ಅಥಣಿ: ಬಿಜೆಪಿ ಬ್ಲೂ ಬಾಯ್ ಗೆ ಠಕ್ಕರ್ ಕೊಟ್ಟ ಮಹೇಶ ಕುಮಟಳ್ಳಿ

ಅಥಣಿ: ಬಿಜೆಪಿ ಬ್ಲೂ ಬಾಯ್ ಗೆ ಠಕ್ಕರ್ ಕೊಟ್ಟ ಮಹೇಶ ಕುಮಟಳ್ಳಿ

ಕಾಗವಾಡದಲ್ಲಿ ಕಾಗೆಗೆ ಹೀನಾಯ ಸೋಲು ಬಿಜೆಪಿ ಭದ್ರಕೋಟೆ ಭೇದಿಸಿದ ಕಲಿಗಳು ಎರಡು ಕ್ಷೇತ್ರದಲ್ಲಿ ಬಂಬಲಿಗರಿಂದ ಅದ್ದೂರಿ ಸಂಭ್ರಮಾಚಣೆ ಅಥಣಿ:  ಬಿಜೆಪಿ ಭದ್ರಕೋಟೆಯಾಗಿದ್ದ ಅಥಣಿ ಹಾಗೂ ಕಾಗವಾಡ ಎರಡೂ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಟಳ್ಳಿ ಒಟ್ಟು 61395 ಮತಗಳನ್ನು ಪಡೆಯುವ ಮೂಲಕ ವಿಜಯ ಪತಾಕೆ ಹಾರಿಸಿದ್ದಾರೆ. ಸತತ ಮೂರು ಬಾರಿ ಬಿಜಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಬ್ಲೂ ಬಾಯ್ ಖ್ಯಾತಿಯ ಲಕ್ಷ್ಮಣ ಸವದಿ 1726 […]

ಎರಡು ಕ್ಷೇತ್ರದಲ್ಲಿಯೂ ಎಚ್ಡಿಕೆ ಭರ್ಜರಿ ಗೆಲವು

ಎರಡು ಕ್ಷೇತ್ರದಲ್ಲಿಯೂ ಎಚ್ಡಿಕೆ ಭರ್ಜರಿ ಗೆಲವು

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಗೆಲವು ಸಾಧಿಸಿ ಹೊಸ ದಾಖಲೆ ಮೆರೆದಿದ್ದಾರೆ. ರಾಮನಗರ ಹಾಗೂ ಚನ್ನಪ್ಪಟ್ಟಣದಲ್ಲಿಯೂ ಕೂಡ ಅಧಿಕ ಮತಗಳನ್ನು ಪಡೆದು ಎಚ್.ಡಿ. ಕೆ ಗೆಲುವಿನ ನಾಗಾಲೋಟ ಮೆರೆದಿದ್ದಾರೆ. ರಾಮನಗರದಲ್ಲಿ 19, 745 ಮತಗಳ ಅಂತರದಿಂದ ಗೆಲವು ಸಾಧಿಸಿದರೆ. ಚನ್ನಪ್ಪಟ್ಟಣದಲ್ಲಿ ಅಧಿಕ ಮತಗಳಿಂದ ಜನಯ ಸಾಧಿಸಿ ಪ್ರತಿಸ್ಪರ್ಧಿ ಪಿ. ಯೋಗಿಶ್ವರ್ ಗೆ ಕಟ್ಟರ್ ನೀಡಿದ್ದಾರೆ. Views: 97

ಬೆಳಗಾವಿ ಉತ್ತರ, ದಕ್ಷಿಣದಲ್ಲೂ ಕಮಲದ ಕಲರವ

ಬೆಳಗಾವಿ ಉತ್ತರ, ದಕ್ಷಿಣದಲ್ಲೂ ಕಮಲದ ಕಲರವ

ಬೆಳಗಾವಿ: ಉತ್ತರ ಹಾಗೂ ದಕ್ಷಿಣ ಎರಡು ಮತ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಫಿರೋಜ್ ಸೇಠ್ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಿಕೊಂಡು ಬಂದಿದ್ದರು. ಸೇಠ್ ಕೋಟೆಯನ್ನು ಭೇದಿಸಿ ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಬೆನಕೆ ಕಮಲ ಅರಳಿಸಿದ್ದಾರೆ. ಸುಮಾರು 18000 ಸಾವಿರ ಮತಗಳ ಅಂತರದಿಂದ ಅನಿಲ್ ಬೆನಕೆ ಜಯಭೇರಿ ಭಾರಿಸಿದ್ದು, ಬೆಂಬಲಿಗರು ಸಂಭ್ರಮಾಚರಿಸುತ್ತಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದು,  ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್ ಗೆಲವು ಸಾಧಿಸುವ ಮೂಲಕ […]

ಹೀನಾಯ ಸೋಲನುಭವಿಸಿದ ಕಾಂಗ್ರೆಸ್ ಸಚಿವರು

ಹೀನಾಯ ಸೋಲನುಭವಿಸಿದ ಕಾಂಗ್ರೆಸ್ ಸಚಿವರು

ಬೆಂಗಳೂರ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನ ಪ್ರಮುಖ ಸಚಿವರುಗಳು ಹೀನಾಯವಾಗಿ ಸೋಲನುಭವಿಸಿದ್ದಾರೆ. ಹೌದು… ಕಾಂಗ್ರೆಸ್ ನ ಪ್ರಮುಖ ಸಚಿವರುಗಳಾದ, ವಿನಯ ಕುಲಕರ್ಣಿ, ಎಚ್. ಆಂಜನೇಯ, ರಮಾನಾಥ ರೈ, ಉಮಾಶ್ರೀ, ಗೀತಾ ಮಹದೇವ ಪ್ರಸಾದ್, ಎಸ್. ಎಸ್. ಮಲ್ಲಿಕಾರ್ಜುನ್, ಶರಣ ಪ್ರಕಾಶ ಪಾಟೀಲ್ ಹೀನಾಯವಾಗಿ ಸೋಲನುಭವಿಸಿ ಮುಖಭಂಗಕ್ಕೊಳಗಾಗಿದ್ದಾರೆ. Views: 453

ಮೊಳಕಾಲ್ಮೂರಲ್ಲಿ ಶ್ರೀರಾಮುಲು ಭರ್ಜರಿ ಗೆಲವು: ಬದಾಮಿಯಲ್ಲಿ ಸೋಲಿನ ಭೀತಿ

ಮೊಳಕಾಲ್ಮೂರಲ್ಲಿ ಶ್ರೀರಾಮುಲು ಭರ್ಜರಿ ಗೆಲವು: ಬದಾಮಿಯಲ್ಲಿ ಸೋಲಿನ ಭೀತಿ

ಚಿತ್ರದುರ್ಗ: ಹೈವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾಗಿರುವ ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಭರ್ಜರಿ ಗೆಲವು ಸಾಧಿಸಿದ್ದಾರೆ. ಶ್ರೀರಾಮುಲು 25000 ಕ್ಕಿಂತ ಅಧಿಕ ಮತಗಳಿಂದ ಭರ್ಜರಿ ಗೆಲವು ಸಾಧಿಸಿ ಪ್ರತಿಸ್ಪರ್ಧಿ ತಿಪ್ಪೇಸ್ವಾಮಿಗೆ ಟಕ್ಕರ್ ನೀಡಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಸ್ಪರ್ಧಿಸಲು ತೀರ್ಮಾನಿಸಿದಾಗ ತಿಪ್ಪೇಸ್ವಾಮಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇತ್ತ ಬದಾಮಿ ಕ್ಷೇತ್ರದಲ್ಲಿ ಶ್ರೀರಾಮುಲುಗೆ ಸೋಲಿನ ಭೀತಿ ಎದುರಾಗಿದೆ. Views: 291

ಸಚಿವ ಎಚ್. ಆಂಜನೇಯ ಸೋಲು

ಸಚಿವ ಎಚ್. ಆಂಜನೇಯ ಸೋಲು

ಚಿತ್ರದುರ್ಗ:  ಹೊಳೆಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್. ಆಂಜನೇಯ ಅವರು ಸೋಲನುಭವಿಸಿದ್ದಾರೆ. ಸಚಿವ ಆಂಜನೇಯ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಪ್ಪ 24800 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪ್ರಮುಖ ಸಚವಿರು ಕೂಡ ಭಾರಿ ಹಿನ್ನಡೆ ಸಾಧಿಸುತ್ತಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಸಚಿವ ವಿನಯ ಕುಲಕರ್ಣಿ, ಬಸವರಾಜ್ ರಾಯರೆಡ್ಡಿ, ಉಮಾಶ್ರೀ, ಸಂತೋಷ ಲಾಡ್ ಸೇರಿದಂತೆ ಅನೇಕ ಸಚಿವರು ಹಿನ್ನಡೆ ಇದ್ದಾರೆ. ಇತ್ತ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ  ಗೆಲುವಿನ ನಾಗಲೋಟ ಮೆರೆದಿದ್ದಾರೆ. ಹಳಿಯಾಳದಲ್ಲಿ […]

ಅಥಣಿ, ಕಾಗವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ

ಅಥಣಿ, ಕಾಗವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ

ಅಥಣಿ: ಬಿಜೆಪಿ ಭದ್ರಕೋಟೆಯಾಗಿರುವ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಭದ್ರಕೋಟೆ ಎಂದೇ ಹೆಸರುವಾಸಿಯಾಗಿರುವ ಅಥಣಿಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. Views: 306

ಗೋಕಾಕದಲ್ಲಿ ಸಚಿವ ರಮೇಶ ಜಾರಕಿಹೊಳಿಗೆ ಹಿನ್ನಡೆ

ಬೆಳಗಾವಿ: ತೀವ್ರ ಕುತುಹಲ ಕೆರಳಿಸಿದ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ 2300 ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅಶೋಕ ಪುಜಾರಿ 2013ರ ಚುನಾವಣೆಯಲ್ಲಿ  ಸಚಿವ ರಮೇಶ ಜಾರಕಿಹೊಳಿ ಎದುರು ಸ್ಪರ್ಧಿಸಿ ಪರಾವಗೊಂಡಿದ್ದರು. ಧಾರವಾಡ ಕ್ಷೇತ್ರದಲ್ಲಿ ಸಚಿವ ವಿನಯ ಕುಲಕರ್ಣಿ, ಹಾಗೂ ಕಲಘಟಗಿ ಕ್ಷೇತ್ರದಲ್ಲಿ ಸಂತೋಷ ಲಾಡ್ ಕೂಡ ಹಿನ್ನಡೆ ಸಾಧಿಸಿದರೆ, ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್, ಬೆಳಗಾವಿ ಉತ್ತರದಲ್ಲಿ ಬಿಜೆಪಿ ಅನಿಲ್ ಬೆನಕೆ, ಅಥಣಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ […]

ಗೋಕಾಕದಲ್ಲಿ ರಮೇಶ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಮುನ್ನಡೆ

ಗೋಕಾಕದಲ್ಲಿ ರಮೇಶ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಮುನ್ನಡೆ

ಬೆಳಗಾವಿ:  ಕಾಂಗ್ರೆಸ್ ಭದ್ರಕೋಟೆಯಾಗಿರುವ ಗೋಕಾಕ ಮತಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಮುನ್ನಡೆ ಸಾಧಿಸಿದ್ದರೆ. ಇನ್ನೂ ಅರಭಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಮುನ್ನಡೆ ಸಾಧಿಸಿದರೆ, ಕುಡಚಿಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಅಮಿತ ಘಾಟಗೆ, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಮುನ್ನಡೆ ಸಾಧಿಸಿದ್ದಾರೆ. Views: 471

ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ

ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ

ಅಥಣಿ: ಬಿಜೆಪಿ ಭದ್ರಕೋಟೆಯಾಗಿರುವ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಉಮೇಶ ಕತ್ತಿ ಮುನ್ನಡೆ ಸಾಧಿಸಿದರೆ, ಚಿಕ್ಕೋಡಿ- ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಮುಂದಿದ್ದಾರೆ. ಇನ್ನೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಬೆನಕೆ ಮುನ್ನಡೆ ಸಾಧಿಸಿದ್ದಾರೆ. Views: 213