ಗೋಕಾಕ: ಕೋರ್ಟ್ ಆವರಣದಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಗೋಕಾಕ: ಕೋರ್ಟ್ ಆವರಣದಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಗೋಕಾಕ: ನಿವೇಶನ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ನಿವೇಶನ ಮಾಲೀಕನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದ ಕೋರ್ಟ್ ಆವರಣದಲ್ಲಿ   ನಡೆದಿದೆ. ರಾಜಶೇಖರ್‌‌ ನಿಡಗುಂದಿ ಹಲ್ಲೆಗೊಳಗಾದ ವ್ಯಕ್ತಿ.  ಚನ್ನಮಲ್ಲಯ್ಯಾ,  ಮಲ್ಲಪ್ಪ ಮತ್ತು ಬಸವಯ್ಯಾ ನಿರ್ವಾಣಿ, ಬಸಪ್ಪ ಗೊಂಡಿಗೌಡ ಸೇರಿ ಒಟ್ಟು 7 ಜನರ ಗುಂಪು ರಾಜಶೇಖರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಮೂಡಲಗಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನೆಯಿಂದಾಗಿ ನ್ಯಾಯಾಲಯದ […]

ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಬಂಧನ…!

ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ  ಬಂಧನ…!

ಹುಬ್ಬಳ್ಳಿ:  ಈದ್ ಮಿಲಾದ ಹಬ್ಬದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಮೌಲ್ವಿಯನ್ನು ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಳೆದ ಶನಿವಾರ ಈದ್ ಹಬ್ಬದ ನಿಮಿತ್ತ ಹುಬ್ಬಳ್ಳಿಯ ಗಣೇಶ್ ಪೇಟೆಯಲ್ಲಿ ಮುಸ್ಲಿಂ ಬಾಂದವರು  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಗಣೇಶ್ ಪೇಟೆ ಪಾಕಿಸ್ತಾನದ ಹಾಗೆ ಕಾಣುತ್ತಿದೆ ಎಂದು ಮೌಲ್ವಿ  ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಚೋದನಕಾರಿ ಹೇಳಿಕೆ  ನೀಡಿದ   ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಯನ್ ಎಂಬಾತನನ್ನು  ಶಹರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈದ್ ಮೀಲಾದ್ ಆಚರಣೆಯ […]

ನಮ್ಮಲ್ಲಿರುವ ಕೊಂಡಿ ಮಂಚಣ್ಣರಿಂದಲೇ ಪ್ರತ್ಯೇಕ ಧರ್ಮ ಮಾನ್ಯತೆಗೆ ಅಡ್ಡಿ:ಸಚಿವ ಕುಲಕರ್ಣಿ ಆರೋಪ

ನಮ್ಮಲ್ಲಿರುವ ಕೊಂಡಿ ಮಂಚಣ್ಣರಿಂದಲೇ ಪ್ರತ್ಯೇಕ ಧರ್ಮ ಮಾನ್ಯತೆಗೆ ಅಡ್ಡಿ:ಸಚಿವ ಕುಲಕರ್ಣಿ ಆರೋಪ

ಮುದ್ದೇಬಿಹಾಳ: ಸಮಾಜದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡು ಸತ್ತು ಹೋಗಿದ್ದ ಲಿಂಗಾಯತರನ್ನು ಒಂದುಗೂಡಲು ಈ ಹೋರಾಟ ಪ್ರಬಲವಾಗಿ ನಡೆದಿದ್ದು, ಇದನ್ನೂ ಹಾಳುಮಾಡುವ ಕೆಲಸಕ್ಕೆ ನಮ್ಮಲ್ಲಿರುವ ಕೆಲ ಕೊಂಡಿ ಮಂಚಣ್ಣರನ್ನು ಕಳಿಸಿ ಹೋರಾಟ ಒಡೆಯುವ ಕುತಂತ್ರ ನಡೆಸಿದ್ದಾರೆ. ಇದ್ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ ಕುಲಕರ್ಣಿ ಹೇಳಿದರು. ಪಟ್ಟಣದ ದಿ.ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಬುಧವಾರ ವಿಜಯಪುರದಲ್ಲಿ ಡಿ.10 ರಂದು ನಡೆಯಲಿರುವ  ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು […]

ರಾಮಮಂದಿರವಲ್ಲ, ಮೊದಲು ಮನಸ್ಸುಗಳನ್ನು ಕಟ್ಟಿ : ಪ್ರಭುಚನ್ನಬಸವ ಶ್ರೀ

ರಾಮಮಂದಿರವಲ್ಲ, ಮೊದಲು ಮನಸ್ಸುಗಳನ್ನು ಕಟ್ಟಿ : ಪ್ರಭುಚನ್ನಬಸವ ಶ್ರೀ

ಬೆಳಗಾವಿ: ಮನುಷ್ಯ-ಮನುಷ್ಯ ನಡುವೆ ಪ್ರೀತಿಯ ಮಂದಿರ ಬಿದ್ದು ಹೋಗುತ್ತಿವೆ.  ಇಂಥದರಲ್ಲಿ  ಹಲವರು  ರಾಮ ಮಂದಿರ ಕಟ್ಟಲು ಅವಸರ ಮಾಡುತ್ತಿದ್ದಾರೆ. ಮೊದಲು ಮನಸ್ಸುಗಳನ್ನು ಕಟ್ಟಿ ಆನಂತರ ರಾಮ ಮಂದಿರದ ಕಡೆಗೆ ವಿಚಾರ ಮಾಡಬೇಕು ಎಂದು ಅಥಣಿ ಮೋಟಗಿ ಮಠ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಬುದ್ದ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಬುಧವಾರ ಮಾತನಾಡಿ, ಹೊಸ ತಲೆ ಮಾರಿನ ಧರ್ಮದ ಸಂಘರ್ಷಗಳ ಮಧ್ಯೆ ನಾವು ಮಾನವೀಯತೆಯ […]

ಪೊಲೀಸ್ ಸಿಬ್ಬಂದಿಗೆ 11 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ: ಸಚಿವ ರಾಮಲಿಂಗಾರೆಡ್ಡಿ

ಪೊಲೀಸ್ ಸಿಬ್ಬಂದಿಗೆ 11 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ: ನಮ್ಮ ಸರ್ಕಾರದ ನಾಲ್ಕುವರೆ  ವರ್ಷದ ಆಡಳಿತದಲ್ಲಿ 28 ಸಾವಿರಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ  ತಿಳಿಸಿದರು. ನಗರದ ಕಂಗ್ರಾಳಿಯಲ್ಲಿರುವ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಪೊಲೀಸ್ ಇಲಾಖೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ […]

ಸಂವಿಧಾನ ಬದಲಾವಣೆಗೆ ಅವಕಾಶ ನೀಡಿದರೆ ಸಮಾನತೆ, ಸ್ವಾತಂತ್ರ್ಯಕ್ಕೆ ಧಕ್ಕೆ: ಸಾಹಿತಿ ಕೆ.ನೀಲಾ

ಸಂವಿಧಾನ ಬದಲಾವಣೆಗೆ ಅವಕಾಶ ನೀಡಿದರೆ ಸಮಾನತೆ, ಸ್ವಾತಂತ್ರ್ಯಕ್ಕೆ ಧಕ್ಕೆ: ಸಾಹಿತಿ ಕೆ.ನೀಲಾ

ಬೆಳಗಾವಿ: ಜಾತಿ, ಲಿಂಗ ತಾರತಮ್ಯದ ವಿಷ ಬೀಜ ಬಿತ್ತಿ, ಮೌಢ್ಯಗಳನ್ನು ಬಿತ್ತಿ ದೇಶದ ಮುನ್ನಡೆಯನ್ನು ತಡೆದಿರುವ ಒಂದು ಧರ್ಮದವರು ಈಗ ಬಹುಸಂಖ್ಯಾತರನ್ನು ನಿಯಂತ್ರಣದಲ್ಲಿಡಲು ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ. ಪರಾಮರ್ಶೆ ಹೆಸರಿನಲ್ಲಿ  ಸಂವಿಧಾನದ ಆಶಯಗಳಿಗೆ ಧಕ್ಕೆ ತರಲು ಮುನ್ನುಗ್ಗುತ್ತಿದ್ದಾರೆ. ಜನರು ಇದಕ್ಕೆಲ್ಲ ಅವಕಾಶ ನೀಡಬಾರದು  ಎಂದು  ಜನಪರ ಹೋರಾಟಗಾರ್ತಿ, ಸಾಹಿತಿ ಕೆ.ನೀಲಾ ಎಚ್ಚರಿಸಿದರು.  ಇಲ್ಲಿನ ಬುದ್ದ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು […]

ರಾಜ್ಯಸಭೆ ಸದಸ್ಯರ ಸದಸ್ಯತ್ವ ರದ್ದು: ಜೆಡಿಯು ಕಾರ್ಯಕರ್ತರಿಂದ ಪ್ರತಿಭಟನೆ

ರಾಜ್ಯಸಭೆ ಸದಸ್ಯರ ಸದಸ್ಯತ್ವ ರದ್ದು: ಜೆಡಿಯು ಕಾರ್ಯಕರ್ತರಿಂದ ಪ್ರತಿಭಟನೆ

ಧಾರವಾಡ: ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಶರದ್ ಯಾದವ ಹಾಗೂ ಅಲಿ ಅನ್ವರ ಅವರನ್ನು ರಾಜ್ಯ ಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ತೀರ್ಮಾನವು ಕಾನೂನು ಬಾಹಿರವಾಗಿದ್ದು ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ಸಂಯುಕ್ತ ಜನತಾದಳದ ಕಾರ್ಯಕರ್ತರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯಸಭಾ ಸದಸ್ಯರಾದ ಶರದ್ ಯಾದವ ಹಾಗೂ ಅಲಿ ಅನ್ವರ ಅವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಕುರಿತು ಮರು ಪರಿಶೀಲನೆ ನಡೆಯಬೇಕಿದೆ ಎಂದು ಕಾರ್ಯಕರ್ತರು […]

ಬಾಬ್ರಿ ಮಸೀದಿ ಧ್ವಂಸ: ಧಾರವಾಡದಲ್ಲಿ ವಿಜಯೋತ್ಸವ ಆಚರಿಸಲು ಮುಂದಾದ ಕಾರ್ಯಕರ್ತರ ಬಂಧನ

ಬಾಬ್ರಿ ಮಸೀದಿ ಧ್ವಂಸ: ಧಾರವಾಡದಲ್ಲಿ ವಿಜಯೋತ್ಸವ ಆಚರಿಸಲು ಮುಂದಾದ ಕಾರ್ಯಕರ್ತರ ಬಂಧನ

ಧಾರವಾಡ: ಬಾಬ್ರಿ ಮಸೀದಿ ಧ್ವಂಸಗೊಳಿಸಿ ಡಿ. 6ಕ್ಕೆ  25 ವರ್ಷವಾದ್ದರಿಂದ ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಮುಂದಾದ ವೇಳೆ ಪೊಲೀಸರು ಅವರನ್ನು ಬಂಧಿಸಿದ ಘಟನೆ ನಡೆದಿದೆ. ಬಾಬ್ರಿ ಮಸೀದಿ ಧ್ವಂಸಗೊಳಿಸಿ ಬುಧವಾರ 25 ವರ್ಷವಾದ್ದರ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ವಿಜಯೋತ್ಸವ ಆಚರಿಸಬಹುದು ಎಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು. ಅದೇ ಪ್ರಕಾರ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಮುಂದಾದರು. ಆದರೆ, ಪೊಲೀಸರು ಇದಕ್ಕೆ […]

ಮಂಗನಿಗೆ ಮದ್ಯ ಕುಡಿಸಿದ ಕಿಡಗೇಡಿಗಳು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಂಗನಿಗೆ ಮದ್ಯ ಕುಡಿಸಿದ ಕಿಡಗೇಡಿಗಳು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಹುಬ್ಬಳ್ಳಿ: ಕಿಡಿಗೇಡಿಗಳ ಗುಂಪೊಂದು ಸೇರಿ ಮಂಗನಿಗೆ ಮದ್ಯ ಕುಡಿಸಿ ಸಕತ್ ಮಜಾ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್‌ನ ಬಾರ್‌ವೊಂದರಲ್ಲಿ ಬುಧವಾರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಆಹಾರ ಅರಸಿ ಬಾರ್ ನತ್ತ ಬಂದ ಮಂಗನಿಗೆ ಕಿಡಗೇಡಿಗಳು ಮದ್ಯ ಕುಡಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮಂಗ ಹೊರಾಳಾಡಿದೆ. ಆದರೂ ಬಿಡದೇ ಮತ್ತೆ ಅದಕ್ಕೆ ಮದ್ಯ ಕುಡಿಸಿ ಮಜಾ ಉಡಾಯಿಸಿದ್ದಾರೆ. ಕುಡಿದ ಮತ್ತಿನಲ್ಲಿ ಮಂಗ ಸಿಟ್ಟಾಗದೇ ಯುವಕಜನೊಬ್ಬನ ತಲೆ ಸವರಿ ಆಟವಾಟಲು ಪ್ರರಂಭಿಸಿದೆ, ಯುವಕರು ಮೂಕ ಪ್ರಾಣಿಗೆ ಹೆಂಡದ […]

ಗೋಕಾಕ: ಸಾಲಭಾದೆ ರೈತ ಆತ್ಮಹತ್ಯೆಗೆ ಶರಣು

ಗೋಕಾಕ: ಸಾಲಭಾದೆ ರೈತ ಆತ್ಮಹತ್ಯೆಗೆ ಶರಣು

ಗೋಕಾಕ: ಸಾಲಭಾದೆ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕಿನ ಮರಡಿ ಶಿವಾಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ. ಶಂಕರ ನಿಂಗಪ್ಪ ಗುದಗನ್ನವರ (40) ಆತ್ಮಹತ್ಯೆ ಮಾಡಿಕೊಂಡ ರೈತ.  ಈತ ವಿವಿಧ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದ. ಬೆಳೆ ನಾಶ, ಮಾಡಿದ ಸಾಲ ತೀರಿಸಲಾಗದೆ ಮನನೊಂದು  ತೋಟದಲ್ಲಿ ಕ್ರಿಮಿನಾಶಕ ಔಷದ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. Views: 263