ಬಿಜೆಪಿ ಸೋಲಿಸಲು ಅವ್ರೆಲ್ಲ ಒಂದಾಗ್ತಾರಾ ??!

ಬಿಜೆಪಿ ಸೋಲಿಸಲು ಅವ್ರೆಲ್ಲ ಒಂದಾಗ್ತಾರಾ ??!

ಹೊಸದಿಲ್ಲಿ: ಮುಂಬರುವ ಲೋಕಸಭಾ (2019) ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ತಾವೆಲ್ಲ ಒಂದಾಗುವ ಕುರಿತಂತೆ ಮೂರು ರಾಜಕೀಯ ಪಕ್ಷಗಳ ನೇತಾರರು ಇಂದು ಮಾತುಕತೆ ನಡೆಸಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ತೆಲಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ ಪವಾರ ಗುರುವಾರ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ […]

ಯಡಿಯೂರಪ್ಪಗೆ ಬರೆ ಕೊಡಬೇಕು ಎಂದ್ರು ಕಾಗೋಡು !

ಯಡಿಯೂರಪ್ಪಗೆ ಬರೆ ಕೊಡಬೇಕು ಎಂದ್ರು ಕಾಗೋಡು !

ಶಿವಮೊಗ್ಗ: ನವೆಂಬರ್ 3 ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆ ಕೊಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಕೋಣನಿಗೆ  ಕೊಡೋ ತರಹ ಬರೆ ಯಡಿಯೂರಪ್ಪಗೆ ಕೊಡಬೇಕು. ಸಾಯೋ ತನಕ ಅವರು ಅದನ್ನು ನೆನಪಿಡಬೇಕು ಎಂದೂ ತಿಮ್ಮಪ್ಪ ಶಿವಮೊಗ್ಗದಲ್ಲಿ ಹೇಳಿದರು. Views: 109

ಕ್ರೀಡಾಪಟುಗಳತ್ತ ಆಟದ ಸಾಮಗ್ರಿ ಎಸೆದು ದರ್ಪ ಮೆರೆದ್ರಾ ದೇಶಪಾಂಡೆ ?!

ಕ್ರೀಡಾಪಟುಗಳತ್ತ ಆಟದ ಸಾಮಗ್ರಿ ಎಸೆದು ದರ್ಪ ಮೆರೆದ್ರಾ ದೇಶಪಾಂಡೆ ?!

ಕಾರವಾರ : ಇತ್ತೀಚೆಗೆ ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ಪ್ಯಾಕೆಟ್ ಗಳನ್ನು ಎಸೆದು ಗೊಂದಲ ಮೂಡಿಸಿದ್ದ ಸಚಿವ ಎಚ್.ಡಿ. ರೇವಣ್ಣ ವಿಷಯ ಇನ್ನೂ ನೆನಪಿನಿಂದ ಮಾಸದಿರುವ ಮುಂಚೆಯೇ ಸಚಿವ ಆರ್ .ವಿ. ದೇಶಪಾಂಡೆ ಇಂಥಹುದ್ದೇ ಒಂದು ಹೊಸ ಯಡವಟ್ಟು ಮಾಡಿಕೊಂಡಿದ್ದಾರೆ. ಕ್ರೀಡಾಪಟುಗಳನ್ನು ಸನ್ಮಾನ ಮಾಡಲೆಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ದೇಶಪಾಂಡೆ ಕ್ರೀಡಾ ಸಾಮಗ್ರಿಗಳನ್ನು ವೇದಿಕೆಯಿಂದಲೇ ಎಸೆದು ದರ್ಪ ಮೆರೆದಿದ್ದಾರೆ. ರಾಜ್ಯ , ರಾಷ್ಟ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳತ್ತ […]

ವಿಡಿಯೋ: ಚೆನ್ನಮ್ಮನ ಪ್ರತಿಮೆಗೆ ಪುಷ್ಪವೃಷ್ಟಿ: ಕನ್ನಡಾಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ !

ಬೆಳಗಾವಿ: ಇಂದು ನಡೆದ 63 ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿ ಆಚರಣೆ ಕಾಲಕ್ಕೆ ಇದೇ ಮೊದಲ ಬಾರಿ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಪ್ರತಿಮೆಗೆ ಹೆಲಿಕ್ಯಾಪ್ಟರ್ ಮೂಲಕ  ಹೂಮಳೆ ಸುರಿಸಲಾಯಿತು. ಈ ಸಂದರ್ಭದಲ್ಲಿ ಸೇರಿದ್ದ ಸಾವಿರಾರು ಕನ್ನಡಾಭಿಮಾನಿಗಳು ಚೆನ್ನಮ್ಮನ ಪರ, ಕನ್ನಡಪರ ಘೋಷಣೆ ಕೂಗಿ, ಕುಣಿದು -ಕುಪ್ಪಳಿಸಿ ಸಂಭ್ರಮಿಸಿದರು. Views: 173

ಬಳ್ಳಾರಿ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ ಏನೇನು ಹೇಳಿದ್ರು ಗೊತ್ತಾ ??

ಬಳ್ಳಾರಿ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ ಏನೇನು ಹೇಳಿದ್ರು ಗೊತ್ತಾ ??

ಬಳ್ಳಾರಿ: ನವೆಂಬರ್ 3 ರಂದು ನಡೆಯಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು ವಿ.ಎಸ್. ಉಗ್ರಪ್ಪ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡಿ, ನಾವು ಬಳ್ಳಾರಿ ಜನತೆಯ ಋಣ ತೀರಿಸುತ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯೊಂದೇ ತಮ್ಮ ಗುರಿ ಎಂದು ಹೇಳಿಕೊಂಡರು. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ತಾವು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಯತ್ನ ಮಾಡುವುದಾಗಿ […]

ಶಿಮ್ಲಾದಲ್ಲೂ ಮೊಳಗಿದ ಕನ್ನಡ ಘೋಷಣೆ !

ಶಿಮ್ಲಾದಲ್ಲೂ ಮೊಳಗಿದ ಕನ್ನಡ ಘೋಷಣೆ !

ಶಿಮ್ಲಾ (ಹಿಮಾಚಲಪ್ರದೇಶ) : ಶಿಮ್ಲಾದಲ್ಲಿ ನಡೆಯುತ್ತಿರುವ ಎಸ್.ಎಫ್.ಐ ನ 16 ನೇ ಅಖಿಲ ಭಾರತ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಗಳು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು. ಬಾರಿಸು ಕನ್ನಡ ಡಿಂಡಿಂವ ಘೋಷಣೆ ಮೊಳಗಿಸಿದ ಪ್ರತಿನಿಧಿಗಳು ಹಚ್ಚೇವು ಕನ್ನಡದ ದೀಪ ಹಾಡುವ ಮೂಲಕ ಆಚರಣೆಗೆ ಮೆರಗು ತಂದರು. ಎಸ್.ಎಫ್.ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ ಸಾನು ಕನ್ನಡದಲ್ಲಿ ರಾಜ್ಯದ ಜನತೆಗೆ ರಾಜ್ಯೋತ್ಸವದ ಶುಭಾಶಯ ಹಾರೈಸಿದ್ದು ವಿಶೇಷ ಗಮನ ಸೆಳೆಯಿತು. ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು, ಅವುಗಳನ್ನು ಬಲಪಡಿಸಿ ಶಿಕ್ಷಣ ಉಳಿಸುವ ಕೆಲಸವನ್ನು […]

ಪೊಲೀಸ್ ಅಧಿಕಾರಿಯನ್ನೇ ಥಳಿಸಿಬಿಟ್ರಾ ವಕೀಲ್ರು ??!!

ಪೊಲೀಸ್ ಅಧಿಕಾರಿಯನ್ನೇ ಥಳಿಸಿಬಿಟ್ರಾ ವಕೀಲ್ರು ??!!

ಸೀತಾಪುರ (ಉತ್ತರ ಪ್ರದೇಶ):ಪೊಲೀಸ್ ಸಿಬ್ಬಂದಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ 12 ಜನ ವಕೀಲರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೆಲವು ವಕೀಲರು ಪೊಲೀಸ್ ಅಧಿಕಾರಿಯೊಬ್ಬರನ್ನು ಶೂ ನಿಂದ ಹೊಡೆಯುವ ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲಾ ನ್ಯಾಯಾಧೀಶ ರಾಜೇಂದ್ರ ಪ್ರಸಾದ ಅವರ ಕೊಠಡಿಯಲ್ಲೇ ಈ ಹಲ್ಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. . Views: 358

ಕೊನೆ ಗಳಿಗೆಯಲ್ಲಿಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರಿದ ಅಭ್ಯರ್ಥಿ: ಬಿಜೆಪಿಗೆ ಬಿಗ್ ಶಾಕ್ !!

ಕೊನೆ ಗಳಿಗೆಯಲ್ಲಿಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರಿದ ಅಭ್ಯರ್ಥಿ: ಬಿಜೆಪಿಗೆ ಬಿಗ್ ಶಾಕ್ !!

ಬೆಂಗಳೂರು:  ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ . ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿದಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಚುನಾವಣೆಗೆ ಸ್ವಲ್ಪ ದಿನ ಮೊದಲಷ್ಟೇ  ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದ ಚಂದ್ರಶೇಖರ್ ,ಮತದಾನಕ್ಕೆ ಎರಡೇ ದಿನ ಬಾಕಿ ಇರುವಾಗ ಕಣದಿಂದಲೇ ಹಿಂದೆ ಸರಿಯುವ  ಮೂಲಕ ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಸದಾಶಿವನಗರದಲ್ಲಿ ಗುರುವಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್ ಬಿಜೆಪಿ ನಾಯಕರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಹದಿನೈದು ದಿನಗಳಲ್ಲಿಯೇ ತಮಗೆ […]

ಜಮಖಂಡಿಯಲ್ಲಿ ಇಂದು ಕೈ-ಕಮಲ ಸಮಾವೇಶ

ಜಮಖಂಡಿಯಲ್ಲಿ ಇಂದು ಕೈ-ಕಮಲ ಸಮಾವೇಶ

ಜಮಖಂಡಿ: ನವೆಂಬರ್ 3 ರಂದು ನಡೆಯಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ನಗರದಲ್ಲಿ ಬೃಹತ್ ಬಹಿರಂಗ ಸಭೆಗಳನ್ನು ಹಮ್ಮಿಕೊಂಡಿವೆ. ಮೆರವಣಿಗೆ ನಂತರ ಪೊಲೋ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲಾಗುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಇತರ ನಾಯಕರು ಆನಂದ ನ್ಯಾಮಗೌಡ ಪರ ಮತಯಾಚಿಸುವರು. ಇನ್ನೊಂದೆಡೆ ಬಿಜೆಪಿ ಕೂಡ ಮೆರವಣಿಗೆ ನಡೆಸಿದ ನಂತರ ಬಸವಭವನದಲ್ಲಿ ಸಭೆ ಆಯೋಜಿಸಿದ್ದು, ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ […]

ನಾಡಿನಾದ್ಯಂತ ಇಂದು ರಾಜ್ಯೋತ್ಸವ ಸಂಭ್ರಮ

ನಾಡಿನಾದ್ಯಂತ ಇಂದು ರಾಜ್ಯೋತ್ಸವ ಸಂಭ್ರಮ

ಬೆಂಗಳೂರು:ರಾಜ್ಯಾದ್ಯಂತ ಇಂದು 63 ನೇ ರಾಜ್ಯೋತ್ಸವದ ಸಂಭ್ರಮ. ಬೆಂಗಳೂರಿನ ಕಂಠೀರಣ ಕ್ರೀಡಾಂಗಣದಲ್ಲಿ ಮುಖ್ಯ ಆಚರಣೆ ನಡೆಯಲಿದೆ. ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಸಿಎಂ ಕುಮಾರಸ್ವಾಮಿ ನಾಡಧ್ವಜ ಮತ್ತು ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ವಿವಿಧ ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ. ರಾಜ್ಯೋತ್ಸವ ನಿಮಿತ್ತ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. Views: 137