ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಎಬಿವಿಪಿ ಆಗ್ರಹ

ಗೋಕಾಕ: ರಾಜ್ಯದ ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ ನಿಂದ ಬುಧವಾರ  ನಗರದ ಬಸವೇಶ್ವರ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು., ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವಂತೆ ರಾಜ್ಯ ಸರಕಾರದ ವಿರುದ್ದ ವಿದ್ಯಾರ್ಥಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಎಬಿವಿಪಿ ಬೆಳಗಾವಿ ವಿಭಾಗ ಸಂಚಾಲಕ ಶಿವಾನಂದ ಸೈದಾಪೂರ ಮಾತನಾಡಿ, ಹಿಂದಿನ ರಾಜ್ಯ ಸರ್ಕಾರವು ಅನುಸೂಚಿತ […]

ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ಶಾಸಕ ನಡಹಳ್ಳಿ ಅಧಿಕಾರಿಗಳಿಗೆ ಸೂಚನೆ

ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ:  ಶಾಸಕ ನಡಹಳ್ಳಿ ಅಧಿಕಾರಿಗಳಿಗೆ ಸೂಚನೆ

ಮುದ್ದೇಬಿಹಾಳ: ಮುಂಗಾರು ಹಂಗಾಮು ಆರಂಭಗೊಂಡಿದ್ದು, ಸಕಾಲಕ್ಕೆ ಮಳೆಯೂ ಆಗುತ್ತಿದೆ. ರೈತರಿಗೆ  ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಒದಗಿಸುವಂತೆ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕೃಷಿ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,  ಕಳಪೆ ಗುಣಮಟ್ಟದ ಬೀಜ ರಸಗೊಬ್ಬರ ಪೂರೈಸಿದ್ದು, ನಿಗದಿತ ಬೆಲೆಗೆ ಬಿಟ್ಟು ಹೆಚ್ಚಿನ ಬೆಲೆ ಆಕರಿಸಿದ್ದೇ ಆದಲ್ಲಿ ಸಂಬಂಧಿಸಿದ ಅಂಗಡಿಕಾರರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಶಾಸಕರು ತಿಳಿಸಿದರು. ರೈತರಿಗೆ ಕಾಲಕಾಲಕ್ಕೆ ಕೃಷಿ […]

ಒಂದೇ ಮನೆಯಲ್ಲಿ ಮೂವರ ಸಾವು: ಸೂತಕದ ಛಾಯೆ ಆವರಿಸಿದ ಕೋಡಲಾ ಗ್ರಾಮ

ಒಂದೇ ಮನೆಯಲ್ಲಿ ಮೂವರ ಸಾವು: ಸೂತಕದ ಛಾಯೆ ಆವರಿಸಿದ ಕೋಡಲಾ ಗ್ರಾಮ

ಯಾದಗಿರಿ: ಒಂದೇ ಕುಟುಂಬದಲ್ಲಿ ಮೂವರು ಒಂದೇ ದಿನ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಇಂದು ಬೆಳಗ್ಗೆ  ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕೋಡಲಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರದೀಪ್ (೩) ಎನ್ನವ ಬಾಲಕ ವಾಂತಿ ಭೇದಿ ಯಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನ ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಪ್ರಥಮ‌ಚಿಕಿತ್ಸೆ ನೀಡಿ ಬಳಿಕ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ. ಪ್ರದೀಪನ ಜತೆ ಆಸ್ಪತ್ರೆಗೆ ಬರುತ್ತಿದ್ದ ಆತನ‌ ಅಜ್ಜಿ ಶಾಂತಮ್ಮ(40) ತೀವ್ರ ಅಸ್ವಸ್ಥಗೊಂಡರು. ಆಕೆಯನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ […]

ಆರ್. ಶಂಕರ್ ಸಚಿವರಾಗಿ ಪ್ರಮಾಣ ವಚನ: ಕಾರ್ಯಕರ್ತರಿಂದ ವಿಜಯೋತ್ಸವ

ಆರ್. ಶಂಕರ್ ಸಚಿವರಾಗಿ ಪ್ರಮಾಣ ವಚನ: ಕಾರ್ಯಕರ್ತರಿಂದ ವಿಜಯೋತ್ಸವ

ಹಾವೇರಿ: ರಾಣೆಬೆನ್ನೂರಿನ ಕೆಪಿಜೆಪಿ ಪಕ್ಷದ ಶಾಸಕ ಆರ್. ಶಂಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಯಲ್ಲಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ನಗರದಲ್ಲಿ ಸಂಭ್ರಮಾಚರಿಸಿದರು. ನಗರದ ಹಲಗೇರಿ ಕ್ರಾಸ್ – ಬಸ್ ನಿಲ್ದಾಣದ ವೃತ್ತ, ಚೌಡೇಶ್ವರಿ ರಸ್ತೆಯಲ್ಲಿ ನೂರಾರು ಅಭಿಮಾನಿಗಳು ಪಟಾಕಿ ಸಿಟಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅಭಿಮಾನಿಗಳು ರಾಣಿಬೇನ್ನೂರು ನಗರಕ್ಕೆ ಹುಲಿ ಎಂಟ್ರಿಯಾಗಿದೆ. ಶಂಕರ್ ಅವರು ಸಚಿವರಾಗಿದ್ದಕ್ಕೆ, ಕ್ಷೇತ್ರದ ಅಭಿವೃದ್ದಿ ತಿವ್ರ ಗತಿಯಲ್ಲಿ ಸಾಗುತ್ತದೆ. ಮೊದಲು ಶಾಸಕರಾಗಿ, ಸಚಿವರಾಗುತ್ತಿರುವದು […]

ಕಬ್ಬಿನ ಬಾಕಿ ಬಿಲ್ ಪಾವತಿಗೆ 15 ದಿನಗಳ ಗಡುವು ನೀಡಿದ ಡಿಸಿ

ಕಬ್ಬಿನ ಬಾಕಿ ಬಿಲ್ ಪಾವತಿಗೆ 15 ದಿನಗಳ ಗಡುವು ನೀಡಿದ ಡಿಸಿ

ಜಿಲ್ಲೆಯ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು-ರೈತ ಮುಖಂಡರ ಸಭೆಯಲ್ಲಿ ಡಿಸಿ ಸೂಚನೆ ಬೆಳಗಾವಿ: 2017-18ನೇ ಸಾಲಿನಲ್ಲಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಇನ್ನು ಹದಿನೈದು ದಿನದೊಳಗೆ ರೈತರಿಗೆ ಹಣ ಪಾವತಿಸದಿದ್ದರೆ ಸಕ್ಕರೆಯನ್ನು ಜಪ್ತಿ ಮಾಡಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಜಿಲ್ಲೆಯ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 2017-18ನೇ ಸಾಲಿನ ಕಬ್ಬಿನ ಬಿಲ್ ಬಾಕಿ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ […]

ಬಿ.ಸಿ.ಪಾಟೀಲ್ ಗೆ ಕೈ ತಪ್ಪಿದ ಸಚಿವ ಸ್ಥಾನ: ಹಾವೇರಿಯಲ್ಲಿ ಬೆಂಬಲಿಗರಿಂದ ಪ್ರತಿಭಟನೆ

ಬಿ.ಸಿ.ಪಾಟೀಲ್ ಗೆ ಕೈ ತಪ್ಪಿದ ಸಚಿವ ಸ್ಥಾನ: ಹಾವೇರಿಯಲ್ಲಿ ಬೆಂಬಲಿಗರಿಂದ ಪ್ರತಿಭಟನೆ

ಹಾವೇರಿ: ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ ಬಿ. ಸಿ. ಪಾಟೀಲ್ ಅವರಿಗೆ  ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅವರ ಬೆಂಬಲಿಗರು ದಿಢೀರ್ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಬಿ.ಸಿ.ಪಾಟೀಲ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಹಿರೇಕೆರೂರ ಕ್ಷೇತ್ರದ ಶಾಸಕ ಬಿ. ಸಿ. ಪಾಟೀಲ್  ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ, ಜಿಲ್ಲೆಯ ಕೈ ಪಾಳ್ಯದಲ್ಲಿ ಉತ್ಸಾಹ ಇಮ್ನುಡಿಯಾಗುತ್ತದೆ. ಆದ್ದರಿಂದ ಬಿ.ಸಿ.ಪಾಟೀಲರಿಗೆ ಸಚಿವ […]

ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಹಾವೇರಿ: ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಹಾವೇರಿ ತಾಲೂಕಿನ ಕೊಳೂರು ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಕಳಸಣ್ಣನವರ (12)ಸಾವನ್ನಪ್ಪಿದ ಬಾಲಕ.  ಮೂರು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಬಾಲಕ. ಮಕ್ಕಳ ಕಳ್ಳರ ವದಂತಿಗೆ ಪುಷ್ಟಿ ನೀಡಿತ್ತು. ಆದರೆ, ಇಂದು ಬೆಳಿಗ್ಗೆ ಬಾಲಕನ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದರಿಂದ ಬಾಲಕನೆ ಕಾಲುಜಾರಿ ಕೆರೆಗೆ ಬಿದ್ದಿರೊ ಶಂಕೆ ವ್ಯಕ್ತವಾಗುತ್ತಿದೆ. ಬಾಲಕನ ಪೋಷಕರು ತಮ್ಮ ಮಗನನ್ನು ಯಾರೋ ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ […]

ನನಗೆ ಯಾವ ಸಚಿವ, ಡಿಸಿಎಂ ಸ್ಥಾನ ಬೇಡ ಶಾಸಕನಾಗಿಯೇ ಇರುವೆ: ಎಂ.ಬಿ.ಪಾಟೀಲ್

ನನಗೆ ಯಾವ ಸಚಿವ, ಡಿಸಿಎಂ ಸ್ಥಾನ ಬೇಡ ಶಾಸಕನಾಗಿಯೇ ಇರುವೆ: ಎಂ.ಬಿ.ಪಾಟೀಲ್

ಬೆಂಗಳೂರು: ನನಗೆ ಯಾವ ಸಚಿವ ಸ್ಥಾನ , ಡಿಸಿಎಂ ಸ್ಥಾನವೂ ಬೇಡ, ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಸೇವೆಸಲ್ಲಿಸುವುದಾಗಿ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗಲಿದೆ ಎಂದು ಕೊನೆಯ ಸಮಯದವರೆಗೂ ಆಸೆ ಇತ್ತು. ಆದರೆ ಸಚಿವ ಸ್ಥಾನ ಕೈ ತಪ್ಪಿದೆ.  ನನಗೆ ಯಾವ ಸಚಿವ ಹಾಗೂ ಡಿಸಿಎಂ ಸ್ಥಾನ ನೀಡಿದರು ಬೇಡ. ತಮ್ಮ ಕ್ಷೇತ್ರದಲ್ಲಿ ಶಾಸಕನಾಗಿ ಜನರ ಸೇವೆ ಸಲ್ಲಿಸುವುದಾಗಿ ಅವರು ತಿಳಿಸಿದರು. Views: 563

ಕುಮಾರ ಸಂಪುಟದಲ್ಲಿ ಒಂಭತ್ತು ಒಕ್ಕಲಿಗರು, ನಾಲ್ಕೇ ಲಿಂಗಾಯತರು…!

ಕುಮಾರ ಸಂಪುಟದಲ್ಲಿ ಒಂಭತ್ತು ಒಕ್ಕಲಿಗರು, ನಾಲ್ಕೇ ಲಿಂಗಾಯತರು…!

ಪರಿಶಿಷ್ಟ ಪಂಗಡಕ್ಕೆ ಒಂದೇ ಸ್ಥಾನ ಬೆಂಗಳೂರು:  ಕಳೆದ ಕೆಲವು ದಿನಗಳಿಂದ ಹಗ್ಗ ಜಗ್ಗಾಟ, ಸಭೆ ಚರ್ಚೆಗಳನ್ನು ನಡೆಸಿದ ಬಳಿಕ ಇಂದು ಸಮ್ಮಿಶ್ರ ಸರಕಾರದ ಸಚಿವ ಸಂಪುಟ ರಚೆನೆಯಾಗಿದೆ. ಕಾಂಗ್ರೆಸ್ ನಲ್ಲಿ 15 ಜೆಡಿಎಸ್ ನ 10 ಒಟ್ಟಿ 25  ಶಾಸಕರು ನೂತನ ಸಚಿವರಾಗಿ ರಾಜ್ಯಭವನ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಾಜುಭಾಯಿ ವಾಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.  ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಪರಮೇಶ್ವರ ಅವರು ನೂತನ ಸಚಿವರಿಗೆ ಅಭಿನಂದಿಸಿದರು. ದೋಸ್ತಿ ಸರಕಾರದಲ್ಲಿ […]

ಬುದ್ದ, ಬಸವ, ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎನ್. ಮಹೇಶ್

ಬುದ್ದ, ಬಸವ, ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎನ್. ಮಹೇಶ್

ಬೆಂಗಳೂರು: ಸಮ್ಮಿಶ್ರ ಸರಕಾರದ ನೂತನ ಸಚಿವರಾಗಿ ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ಹೆಸರಿನಲ್ಲಿ ಎನ್ ಮಹೇಶ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಾಪಾಲ ವಾಜುಭಾಯಿ ವಾಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ರಾಜ್ಯಪಾಲರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರು ನೂತನ ಸಚಿವ ಎನ್. ಮಹೇಶ ಅವರಿಗೆ ಹೂ ಗುಚ್ಚ ನೀಡಿ […]