ಸಮುದಾಯ ಭವನ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಸಮುದಾಯ ಭವನ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಚಿಕ್ಕೋಡಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘೃದಲ್ಲಿಯೇ ಸಮಸ್ಯೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಶಾಸಕ ದುರ್ಯೋದನ ಐಹೋಳೆ ಹೇಳಿದರು. ತಾಲೂಕಿನ ಮುಗಳಿ ಗ್ರಾಮದಲ್ಲಿ ಮಂಗಳವಾರ ರೂ. 5 ಲಕ್ಷ ಶಾಸಕ ಅನುದಾನದಲ್ಲಿ ಸಮುದಾಯ ಭವನ ಹಾಗೂ ಜೈನಾಪೂರ ಗ್ರಾಮದಲ್ಲಿ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಊರುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದ್ದು, ಇನ್ನುಮುಂದೆ ತೋಟಪಟ್ಟಿಗಳಿಗೂ ಬಹುಗ್ರಾಮ ಯೋಜನೆಯ ಪೈಪಲೈನ್ […]

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಅಂಚೆ ಸಿಬ್ಬಂದಿಗಳಿಂದ ಪ್ರತಿಭಟನೆ

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಅಂಚೆ ಸಿಬ್ಬಂದಿಗಳಿಂದ ಪ್ರತಿಭಟನೆ

ಬೆಳಗಾವಿ: ಕಲಮೇಶ ಚಂದ್ರ ಸಮಿತಿ ವರದಿ ಹಾಗೂ ವಿವಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ  ಅಖಿಲ ಭಾರತೀಯ ಗ್ರಾಮೀಣ ಅಂಚೆ ಸೇವಕ ಸಂಘದ ಬೆಳಗಾವಿ ಗ್ರಾಮೀಣ ಘಟಕದಿಂದ ಗ್ರಾಮೀಣ ಅಂಚೆ ಸಿಬ್ಬಂದಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸೇರಿದ ಸಿಬ್ಬಂದಿ ಕೇಂದ್ರ ಸರಕಾರ ನೇಮಕ ಮಾಡಿದ್ದ ಕಮಲೇಶ ಚಂದ್ರ ಸಮಿತಿಯ ವರದಿ ಜಾರಿಗೆ ತರುವಂತೆ ಒತ್ತಾಯಿಸಿದರು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ  ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ […]

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಡಿ. ದೇವರಾಜ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಡಿ. ದೇವರಾಜ

ಗೋಕಾಕ: ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಿ. ದೇವರಾಜ ಹೇಳಿದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಎಪಿಎಮ್‍ಸಿ ರಸ್ತೆಯ ಬದಿಗಳಲ್ಲಿ ಮಂಗಳವಾರ ಅರಣ್ಯ ಇಲಾಖೆ, ಜೆಸಿಆಯ್ ಸಂಸ್ಥೆ, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಸಿರಿಗನ್ನಡ ಮಹಿಳಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಪತ್ರಕರ್ತರ ಪರಿಷತ್ತು, ಕವಿಗಳ ಸಂಘಟನೆ, ರಾಮಸೇನೆ ಇವುಗಳ ವತಿಯಿಂದ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಾನವನ […]

ರಾಜ್ಯದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಬಲವಂತ ಮಾಡಲಾಗದು: ಹೈಕೋರ್ಟ್ ಸ್ಪಷ್ಟನೆ

ರಾಜ್ಯದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಬಲವಂತ ಮಾಡಲಾಗದು: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ತಮಿಳು ಕಾಲಾ ಚಲನಚಿತ್ರ  ಪ್ರದರ್ಶನ ಸಂಬಂಧ ಯಾರನ್ನು ಬಲವಂತ ಪಡಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಕಾಲಾ ಚಿತ್ರ ರಾಜ್ಯದಲ್ಲಿ ಬಿಡುಗಡೆ ಮಾಡದಂತೆ ಕನ್ನಡ ಪರ ಸಂಘಟನೆಗಳು ಆಗ್ರಹಿಸಿದ್ದವು. ಕನ್ನಡ ಚಿತ್ರ ಮಂದಿರವೂ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದನ್ನು  ನಟ ರಜನೀಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಚಿತ್ರ ನಿರ್ಮಾಪಕರು ಹೈ ಕೋರ್ಟ್ ಗೆ ರೀಟ್ ಅರ್ಜಿಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್  ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು, […]

ಪತಿಯನ್ನು ಕೊಲೆಗೈದಿದ್ದ ಪತ್ನಿಯ ಬಂಧನ

ಪತಿಯನ್ನು ಕೊಲೆಗೈದಿದ್ದ ಪತ್ನಿಯ ಬಂಧನ

ಹುಬ್ಬಳ್ಳಿ: ಕ್ರಿಕೆಟ್ ಬ್ಯಾಟ್ ನಿಂದ ಪತಿಯನ್ನು ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿಯನ್ನು ವಿದ್ಯಾನಗರದ ಪೊಲೀಸರು ಬಂಧಿಸಿದ್ದಾರೆ. ಕಾವ್ಯ (40) ಬಂಧಿತ ಮಹಿಳೆ. ಮೇ 2 ರಂದು ಇಲ್ಲಿನ ಓ ನಗರ ನಿವಾಸದಲ್ಲಿ ತನ್ನ ಪತಿ ಶಿವಯೋಗಿಯನ್ನು ಹತ್ಯೆ ಮಾಡಿದ್ದಳು. ಬಳಿಕ ಇದು ಸಹಜ ಸಾವು ಎಂದು ಬಿಂಬಿಸಿದ್ದಳು. ಆದರೆ ಶಿವಯೋಗಿ ಸಹೋದರಿ ರಾಜೇಶ್ವರಿ ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಕಾವ್ಯಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೌಟುಂಬಿಕ […]

ಕಿತ್ತೂರು: ಸಿಡಿಲಿಗೆ ಬಲಿಯಾದ ಯುವಕನ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ

ಕಿತ್ತೂರು: ಸಿಡಿಲಿಗೆ ಬಲಿಯಾದ ಯುವಕನ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ

ಚನ್ನಮ್ಮನ ಕಿತ್ತೂರು: ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಮೃತ ಪಟ್ಟಿದ್ದ ಯುವಕನ ಕುಟುಂಬಸ್ಥರಿಗೆ ಸರಕಾರದಿಂದ  ಮಂಜೂರು ಆದ 5 ಲಕ್ಷ ಚೆಕ್ ನ್ನು  ಶಾಸಕ ಮಹಾಂತೇಶ ದೊಡಗೌಡರ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ತಂದೆ, ತಾಯಿಗೆ ಆಸರೆಯಾಗಬೇಕಿದ್ದ ಮಗ ವಿಧಿ ಆಟಕ್ಕೆ ಬಲಿಯಾಗಿರುವುದು ವಿಷಾದಕರ ಸಂಗತಿಯಾಗಿದೆ. ಕುಟುಂಬಸ್ಥರಿಗೆ ಯುವಕನ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಸಾಂತ್ವಾನ ಹೇಳಿದರು.  ತಾಲೂಕಿನ ದೇಗುಲಹಳ್ಳಿ ಗ್ರಾಮದ ಬಳಿ ಮರ ಬಿದ್ದು ಸಾವಿಗೀಡಾಗಿದ್ದ […]

ಪರಿಸರ ಬಳೆಸಲು ಪ್ರತಿಯೊಬ್ಬರು ಕೈ ಜೋಡಿಸಿ: ಮಾರುತಿ ಪಾತ್ರುಟ್

ಪರಿಸರ ಬಳೆಸಲು ಪ್ರತಿಯೊಬ್ಬರು ಕೈ ಜೋಡಿಸಿ: ಮಾರುತಿ ಪಾತ್ರುಟ್

ಚನ್ನಮ್ಮ ಕಿತ್ತೂರು:  ಪರಿಸರ ಬೆಳೆಸುವುದು ಅರಣ್ಯ ಇಲಾಖೆ  ಕೆಲಸ ಮಾತ್ರವಲ್ಲ. ಪ್ರತಿಯೊಬ್ಬರನ್ನು ಇದಕ್ಕೆ ಕೈ ಜೋಡಿಸಿಬೇಕು ಅಂದಾಗ ಮಾತ್ರ ಪರಿಸರ ಉಳಿಸಲು ಸಹಾಯಕವಾಗುತ್ತಿದೆ ಎಂದು ನಾಗರಗಾಳಿ ಎಸಿಎಫ್ ಮಾರುತಿ ಪಾತ್ರುಟ್ ಹೇಳಿದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮಂಗಳವಾರ ಇಲ್ಲಿನ  ಕೋಟೆ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಸಿಗಳನ್ನು ನೆಟ್ಟು ಸಂತಸ ಪಟ್ಟರು.  ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ,  ಪಟ್ಟಣ ಪಂಚಾಯತ ಅಧಿಕಾರಿ ಐ. ಕೆ. ಗುಡದಾರಿ,  ಅನೀಫ್ ಸುತಗಟ್ಟಿ,  ಐಎಫ್ಎಸ್ […]

ತೋಳಗಳ ದಾಳಿ: 6 ಕುರಿ ಸಾವು

ತೋಳಗಳ ದಾಳಿ: 6 ಕುರಿ ಸಾವು

ವಿಜಯಪುರ: ಕುರಿ ಹಿಂಡಿನ ಮೇಲೆ ತೋಳ ದಾಳಿ ನಡೆಸಿ 4 ಮೇಕೆ ಹಾಗೂ 2 ಕುರಿಗಳನ್ನು ಕೊಂದು ಹಾಕಿದ ಘಟನೆ ಮುದ್ದೇಬಿಹ್ಹಾಳ ತಾಲೂಕಿನ ನಾಗಬೇನಾಳ ತಾಂಡಾದಲ್ಲಿ ನಡೆದಿದೆ. ನಾಗಬೇನಾಳ ಗ್ರಾಮದ ಲಕ್ಷ್ಮಣ ನಾಯಕ ಎಂಬುವವರಿಗೆ ಸೇರಿದ ಕುರಿಗಳು ತೋಳಕ್ಕೆ ಬಲಿಯಾಗಿದ್ದು, 8 ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ವರ್ಷಾನುಗಟ್ಟಲೇ ಸಾಕಿ ಸಲುಹಿದ ಕುರಿಗಳು ತೋಳದ ಬಾಯಿಗೆ ತುತ್ತಾಗಿದ್ದು, ಮಾಲೀಕ ಕಂಗಾಲಾಗಿದ್ದಾನೆ. Views: 82

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದವನಿಗೆ ಬಿತ್ತು ಧರ್ಮದೇಟು

ಕಲಬುರಗಿ: ಕುಡಿದ ಅಮಲಿನಲ್ಲಿ  ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಲಾಳಗೇರಿ ಕ್ರಾಸ್ ಬಳಿ ಕುಡಿದ ಮತ್ತಿನಲ್ಲಿ ಬಂದ ಚಾಲಕ ಅಡ್ಡಾದಿಡ್ಡಿ ಕಾರು ಓಡಿಸಿ ಜನರಲ್ಲಿ ಆತಂಕ ಸೃಷ್ಠಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರ ಎದುರೇ ಥಳಿಸಿದ್ದಾರೆ. ರಾಘವೇಂದ್ರ ನಗರ ಪೋಲೀಸರು ಪಾನಮತ್ತ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಂಚಾರಿ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ. Views: 120

ಆಟೋ- ಬೊಲೇರೋ ಮಧ್ಯೆ ಅಪಘಾತ: ಶಾಲಾ ವಿದ್ಯಾರ್ಥಿಯ ಕೈ ಕಟ್

ಆಟೋ- ಬೊಲೇರೋ ಮಧ್ಯೆ ಅಪಘಾತ: ಶಾಲಾ ವಿದ್ಯಾರ್ಥಿಯ ಕೈ ಕಟ್

ಬಾಗಲಕೋಟೆ:  ಶಾಲಾ ಮಕ್ಕಳಿದ್ದ ಆಟೋ ಮತ್ತು  ಬೊಲೆರೋ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಒಬ್ಬ ವಿದ್ಯಾರ್ಥಿಯ ಕೈ ತುಂಡಾಗಿದ್ದು, ಕೆಲ ಮಕ್ಕಳು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅಭಿಷೇಕ್‌ ಬಬಲಾದಿ (15) ಅಪಘಾತದಲ್ಲಿ ಕೈ ಕಳೆದುಕೊಂಡ ವಿದ್ಯಾರ್ಥಿ. ಇತರ ವಿದ್ಯಾರ್ಥಿಗಳಾದ ಮಲಿಕ್‌‌ ಜಾನ್, ಪ್ರೀತಿ ಗದ್ದನಕೇರಿ, ಸ್ಪೂರ್ತಿ, ಶ್ರವಣ್, ಅಂಕಿತಾ ರಾಠೋಡ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾನಗರದಿಂದ  ಬಾಗಲಕೋಟೆಗೆ ಶಾಲಾ ಮಕ್ಕಳನ್ನು ಕರೆದುಯ್ಯುತ್ತಿದ್ದ ಬೊಲೇರೋ ವಾಹನ ಆಟೋ ಮಧ್ಯೆ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದು ಶಾಸಕ ವೀರಣ್ಣ ಚರಂತಿಮಠ ಆಸ್ಪತ್ರೆಗೆ […]