ಸ್ವಾಮೀಜಿ ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ 20 ಲಕ್ಷ ರೂ., 1 ಕಾರು ದರೋಡೆ

ಸ್ವಾಮೀಜಿ ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ 20 ಲಕ್ಷ ರೂ., 1 ಕಾರು ದರೋಡೆ

ತುಮಕೂರು: ಸ್ವಾಮೀಜಿ ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ 20 ಲಕ್ಷ ರೂ. ದರೋಡೆ ಮಾಡಿದ ಘಟನೆ ಕುಣಿಗಲ್ ತಾಲೂಕಿನ ಬಿದನಗೆರೆ ಶನಿ ದೇವಸ್ಥಾನದ ಬಳಿ ನಡೆದಿದೆ. ಆರು ಜನರ ತಂಡ ಈ ಕೃತ್ಯ ಎಸಗಿ ಪರಾರಿಯಾಗಿದೆ.  ಶನಿ ದೇವಸ್ಥಾನದ ಧನಂಜಯ ಸ್ವಾಮೀಜಿ ಬಳಿ ಬಂದ ಆರು ಜನರು ಕಣ್ಣಿಗೆ ಕೆಮಿಕಲ್ ಸ್ಪ್ರೇ ಸಿಂಪಡಿಸಿ 20 ಲಕ್ಷ ರೂ. ಹಾಗೂ ಒಂದು ಕಾರು ದೋಚಿ ದರೋಡೆಕೋರರ ತಂಡ ಪರಾರಿಯಾಗಿದೆ. ಗಾಯಗೊಂಡಿರುವ ಸ್ವಾಮೀಜಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ […]

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಿಸಿದ ಶಾಸಕ

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ  ಚೆಕ್ ವಿತರಿಸಿದ ಶಾಸಕ

ಕೊಪ್ಪಳ : ಇತ್ತೀಚಿಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೈತ ಭೀಮಪ್ಪ ನಾಗಪ್ಪ ಯತ್ನಟ್ಟಿ ಅವರ ಕುಟುಂಬಕ್ಕೆ ಸರಕಾರದಿಂದ ಮಂಜೂರಾದ ಐದು ಲಕ್ಷ ರೂ. ಚೆಕ್ ನ್ನು ಶಾಸಕ ರಾಘವೇಂದ್ರ ಹಿಟ್ನಾಳ  ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ತಾ.ಪಂ.ಸದಸ್ಯ ನಿಂಗಪ್ಪ ಯತ್ನಟ್ಟಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಮುಖಂಡರುಗಳಾದ ಕಿಶೋರಿ ಬೂದನೂರ, ಕೇಶವರಡ್ಡಿ, ವಿರುಪಾಕ್ಷಪ್ಪ ಮೋರನಾಳ, ಪರಶುರಾಮ ಭೈರಾಪೂರ, ಕೃಷಿ ಅಧಿಕಾರಿಗಳಾದ […]

ವಿದ್ಯಾರ್ಥಿಗಳಿಗಾಗಿ ಶ್ರಮಿಸುತ್ತಿರುವ ಸ್ವಾಮಿ ವಿವೇಕಾನಂದ ಟ್ರಸ್ಟ್ ಕಾಯ೯ ಅಪಾರ: ಶಾಸಕ ಕೌಜಲಗಿ

ವಿದ್ಯಾರ್ಥಿಗಳಿಗಾಗಿ ಶ್ರಮಿಸುತ್ತಿರುವ ಸ್ವಾಮಿ ವಿವೇಕಾನಂದ ಟ್ರಸ್ಟ್ ಕಾಯ೯ ಅಪಾರ: ಶಾಸಕ ಕೌಜಲಗಿ

ಬೈಲಹೊಂಗಲ:  ಮಲ್ಲಮ್ಮನ ಬೆಳವಡಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಪಿಯುಸಿ ಕಾಲೇಜು ಆರಂಭಿಸುತ್ತಿರುವ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಕಾಯ೯ ಶ್ಯಾಘನೀಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ  ಎನ್. ಆರ್. ಪಾಟೀಲ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಉದ್ಘಾಟಿಸಿ ಮಾತನಾಡಿ, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾಥಿ೯ಗಳಿಗೆ ಸಕಾ೯ರ ದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಕಸಾಪ ಮಾಜಿ […]

ಸತೀಶ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡದಿದ್ದಲ್ಲಿ ಎಲ್ಲ ಎಸ್ಟಿ ಶಾಸಕರು ರಾಜೀನಾಮೆ ನೀಡಲಿ

ಸತೀಶ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡದಿದ್ದಲ್ಲಿ ಎಲ್ಲ ಎಸ್ಟಿ ಶಾಸಕರು ರಾಜೀನಾಮೆ ನೀಡಲಿ

ವಾಲ್ಮೀಕಿ ನಾಯಕ ಸಮಾಜ ಯುವಘಟಕದ ಅಧ್ಯಕ್ಷ ವಿಶ್ವನಾಥ ಜಮಾದಾರ ಒತ್ತಾಯ ಕಲಬುರಗಿ: ಸಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ವಾಲ್ಮೀಕಿ ನಾಯಕ ಸಮಾಜವನ್ನು ಕಡೆಗಣಿಸಲಾಗಿದೆ. ಸಮಾಜದ ಪ್ರಭಲ ನಾಯಕರಾದ ಸತೀಶ ಜಾರಕಿಹೊಳಿಯವರನ್ನು ದೋಸ್ತಿ ಸರಕಾರದ ಸಂಪುಟದಲ್ಲಿ ಕೈ ಬಿಟ್ಟಿದನ್ನು  ವಾಲ್ಮೀಕಿ ನಾಯಕ ಸಮಾಜ ಬಲವಾಗಿ ಖಂಡಿಸುತ್ತದೆ ಎಂದು ಹೈದ್ರಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಯುವಘಟಕದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವಿಶ್ವನಾಥ ಜಮಾದಾರ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೋಸ್ತಿ ಸರಕಾರದಲ್ಲಿ 10 ಜನ […]

ವೈದ್ಯರ ಕೊರತೆ ಖಂಡಿಸಿ ರೋಗಿಗಳಿಂದ ದಿಢೀರ್ ಪ್ರತಿಭಟನೆ

ವೈದ್ಯರ ಕೊರತೆ ಖಂಡಿಸಿ ರೋಗಿಗಳಿಂದ ದಿಢೀರ್ ಪ್ರತಿಭಟನೆ

ಮುದ್ದೇಬಿಹಾಳ: ಪಟ್ಟಣದ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಖಂಡಿಸಿ ಅನಾರೋಗ್ಯ ಪೀಡಿತ ಮಕ್ಕಳು,ಮಹಿಳೆಯರು ಹಾಗೂ ಸಂಬಂಧಿಕರು ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ಬೀಗ ಜಡಿದು ದಿಢೀರ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ 9 ಗಂಟೆಯಿಂದಲೇ ಆಸ್ಪತ್ರೆಗೆ  ನೂರಾರು ಜನರು ತಪಾಸಣೆಗೆ ಆಗಮಿಸಿದ್ದರೂ ಒಬ್ಬರು ವೈದ್ಯರು  ಕೂಡ ಲಭ್ಯರಿಲ್ಲ. ನಮ್ಮ ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ದೂರದಿಂದಲೇ ಅನಾರೋಗ್ಯ ಪೀಡಿತ ಮಕ್ಕಳನ್ನು ಇಲ್ಲಿನ ವೈದ್ಯರೊಬ್ಬರು ದೂರದಿಂದಲೇ ನಿಂತು ಪರೀಕ್ಷೆ ಮಾಡುತ್ತಾರೆ. ಮುಟ್ಟಲು ಹೋಗುವುದಿಲ್ಲ. ಇಂತಹ ವೈದ್ಯರು ನಮಗೆ ಬೇಡ […]

ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಲೋಕಾರ್ಪಣೆ

ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಲೋಕಾರ್ಪಣೆ

ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮಾಜದ ಉಳುವಿಗಾಗಿ ಸಮಾಜದ ಪ್ರತಿಯೊಬ್ಬರು ನಿಷ್ಠೆ, ಬದ್ಧತೆ, ಗುರಿ ಇಟ್ಟುಕೊಂಡು ಪಂಚಮಸಾಲಿ ಸಮಾಜವನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಮೃತ್ಯುಂಜಯ ಸ್ವಾಮೀಜಿ ಹೇಳಿದರು. ಪಟ್ಟಣದ ಮುರಕೀಭಾವಿ ರಸ್ತೆ ಹತ್ತಿರದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ಅನುದಾನದಡಿಯಲ್ಲಿ ನಿಮಾ೯ಣಗೊಂಡಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಕೂಡಲ ಸಂಗಮ, ಕಿತ್ತೂರು ನಾಡು ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. […]

ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ: ಶಾಸಕ ನಾಗನಗೌಡ

ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ: ಶಾಸಕ ನಾಗನಗೌಡ

ಯಾದಗಿರಿ: ಶಾಸಕನಾಗಿ ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಗುರುಮಠಕಲ್ ನೂತನ ಶಾಸಕ ನಾಗನಗೌಡ ಕಂದಕೂರು ಹೇಳಿದರು. ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಇಷ್ಟು ವರ್ಷಗಳ ಕಾಲ ಅನುಭವಿಸಿದ ನೋವಿಗೆ ಕೊನೆಯಾಗಿದೆ. ನಿಮ್ಮ ಧ್ವನಿಯನ್ನು ಅಡಗಿಸುವ ಎಲ್ಲ ಪ್ರಯತ್ನಗಳು ನಿರಂತರ ನಡೆಯುತ್ತಲೇ ಬಂದಿದ್ದರೂ ನೀವು ಹೆಬ್ಬಂಡೆಯಂತೆ ನನ್ನ ಹಾಗೂ ನನ್ನ ಕುಟುಂಬದ ಬೆನ್ನಿಗೆ ನಿಂತು ನಾನು ಶಾಸಕನಾಗಿ […]

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಎಬಿವಿಪಿ ಆಗ್ರಹ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಎಬಿವಿಪಿ ಆಗ್ರಹ

ಗಜೇಂದ್ರಗಡ: ಪ್ರಸಕ್ತ ಸಾಲಿನಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮತ್ತು ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ವರೆಗೂ ಉಚಿತವಾಗಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿ ಭಾರತ್ ವಿದ್ಯಾರ್ಥಿ ಫೆಡರೇಶನ್ ಕಾರ್ಯಕರ್ತರು ಶನಿವಾರ ನಗರದಲ್ಲಿ  ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಹಿಂದಿನ ಸರಕಾರ 2018-19ರಲ್ಲಿ ಉಚಿತ ಬಸ್ ಪಾಸ್ ಮತ್ತು ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಾಂಗದ ವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಬಸ್ […]

ರಾತ್ರೋ ರಾತ್ರೀ ಫೇಮಸ್ ಆದ ಕುರಿಗಾಹಿ

ರಾತ್ರೋ ರಾತ್ರೀ ಫೇಮಸ್ ಆದ ಕುರಿಗಾಹಿ

ಗದಗ:  ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕುರಿಗಾಯಿಯೊಬ್ಬ ರಾತ್ರೋ ರಾತ್ರೀ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದು, ಕುರಿಗಾಹಿಯ ಪ್ರತಿಭೆಗೆ ನೆಟ್ಟಿಗರು ಮನಸೋತಿದ್ದಾರೆ. ಹೌದು.. ಶಿರಹಟ್ಟಿ ಮೂಲದ ಕುರಿಗಾಯಿ ಹುನುಮಂತ ಬಟ್ಟೂರು ಎಂಬಾತ ಕುರಿ ಕಾಯುವಾಗ ಸಾಗರಿಯೇ ಸಾಗರಿಯೇ ಹಾಡು ಹಾಡಿ ತನ್ನ ಮೊಬೈಲ್ ನಲ್ಲಿ ಸೆಲ್ಪಿ ವಿಡಿಯೋ ಮಾಡಿ ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಡಾ. ರಾಜಕುಮಾರ್ ಅಭಿಮಾನಿಯಾಗಿರುವ ಹನುಮಂತ ಹೈಸ್ಕೂಲ್ ವರೆಗೆ ವಿದ್ಯಾಭ್ಯಾಸ […]

ಕಾರು ಡಿಕ್ಕಿ ಕಾಲೇಜು ವಿದ್ಯಾರ್ಥಿ ಸಾವು: ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಕಾರು ಡಿಕ್ಕಿ ಕಾಲೇಜು ವಿದ್ಯಾರ್ಥಿ ಸಾವು: ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಧಾರವಾಡ:ರಸ್ತೆ ದಾಟುತ್ತಿದ್ದಾಗ ಕಾಲೇಜು ವಿದ್ಯರ್ಥಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಧಾರವಾಡ ಹೊರವಲಯ ಮುಮ್ಮಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕರೆಪ್ಪ ನಾಯಕ (19) ಮೃತ ವಿದ್ಯಾರ್ಥಿ.  ಬೆಳಗ್ಗೆ ಕಾಲೇಜಿಗೆ ತೆರಳಲು ರಸ್ತೆ ದಾಟುತ್ತಿರುವಾಗ ಬೆಳಗಾವಿ ಕಡೆಗೆ ಹೋರಟಿದ್ದ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧಾರವಾಡ: ರಸ್ತೆ ದಾಟುತ್ತಿದ್ದ ಯುವಕನಿಗೆ ಕಾರು […]