ಜಗಳೂರು ಎಪಿಎಮ್ ಸಿ ಕಾಂಗ್ರೆಸ್- ಜೆಡಿಎಸ್ ತೆಕ್ಕೆಗೆ

ಜಗಳೂರು ಎಪಿಎಮ್ ಸಿ ಕಾಂಗ್ರೆಸ್- ಜೆಡಿಎಸ್ ತೆಕ್ಕೆಗೆ

ಜಗಳೂರು: ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿಯೇ ಮೊದಲ ಭಾರಿಗೆ ಜಗಳೂರು ಎಪಿಎಮ್ ಸಿ ಆಡಳಿತ ಕಾಂಗ್ರೆಸ್ ಮತ್ತು ಜೆಡಿಎಸ್ ತೆಕ್ಕೆಗೆ ಒಲಿದಿದ್ದು, ಎಪಿಎಂಸಿ ಅಭಿವೃದ್ಧಿಗೆ ಸರಕಾರದ ವತಿಯಿಂದ ಹೆಚ್ಚಿನ ಅನುದಾನ ತರುವ ಮೂಲಕ ಮತ್ತೊಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು. ಪಟ್ಟಣದ ಎಪಿಎಮ್ ಸಿ ಆವರಣದಲ್ಲಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಎಪಿಎಮ್ ಸಿ ಅಧ್ಯಕ್ಷ ಎನ್.ಎಸ್.ರಾಜು ಅವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಶಾಸಕರು ಇಲ್ಲದೇ ಇರಬಹುದು ಆದರೆ ಕಾಂಗ್ರೆಸ್ […]

ಮರಗಳನ್ನು ಮಕ್ಕಳಂತೆ ಬೆಳೆಸಿ, ಪೋಷಿಸಿ: ಶಾಸಕ ನಡಹಳ್ಳಿ

ಮರಗಳನ್ನು ಮಕ್ಕಳಂತೆ ಬೆಳೆಸಿ, ಪೋಷಿಸಿ:  ಶಾಸಕ ನಡಹಳ್ಳಿ

ಮುದ್ದೇಬಿಹಾಳ: ಪರಿಸರದ ಉಳಿವಿಗೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸಲಹುವಂತೆ ಮರಗಳನ್ನು ಪೋಷಣೆ ಮಾಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಹುಡ್ಕೋದ ಉದ್ಯಾನವನದಲ್ಲಿ ಮಂಗಳವಾರ ಹಸಿರು ತೋರಣ ಗೆಳೆಯರ ಬಳಗ,ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ  ಹಮ್ಮಿಕೊಳ್ಳಲಾಗಿದ್ದ  ಪರಿಸರ ಮಿತ್ರ ಪ್ರಶಸ್ತಿ ಪ್ರದಾನ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಗಳಲ್ಲಿರುವ, ಮನೆಗಳಲ್ಲಿರುವ ಪ್ರತಿ ಮಕ್ಕಳು, ಶಿಕ್ಷಕರು ತಮ್ಮ ಹೆಸರಿನಲ್ಲಿ ಒಂದೊಂದು ಸಸಿಗಳನ್ನು ನೆಟ್ಟು ಬೆಳೆಸಬೇಕು. ಅರಣ್ಯ ಇಲಾಖೆಯವರು […]

ನಾವು ಪರಿಸರವನ್ನು ರಕ್ಷಿಸಿದರೆ ಅದು ವಿಶ್ವವನ್ನು ರಕ್ಷಿಸುತ್ತದೆ: ಬಿಇಒ ಗಂಗಾಧರ

ನಾವು ಪರಿಸರವನ್ನು ರಕ್ಷಿಸಿದರೆ ಅದು ವಿಶ್ವವನ್ನು ರಕ್ಷಿಸುತ್ತದೆ: ಬಿಇಒ ಗಂಗಾಧರ

ಮೂಡಲಗಿ: ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ. ಇಂದಿನ ಮಾಲಿನ್ಯಯುತ ಪರಿಸರದಿಂದಾಗಿ ಅನೇಕ ರೋಗಗಳು ಹೆಚ್ಚುತ್ತಿದ್ದು, ಸೂಕ್ತ ಮುನ್ನಚರಿಕೆ ಕ್ರಮವಾಗಿ ಪರಿಸರ ರಕ್ಷಣೆಯ ಹಿತ ದೃಷ್ಠಿಯಿಂದ ಗಿಡ ಮರಗಳ ಪಾಲನೆ ಮಾಡಿದರೆ ಸ್ವಚ್ಛ ಪರಿಸರ ನಮ್ಮದಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ ಹೇಳಿದರು. ಪಟ್ಟಣದ ಬಿ.ಇ.ಒ, ಬಿ.ಆರ್.ಸಿ ಕಚೇರಿ, ಲೋಳಸೂರ, ಮೂಡಲಗಿ ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮೂಡಲಗಿ ವಲಯ ವ್ಯಾಪ್ತಿಯ 263 ಸರಕಾರಿ ಕಿರಿಯ ಹಿರಿಯ ಮತ್ತು […]

371 ಜೆ ಸಮರ್ಪಕ ಅನುಷ್ಠಾನ, ಹಕ್ಕುಗಳಿಗಾಗಿ ಹೋರಾಡಲು ಆಯ್ಕೆ ಮಾಡಿ: ಡಾ.ರಜಾಕ್ ಉಸ್ತಾದ್

371 ಜೆ ಸಮರ್ಪಕ ಅನುಷ್ಠಾನ, ಹಕ್ಕುಗಳಿಗಾಗಿ ಹೋರಾಡಲು ಆಯ್ಕೆ ಮಾಡಿ: ಡಾ.ರಜಾಕ್ ಉಸ್ತಾದ್

ಕೊಪ್ಪಳ: 371ಜೆ ಕಲಂ ಸಮರ್ಪಕ ಅನುಷ್ಠಾನಗೊಳಿಸಲು ಮತ್ತು ನಮಗೆ ಸಿಗಬೇಕಾದ ಕಾನೂನು ಬದ್ದ ಮೀಸಲಾತಿ ಹಾಗೂ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡಲು ಆಯ್ಕೆ ಮಾಡಿ ಎಂದು ಡಾ.ರಜಾಕ್ ಉಸ್ತಾದ್ ಮನವಿ ಮಾಡಿದರು. ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಡಾ.ರಜಾಕ್ ಉಸ್ತಾದ್ ಕೊಪ್ಪಳದ ಬಾರ್ ಅಸೋಶಿಯೇಷನ್ ನಲ್ಲಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ಗದಗ ಜಿಲ್ಲೆಯ ಕೆಲ ಹಳ್ಳಿಗಳನ್ನು ಇದರಡಿಯಲ್ಲಿ ಸೇರಿಸಲು ಸರಕಾರ ಆದೇಶ ಮಾಡಿದರೂ ಸಹ ಯಾರೋಬ್ಬರೂ ಅದನ್ನು ವಿರೋಧಿಸಲಿಲ್ಲ. ನಮಗೆ ಸಿಗಬೇಕಾದ ಮೀಸಲಾತಿಯನ್ನು ಪಡೆದುಕೊಳ್ಳಲು […]

ಕೊಪ್ಪಳದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಅಂಚೆ ನೌಕರರು

ಕೊಪ್ಪಳದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಅಂಚೆ ನೌಕರರು

ಕೊಪ್ಪಳ :  ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದೆರಡು ವಾರಗಳಿಂದ ಅನಿರ್ಧಿಷ್ಟ ಮುಷ್ಕರ ನಡೆಸುತಿರುವ ಗ್ರಾಮೀಣ ಅಂಚೆ ನೌಕರರ ಸೋಮವಾರ ರಾತ್ರಿ ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. 7 ನೇ ವೇತನ ಆಯೋಗ ಶೀಘ್ರವೇ ಜಾರಿಗಾಗಿ ಮತ್ತು ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಕರೆ ನೀಡಿದ್ದು, ಜಿಲ್ಲೆಯ ಗ್ರಾಮಣಿ ಅಂಚೆ ನೌಕರರ ಸಂಘದ ಪದಾಧಿಕಾರಿಗಳು ಇಡಿ ರಾತ್ರಿ ಪೂರ […]

ಸಸ್ಯ ಸಂತೆಗೆ ಶಾಸಕ ಅನಿಲ್ ಬೆನಕೆಯಿಂದ ಚಾಲನೆ

ಸಸ್ಯ ಸಂತೆಗೆ ಶಾಸಕ ಅನಿಲ್ ಬೆನಕೆಯಿಂದ ಚಾಲನೆ

ಬೆಳಗಾವಿ:  ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯುಂ ಪಾರ್ಕಿನಲ್ಲಿ ಇಂದಿನಿಂದ ಪ್ರಾರಂಭವಾದ ಸಸ್ಯ ಸಂತೆಗೆ ನೂತನ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದರು. ಬಳಿಕ ಸಸ್ಯ ಸಂತೆಯಲ್ಲಿ ಸಸಿಗಳನ್ನು ವೀಕ್ಷಣೆ ಮಾಡಿದರು. ಶಾಸಕ ಅಭಯ ಪಾಟೀಲ್ ಕೂಡ ಅನಿಲ್ ಬೆನಕೆಗೆ ಸಾಥ್ ನೀಡಿದರು. ಇಂದಿನಿಂದ 20 ದಿನಗಳ ವರೆಗೆ ಸಸ್ಯ ಸಂತೆ ನಡೆಯಲಿದೆ. ಲಲಿತ್-ಪೇರಲ, ಬಾಲನಗರ-ಸೀತಾಫಲ, ಟಿಎಕ್ಸ್‍ಡಿ, ಅರಸೀಕೆರೆ-ತೆಂಗು, ಸ್ಥಳೀಯ ಲಿಂಬೆ, ಅಪೂಸ, ಕೇಸರ-ಮಾವು, ಕ್ರಿಕೆಟ್ ಬಾಲ್, ಕಾಲಿಪತ್ತಿ-ಸಪೋಟ ಕಸಿ, ದೂಪದಾಳ ಸೆಲೆಕ್ಷನ್-ನೆರಳೆ, ಎಲ್-49,  ವೆಂಗೂರ್ಲಾ-ಗೋಡಂಬಿ ಸೇರಿದಂತೆ […]

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಎಬಿವಿಪಿ ಆಗ್ರಹ

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಎಬಿವಿಪಿ ಆಗ್ರಹ

ಸುರಪುರ: ರಾಜ್ಯದಲ್ಲಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸುರಪುರ ತಾಲೂಕು ಘಟಕದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹಿಂದಿನ ಸಿದ್ದರಾಮಯ್ಯನವರ ಸರಕಾರ ಅನುಸೂಚಿತ ಜಾತಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತಿತ್ತು. ಆದರೆ ಈಗಿನ ಸಮ್ಮಿಸ್ರ ಸರಕಾರದ ಪಾಲುದಾರ ಪಕ್ಷವಾದ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ನೀಡುವದಾಗಿ ಘೋಷಿಸಿದೆ. ಅದರಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಬೇಕು ಹಾಗೂ […]

ಕ್ಷೇತ್ರ ಜನತೆಗೆ ಕೃತಜ್ಞತೆ ಸಲ್ಲಿಸಿದ ಶಾಸಕಿ ಶಶಿಕಲಾ ಜೊಲ್ಲೆ

ಕ್ಷೇತ್ರ ಜನತೆಗೆ ಕೃತಜ್ಞತೆ ಸಲ್ಲಿಸಿದ ಶಾಸಕಿ ಶಶಿಕಲಾ ಜೊಲ್ಲೆ

ಚಿಕ್ಕೋಡಿ: ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕರು ಒಗ್ಗಟ್ಟಾಗಿ ನನ್ನನ್ನು ಪರಾಭವಗೊಳಿಸುವ ಸಂಕಲ್ಪ ಹೊಂದಿದ್ದರೂ ಕ್ಷೇತ್ರದ ಸರ್ವ ಸಾಮಾನ್ಯ ಜನತೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನನ್ನೊಟ್ಟಿಗಿದ್ದು, ತಮ್ಮ ಸಂಪೂರ್ಣ ಬೆಂಬಲ ನೀಡಿ ನನ್ನನ್ನು ಮತ್ತೇ ಈ ಭಾಗದ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದ ಜನತಗೆ ಶಾಸಕಿ ಶಶಿಕಲಾ ಜೊಲ್ಲೆ ಕೃತಜ್ಞತೆ ಸಲ್ಲಿಸಿದರು. ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾದ ಜನಸಂಪರ್ಕ ಸಮಾರಂಭದಲ್ಲಿ ಮಾತನಾಡಿದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂಘರ್ಷದ ಚುನಾವಣೆಯಾಗಿದ್ದು, ಟೀಕಾ ಪ್ರಹಾರ, ಸುಳ್ಳು ಆರೋಪ ಸೃಷ್ಟಿಸಿದ […]

ಪರಿಸರ ಉಳಿಸದಿದ್ದರೆ ಮಾನವನಿಗೆ ಉಳಿಗಾಲವಿಲ್ಲ: ಸಂಪಾದನಾ ಸ್ವಾಮೀಜಿ

ಪರಿಸರ ಉಳಿಸದಿದ್ದರೆ ಮಾನವನಿಗೆ ಉಳಿಗಾಲವಿಲ್ಲ:  ಸಂಪಾದನಾ ಸ್ವಾಮೀಜಿ

ಚಿಕ್ಕೋಡಿ: ಪರಿಸರ ದಿನದಂದು ಪ್ರತಿಯೊಬ್ಬರು ಪರಿಸರ ಉಳಿಸುವ ಪ್ರತಿಜ್ಞೆ ಮಾಡಬೇಕು. ಪರಿಸರ ಕಾಪಾಡಲು ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಚಿಕ್ಕೋಡಿಯ ಸಂಪಾದನ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಬಸ್ ನಿಲ್ದಾಣದ ಬಳಿ ಏರಿಸ್ವಾಮಿ ಚಾರಿಟಿ ಪೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ  ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 500 ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ಪರಿಸರ ಉಳಿಸದಿದ್ದರೆ ಮಾನವನಿಗೆ ಉಳಿಗಾಲವಿಲ್ಲ. ಇಂದಿನ ಯುವಕರಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ […]

ಸಮುದಾಯ ಭವನ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಸಮುದಾಯ ಭವನ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಚಿಕ್ಕೋಡಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘೃದಲ್ಲಿಯೇ ಸಮಸ್ಯೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಶಾಸಕ ದುರ್ಯೋದನ ಐಹೋಳೆ ಹೇಳಿದರು. ತಾಲೂಕಿನ ಮುಗಳಿ ಗ್ರಾಮದಲ್ಲಿ ಮಂಗಳವಾರ ರೂ. 5 ಲಕ್ಷ ಶಾಸಕ ಅನುದಾನದಲ್ಲಿ ಸಮುದಾಯ ಭವನ ಹಾಗೂ ಜೈನಾಪೂರ ಗ್ರಾಮದಲ್ಲಿ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಊರುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದ್ದು, ಇನ್ನುಮುಂದೆ ತೋಟಪಟ್ಟಿಗಳಿಗೂ ಬಹುಗ್ರಾಮ ಯೋಜನೆಯ ಪೈಪಲೈನ್ […]