ಸುರಪುರ: ಶೇ 7.5 ರಷ್ಟು ಎಸ್ಟಿ ಮೀಸಲಾತಿ ಹೆಚ್ಚಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ಮನವಿ

ಸುರಪುರ: ಶೇ 7.5 ರಷ್ಟು ಎಸ್ಟಿ ಮೀಸಲಾತಿ ಹೆಚ್ಚಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ಮನವಿ

ಸುರಪುರ: ಕನಾಟಕ ಪ್ರದೇಶ ಕಾಂಗ್ರೆಸ್  ಅಧ್ಯಕ್ಷ ಜಿ.ಪರಮೇಶ್ವರ ಅವರನ್ನು ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ ಶುಕ್ರವಾರ ಹತ್ತಿಗುಡೂರ ಕ್ರಾಸ್ ಬಳಿ ಸನ್ಮಾನಿಸಿದರು. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಕಾರ್ಯಕ್ರಮದ ನಿಮಿತ್ಯವಾಗಿ ಶಹಾಪುರಕ್ಕೆ ತೆರಳುತ್ತಿದ್ದು ಮಾರ್ಗ ಮಧ್ಯೆ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಎಸ್ಟಿ ಸಮುದಾಯಕ್ಕೆ ನೀಡುತ್ತಿರುವ ಪ್ರತಿ ಶತ 3ರ ಮೀಸಲಾತಿಯನ್ನು ಪರಷ್ಕರಿಸಿ ಕನಿಷ್ಠ 7.5ರಷ್ಟು ಮೀಸಲಾತಿಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರ ಮೇಲೆ ಒತ್ತಡ […]

ಸಿಎಂ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನ

ಸಿಎಂ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನ

ಕೊಪ್ಪಳ: ಆರ್.ಎಸ್.ಎಸ್, ಭಜರಂಗದಳ ಕಾರ್ಯಕರ್ತರು ಉಗ್ರಗಾಮಿಗಳು ಎಂದು ಸಿಎಂ ಸಿದ್ದರಾಮಯ್ಯನವರ ಪ್ರಚೋಧನಕಾರಿ ಹೇಳಿಕೆ ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜೈಲ್ ಬರೋ ಚಳುವಳಿ ನಡೆಸಿ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ನಗರದ ಗೌರಿಶಂಕರ ದೇವಸ್ಥಾನದಿಂದ ಹೋರಟ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅರಾಜಕತೆ ಸೃಷ್ಟಿ […]

ಕೊಪ್ಪಳ ಜಿಲ್ಲೆಯ ಮೂರು ನೂತನ ತಾಲೂಕು ಜ. 26ಕ್ಕೆ ಆರಂಭಗೊಳ್ಳುವುದು ಇನ್ನೂ ಅನಿಶ್ಚೀತತೆ…!

ಕೊಪ್ಪಳ ಜಿಲ್ಲೆಯ  ಮೂರು ನೂತನ ತಾಲೂಕು ಜ. 26ಕ್ಕೆ ಆರಂಭಗೊಳ್ಳುವುದು ಇನ್ನೂ ಅನಿಶ್ಚೀತತೆ…!

ಕುಕನೂರ, ಕನಕಗಿರಿ, ಕಾರಟಗಿ ನೂತನ ತಾಲೂಕಗಳ ಆರಂಭಕ್ಕಿಲ್ಲ ಇನನು ಸಿದ್ದತೆ ಜನವರಿ 26ಕ್ಕೆ ಹೊಸ ತಾಲೂಕುಗಳ ಆರಂಭಕ್ಕೆ ಮೂಡಿದ ಅನಿಶ್ಚೀತತೆ ಕರಿ ನೆರಳು ಕೊಪ್ಪಳ: ಬಹುಕಾಲದ ಬೇಡಿಕೆಯಾದ ಹೊಸ ತಾಲೂಕುಗಳ ರಚನೆಗೆ ಸಿದ್ದರಾಮಯ್ಯ ಸರ್ಕಾರ ಅಸ್ತು ಎಂದಿದ್ದು, 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಬಜೆಟ್ ನಲ್ಲಿ  ಘೋಷಿಸಲಾಗಿದೆ. ಇದರಿಂದ ಕೊಪ್ಪಳ ಜಿಲ್ಲೆಯ ಕುಕನೂರು, ಕನಕಗಿರಿ, ಕಾರಟಗಿ ಪಟ್ಟಣಗಳು ಹೊಸ ತಾಲೂಕುಗಳ ರಚನೆಯಲ್ಲಿ ಸೇರಿವೆ. ಹಲವು ವರ್ಷಗಳ ಜನರ ಹೋರಾಟ, ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ ಹೊಸ […]

ಆಧಾರ್ ನೋಂದಣಿಗಿದ್ದ ಲ್ಯಾಪ್‍ಟಾಪ್ ಎಗರಿಸಿದ ಕಳ್ಳರು…!

ಆಧಾರ್ ನೋಂದಣಿಗಿದ್ದ ಲ್ಯಾಪ್‍ಟಾಪ್ ಎಗರಿಸಿದ ಕಳ್ಳರು…!

ಮುದ್ದೇಬಿಹಾಳ : ಆಧಾರ್ ಕಾರ್ಡ ನೋಂದಣಿಗೆ ಇಡಲಾಗಿದ್ದ ಲ್ಯಾಪ್‍ಟಾಪ್‍ನ್ನೇ ಕಳ್ಳರು ಎಗಿರಿಸಿರುವ ಘಟನೆ ಪಟ್ಟಣದ ಮಿನಿವಿಧಾನಸೌಧ ಕಚೇರಿ ಆವರಣದಲ್ಲಿರುವ ಅಟಲಜೀ ಜನಸ್ನೇಹಿ ಕೇಂದ್ರದಲ್ಲಿ ಗುರುವಾರ ರಾತ್ರಿ ನಡೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಆರಂಭಗೊಂಡಿರುವ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಚಾಲನೆ ಮಾಡಿದ್ದ ಸಿಬ್ಬಂದಿ ಲ್ಯಾಪ್‍ಟಾಪ್‍ನಲ್ಲಿ 19 ಜನರ ಆಧಾರ್ ಕಾರ್ಡಗೆ ಅಗತ್ಯವಾದ ಮಾಹಿತಿ ಸಂಗ್ರಹ ಮಾಡಿ ಎಂದಿನಂತೆ  ಕೆಲಸ ಮುಗಿಸಿ ಕೇಂದ್ರದ ಆಪರೇಟರ್ ಸೌಭಾಗ್ಯ ಬಿದರಿ ಸಂಜೆ ಲ್ಯಾಪಟಾಪ್ ಕಚೇರಿಯಲ್ಲಿಯೇ ಬಿಟ್ಟು ಮನೆಗೆ ತೆರಳಿದ್ದಾರೆ. ಶುಕ್ರವಾರ ಬೆಳಗ್ಗೆ […]

ಕಿತ್ತೂರು: ಸ್ವಾಮಿ ವಿವೇಕಾನಂದರ 155ನೇ ಜಯಂತಿ ಆಚರಣೆ

ಕಿತ್ತೂರು: ಸ್ವಾಮಿ ವಿವೇಕಾನಂದರ 155ನೇ ಜಯಂತಿ ಆಚರಣೆ

ಕಿತ್ತೂರು: ಪಟ್ಟಣದ  ಬಸ್ ನಿಲ್ದಾಣದಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜಯಂತಿಯನ್ನು  ವಿವೇಕಾನಂದರ ಕರಪತ್ರಗಳನ್ನು ಹಂಚುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ನಿಲ್ದಾಣದ ಅಧಿಕಾರಿಗಳು, ಕಿತ್ತೂರಿನ ಯುವಕರು, ಬಸ್ ನಿಲ್ದಾಣದ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಪಟ್ಟಣದ ನಾಗರಿಕರು ಹಾಜರಿದ್ದರು.

ಇಎಂವಿ ಯಂತ್ರದ ಮೂಲಕ ನಡೆಯುವ ಚುನಾವಣೆಗೆ ನನ್ನ ಬೆಂಬಲ: ಬಸವರಾಜ ಹೊರಟ್ಟಿ

ಇಎಂವಿ ಯಂತ್ರದ ಮೂಲಕ ನಡೆಯುವ ಚುನಾವಣೆಗೆ ನನ್ನ ಬೆಂಬಲ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವುದು  ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಆರ್. ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜರುಗಿದ ಬೆಳಗಾವಿ ವಲಯದ ರೈತರ ಸಭೆಯಲ್ಲಿ ಭಾಗಿವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿ. ಒಂದೇ ಹಂತದಲ್ಲಿ ಚುನಾವಣೆ ನಡೆಸುವದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವುದಿಲ್ಲ. ಒಂದೇ ಹಂತದಲ್ಲಿ ಮತದಾನವಾದ್ರೆ ಪಾರದರ್ಶಕವಾಗಿರುತ್ತೇ ಎಂದರು. ಇಎಂವಿ ಯಂತ್ರದಿಂದ ಚುನಾವಣೆ ನಡೆಸುವದು ಸೂಕ್ತವಾಗಿದ್ದು, ಇಎಂವಿ ಯಂತ್ರದ […]

ಜಿಲ್ಲಾ ಕ್ರೀಡಾಶಾಲೆ ಬಾಡಿಗೆ ಕೊಟ್ಟು ಹಣಗಳಿಕೆಗೆ ಮುಂದಾದ ಜಿಲ್ಲಾಡಳಿತ: ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿ

ಧಾರವಾಡ:  ವಿದ್ಯಾಕಾಶಿ, ಎರಡು ವಿಶ್ವವಿದ್ಯಾಲಯಗಳನ್ನು ಹೊಂದಿದ ನಗರ, ಕಲೆ, ಸಾಹಿತ್ಯ, ಸಂಗೀತ ಹಾಗೂ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಜಿಲ್ಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಭ್ಯಾಸ ಮಾಡಲು ಕ್ರೀಡಾ ಶಾಲೆಯೊಂದಿದೆ. ಆದರೆ, ಈ ಕ್ರೀಡಾಶಾಲೆ ಇದೀಗ ನಿರುಪಯುಕ್ತವಾಗಿ ವ್ಯಾಪಾರಿಗಳಿಗೆ ಮಾತ್ರ ಸದುಪಯೋಗವಾಗುತ್ತಿದೆ. ಹೌದು! ಇಲ್ಲಿನ ಕೆಸಿಡಿ ರಸ್ತೆಯಲ್ಲಿರುವ  ಕ್ರೀಡಾಶಾಲೆಯಲ್ಲಿ ಕ್ರೀಡೆ ಬಗ್ಗೆ ತರಬೇತಿಗಳು ನಡೆಯಬೇಕಿತ್ತು. ಆದರೆ, ಆ ಶಾಲೆ ಹಾಳಾಗಿದ್ದು, ಇದೀಗ ಆ ಶಾಲೆಯಲ್ಲಿ ವ್ಯಾಪಾರಸ್ಥರು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. […]

ಪೇಡಾನಗರಿಯಲ್ಲಿ ಗಮನಸೆಳೆದ ಮಕರ ಸಂಕ್ರಮಣ ಹಬ್ಬದಾಚರಣೆ

ಧಾರವಾಡ: ಧಾರವಾಡದ ಮಣ್ಣಿನ ಗುಣವೇ ಹಾಗೆ. ಹಬ್ಬ, ಹರಿದಿನಗಳು, ಸಂಪ್ರದಾಯ, ಜಾನಪದ ಇಲ್ಲಿ ಹೆಚ್ಚು ಆಚರಿಸಲ್ಪಡುತ್ತದೆ. ಧಾರವಾಡದಿಂದಲೇ ಅನೇಕ ಜಾನಪದ ಕಲಾವಿದರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇಂದಿನ  ಆಧುನಿಕತೆಯ ಭರಾಟೆಯಲ್ಲಿ ದೇಸಿ ಹಬ್ಬಗಳ ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಹಬ್ಬಗಳ ಆಚರಣೆಯ ಮಹತ್ವ ಬಿಚ್ಚಿಡುವ ವಿಶಿಷ್ಟ ಕಾರ್ಯಕ್ರಮವೊಂದು ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜಿನ ಹಿಂಬದಿಯ ಮೈಲಾರ ಲಿಂಗ ದೇವಸ್ಥಾನದ ಆವರಣದಲ್ಲಿ ಜರುಗಿತು. ಜಾನಪದ ಕಲಾವಿದರಾದ ಬಸಲಿಂಗಯ್ಯ ಹಿರೇಮಠ ಹಾಗೂ ವಿಶ್ವೇಶ್ವರಿ ಹಿರೇಮಠ ಅವರ ಜಾನಪದ ಸಂಶೋಧನ […]

ಧಾರವಾಡದಲ್ಲಿ ಆಂತರ್ಯ ಕಿರುಚಿತ್ರಕ್ಕೆ ಮುಹೂರ್ತ

ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಜನ ಕಲಾವಿದರಿದ್ದು, ಅವರಿಗೆ ಸರಿಯಾದ ವೇದಿಕೆಗಳು ಸಿಗದೇ ಇರುವುದರಿಂದ ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಾಕಡವಾಲೆ ಕ್ರಿಯೇಶನ್ಸ್ ಉತ್ತರ ಕರ್ನಾಟಕದ ಅದರಲ್ಲೂ ಧಾರವಾಡದ ಕಲಾವಿದರನ್ನೇ ಹಾಕಿಕೊಂಡು “ಆಂತರ್ಯ” ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದೆ. ವಿದ್ಯಾರ್ಥಿ ಜೀವನವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಧಾರವಾಡದ ಕೆಸಿಡಿ ಕಾಲೇಜಿನ ಮುಂಭಾಗದಲ್ಲಿರುವ ವಿದ್ಯಾಗಣೇಶ ದೇವಸ್ಥಾನದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಶುಭ ಮುಹೂರ್ತದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಆನಂದ ಕಲಾಲ […]

ನಾನು ಆರ್ ಎಸ್ ಎಸ್ ಕಾರ್ಯಕರ್ತ ನನ್ನನ್ನು ಬಂಧಿಸಲಿ: ಸಿಎಂ ಗೆ ಸವಾಲ್ ಹಾಕಿದ ಶೆಟ್ಟರ್

ನಾನು ಆರ್ ಎಸ್ ಎಸ್ ಕಾರ್ಯಕರ್ತ ನನ್ನನ್ನು ಬಂಧಿಸಲಿ: ಸಿಎಂ ಗೆ ಸವಾಲ್ ಹಾಕಿದ ಶೆಟ್ಟರ್

ಹುಬ್ಬಳ್ಳಿ : ನಾನು ಆರ್ ಎಸ್.ಎಸ್ ಕಾರ್ಯಕರ್ತನಾಗಿದ್ದು, ಉಗ್ರಗಾಮಿಗಳಾದರೆ ನಮ್ಮನ್ನು ಬಂಧಿಸಲಿ ಎಂದು ಜಗದೀಶ ಶೆಟ್ಟರ್ ಸಿಎಂ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ಉಣಕಲ್ ನಲ್ಲಿ ಶುಕ್ರವಾರ ಸುದ್ದಿಗಾರರೊದಿಂಗೆ ಮಾತನಾಡಿದ ಅವರು,  ನಮ್ಮನ್ನು ಬಂಧಿಸುವ ಧೈರ್ಯ ಅವರಿಗೆ ಇಲ್ಲಾ‌‌, ಬಿಜೆಪಿ ಪಕ್ಷದ ಸಂಘಟನೆಯನ್ನು ನೋಡಿ ಸಿಎಂ ಆತ್ಮ ಸ್ಥೈರ್ಯ ಕಳೆದುಕೊಂಡು ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರಕ್ಕೆ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಲು ಆಗುವುದಿಲ್ಲ. ಇದರಲ್ಲಿಯೂ ರಾಜಕೀಯ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಮಾನಸಿಕ […]