ಬೆಳಗಾವಿ: ಶಾಂತಿ ಕದಡುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವಂತೆ ಐಜಿಪಿಗೆ ಮನವಿ

ಬೆಳಗಾವಿ: ಶಾಂತಿ ಕದಡುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವಂತೆ ಐಜಿಪಿಗೆ ಮನವಿ

ಬೆಳಗಾವಿ: ನಗರದಲ್ಲಿ ನಿರ್ಮಾಣವಾಗುತ್ತಿರುವ ಕೋಮು ಗಲಭೆ, ಅಶಾಂತಿ ವಾತಾವರಣವನ್ನು ಹತ್ತಿಕ್ಕುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳು  ಮಂಗಳವಾರ ಕಮಿಷನರ್ ಕೆ. ರಾಮಚಂದ್ರ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ನಗರದ ಖಡಕ್ ಗಲ್ಲಿ, ಖಂಜರ್ ಗಲ್ಲಿ, ಬಡಕಲ ಗಲ್ಲಿ ಸೇರಿದಂತೆ ವಿವಿಧ ಕಡೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದು, ನಗರದಲ್ಲಿನ ಶಾಂತಿ ಸೌಹಾರ್ದತೆಗೆ  ದಕ್ಕೆ ತುರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಕಮಿಷನರ್ […]

ಸುರಪುರ: ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಸುರಪುರ: ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಸುರಪುರ: ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿರುವುದನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಹಿಂದೂ ಹಿತರಕ್ಷಣಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ತಹಸೀಲ್ದಾರ್ ಸುರೇಶ ಅಂಕಲಗಿ ಮೂಲಕ  ರಾಜ್ಯಪಾಲರಿಗೆ  ಮನವಿ ಸಲ್ಲಿಸಿದರು. ಈ ವೇಳೆ  ಹಿರಿಯ ಉಪನ್ಯಾಸಕ ವೇಣುಗೋಪಾಲ ಜೇರ್ವಗಿ ಮಾತನಾಡಿ, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ.   ಹೊನ್ನಾವರದ ಪರೇಶ್ ಮೇಸ್ತಾ, […]

ಸತೀಶ್ ಶುಗರ್ಸ್ ಸಾಂಸ್ಕೃತಿಕ ವೇದಿಕೆಯ ಬಹುಮುಖ ಪ್ರತಿಭೆ ಸಂಜಯ್ ಈಗ ಮಿನುಗುತಾರೆ

ಸತೀಶ್ ಶುಗರ್ಸ್ ಸಾಂಸ್ಕೃತಿಕ ವೇದಿಕೆಯ ಬಹುಮುಖ ಪ್ರತಿಭೆ ಸಂಜಯ್ ಈಗ ಮಿನುಗುತಾರೆ

ಹುಬ್ಬಳ್ಳಿ:  ಸತೀಶ್ ಶುಗರ್ಸ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಪರಿಚಯವಾದ  ಗ್ರಾಮೀಣ ಪ್ರತಿಭೆ  ಸಂಜಯ ಶಿವಪ್ಪನ್ನವರಮಠ  ಈಗ  ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಕಲಾ ಪ್ರತಿಭೆಯ ಮೂಲಕ ಮಿನುಗುತ್ತಿದ್ದಾರೆ.  ರಂಗ ತಾರೆ, ಚಿತ್ರನಟ,  ಗಾಯಕ, ಹಾಸ್ಯ ಕಲಾವಿದನಾಗಿ ಜನಮಾನಸದಲ್ಲಿ ತಮ್ಮ ಪ್ರತಿಭೆಯ ಛಾಪನ್ನು ಮೂಡಿಸಿ ನಗೆಯ ಬೆಳಕು ಚೆಲ್ಲಿದ್ದಾರೆ.  ಬೆಳಗಾವಿಯ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ  ಸಂಜಯ್  ಚಿಕ್ಕ ಮೂರ್ತಿಯಾಗಿದ್ದರೂ ದೊಡ್ಡ ಕೀರ್ತಿಯನ್ನೇ ಸಂಪಾದಿಸಿದ್ದಾರೆ. ಸಾಂಸ್ಕೃತಿಕ ಲೋಕದ ಗಮನ ಸೆಳೆದಿದ್ದಾರೆ.   ಹಾಗಾಗಿ ಸಂಜಯ್ ಗೆ […]

ಹಿಂದೂಗಳ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ

ಹಿಂದೂಗಳ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ದೇಶದಲ್ಲಿ ಆಗುತ್ತಿರುವ ಹಿಂದು ಸಂಘಟನೆಯ ಕಾರ್ಯಕರ್ತರ ಕೊಲೆಗಳನ್ನು ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ  ಮಂಗಳವಾರ ನಗರದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ದುರ್ಗದ ಬೈಲ್ ನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರ ಕೊಲೆಯ ಹಿಂದೆ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಯ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿ  ಕೂಡಲೇ ಇಂತಹ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಹಿಸಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥಿಗೆ ಧಕ್ಕೆ ತರುವಂತಹ ಸಂಘಟನೆಯ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು  […]

ಮನೆ ಬಳಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಭೂಮಿ: ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ

ಮನೆ ಬಳಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಭೂಮಿ: ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ

ಅಥಣಿ: ತಾಲೂಕಿನ ಖವಟಕೊಪ್ಪ ಗ್ರಾಮದ ಮನೆಯೊಂದರ ಬಳಿ ಭೂಮಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಗ್ರಾಮಸ್ಥರಲ್ಲಿ  ಆತಂಕ ಸೃಷ್ಟಿಸಿದೆ. ಗ್ರಾಮದ ಅಜೀತ ಉಗಾರೆ ಎಂಬುವರಿಗೆ ಸೇರಿದ ಮನೆ ಬಳಿ ಭೂಮಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಗ್ರಾಮದ ಜನತೆ ಭಯ ಬೀತರಾಗಿದ್ದಾರೆ. ಕಳೆದ ಎರಡು ದಿನಗಳ 5  ಅಡಿ ಭೂಮಿ ಕುಸಿದಿದ್ದು, ಇಂದು 20 ಅಡಿಗೂ ಹೆಚ್ಚು ಭೂಮಿ ಕುಸಿದು ಅಂದಾಜು 40 ಅಡಿ ಆಳ ಕಂದನ ನಿರ್ಮಾಣವಾಗಿದೆ. ಕುಸಿದ ಭೂಮಿಯ ಕೆಳಗೆ ಹೊಗೆ ಹಾಗೂ ನೀರು ಕಂಡು ಬಂದಿದೆ. […]

ಚಿಮಣಿ ಸೃಷ್ಟಿಸಿದ ಅವಾಂತರ: 95 ವರ್ಷದ ವೃದ್ದ ಸಜೀವ ದಹನ

ಚಿಮಣಿ ಸೃಷ್ಟಿಸಿದ ಅವಾಂತರ: 95 ವರ್ಷದ ವೃದ್ದ ಸಜೀವ ದಹನ

ಚಿಕ್ಕೋಡಿ: ಚಿಮಣಿ ಉರುಳಿ ಬಿದ್ದು, ಮನೆಗೆ ಬೆಂಕಿ ಹತ್ತಿಕೊಂಡ ಪರಿಣಾಮ  95 ವರ್ಷದ ವೃದ್ದ ಸಜೀವ ದಹನವಾದ ಘಟನೆ ಸೋಮವಾರ ತಡರಾತ್ರಿ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ. ಮುಗಳಿ ಗ್ರಾಮದ ನಿವಾಸಿ ದೇವಪ್ಪ(95) ಮೃತ ದುರ್ದೈವಿ.   ಈತ ಕಳೆದ ಹಲವು ದಿನಗಳಿಂದ ಮಕ್ಕಳಿಂದ ದೂರ ಉಳಿದು ಒಬ್ಬಂಟಿಯಾಗಿ ಜೀವಿಸುತ್ತಿದ್ದ ಎನ್ನಲಾಗಿದ್ದು, ಮನೆಯಲ್ಲಿ ಕರೆಂಟ್ ಇಲ್ಲದರಿಂದ ಬೆಳಕಿಗಾಗಿ ಸೀಮೆ ಎಣ್ಣೆ ಚಿಮಣಿ ಹೊತ್ತಿಸಿಟ್ಟಿದ್ದು, ಉರುಳಿ ಬಿದ್ದು ಮನೆ ಬೆಂಕಿ ಆವರಿಸಿಕೊಂಡಿದೆ. ವೃದ್ದ ಮನೆಯಿಂದ ಹೊರಬರಲಾಗದೆ ಸಜೀವ ದಹನವಾಗಿದ್ದಾರೆ. […]

ಬಿಜೆಪಿ ಜಯಭೇರಿ: ಗೋಕಾಕನಲ್ಲಿ ಸಂಭ್ರಮಾಚರಣೆ

ಬಿಜೆಪಿ ಜಯಭೇರಿ: ಗೋಕಾಕನಲ್ಲಿ ಸಂಭ್ರಮಾಚರಣೆ

ಗೋಕಾಕ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ಸರ್ಕಲ್ ನಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ಹಂಚಿ  ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ  ಬಿ.ಜೆ.ಪಿ. ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಸುನೀಲ ಮುರ್ಕಿಬಾವಿ, ಸಿ.ಬಿ.ಗಿಡ್ನವರ, ಚಿದಾನಂದ ದೇಮಶೆಟ್ಟಿ, ಸಂತೋಷ ಹುಂಡೇಕಾರ, ಗೀತಾ ಗಂಜಿ, ಪ್ರೇಮಾ ಚಿಕ್ಕೋಡಿ, ಜ್ಯೋತಿ ಕೋಲಾರ, ಲಕ್ಕಪ್ಪ ತಹಸೀಲ್ದಾರ್ , ಬಸವರಾಜ ಇಟ್ನಾಳ, ಹನಮಂತ ಯರಗಟ್ಟಿ, ಪ್ರಸಾದ ಬಡಿಗೇರ, […]

ಕಲ್ಲು ತೂರಾಟ ಪ್ರಕರಣ: ಬಂಧಿತ ಅಮಾಯಕ ಯುವಕರ ಬಿಡುಗಡೆ ಒತ್ತಾಯಿಸಿ ಡಿಸಿ ಕಚೇರಿ ಮುತ್ತಿಗೆ

ಕಲ್ಲು ತೂರಾಟ ಪ್ರಕರಣ: ಬಂಧಿತ ಅಮಾಯಕ ಯುವಕರ ಬಿಡುಗಡೆ ಒತ್ತಾಯಿಸಿ ಡಿಸಿ ಕಚೇರಿ ಮುತ್ತಿಗೆ

ಬೆಳಗಾವಿ: ಇಲ್ಲಿನ ಖಡಕ್ ಗಲ್ಲಿಯಲ್ಲಿ ಕಳೆದ ರಾತ್ರಿ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಆಯೇಶಾ ಸನದಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯವರು ಮಂಗಳವಾರ ಪ್ರತಿಭಟನೆ ನಡೆಸಿದುರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಮುಸ್ಲಿಂ ಸಮುದಾಯದವರು ಪೊಲೀಸರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಂಧಿತ ಮುಸ್ಲಿಂ ಯುವಕರನ್ನ ಕೂಡಲೇ ಬಿಡುಗಡೆಗೊಳಿಸದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು  ಜಿಲ್ಲಾಧಿಕಾರಿ […]

ಖಾಲಿ ಪ್ಲಾಸ್ಟಿಕ್ ಬಾಟಲ್ ಆರಿಸಿಕೊಳ್ಳುತ್ತಿದ್ದ ವೃದ್ಧ ರೈಲಿಗೆ ಸಿಲುಕಿ ಸಾವು…!

ಖಾಲಿ ಪ್ಲಾಸ್ಟಿಕ್ ಬಾಟಲ್ ಆರಿಸಿಕೊಳ್ಳುತ್ತಿದ್ದ ವೃದ್ಧ ರೈಲಿಗೆ ಸಿಲುಕಿ ಸಾವು…!

ಕಲಬುರಗಿ:  ರೈಲ್ವೆ ಹಳಿ  ಮೇಲೆ  ಖಾಲಿ ಬಾಟಲ್  ಆರಿಸಿಕೊಳ್ಳುತ್ತಿದ್ದ ವೃದ್ದನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ಮಡ್ಡಿ ಬಳಿ ರೈಲ್ವೆ ಹಳಿ ಮೇಲೆ ನಡೆದಿದೆ. 70 ವರ್ಷದ ವೃದ್ದ ಮೃತ ದುರ್ದೈವಿ.  ಈತ  ದಿ ರೈಲು ಹಳಿ ಅಕ್ಕ ಪಕ್ಕ ಬಿದ್ದ ಪ್ಲಾಸ್ಟಿಕ್ ಬಾಟಲ್ ಆರಿಸಿಕೊಳ್ಳುತ್ತಿದ್ದಾಗ ಆ ಸಂದರ್ಭದಲ್ಲಿ ವೇಗವಾಗಿ ಬಂದ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ ಸಂಬಂಧ ವಾಡಿ ರೈಲ್ವೆ […]

ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ: ಢಾಬಾ ಮಾಲೀಕ, ಗ್ರಾಹಕರ ಮೇಲೆ ಹಲ್ಲೆ

ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ: ಢಾಬಾ ಮಾಲೀಕ, ಗ್ರಾಹಕರ ಮೇಲೆ ಹಲ್ಲೆ

ವಿಜಯಪುರ: ಕುಡಿದ ಅಮಲಿನಲ್ಲಿ  ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು  ಪರಸ್ಪರ ಹೊಡೆದಾಡಿಕೊಂಡ ಘಟನೆ ನಗರದ ಹೊರವಲಯದ ಹರಿಯಾಣ-ರಾಜಸ್ಥಾನ ಢಾಬಾದಲ್ಲಿ ನಡೆದಿದೆ. ಸುಮಾರು 15 ಜನ ಯುವಕರು ಮಧ್ಯೆ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಊಟಕ್ಕೆ ಬಂದ ಗ್ರಾಹಕರ ಮೇಲೂ ಹಲ್ಲೆ ಮಾಡಿ ಸುಮಾರು 20 ಸಾವಿರ ಕ್ಕೂ ಹೆಚ್ಚು ಢಾಬಾ ದಲ್ಲಿನ ವಸ್ತುಗಳನ್ನು ನಾಶಪಡಿಸಿ ಡಾಬಾದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾ ಹಾರ್ಡ್ ಡಿಸ್ಕ್ ತಗೆದುಕೊಂಡು ಪರಾರಿಯಾಗಿದ್ದಾರೆ. ಗಲಾಟೆಯಲ್ಲಿ ಢಾಬಾ ಮಾಲೀಕನಿಗೂ ಗಾಯವಾಗಿದ್ದು, […]