50 ಲಕ್ಷ ಅಕ್ರಮ ಹಣ ಸಾಗಾಟ: ಹೊನ್ನಾಕಟ್ಟಿ ಚೆಕ್ ಪೋಸ್ಟ್ ಬಳಿ ಜಪ್ತಿ

50 ಲಕ್ಷ ಅಕ್ರಮ ಹಣ ಸಾಗಾಟ: ಹೊನ್ನಾಕಟ್ಟಿ ಚೆಕ್ ಪೋಸ್ಟ್ ಬಳಿ ಜಪ್ತಿ

ಬಾಗಲಕೋಟೆ:  ಇಳಕಲ್ ಪಟ್ಟಣದಿಂದ ಬಾಗಲಕೋಟೆ ನಗರಕ್ಕೆ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 50 ಲಕ್ಷ  ಹಣವನ್ನು ತಹಸೀಲ್ದಾರ್, ಪೊಲೀಸರ ತಂಡ ಜಪ್ತಿ ಮಾಡಿದೆ. ಇಲ್ಲಿನ ಹೊನ್ನಾಕಟ್ಟಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುವಾಗ ಪ್ರಕರಣ ಬೆಳಕಿಗೆ ಬಂದಿದೆ.  ಸುದ್ದಿ ತಿಳಿದು ಜಿಲ್ಲಾಧಿಕಾರಿ ಕೆ.ಜಿ.  ಶಾಂತಾರಾಮ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಈ ಹಣ ಇಳಕಲ್ ಪಟ್ಟಣದ ಡಿಸಿಸಿ ಬ್ಯಾಂಕ್ ಗೆ ಸೇರಿದ್ದು ಎನ್ನಲಾಗುತ್ತಿದೆ. ಇನ್ನು ದಾಖಲೆ ಇಲ್ಲದೆ ಹಣ ರವಾನಿಸುತ್ತಿದ್ದರಿಂದ ವ್ಯಕ್ತಿಯನ್ನ […]

ಹೆಬ್ಬಾಳ್ಕರ ಸಂಬಂಧಿ ಮನೆ ಮೇಲೆ ದಾಳಿ: ಲಕ್ಷಾಂತರ ರೂ. ಮೌಲ್ಯದ ವಸ್ತು ವಶಕ್ಕೆ

ಹೆಬ್ಬಾಳ್ಕರ ಸಂಬಂಧಿ ಮನೆ ಮೇಲೆ ದಾಳಿ: ಲಕ್ಷಾಂತರ ರೂ. ಮೌಲ್ಯದ ವಸ್ತು ವಶಕ್ಕೆ

ಬೆಳಗಾವಿ:  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ಚುನಾವಣಾಧಿಕಾರಿಗಳು, ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಹೆಬ್ಬಾಳಕರ  ಅವರ ಸಂಬಂಧಿಯೊಬ್ಬರ ಮನೆ ಮೇಲೆ ಶನಿವಾರ ಸಂಜೆ ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹನುಮಾನನಗರ   ಎರಡನೇ ಸ್ಟೇಜ್ ನಲ್ಲಿರುವ  ಅಪಾರ್ಟಮೆಂಟೊಂದರ ಮೇಲೆ ಸಂಜೆ ದಾಳಿ ನಡೆಸಿದ ಕಾಲಕ್ಕೆ ಲಕ್ಷಾಂತರ ರೂ. ಮೌಲ್ಯದ  ಇಸ್ತ್ರಿಪೆಟ್ಟಿಗೆ, ಕುಕ್ಕರ್, ಅನಿಲ ಸ್ಟೌವ್ ಪತ್ತೆಯಾಗಿವೆ ಎಂದು ಗೊತ್ತಾಗಿದೆ. […]

ಧಾರವಾಡದಲ್ಲಿ ಮಾದರಿ ನೀತಿ ಸಂಹಿತೆ ಪಾಲಿಸಲು ಕ್ರಮ: ಜಿಲ್ಲಾಧಿಕಾರಿ

ಧಾರವಾಡದಲ್ಲಿ ಮಾದರಿ ನೀತಿ ಸಂಹಿತೆ ಪಾಲಿಸಲು ಕ್ರಮ: ಜಿಲ್ಲಾಧಿಕಾರಿ

ಧಾರವಾಡ: ಮಾದರಿ ನೀತಿ ಸಂಹಿತೆ ಪಾಲನೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿವಿಧ ಪ್ರಕಾರದ 9329ಕ್ಕೂ ಹೆಚ್ಚು ಪ್ರಚಾರ ಸಾಮಗ್ರಿಗಳನ್ನು ಇಲ್ಲಿಯವರೆಗೆ ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೂ ಆದ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ  ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಪಕ್ಷದ ಪ್ರತಿನಿಧಿಗಳು ಅಳವಡಿಸಿದ್ದ 3856 ಬ್ಯಾನರ್, 896 ಬಂಟಿಂಗ್ಸ್, 993 […]

ಕೃಷ್ಣಾ ನದಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ..!

ಕೃಷ್ಣಾ ನದಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ..!

ಚಿಕ್ಕೋಡಿ: ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿಗೆ ಹಾರಿ  ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ  ಶರಣಾದ ಮಹಿಳೆಯನ್ನ ಮಹಾರಾಷ್ಟ್ರದ ದಾನವಾಡ ಗ್ರಾಮದ ನಿವಾಸಿ ದೇವಿಕಾ ಗುರುವ(50) ಎಂದು ಗುರುತಿಸಲಾಗಿದೆ.  ಕೌಟುಂಬಿಕ ಕಲಹ ಹಿನ್ನಲೆ ಕಳೆದ ಎರಡು ದಿನಗಳ ಹಿಂದೆ ಮಹಿಳೆ ಕಾಣೆಯಾಗಿದ್ದಳು.  ಮಹಿಳೆ ಸಂಬಂಧಿಕರು 2 ದಿನದಿಂದ ಶೋಧದಲ್ಲಿ ತೊಡಗಿದ್ದರು. ಆದರೆ ಮಹಿಳೆ ಇಂದು ಕೃಷ್ಣಾ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ […]

ಬಿಜೆಪಿ ಟಿಕೆಟ್ ಆಕಾಂಕ್ಷಿ ಅಮೃತ ದೇಸಾಯಿ ಮನೆಗೆ ಕೇದಾರ ಪೀಠದ ಸ್ವಾಮೀಜಿ ಭೇಟಿ

ಬಿಜೆಪಿ ಟಿಕೆಟ್ ಆಕಾಂಕ್ಷಿ ಅಮೃತ ದೇಸಾಯಿ ಮನೆಗೆ ಕೇದಾರ ಪೀಠದ ಸ್ವಾಮೀಜಿ ಭೇಟಿ

ಧಾರವಾಡ: ಧಾರವಾಡ ಗ್ರಾಮೀಣ-71 ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅಮೃತ ದೇಸಾಯಿ ಅವರ ಮನೆಗೆ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿದರು. ಇಲ್ಲಿನ ಮಲಪ್ರಭಾನಗರದಲ್ಲಿರುವ ಅಮೃತ ಅವರ ಮನೆಗೆ ಭೇಟಿ ನೀಡಿದ ಅವರು, ಮಾಜಿ ಶಾಸಕ ಹಾಗೂ ಅಮೃತ ದೇಸಾಯಿ ಅವರ ತಂದೆ ಎ.ಬಿ.ದೇಸಾಯಿ ಹಾಗೂ ಅವರ ಕುಟುಂಬವನ್ನು ಆಶೀರ್ವದಿಸಿದರು. ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಪ್ರೊ.ಬಿ.ಬಿ.ಮಾಶ್ಯಾಳ, ಡಾ. ಎಸ್.ಆರ್.ರಾಮನಗೌಡರ, ಸಿ.ಎಸ್.ಪಾಟೀಲ, ಶಂಕರ ಮುಗದ, ಶಿವಾಜಿ ಜಾಧವ, ಅಡಿವೆಪ್ಪ ಹೊನ್ನಪ್ಪನವರ, ರಾಮು ಕಣಾಜಿ ಸೇರಿದಂತೆ […]

ಗೋ ಹತ್ಯೆ ನಿಷೇಧ ಶಾ ಹೇಳಿಕೆಗೆ ರಾಮಲಿಂಗಾರೆಡ್ಡಿ ತಿರುಗೇಟು..!

ಗೋ ಹತ್ಯೆ ನಿಷೇಧ ಶಾ ಹೇಳಿಕೆಗೆ ರಾಮಲಿಂಗಾರೆಡ್ಡಿ ತಿರುಗೇಟು..!

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಮಾಡುತ್ತೇವೆ ಎಂದ ಅಮಿತ್ ಶಾ ಹೇಳಿಕೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೊದಲು ಗೋ ಮಾಂಸ ರಫ್ತು ಮಾಡುವುದನ್ನು ನಿಲ್ಲಿಸಲಿ.  ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೋ ಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2017ರಲ್ಲಿ 1800 ಮೆಟ್ರಿಕ್ ಟನ್ ಗೋಮಾಂಸ ರಫ್ತು ನಡೆದಿದ್ದು, 26 ಸಾವಿರ ಕೋಟಿ ಆದಾಯ ಬಂದಿದೆ. ಕೇಂದ್ರ […]

ಹಾಲಪ್ಪ ಕಾಂಗ್ರೆಸ್ ಸೇರುವ ಪ್ರಸ್ತಾವನೆ ಬಂದಿಲ್ಲ: ಪರಮೇಶ್ವರ್

ಹಾಲಪ್ಪ ಕಾಂಗ್ರೆಸ್ ಸೇರುವ ಪ್ರಸ್ತಾವನೆ ಬಂದಿಲ್ಲ: ಪರಮೇಶ್ವರ್

ಬೆಂಗಳೂರು: ಹರತಾಳು ಹಾಲಪ್ಪ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸ್ಪಷ್ಟಪಡಿಸಿದರು. ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಪ್ಪ ಕಾಂಗ್ರೆಸ್ ಗೆ ಸೇರುವ ವಿಚಾರ ತಮ್ಮವರೆಗೆ ಬಂದಿಲ್ಲ ಎಂದರು. ಎ. 15ರೊಳಗೆ ಅಭ್ಯರ್ಥಿಗಳ ಪಟ್ಟಿ: ಎ. 9, 10 ಸ್ಕ್ರೀನಿಂಗ್ ಕಮೀಟಿ ಸಭೆ ನಡೆಯಲಿದೆ. 11 ಅಥವಾ 12 ಕ್ಕೆ ಚುನಾವಣೆ ಸಮಿತಿ ಸಭೆ ಇದೆ. ಅಂದು ಅಭ್ಯರ್ಥಿಗಳ ಪಟ್ಟಿ ಖಾತರಿಯಾಗಲಿದೆ. ಎ. 15 ರಂದು ಅಭ್ಯರ್ಥಿಗಳ ಪಟ್ಟಿ […]

ವಿವಾದಾತ್ಮಕ ಹೇಳಿಕೆ ಸಂಸದ ಜೋಶಿ ವಿರುದ್ದ ದೂರು ದಾಖಲು

ವಿವಾದಾತ್ಮಕ ಹೇಳಿಕೆ ಸಂಸದ ಜೋಶಿ ವಿರುದ್ದ ದೂರು ದಾಖಲು

ಹುಬ್ಬಳ್ಳಿ: ಕೋಮು ಗಲಭೆ ಹುಟ್ಟಿಸಲು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಪ್ರಲ್ಹಾದ್ ಜೋಶಿ ವಿರುದ್ದ ಶನಿವಾರ  ಕಸಾಬಾ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ.29 ಕೊಲೆಯಾದ ಹಿಂದೂ ಯುವಕ ಗವಿಸಿದ್ದಪ್ಪ ಅಂಬಿಗೇರ ಮನೆಗೆ ಸಂಸದ ಪ್ರಲ್ಹಾದ್  ಜೋಶಿ ಭೇಟಿ ನೀಡಿದ್ದಾಗ ಕಸಬಾಪೇಟೆ ಮಿನಿ ಪಾಕಿಸ್ತಾನದಂತೆ ಕಾಣಿಸುತ್ತಿದೆ. ಮಸೀದಿಗಳಲ್ಲಿ ಶಸ್ತ್ರಾಸ್ರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಂಸದರ ಹೇಳಿಕೆಯಿಂದ ಸಮುದಾಯವೊಂದರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಮೊಹಮ್ಮದ್ ಹನೀಫ್ ಜೋಪಡಿ ಎಂಬುವವರು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು […]

ಸಿಎಂ ಸಿದ್ದರಾಮಯ್ಯ ರೆಸಾರ್ಟ್ ರಾಜಕೀಯ ಮಾಡ್ತಿದ್ದಾರೆ: ಎಚ್ಡಿಕೆ ಟೀಕೆ

ಸಿಎಂ ಸಿದ್ದರಾಮಯ್ಯ ರೆಸಾರ್ಟ್ ರಾಜಕೀಯ ಮಾಡ್ತಿದ್ದಾರೆ: ಎಚ್ಡಿಕೆ ಟೀಕೆ

ಜಗಳೂರು: ಸಿಎಂ ಸಿದ್ದರಾಮಯ್ಯ ಅವರು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಜಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರೆಸಾರ್ಟ್ ನಲ್ಲಿ ಕುಳಿತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣ ಹಂಚಲು ಬಂಡಲ್ ಕಟ್ಟುತ್ತಿದ್ದಾರೆ. ಎಲ್ಲೆಲ್ಲಿಗೆ, ಯಾವ ಸ್ಥಳಗಳಿಗೆ ಎಷ್ಟೇಷ್ಟು ಹಣ ಕಳುಹಿಸಬೇಕು ಎಂಬ ಸಿದ್ದತೆಯಲ್ಲಿದ್ದಾರೆ.  ಬೇರೆ ಪಕ್ಷದ ನಾಯಕರನ್ನು ರೆಸಾರ್ಟ್ ಗೆ ಕರೆಸಿಕೊಂಡು ಹಣದ  ಆಮೀಷ ನೀಡಿ ಖರೀದಿಸಲು ಹೊರಟಿದ್ದಾರೆ. ಅದ್ಯಾವುದು ನಡೆಯೋದಿಲ್ಲ ಎಂದರು. ಇನ್ನೂ ಅಮಿತ ಶಾ ರಾಜ್ಯ ಪ್ರವಾಸದಿಂದ ಜೆಡಿಎಸ್ ಗೆ ಯಾವುದೇ ತೊಂದರೆಯಾಗುವುದಿಲ್ಲ […]

ಜನಾರ್ಧನ ರೆಡ್ಡಿಗೂ ಪಕ್ಷಕ್ಕೂ ಯಾವ ಸಂಬಂಧವಿಲ್ಲ: ಅಮಿತ್ ಶಾ

ಜನಾರ್ಧನ ರೆಡ್ಡಿಗೂ ಪಕ್ಷಕ್ಕೂ ಯಾವ ಸಂಬಂಧವಿಲ್ಲ: ಅಮಿತ್ ಶಾ

ಮೈಸೂರು:  ಮತದಾರರಿಗೆ ಗಾಳ ಹಾಕಲು ಸಿಎಂ ತವರಲ್ಲೇ ಎರಡು ದಿನದಿಂದ ಟಿಕಾನಿ ಹೂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ  ಇಂದು ಬೆಳಗ್ಗೆ ಗಾಲಿ ಜನಾರ್ದನ ರೆಡ್ಡಿಗೆ ಶಾಕ್ ನೀಡಿದ್ದಾರೆ. ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಯಾವ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳ, ರಾಯಚೂರು ಗಡಿಭಾಗಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಾರೆ. ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದಿದ್ದರು. ಆದರೆ ಇಂದು ಅಮಿತ್ ಶಾ ಉಲ್ಟಾ […]