ಚಿಕ್ಕೋಡಿ ಕೆಎಲ್ ಇ ಆಸ್ಪತ್ರೆಗೆ ಪ್ರಥಮ ವಾರ್ಷಿಕೋತ್ಸವ: ಡಿ. 6 ರಂದು ಬೃಹತ್ ಆರೋಗ್ಯ ಶಿಬಿರ

ಚಿಕ್ಕೋಡಿ ಕೆಎಲ್ ಇ ಆಸ್ಪತ್ರೆಗೆ ಪ್ರಥಮ ವಾರ್ಷಿಕೋತ್ಸವ: ಡಿ. 6 ರಂದು ಬೃಹತ್ ಆರೋಗ್ಯ ಶಿಬಿರ

ಚಿಕ್ಕೋಡಿ: ಗ್ರಾಮೀಣ ಭಾಗದ ಜನರ ಆರೋಗ್ಯದ ಜವಾಬ್ದಾರಿ ಹೊತ್ತು ಚಿಕ್ಕೋಡಿಯಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಆರಂಭಗೊಂಡು ಒಂದು ವರ್ಷವಾಗಿದ್ದು, ಡಿ. 6 ರಂದು  ಪ್ರಥಮ ವಾರ್ಷಿಕೋತ್ಸವ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನುಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು. ಇಲ್ಲಿನ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ರವಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್‍ಇ ವಿಶ್ವ ವಿದ್ಯಾಲಯ, ಜವಾಹರಲಾಲ ನೇಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ […]

ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸದಾ ಬದ್ದ: ಸಚಿವ ರಮೇಶ ಜಾರಕಿಹೊಳಿ

ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸದಾ ಬದ್ದ: ಸಚಿವ ರಮೇಶ ಜಾರಕಿಹೊಳಿ

  ಬೆಳಗಾವಿ: ರಾಜ್ಯ ಸರ್ಕಾರ ವಿಕಲ ಚೇತನರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ವಿಕಲಚೇತನರ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ನಾಗರಿಕ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಗಳ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ವಿಕಲಚೇತನ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ […]

ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ: ನವ ಜೋಡಿ ಅನುಮಾನಾಸ್ಪದ ಸಾವು

ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ: ನವ ಜೋಡಿ ಅನುಮಾನಾಸ್ಪದ ಸಾವು

ಬಾಗಲಕೋಟೆ: ಮನೆಯವರ  ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹುನಗುಂದ ತಾಲೂಕಿನ ಹುವಿನಹಳ್ಳಿಯಲ್ಲಿ ನಡೆದಿದೆ. ಹುನಗುಂದ ತಾಲೂಕಿನ ಕೈರವಾಡಗಿ ಗ್ರಾಮದ ನಿವಾಸಿ ಸಂಗಮೇಶ (28) ಇದೇ ಗ್ರಾಮದ ಹನುಮವ್ವ(24) ಅನುಮಾನಾಸ್ಪದವಾಗಿ ಸಾವನ್ನಪ್ಪಿದನವ ದಂಪತಿ. ಇಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ನಡುವೆಯೂ ಕಳೆದ ತಿಂಗಳು ರೆಜಿಸ್ಟಾರ್ ವಿವಾಹ ವಾಗಿದ್ದರು. ಮೇಲ್ನೋಟಕ್ಕೆ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದಂತೆ ಕಂಡು ಬರುತ್ತಿದೆ. ಆದರು ಇದರಲ್ಲಿ ಮನೆಯವರ ಕೈ ವಾಡ ಇರಬಹುದು ಎಂಬ […]

ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ 10 ಸ್ಥಾನ ಗೆಲವುದು ಖಚಿತ: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ 10 ಸ್ಥಾನ ಗೆಲವುದು ಖಚಿತ: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ  ಸಚಿವ ರಮೇಶ ಜಾರಕಿಹೊಳಿ ಅವರು ರವಿವಾರ ಚಾಲನೆ ನೀಡಿದರು. ಇಲ್ಲಿನ ಶಿವ ಬಸವ ನಗರದಲ್ಲಿ ಹೈಟೆಕ್  ರಸ್ತೆ ಕಾಮಗಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ಗದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು,  ರಾಜ್ಯ ಸರ್ಕಾರದ ಸಾಧನೆಗಳನ್ನು ನೋಡಿ ಸಹಿಸಲಾಗದ ಬಿಎಸ್ ವೈ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಪರಿವರ್ತನಾ ರ್ಯಾಲಿ ವಿಫಲವಾಗಿದ್ದು, ಎಲ್ಲೆಡೆ ಗಲಾಟೆಗಳಾಗುತ್ತಿವೆ. ನಿನ್ನೆ ಇಂಡಿಯಲ್ಲಿ […]

ಯುಪಿ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲವು: ಪ್ರಧಾನಿ ಮೋಧಿ ಭೇಟಿಯಾದ ಸಿಎಂ ಯೋಗಿ

ಯುಪಿ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲವು: ಪ್ರಧಾನಿ ಮೋಧಿ ಭೇಟಿಯಾದ ಸಿಎಂ ಯೋಗಿ

ಹೊಸದಿಲ್ಲಿ: ಉತ್ತರ ಪ್ರದೇಶ ನಗರದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು  ಪ್ರಧಾನಿ  ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಗರ ಸ್ಥಳೀಯ ಆಡಳಿತದಲ್ಲೂ ಭರ್ಜರಿ ಗೆಲವು ದಾಖಲಿಸಿ, ಕಾಂಗ್ರೆಸ್‌, ಎಸ್‌ಪಿಗೆ ಶಾಕ್ ನೀಡಿದ್ದು,  ಯುಪಿ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ ಬಳಿಕ ಗುಜರಾತ್ ಚುನಾವಣೆಗೆ  ಬಿಜೆಪಿಗೆ ಆತ್ಮವಿಶ್ವಾಸ […]

ಲಾರಿ-ಟಾಟಾ ಏಸ್ ಮುಖಾಮುಖಿ ಡಿಕ್ಕಿ: ಟಾಟಾ ಏಸ್ ಚಾಲಕ ಸಾವು

ಲಾರಿ-ಟಾಟಾ ಏಸ್ ಮುಖಾಮುಖಿ ಡಿಕ್ಕಿ: ಟಾಟಾ ಏಸ್ ಚಾಲಕ ಸಾವು

ಹುಬ್ಬಳ್ಳಿ: ಟಾಟಾ ಏಸ್ ಹಾಗೂ ಲಾರಿ ಮುಖಾಮುಖಿ  ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ನ ವಾಹನ ಚಾಲಕ ಸಾವನ್ನಪ್ಪಿದಂತಹ ಘಟನೆ  ಕಲಘಟಗಿಯ ನಾಯಕ್ ಪೆಟ್ರೋಲ್‌ಪಂಪ್ ಬಳಿ ಶನಿವಾರ ಸಂಜೆ  ನಡೆದಿದೆ. ಚಾಲಕ ಹನುಮಂತ ಹೊಸಮನಿ(30) ಮೃತ ದುರ್ದೈವಿ. ಪ್ರತೀಕ ಹೊಸಮನಿ ಎಂಬುವರಿಗೆ ಗಾಯವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೇರಳ ಮೂಲದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಕವಿವ ಸಂಘದ ತ್ರೈಮಾಸಿಕ ಚುನಾವಣೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕವಿವ ಸಂಘದ ತ್ರೈಮಾಸಿಕ ಚುನಾವಣೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಧಾರವಾಡ: ಇಲ್ಲಿನ ಪ್ರತಿಷ್ಟಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈಮಾಸಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರತಿಕ್ರಿಯೆ ಪ್ರಾರಂಭಗೊಂಡಿದೆ. ಮೊದಲ ದಿನ ಡಾ. ಡಿ.ಎಂ. ಹಿರೇಮಠ ಮತ್ತು ಶಂಕರ ಹಲಗತ್ತಿ ನೇತೃತ್ವ ಬಣದ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು. ಅಭ್ಯರ್ಥಿಗಳ ವಿವರ ಇಂತಿದೆ.. ನಿಂಗಣ್ಣ ಕುಂಟಿ (ಇಟಗಿ) (ಉಪಾಧ್ಯಕ್ಷ), ಡಾ. ಡಿ.ಎಂ.ಹಿರೇಮಠ (ಕಾರ್ಯಾಧ್ಯಕ್ಷರು), ಡಾ. ಸಂಜೀವ ಕುಲಕರ್ಣಿ (ಕೋಶಾಧ್ಯಕ್ಷರು), ಶಂಕರ ಹಲಗತ್ತಿ (ಪ್ರಧಾನ ಕಾರ್ಯದರ್ಶಿ), ವೀರಣ್ಣ ಒಡ್ಡಿನ್ (ಸಹ ಕಾರ್ಯದರ್ಶಿ), ಕೀರ್ತಿವತಿ ವಿ.ಎನ್. (ಮಹಿಳಾ ಮೀಸಲಾತಿ), ಡಾ. ಧನವಂತ […]

ಧಾರವಾಡದಲ್ಲಿ ಅಂಜುಮನ್ ಸಂಸ್ಥೆಯಿಂದ ವಿನೂತನವಾಗಿ ಈದ್ ಮಿಲಾದ್ ಆಚರಣೆ

ಧಾರವಾಡದಲ್ಲಿ ಅಂಜುಮನ್ ಸಂಸ್ಥೆಯಿಂದ ವಿನೂತನವಾಗಿ ಈದ್ ಮಿಲಾದ್ ಆಚರಣೆ

ಧಾರವಾಡ: ಈದ್ ಮಿಲಾದ್ ಹಬ್ಬವನ್ನು ಅಂಜುಮನ್ ಸಂಸ್ಥೆ ಸದಸ್ಯರು ನಗರದಲ್ಲಿ ಶನಿವಾರ ವಿನೂತನವಾಗಿ ಆಚರಣೆ ಮಾಡಿದರು. ಹಬ್ಬದ ಅಂಗವಾಗಿ ಮುಸ್ಲಿಂರು ಹಚ್ಚುವ ಡಿಜೆ ಅಬ್ಬರದ ಬದಲಿಗೆ ಎಲ್ಲಾ ಗಲ್ಲಿಯ ಮುಸ್ಲಿಂರನ್ನು ಕೂಡಿಸಿ ಅಂಜುಮನ್ ಸಂಸ್ಥೆ ಅದೇ ದುಡ್ಡಿನಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು, ಹಾಲು, ಶಾಲುಗಳನ್ನು ವಿತರಣೆ ಮಾಡಲು ಮನವಿ ಮಾಡಿದ್ದರು. ಆ ಪ್ರಕಾರ ಎಲ್ಲಾ ಗಲ್ಲಿಯ ಮುಸ್ಲಿಂರು ಸೇರಿ ಹಣ ಸಂಗ್ರಹಿಸಿ ಅದೇ ದುಡ್ಡಿನಲ್ಲಿ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಶಾಲುಗಳನ್ನು ವಿತರಣೆ ಮಾಡಿದರು. […]

ಹೆದರಬೇಡ ಕಾಯುವವನು ಮೇಲಿದ್ದಾನೆ: ಸಚಿವ ವಿನಯ್ ಗೆ ಮುಸ್ಲಿಂ ಮಹಿಳೆ ಆಶೀರ್ವಾದ

ಧಾರವಾಡ: ನೀನು ಯಾವುದೇ ಕಾರಣಕ್ಕೂ ಹೆದರಬೇಡಪ್ಪ. ಕಾಯುವವನು ಮೇಲಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರಿಗೆ ಮುಸ್ಲಿಂ ವೃದ್ಧೆಯೊಬ್ಬರು ಆಶೀರ್ವಾದ ಮಾಡಿದ್ದಾರೆ. ಆ ವೀಡಿಯೋ ಇದೀಗ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ. ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಅವರ ಹತ್ಯೆ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ರಾಜೀ ಸಂಧಾನ ಮಾಡಿಸಲು ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದ ನಂತರ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ […]

ಮೌಢ್ಯ ಜಾಗೃತಿ ಅಭಿಯಾನಕ್ಕೆ ಜಗಳೂರಿನಲ್ಲಿ ಅದ್ದೂರಿ ಸ್ವಾಗತ

ಮೌಢ್ಯ ಜಾಗೃತಿ ಅಭಿಯಾನಕ್ಕೆ ಜಗಳೂರಿನಲ್ಲಿ ಅದ್ದೂರಿ ಸ್ವಾಗತ

ಜಗಳೂರು: ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿಯವರ ಸಾಮಾಜಿಕ ಕಾರ್ಯ ಸರ್ವ ಸಮಾಜವು ಗೌರವಿಸುವಂತ್ತಾಗಿದೆ ಬುದ್ಧ,ಬಸವ,ಅಂಬೇಡ್ಕರ್ ರವರ ವಿಚಾರದಾರೆಗಳನ್ನು ತಿಳಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತಿರುವ ಇಂತಹ ನಾಯಕರ ಕೈ ಬಲವನ್ನು ಪಡಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕೆಂದು ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆಯ ಜಾಗೃತಿ ರಥಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದಲೂ ಬಂಧುತ್ವ ವೇದಿಕೆಯಡಿಯಲ್ಲಿ ಮೂಢನಂಬಿಕೆ ಕಂದಚಾರ, ಸಾಮಾಜಿಕ ಶೋಷಣೆಯಂತಹ […]