ಗೋಕಾಕನಲ್ಲಿ ಕಣ್ವ ಮಾರ್ಟ್ ಶೋ ರೂಮ್ ಗೆ ಲಖನ್ ಜಾರಕಿಹೊಳಿ ಚಾಲನೆ

ಗೋಕಾಕನಲ್ಲಿ ಕಣ್ವ ಮಾರ್ಟ್ ಶೋ ರೂಮ್ ಗೆ ಲಖನ್ ಜಾರಕಿಹೊಳಿ ಚಾಲನೆ

ಗೋಕಾಕ:  ಬಟ್ಟೆ, ವಿವಿಧ ವಸ್ತುಗಳ ಮಾರಾಟ ಮಾಡುವ ಪ್ರತಿಷ್ಠಿತ ಕಂಪನಿಗಳು ಗೋಕಾಕ ನಗರದತ್ತ ಮುಖಮಾಡುತ್ತಿವೆ. ಇದರಿಂದ  ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಖುಷಿ ತಂದಿದೆ ಎಂದು ಉದ್ಯಮಿ ಲಖನ್ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ರವಿವಾರ ಲಕ್ಷ್ಮೀ ಚಿತ್ರಮಂದಿರದ ಬಳಿ ನಿರ್ಮಾಣವಾದ ನೂತನ ಕಣ್ವ ಗ್ರುಪ್ ಆಫ್ ಕಂಪನಿಯ ಕಣ್ವ ಮಾರ್ಟ ಶೋ ರೂಮ್ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಗೋಕಾಕ ಪಟ್ಟಣ ಇನ್ನು ಕೆಲ ವರ್ಷಗಳಲ್ಲಿ ವಿವಿಧ ಕಂಪಣಿಗಳ ಶೋ ರೂಮಗಳು ತೆರೆದುಕೊಳ್ಳಲಿದೆ. ಸಂಜೆ […]

ಹಿಂದೂ ಧರ್ಮ ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ: ಸಾಹಿತಿ ಶಿವಪ್ರಕಾಶ

ಹಿಂದೂ ಧರ್ಮ ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ: ಸಾಹಿತಿ ಶಿವಪ್ರಕಾಶ

ಧಾರವಾಡ: ಎರಡು ಸಾವಿರ ವರ್ಷಗಳಿಂದ ಧರ್ಮದ ಬಗ್ಗೆ ಚರ್ಚೆ ನಡೆದಿದೆ. ಹಿಂದೂ ಧರ್ಮ ಎನ್ನುವುದು ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ. ಬ್ರಿಟಿಷರು ಇಲ್ಲಿಗೆ ಬಂದಾಗ ಅವರಿಗೆ ಕ್ರಿಶ್ಚಿಯನ್ ಧರ್ಮ ಇದ್ದಂತೆ ನಮಗೂ ಧರ್ಮ ಇರಲಿ ಎಂದು ಹಿಂದೂ ಧರ್ಮವನ್ನು ಚಾಲ್ತಿಗೆ ತರಲಾಯಿತು. ಈ ಮೊದಲು ಹಿಂದೂ ಎನ್ನುವುದು ಧಾರ್ಮಿಕ ಹಿನ್ನೆಲೆಯಲ್ಲಿ ಬಳಸಲಾಗುತ್ತಿರಲಿಲ್ಲ. ಪ್ರದೇಶಕ್ಕೆ ಸಂಬಂಧಪಟ್ಟಂತೆ ಬಳಕೆಯಾಗುತ್ತಿತ್ತು ಎಂದು ಹಿರಿಯ ಸಾಹಿತಿ ಎಚ್.ಎಸ್.ಶಿವಪ್ರಕಾಶ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಮೇ ಸಾಹಿತ್ಯ ಮೇಳದ ಎರಡನೇ […]

ಸಾಹಿತ್ಯ, ಇತಿಹಾಸ ಓದಿದವರೆಲ್ಲ ಬಿಜೆಪಿ, ಮೋದಿ ಬಗ್ಗೆ ಮಾತನಾಡುವಂತಿಲ್ಲ: ದಿನೇಶ ಅಮೀನಮಟ್ಟು ವಾಗ್ದಾಳಿ

ಸಾಹಿತ್ಯ, ಇತಿಹಾಸ ಓದಿದವರೆಲ್ಲ ಬಿಜೆಪಿ, ಮೋದಿ ಬಗ್ಗೆ ಮಾತನಾಡುವಂತಿಲ್ಲ: ದಿನೇಶ ಅಮೀನಮಟ್ಟು ವಾಗ್ದಾಳಿ

ಧಾರವಾಡ: ಸಾಹಿತ್ಯ ಹಾಗೂ ಇತಿಹಾಸ ಓದಿದವರೆಲ್ಲ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದು ಬಿಜೆಪಿಗರಿಗೆ ಇಷ್ಟವಿಲ್ಲ. ಅವರಿಗೆ ಸರ್ವಾಧಿಕಾರದ ಮೇಲೆ ಇಷ್ಟವಿದೆ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿರುವ ಮೇ ಸಾಹಿತ್ಯ ಮೇಳದ ಎರಡನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ವಾಧಿಕಾರದ ಮೇಲೆ ಬಿಜೆಪಿಗರಿಗೆ ಎಷ್ಟು ಇಷ್ಟವಿದೆ ಎಂದರೆ ಇದಕ್ಕೆ ಜ್ವಲಂತ ಸಮಸ್ಯೆ ಪೆಟ್ರೋಲ್ ಬೆಲೆ ಹೆಚ್ಚಾದರೂ ಅದನ್ನು ಬೆಂಬಲಿಸುವ ವಿದ್ಯಾರ್ಥಿಗಳಿದ್ದಾರೆ. ಮೋದಿಯನ್ನು ನೋಡಿ ಮತ ಹಾಕುತ್ತಾರೆ […]

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ ಉದಾಹರಣೆ ಇಲ್ಲ

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ ಉದಾಹರಣೆ ಇಲ್ಲ

ಸುದ್ದಿಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ ಹೇಳಿಕೆ ಧಾರವಾಡ: ಕಳೆದ ಭಾರಿಗಿಂತ ಕಡಿಮೆ ಸ್ಥಾನಗಳನ್ನು ಪಡೆದ ಜೆಡಿಎಸ್ ಪಕ್ಷಕ್ಕೆ ದೈವ ಬಲದಿಂದ ಅಧಿಕಾರದ ಗದ್ದುಗೆ ಏರುವ ಅವಕಾಶ ಒದಗಿ ಬಂದಿದೆ. ನಾನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿರುವ ಸಾಕಷ್ಟು ಉದಾಹರಣೆಗಳಿವೆ ಆದರೆ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯೂ ಹೇಳಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. […]

ಭಾವುಕರಾಗಿ ಕಣ್ಣಂಚಲ್ಲಿ ನೀರು ತಂದ ಮಾಜಿ ಸಚಿವ ವಿನಯ ಕುಲಕರ್ಣಿ

ಭಾವುಕರಾಗಿ ಕಣ್ಣಂಚಲ್ಲಿ ನೀರು ತಂದ ಮಾಜಿ ಸಚಿವ ವಿನಯ ಕುಲಕರ್ಣಿ

ಧಾರವಾಡ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ವಿರುದ್ಧ ಸುಮಾರು 20 ಸಾವಿರ ಮತಗಳ ಅಂತರದಿಂದ ಸೋಲುಂಡಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಭಾವುಕರಾದ ಘಟನೆ ನಡೆಯಿತು. ಇಲ್ಲಿನ ರಪಾಟಿ ಕಲ್ಯಾಣ ಮಂಟಪದಲ್ಲಿ ವಿನಯ ಕುಲಕರ್ಣಿ ಅವರು ಹಮ್ಮಿಕೊಂಡಿದ್ದ ಧಾರವಾಡ-71 ಮತಕ್ಷೇತ್ರದ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಅವರು ಭಾವುಕರಾಗಿ ಕಣ್ಣಲ್ಲಿ ನೀರು ತಂದ ಪ್ರಸಂಗ ನಡೆಯಿತು. ಸಾಕಷ್ಟು ಜನ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ […]

ನಾಳೆ ಬೆಂಬಲವಿಲ್ಲದ ಬಂದ್?

ನಾಳೆ ಬೆಂಬಲವಿಲ್ಲದ ಬಂದ್?

ಬೆಂಗಳೂರು: ರೈತರ ಸಾಲ ಮನ್ನಾ ವಿಷಯ ಮುಂದಿಟ್ಟುಕೊಂಡು ನಾಳೆ ಬಿಜೆಪಿ ಬಂದ್ ಘೋಷಣೆ ಮಾಡಿದೆ. ಆದರೆ ನಾಳೆ ನಡೆಯಲಿರುವ ಬಿಜೆಪಿ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡುವುದಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಬಿಜೆಪಿ ನಾಟಕೀಯ ನಡೆಗೆ ಬಹುತೇಕ ಎಲ್ಲ ಸಂಘಟನೆಗಳು ಹಿಂದೆ ಸರಿದಿವೆ ಎಂಬುದು ಸ್ಪಷ್ಟಗೋಚರವಾಗುತ್ತಿದೆ. ಹೌದು… ಮೇ. 25 ರಂದು ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ರಾಜಾರೋಶವಾಗಿ  ಭಾಷಣ ಮಾಡಿ ಸೋಮವಾರದೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದಲ್ಲಿ […]

ಗಜೇಂದ್ರಗಡದಲ್ಲಿ ವರುಣನ ಆರ್ಭಟ: ಬಿತ್ತನೆ ಕಾರ್ಯದಲ್ಲಿ ತಲ್ಲಿಣರಾದ ರೈತ ಸಮೂಹ

ಗಜೇಂದ್ರಗಡದಲ್ಲಿ ವರುಣನ ಆರ್ಭಟ: ಬಿತ್ತನೆ ಕಾರ್ಯದಲ್ಲಿ ತಲ್ಲಿಣರಾದ ರೈತ ಸಮೂಹ

ಗಜೇಂದ್ರಗಡ: ಕಳೆದ ಮೂರ್ನಾಲ್ಕು ದಿನದಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಾಗಿದ್ದು,  ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯದಲ್ಲಿ ರೈತರು ತಲ್ಲಿಣರಾಗಿದ್ದಾರೆ. ಮುಂಗಾರು ಹಂಗಾಮಿನ ವಾಣಿಜ್ಯ ಬೆಳೆಗಳಾದ ಶೆಂಗಾ, ಸೂರ್ಯಕಾಂತಿ, ಗೊವಿನಜೋಳ, ಹೈಬ್ರೀಡ್ ಜೋಳ, ಸಜ್ಜಿ, ತೊಗರಿ, ಹೆಸರು ಬಿತ್ತನೆಗೆ ಅತಿ ಅವಶ್ಯ ಹಾಗೂ ಪ್ರಾಮುಖ್ಯತೆ ಪಡೆದಿದ್ದ ರೋಹಿಣಿ ಮಳೆಗಳು ಉತ್ತಮವಾಗಿ ಸುರಿಯುತ್ತಿರುವ ಪರಿಣಾಮ ರೈತಾಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ರೈತರು ಬಿತ್ತುವ ಬೀಜಗಳನ್ನು ತಂದು ಬಟ್ಟಲಿನ ಮುಖಾಂತರ ಹುರಿದುಂಬಿಸುವ ಕರಿಯತ್ತ ಕಾಳಿಂಗ ಬಿಳಿಯತ್ತ ಮಾಲಿಂಗ […]

ವಿಳಂಬ ಮಾಡದೆ ರೈತರಿಗೆ ಬಿತ್ತನೆ ಬೀಜ ವಿತರಿಸಿ: ಶಾಸಕ ಕೌಜಲಗಿ ಸೂಚನೆ

ವಿಳಂಬ ಮಾಡದೆ ರೈತರಿಗೆ ಬಿತ್ತನೆ ಬೀಜ ವಿತರಿಸಿ: ಶಾಸಕ ಕೌಜಲಗಿ ಸೂಚನೆ

ಬೈಲಹೊಂಗಲ: ಮುಂಗಾರು ಹಂಗಾಮಿನ ಬಿತ್ತೆನೆಗೆ ಸಜ್ಜಾಗಿರುವ ರೈತರಿಗೆ ವಿನಾಕಾರಣ  ಸತಾಯಿಸದೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿ. ಒಂದು ವೇಳೆ ರೈತರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದ್ದಾರೆ. ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ರವಿವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಮುಂಗಾರು ಹಂಗಾಮಿನ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಮುಂಗಾರು ಹಂಗಾಮಿಗೆ ವರುಣ ಕೃಪೆಯಿಂದ ಈ ಬಾರಿ ಮತಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಮಳೆ ಆಗಿದ್ದು, ರೈತರ […]

ಸಿಎಂ ಎಚ್ಡಿಕೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿದರು ಬಂದ್ ನಿಲ್ಲಲ್ಲ: ಶ್ರೀರಾಮುಲು

ಸಿಎಂ ಎಚ್ಡಿಕೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿದರು ಬಂದ್ ನಿಲ್ಲಲ್ಲ: ಶ್ರೀರಾಮುಲು

ರಾಯಚೂರು: ಸಿಎಂ ಕುಮಾರಸ್ವಾಮಿ ನಮ್ಮನ್ನು ಜೈಲಿಗೆ ಹಾಕಿಸಲಿ, ಲಾಠಿ ಚಾರ್ಜ್ ಮಾಡಿಸಿದರು ಕೂಡ ನಾಳೆ ನಾವು ಬಂದ ಮಾಡೇ ತೀರುತ್ತೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಕರ್ನಾಟಕ ಬಂದ್ ನಡೆಯಲಿದೆ. ಬಂದ್ ಗೆ ರೈತರ ಬೆಂಬಲ ಕೂಡ ಸಿಗಲಿದೆ. ಸಮ್ಮಿಶ್ರ ಸರ್ಕಾರ ರೈತ ವಿರೋಧಿ ನೀತಿಯಿಂದ ನಾಳೆ ನಾವು ಸ್ವಯಂ ಪ್ರೇರಿತ ಬಂದ್ ಕರೆ ಕೊಟ್ಟಿದ್ದೇವೆ. ಎಚ್‌ಡಿಕೆ ಅದೃಷ್ಟದಲ್ಲಿ ಸಿಎಂ ಆಗಿದ್ದಾರೆ. ವಾಮಮಾರ್ಗದಲ್ಲಿ ರಚನೆಯಾಗಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ […]

1 82 83 84 85 86 288