ಸಕಾಲದಲ್ಲಿ ರೈತರಿಗೆ ಬೀಜ, ರಸಗೊಬ್ಬರ ವಿತರಿಸಿ: ಉಪವಿಭಾಗಾಧಿಕಾರಿ ಸೂಚನೆ

ಸಕಾಲದಲ್ಲಿ ರೈತರಿಗೆ ಬೀಜ, ರಸಗೊಬ್ಬರ ವಿತರಿಸಿ: ಉಪವಿಭಾಗಾಧಿಕಾರಿ ಸೂಚನೆ

ಧಾರವಾಡ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು 2,31,053 ಹೆಕ್ಟರ್ ಭೂಮಿಯನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕೆ ಅಗತ್ಯವಿರುವ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಜಿಲ್ಲೆಯಲ್ಲಿ ದಾಸ್ತಾನು ಹೊಂದಲಾಗಿದ್ದು, ಸಕಾಲಕ್ಕೆ ರೈತರಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಜಯಮಾಧವ. ಪಿ. ಹೇಳಿದರು. ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಹಾಗೂ ರಸಗೊಬ್ಬರ ಮಾರಾಟ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ ಅವರು ಮಾತನಾಡಿದರು. ಜಿಲ್ಲೆಗೆ ವಿವಿಧ ಬೆಳೆಗಳ ಅಂದಾಜು 54383 ಕ್ವಿಂಟಲ್ ಬೀಜ ಅಗತ್ಯವಿದ್ದು, ಈಗಾಗಲೇ 32000 ಕ್ವಿಂಟಲ್ […]

ತಮಿಳುನಾಡಿನಲ್ಲಿ ಪೊಲೀಸರಿಂದ ನಡೆದ ಗೋಲಿಬಾರ್ ಖಂಡಿಸಿ ಪ್ರತಿಭಟನೆ

ತಮಿಳುನಾಡಿನಲ್ಲಿ ಪೊಲೀಸರಿಂದ ನಡೆದ ಗೋಲಿಬಾರ್ ಖಂಡಿಸಿ ಪ್ರತಿಭಟನೆ

ಧಾರವಾಡ: ತಮಿಳುನಾಡಿನ ಟಿಟಿಕೋರಿನ್ನಲ್ಲಿ ವೇದಾಂತ ಸ್ಟಿರಲೈಟ್ ಕಂಪನಿಯ ವಿರುದ್ಧ ಹೋರಾಡುತ್ತಿದ್ದರ ಮೇಲೆ ಗೋಲೀಬಾರ್ ನಡೆಸಿ 11 ಜನರ ಸಾವಿಗೆ ಕಾರಣವಾದ ಘಟನೆಯನ್ನು ಖಂಡಿಸಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ಕುಮ್ಮಕ್ಕಿನೊಂದಿಗೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರದಡಿಯಲ್ಲಿ ಅಲ್ಲಿನ ಪೊಲೀಸ್ ಇಲಾಖೆ ಜನರ ನ್ಯಾಯಯುತವಾದ ಹೋರಾಟವನ್ನು ಹತ್ತಿಕ್ಕಲು ಇಂತಹ ಬರ್ಬರ ಕೃತ್ಯ ನಡೆಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ವೇಳೆ ಮಾತನಾಡಿದ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ […]

ಸಂವಿಧಾನಕ್ಕೆ ಅಪಪ್ರಚಾರವಾಗದಂತೆ ನೋಡಿಕೊಳ್ಳುತ್ತೇನೆ: ನೂತನ ಸ್ಪೀಕರ್

ಸಂವಿಧಾನಕ್ಕೆ ಅಪಪ್ರಚಾರವಾಗದಂತೆ ನೋಡಿಕೊಳ್ಳುತ್ತೇನೆ: ನೂತನ ಸ್ಪೀಕರ್

ಬೆಂಗಳೂರು:  ಸಂವಿಧಾನಕ್ಕೆ ಅಪಪ್ರಚಾರವಾಗದಂತೆ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ನೂತನ ಸ್ಪೀಕರ್ ರಮೇಶ ಕುಮಾರ್ ಭರವಸೆ ನೀಡಿದರು. ಸಭಾಪತಿಯಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಸದಸ್ಯರಿಗೆ ನೂತನ ಸ್ಪೀಕರ್ ರಮೇಶಕುಮಾರ್ ಕೃತಜ್ಞತಾ ಭಾಷಣ ಮಾಡಿದರು. ಇಂದಿರಾ ಗಾಂಧಿ, ದೇವರಾಜ್ ಅರಸುರನ್ನು ನೆನೆದ ಸ್ಪೀಕರ್, ಜನ ನಮ್ಮಿಂದ ನೊಂದುಕೊಳ್ಳದಂತೆ ಕೆಲಸ ಮಾಡೋಣ ಎಂದು ಶಾಸಕರಿಗೆ ಕಿವಿಮಾತು ಹೇಳಿದರು. ಇನ್ನು ಸದನದಲ್ಲಿ ವಿಪಕ್ಷ ನಾಯಕ ಯಡಿಯೂರಪ್ಪ ಅವರನ್ನು ಕೊಂಡಾಡಿದ ಅವರು, ಯಡಿಯೂರಪ್ಪ ಒರಟ, ಆದರೆ ಮೋಸಗಾರನಲ್ಲ. ನನ್ನ ಒಳ್ಳೆಯತನದಿಂದ ಬಿಎಸ್​ವೈ […]

ಬಿಎಸ್ ವೈ ಇನ್ನೆಂದೂ ಅಧಿಕಾರಕ್ಕೆ ಬರಲ್ಲ: ಸಿಎಂ ಕುಮಾರಸ್ವಾಮಿ

ಬಿಎಸ್ ವೈ ಇನ್ನೆಂದೂ ಅಧಿಕಾರಕ್ಕೆ ಬರಲ್ಲ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಬಳಸಿದ ಭಾಷೆ ಸರಿಯಿಲ್ಲ. ಅವರು ಇನ್ನು ಮುಂದೆ ಅಧಿಕಾರಕ್ಕೆ ಬರಲ್ಲ. ಹಾಗಾಗಿ ಇವತ್ತು ಬಯಲು ರಂಗದ ಆಟಕ್ಕೆ ರಿಹರ್ಸಲ್ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದರು. ವಿಧಾನಸಭೆ ವಿಶ್ವಾಸ ಮತ ಯಾಚನೆ ಮುನ್ನ ಪ್ರಾಸ್ತಾವಿಕ ಮಾತನಾಡಿದ ಅವರು,  ಬಿಎಸ್ ವೈ ಅವರ ಭಾಷಣಕ್ಕೆ ಪ್ರತ್ಯುತ್ತರ ನೀಡಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ನಾಯಕರು ಜೈಲಿಗೆ ಹೋಗ್ತಾರೆ ಎಂಬ ಭಯದಿಂದ ಜೆಡಿಎಸ್‌ ಬೆಂಬಲ ನೀಡಿದ್ದಾರೆ ಎಂದು ಪ್ರಕಾಶ್‌ ಜಾವ್ಡೇಕರ್‌ ಹೇಳಿದ್ದಾರೆ. ಇದು ಬಿಜೆಪಿಯವರ ರಾಜಕೀಯ […]

ಭೂ ಮಾಪಕ ಎಸಿಬಿ ಬಲೆಗೆ..!

ಭೂ ಮಾಪಕ ಎಸಿಬಿ ಬಲೆಗೆ..!

ಹಾವೇರಿ: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಭೂ ಮಾಪಕ ಎಸಿಬಿ ಬಲೆಗೆ ಬಿದ್ದ ಘಟನೆ ರಾಣೇೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ. ಸಂಜೀವ ನ್ಯಾಮಗೌಡ ಎಸಿಬಿ ಬಲೆಗೆ ಬಿದ್ದ ಭೂ ಮಾಪಕ.   ಭೂಮಿ ಅಳತೆ ಮಾಡಲು  ಹಿರೇಬಿದರಿ ಗ್ರಾಮದ ನಾಗರಾಜ್ ಎಂಬುವವರಿಂದ ಒಂದು ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ. ಎಸಿಬಿ ಅಧಿಕಾರಿಗಳು  ದಾಳಿ ನಡೆಸಿ ಭೂ ಮಾಪಕನನ್ನು ವಶಕ್ಕೆ ಪಡೆದಿದ್ದಾರೆ. Ameet ingalganvihttp://udayanadu.com

ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ: ಸತೀಶ ಜಾರಕಿಹೊಳಿ

ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ: ಸತೀಶ ಜಾರಕಿಹೊಳಿ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮೈತ್ರಿ ಸರ್ಕಾರವನ್ನು ಯಾವುದೇ ಅಡೆ ತಡೆ ಇಲ್ಲದೆ ಮುನ್ನಡೆಸಿಕೊಂಡು ಹೋಗುತ್ತಾರೆ. ನಮ್ಮಲ್ಲಿ ಯಾವುದೇ ಅಸಮಧಾನ ಇಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ನಮ್ಮಲ್ಲಿ ಯಾವುದೇ ಅಸಮಧಾನ ಇಲ್ಲ. ಸಚಿವ ಸ್ಥಾನಕ್ಕೆ ಪೈಪೋಟಿ ಸಹ ನಡೆದಿಲ್ಲ ಎಂದು ಸತೀಶ ಜಾರಕಿಹೊಳಿ ತಿಳಿಸಿದರು. Ameet ingalganvihttp://udayanadu.com

ಗೋಕಾಕ ಕ್ಷೇತ್ರದಲ್ಲಿ ನನ್ನ ರಾಜಕೀಯ ಹೋರಾಟ ನಿಲ್ಲದು: ಅಶೋಕ ಪೂಜಾರಿ

ಗೋಕಾಕ ಕ್ಷೇತ್ರದಲ್ಲಿ ನನ್ನ ರಾಜಕೀಯ ಹೋರಾಟ ನಿಲ್ಲದು: ಅಶೋಕ ಪೂಜಾರಿ

ಗೋಕಾಕ: ಪ್ರಜಾಪ್ರಭುತ್ವದ ವ್ಯವಸ್ಥೆಯೇ ಹಣ ಮತ್ತು ತೋಳ್ಬಲಕ್ಕೆ ಶರಣಾಗುತ್ತಿದೆ. ಇದನ್ನು ಹೋಗಲಾಡಿಸಲು ಸಾಮಾಜಿಕ ಮತ್ತು ರಾಜಕೀಯವಾಗಿ ನನ್ನ ಹೋರಾಟ ನಿರಂತರವಾಗಿ ಮುಂದುವರೆಸುವುದಾಗಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ತಿಳಿಸಿದರು. ನಗರದ ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ ಜರುಗಿದ ಗೋಕಾಕ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಹಾಗೂ ತಮ್ಮನ್ನು ಚುನಾವಣೆಯಲ್ಲಿ ಬೆಂಬಲಿಸಿದ ಅಭಿಮಾನಿಗಳ ಭಾಗವಹಿಸಿದ್ದ ಚುನಾವಣಾ ಪರಿಣಾಮದ ಆತ್ಮಾವಲೋಕನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗೋಕಾಕ ಕ್ಷೇತ್ರದ ಸುಮಾರು 76 ಸಾವಿರ ಮತದಾರರು ಒತ್ತಡ […]

ಅಥಣಿ: ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಅಥಣಿ: ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಅಥಣಿ: ತಾಲೂಕಿನ ಝಂಜರವಾಡ ಗ್ರಾಮದ ಕೃಷ್ಣಾ ನದಿ ತೀರದಲ್ಲಿ  10 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಇಂದು ಮಧ್ಯಾಹ್ನ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು,  ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಕೂಡ ಸಮಯಕ್ಕೆ ಸರಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ ಹಿನ್ನೆಲೆ ಗ್ರಾಮಸ್ಥರೇ ಮೊಸಳೆಯನ್ನು ಸೆರೆ ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಕೃಷ್ಣಾ ನದಿ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿದೆ. ನದಿಯಲ್ಲಿ ನೀರು ಕಡಿಮೆಯಾಗಿತ್ತಿದ್ದಂತೆ ಪಕ್ಕದ ಜಮೀನುಗಳಲ್ಲಿ ಪದೇ ಪದೇ  ಮೊಸಳೆ ಕಾಣಿಸಿಕೊಳ್ಳುತ್ತಿತ್ತು. […]

ವಿವಿ ಪ್ಯಾಟ್ ಪತ್ತೆ ಪ್ರಕರಣ: ಚುನಾವಣಾಧಿಕಾರಿ ಹೇಳಿದ್ದೇನು?

ವಿವಿ ಪ್ಯಾಟ್ ಪತ್ತೆ ಪ್ರಕರಣ: ಚುನಾವಣಾಧಿಕಾರಿ ಹೇಳಿದ್ದೇನು?

ಬೆಂಗಳೂರು: ವಿಜಯಪುರ ಜಿಲ್ಲೆಯ  ಮನಗೂಳಿ ಗ್ರಾಮದ ಹೊರವಲಯದಲ್ಲಿ ದೊರೆತ ವಿವಿ ಪ್ಯಾಟ್ ನ ಖಾಲಿ ಬಾಕ್ಸ್ ಗಳು, ವಿಜಯಪುರ ಜಿಲ್ಲೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು, ಅಲ್ಲ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಖಚಿತ ಪಡಿದ್ದಾರೆ. ಚುನಾವಣಾ ಆಯೋಗ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ ಅವರು, ಮನಗೂಳಿ ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೆಡ್ ನಲ್ಲಿ ದೊರೆತ 8 ಖಾಲಿ ಬಾಕ್ಸ್ ವಿವಿ ಪ್ಯಾಟ್ ಗಳು ರಾಜ್ಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು, ಅಲ್ಲ. […]

ಟಿಪ್ಪು ಕಾಲದ ಸುರಂಗ ಮಾರ್ಗ ಪತ್ತೆ..!

ಟಿಪ್ಪು ಕಾಲದ ಸುರಂಗ ಮಾರ್ಗ ಪತ್ತೆ..!

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಟೆಲಿಫೋನ್ ಕೇಬಲ್ ಅವಳಡಿಗಾಗಿ ರಸ್ತೆ ಅಗೆದಾಗ ಟಿಪ್ಪು ಕಾಲದ ಸುರಂಗ ಮಾರ್ಗವೊಂದು ಪತ್ತೆಯಾಗಿದೆ. ಗ್ರಾಮದಲ್ಲಿ  ನೂತನ ಟೆಲಿಫೋನ್ ಕೇಬಲ್ ಅಳವಡಿಕೆಗಾಗಿ ರಸ್ತೆ ಬದಿಯಲ್ಲಿ ಭೂಮಿ ಅಗೆಯುವಾಗ ಸುರಂಗ ಮಾರ್ಗ ಪತ್ತೆಯಾಗಿದೆ. ಒಳ ಭಾಗದಲ್ಲಿ ಹಲು ಕವಲು ದಾರಿಗಳು ಗೋಚರವಾಗವೆ. ಸುದ್ದಿ ತಿಳಿಯುತ್ತಿದ್ದಂತೆ ಸುರಂಗ ಮಾರ್ಗ ವೀಕ್ಷಣೆಗೆ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್, ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆಗೂ ಮಾಹಿತಿ ರವಾನಿಸಿದ್ದಾರೆ. Ameet ingalganvihttp://udayanadu.com