ವಾಜಪೇಯಿ ದಕ್ಷ ಆಡಳಿತಗಾರ, ಬಲಿಷ್ಠ ರಾಜಕೀಯ ನೇತಾರ !

ವಾಜಪೇಯಿ ದಕ್ಷ ಆಡಳಿತಗಾರ, ಬಲಿಷ್ಠ ರಾಜಕೀಯ ನೇತಾರ !

ಹೊಸದಿಲ್ಲಿ:ದೀರ್ಘ ಕಾಲೀನ ಅನಾರೋಗ್ಯದಿಂದ ನಿನ್ನೆ ಸಂಜೆ ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಬ್ಬ ದಕ್ಷ ಆಡಳಿತಗಾರ, ಬಲಿಷ್ಠ ರಾಜಕೀಯ ನೇತಾರ, ನಿಖರ ನಿರ್ಧಾರ ಕೈಗೊಳ್ಳುವ ವ್ಯಕ್ತಿ ಜತೆಗೆ ಅವರೊಬ್ಬ ಕವಿ, ಸಂಗೀತ ಪ್ರಿಯ, ಪತ್ರಕರ್ತ, ಸಿನಿಮಾ ಪ್ರಿಯ,  ಆಹಾರ ಪ್ರಿಯ… ಇತ್ಯಾದಿ, ಇತ್ಯಾದಿ….!! ಮತ್ತೊಬ್ಬರೊಂದಿಗೆ ಸುಲಭವಾಗಿ ಬೆರೆಯುವ ಪ್ರವೃತ್ತಿ ಹೊಂದಿದ್ದ ವಾಜಪೇಯಿ, ಅತ್ಯಂತ ಸ್ನೇಹ ಜೀವಿ. ಜತೆಗೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಮೃದು ಹೃದಯಿ ಯಾಗಿದ್ದರು. ವಾಜಪೇಯಿ ಒಬ್ಬ ಅದ್ಭುತ ಭಾಷಣಕಾರ. ತನ್ನ […]

ಇಂದಿನಿಂದ ಏಳು ದಿನಗಳ ಶೋಕಾಚರಣೆ !

ಇಂದಿನಿಂದ ಏಳು ದಿನಗಳ ಶೋಕಾಚರಣೆ !

ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಇಂದಿನಿಂದ  ಆಗಸ್ಟ್ 22 ರ ವರೆಗೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಲು ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ರಾಷ್ಟ್ರನಾಯಕನಿಗೆ ಗೌರವ ಸಲ್ಲಿಸಲು ಸಂಪುಟ ನಿರ್ಧರಿಸಿದೆ. Mahantesh Yallapurmathhttp://Udayanadu.com

ಇಂದು ರಾಜ್ಯಾದ್ಯಂತ ಸರಕಾರಿ ರಜೆ ಘೋಷಣೆ

ಇಂದು ರಾಜ್ಯಾದ್ಯಂತ ಸರಕಾರಿ ರಜೆ ಘೋಷಣೆ

ಬೆಂಗಳುರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ  ಸರಕಾರಿ ರಜೆ ಘೋಷಿಸಲಾಗಿದೆ. ಮಾಜಿ ಪ್ರಧಾನಿ ನಿಧನಕ್ಕೆ ಗೌರವ ಸೂಚಿಸಲು ಇಂದು ರಾಜ್ಯಾದ್ಯಂತ ಎಲ್ಲ ಸರಕಾರಿ ಕಚೇರಿಗಳ ಮೇಲೆ ಅರ್ಧಕ್ಕೆ ಧ್ವಜ  ಹಾರಿಸುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೂಚಿಸಿದ್ದಾರೆ. Mahantesh Yallapurmathhttp://Udayanadu.com

ವಾಜಪೇಯಿ ನಿಧನಕ್ಕೆ ರಾಹುಲ್ ಕಂಬನಿ

ವಾಜಪೇಯಿ ನಿಧನಕ್ಕೆ ರಾಹುಲ್ ಕಂಬನಿ

ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲಗಾಂಧಿ ಕಂಬನಿ ಮಿಡಿದಿದ್ದಾರೆ. ವಾಜಪೇಯಿ ಅಗಲಿಕೆಯಿಂದ ದೇಶ ಒಬ್ಬ ಮೇಧಾವಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ರಾಹುಲ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. Mahantesh Yallapurmathhttp://Udayanadu.com

ಸಂಜೆ ಕೇಂದ್ರ ಸಂಪುಟದ ತುರ್ತು ಸಭೆ

ಸಂಜೆ ಕೇಂದ್ರ ಸಂಪುಟದ ತುರ್ತು ಸಭೆ

ಹೊಸದಿಲ್ಲಿ: ಇಂದು ಸಂಜೆ ನಿಧನರಾದ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ಸಂತಾಪ ಸೂಚಿಸಲು ಕೇಂದ್ರ ಸಚಿವ ಸಂಪುಟ ಸಂಜೆ 6. 30 ಕ್ಕೆ ತುರ್ತು ಸಭೆ ನಡೆಸಲಿದೆ. ದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ತುರ್ತು ಸಭೆ ನಡೆಯಲಿದ್ದು, ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸಿ , ರಾಷ್ಟ್ರೀಯ  ಶೋಕಾಚರಣೆ ಕುರಿತಂತೆ ಸಭೇಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. Mahantesh Yallapurmathhttp://Udayanadu.com

ವಾಜಪೇಯಿ ನಿವಾಸದಲ್ಲಿ ಅಂತಿಮ ದರ್ಶನ, ನಾಳೆ ಸಂಜೆ ಅಂತ್ಯಕ್ರಿಯೆ

ವಾಜಪೇಯಿ ನಿವಾಸದಲ್ಲಿ ಅಂತಿಮ ದರ್ಶನ, ನಾಳೆ ಸಂಜೆ ಅಂತ್ಯಕ್ರಿಯೆ

ಹೊಸದಿಲ್ಲಿ: ತೀವ್ರ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಫಲಿಸದೇ ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಸಂಜೆ ಕೊನೆಯುಸಿರೆಳೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ಇರಿಸಲಾಗುತ್ತಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ವಾಜಪೇಯಿ ಪಾರ್ಥಿವ ಶರೀರವನ್ನು ಕೃಷ್ಣ ಮೆನನ್ ರಸ್ತೆಯಲ್ಲಿರುವ  ಅವರ ನಿವಾಸಕ್ಕೆ ರವಾನಿಸಲಾಗುತ್ತದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರದಾನ, ರವಿಶಂಕರ ಪ್ರಸಾದ , ಜಿತೇಂದ್ರ ಸಿಂಗ್ ಅವರು ಅಂತಿಮ ದರ್ಶನದ ವ್ಯವಸ್ಥೆ ಮಾಡುತ್ತಿದ್ದಾರೆ. ನಾಳೆ ಬಿಜೆಪಿ ಕಚೇರಿಯಲ್ಲಿಯೂ ಪಾರ್ಥಿವ […]

ವಾಜಪೇಯಿ ನಿಧನಕ್ಕೆ ಮೋದಿ ಕಂಬನಿ

ವಾಜಪೇಯಿ ನಿಧನಕ್ಕೆ ಮೋದಿ ಕಂಬನಿ

ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಮೋದಿ, ವಾಜಪೇಯಿ ಆತ್ಮಕ್ಕೆ ದೇವರು ಶಾಂತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ. ಅಟಲಜಿ ಅವರು ನಮ್ಮ ನಡುವೆ ಇನ್ನಿಲ್ಲ, ಆದರೆ ಅವರ ಪ್ರೇರಣೆ, ಮಾರ್ಗದರ್ಶನ ಪ್ರತಿ ಭಾರತೀಯ ಮತ್ತು ಬಿಜೆಪಿ ಕಾರ್ಯಕರ್ತರ ಜೊತೆ ಸದಾ ಇರುತ್ತದೆ ಎಂದು ಹೇಳಿದ್ದಾರೆ. Mahantesh Yallapurmathhttp://Udayanadu.com

ವಾಜಪೇಯಿ ನಿಧನಕ್ಕೆ ಸತೀಶ ಜಾರಕಿಹೊಳಿ ಸಂತಾಪ

ವಾಜಪೇಯಿ ನಿಧನಕ್ಕೆ ಸತೀಶ ಜಾರಕಿಹೊಳಿ ಸಂತಾಪ

ಬೆಳಗಾವಿ: ಭಾರತರತ್ನ, ಅಜಾತ ಶತ್ರು , ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ನಿಧನಕ್ಕೆ ಯಮಕನಮರಡಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೋಖ್ರಾನ್ ಅಣು ಪರೀಕ್ಷೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ ಮುಂತಾದವು ವಾಜಪೇಯಿ ಅವರ ದೂರದೃಷ್ಟಿಯ ಫಲವಾಗಿದ್ದವು ಎಂದು ಜಾರಕಿಹೊಳಿ ತಮ್ಮ ಶೋಕ ಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ. ವಾಜಪೇಯಿ ಒಬ್ಬ ಅಪ್ರತಿಮ ಸಾಧಕ.  ಶ್ರೇಷ್ಠ ವಾಗ್ಮಿ, ಚಿಂತಕ ಹಾಗೂ […]

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ-ಗಾಳಿ: 8 ಜನರ ಸಾವಿನ ಶಂಕೆ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ-ಗಾಳಿ: 8 ಜನರ ಸಾವಿನ ಶಂಕೆ

ಕೊಡಗು: ನೆರೆಯ ಕೇರಳ ರಾಜ್ಯದಲ್ಲಿ ಕಂಡರಿಯದ ಪ್ರವಾಹ 75 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ಭೂಕುಸಿತ, ಮನೆಗಳ ಕುಸಿತದ ಸುದ್ದಿ ಗಾಬರಿ ಮೂಡಿಸಿರುವ ನಡುವೆಯೇ ಇದೀಗ ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆ -ಗಾಳಿ ಬೀಸುತ್ತಿದ್ದು ತೀವ್ರ ಆತಂಕ ಮೂಡಿಸಿದೆ. 8 ಕ್ಕೂ ಹೆಚ್ಚು ಜನರು ಮಳೆಗೆ ಬಲಿಯಾಗಿರಬಹುದೆಂದು ಶಂಕಿಸಲಾಗಿದ್ದು, 500 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿರುವ ವರದಿಗಳು ಬಂದಿವೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, 100 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. Mahantesh Yallapurmathhttp://Udayanadu.com

ಶಾಹು ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸತೀಶ ಜಾರಕಿಹೊಳಿ

ಶಾಹು ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸತೀಶ ಜಾರಕಿಹೊಳಿ

ಬೆಳಗಾವಿ: ಸಾಮಾಜಿಕ ಪ್ರಭುತ್ವದ ರೂವಾರಿ, ಮಹಾನ್ ದಾರ್ಶನಿಕ ಶಾಹೂ ಮಹಾರಾಜ ಅವರ ಪುತ್ಥಳಿಯನ್ನು ಬೆಳಗಾವಿ ಶಹರದಲ್ಲಿ ಪ್ರತಿಷ್ಠಾಪಿಸಲು ಶಾಸಕ ಸತೀಶ ಜಾರಕಿಹೊಳಿ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು. ಕೆೆಎಲ್ ಇ ಬಳಿ ಮತ್ತು ರಾಷ್ಟ್ರೀಯ  ಹೆದ್ದಾರಿ 4 ರ ಬಳಿ ಮೇಯರ್ ಬಸವರಾಜ ಚಿಕ್ಕಲದಿನ್ನಿ , ಮಾಜಿ ಮೇಯರ್ ಸಾಯಿ ನಾಯಕ, ಪಾಲಿಕೆ ಸದಸ್ಯೆ ಸರಳಾ ಹೇರೇಕರ, ಸೊಂಟಕ್ಕಿ, ಕಾಂಗ್ರೆಸ್ ಮುಖಂಡ ಹಾಸೀಮ ಬಾವಿಕಟ್ಟಿ, ಪಾಲಿಕೆ ಆಯುಕ್ತ ಶಶಿಧರ್ ಕುರೇರ ಅವರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಯಿತು. […]

1 2 3 195