸ್ ತೆರಳುತ್ತಿದ್ದಾರೆ ಏಕಾಏಕಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೇ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಪ್ರಯಾಣಿಕರ ಕೆಲವು ಬೆಲೆ ಬಾಳುವ ವಸ್ತುಗುಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಪೋಂಡಾ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ […]

ಯಾವುದೇ ಕೆಲಸವನ್ನು ಕಪ್ಪು ಚುಕ್ಕೆ ಬಾರದಂತೆ ನಿರ್ವಹಿಸಿ: ಮುನಿರಾಜು

ಯಾವುದೇ ಕೆಲಸವನ್ನು ಕಪ್ಪು ಚುಕ್ಕೆ ಬಾರದಂತೆ ನಿರ್ವಹಿಸಿ: ಮುನಿರಾಜು

ಬೈಲಹೊಂಗಲ-ಸೇವೆಯ ಸಮಯದಲ್ಲಿ ಸರ್ಕಾರಕ್ಕಾಗಲಿ, ವ್ಯಕ್ತಿತ್ವಕ್ಕಾಗಲಿ ಯಾವದೇ ಕಪ್ಪು ಚುಕ್ಕೆ ಬಾರದಂತೆ ಜನ ಸಾಮಾನ್ಯರ ಜೊತೆ ಸೌಹಾರ್ದತೆಯಿಂದ ವರ್ತಿಸಿ ಸೇವೆ ನೀಡಿದಾಗ ಜನ್ಮ ಸಾರ್ಥಕವಾಗುತ್ತದೆ ಎಂದು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಂ.ಮುನಿರಾಜು ಹೇಳಿದರು. ಅವರು ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ  ನಡೆದ ತಾಲೂಕಾ ಶಿಶು ಅಭಿವೃದ್ದಿ ಯೋಜನಾಧಿಕಾರಿ ಎ.ಎಸ್.ಮರಕಟ್ಟಿ ಹಾಗೂ ಪ್ರಥಮ ದರ್ಜೆ ಸಹಾಯಕ ನಿಂಗಪ್ಪ ಕೋಲಕಾರ ಅವರ ವಯೋ ನಿವೃತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಂತ ನಮಗೆ ಸರ್ಕಾರದ […]

ಅಭಿವೃದ್ದಿ ಕಾಮಗಾರಿಗೆ ಮೊದಲ ಆದ್ಯತೆ: ಶಾಸಕಿ ಜೊಲ್ಲೆ

ಅಭಿವೃದ್ದಿ ಕಾಮಗಾರಿಗೆ ಮೊದಲ ಆದ್ಯತೆ: ಶಾಸಕಿ ಜೊಲ್ಲೆ

ಚಿಕ್ಕೋಡಿ : ರಸ್ತೆ, ಗಟಾರು, ಸಮುದಾಯ ಭವನ, ಅಂಗನವಾಡಿಗಳ ಕಟ್ಟಡ ಸೇರಿದಂತೆ ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ  ನೀಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನ ಭಿಮಾಪೂರವಾಡಿಯಲ್ಲಿ ನೂತನವಾಗಿ ನಿರ್ಮಾಸಿದ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಆರ್.ಆಯ್.ಡಿ.ಎಫ್. ಯೋಜನೆಯಡಿ 9 ಲಕ್ಷ 17 ಸಾವಿರ ರೂ. ಗಳ ನಿಧಿ ಮಂಜೂರು ಮಾಡಿಸಿ ಅಂಗನವಾಡಿ ಕೇಂದ್ರ ನಿರ್ಮಾನ […]