ಉಪಚುನಾವಣೆ ಪ್ರಚಾರ: ಇಂದು ಕಡೆಯ ಆಟ

ಉಪಚುನಾವಣೆ ಪ್ರಚಾರ: ಇಂದು ಕಡೆಯ ಆಟ

ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಕೊನೆಗೊಳ್ಳಲಿದೆ. ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗುವುದು. ಬಳ್ಳಾರಿಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿರುವ ಕಾಂಗ್ರೆಸ್ ಪಕ್ಷ ವಿ.ಎಸ್. ಉಗ್ರಪ್ಪ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಹಾಗೆಯೇ ಶಿವಮೊಗ್ಗ ಕ್ಷೇತ್ರದಲ್ಲಿಯೂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಸೋಲಿಸಲು ಮಧು ಬಂಗಾರಪ್ಪ ಬೆನ್ನಿಗೆ […]

ನಾಡಿನ ಜನತೆಗೆ ಸತೀಶ ಜಾರಕಿಹೊಳಿ ರಾಜ್ಯೋತ್ಸವ ಶುಭಾಶಯ

ನಾಡಿನ ಜನತೆಗೆ ಸತೀಶ ಜಾರಕಿಹೊಳಿ ರಾಜ್ಯೋತ್ಸವ ಶುಭಾಶಯ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ  ಯಮಕನಮರಡಿ ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಕನ್ನಡಿಗರು ಎಂದೆಂದಿಗೂ ಒಗ್ಗಟ್ಟಾಗಿರೋಣ ಎಂದು ಅವರು ಶುಭ ಸಂದೇಶದಲ್ಲಿತಿಳಿಸಿದ್ದಾರೆ. Views: 320

ಹಾಸನಾಂಬಾ ದೇಗುಲ ಇಂದು ಓಪನ್ : ನಾಳೆಯಿಂದ ದರ್ಶನ ಭಾಗ್ಯ !

ಹಾಸನಾಂಬಾ ದೇಗುಲ ಇಂದು ಓಪನ್ : ನಾಳೆಯಿಂದ ದರ್ಶನ ಭಾಗ್ಯ !

ಹಾಸನ: ಇಲ್ಲಿನ ಶಕ್ತಿದೇವತೆ ಹಾಸನಾಂಬ ದೇಗುಲದ ಬಾಗಿಲು ಇಂದು ತೆರೆಯಲಿದ್ದು, ನಾಳೆಯಿಂದ ಸಾರ್ವಜನಿಕರಿಗೆ ದೇವಿ ದರ್ಶನ ಶುರುವಾಗಲಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಈ ದೇಗುಲ ಏಳು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿದೆ. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯರ ಅವತಾರವೆಂದೇ ಭಾವಿಸಲಾಗಿರುವ ದೇವಿಯ ದರ್ಶನ ಸಾಮಾನ್ಯವಾಗಿ ಮೊದಲ ದಿನ ಇರುವುದಿಲ್ಲ. ಇಂದು ಬಾಗಿಲು ತೆರೆದಾದ ಮೇಲೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲಾಗುತ್ತದೆ. ತಳವಾರ ಮನೆತನದವರಿಂದ ದೇಗುಲದ ಬಾಗಿಲಲ್ಲಿ ಬಾಳೆಕಂಬವನ್ನುಇಟ್ಟು ಇಂದು ಪೂಜೆ ನೆರವೇರಿಸಲಾಗುತ್ತದೆ. ನಾಳೆಯಿಂದ ಆರಂಭವಾಗುವ ದೇವಿದರ್ಶನ ನವೆಂಬರ್ […]

ಜನಾರ್ದನರೆಡ್ಡಿ ಮನುಷ್ಯತ್ವ ಇಲ್ಲದ ವ್ಯಕ್ತಿ ಎಂದು ಜರಿದ್ರು ಸಿದ್ರಾಮಯ್ಯ !

ಜನಾರ್ದನರೆಡ್ಡಿ ಮನುಷ್ಯತ್ವ  ಇಲ್ಲದ ವ್ಯಕ್ತಿ ಎಂದು ಜರಿದ್ರು ಸಿದ್ರಾಮಯ್ಯ !

ಶಿವಮೊಗ್ಗ: ಮಾಜಿ ಸಚಿವ ಜನಾರ್ದನ ರೆಡ್ಡಿ ಸಂಸ್ಕೃತಿ, ಮಾನವೀಯತೆ ಇಲ್ಲದ ವ್ಯಕ್ತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ರೆಡ್ಡಿ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದ ಅವರು, ಕುಟುಂಬದ ಬಗ್ಗೆ ಮಾತನಾಡುವುದು ಎಂತಹ ಸಂಸ್ಕೃತಿ ಎಂದು ಪ್ರಶ್ನಿಸಿದರು. ಜನಾರ್ದನರೆಡ್ಡಿ ಏನು ರಾಜವಂಶಸ್ಥರೇ ಎಂದೂ ಅವರು ಕುಟುಕಿದರು. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ, ರಾಘವೇಂದ್ರ ಆರಿಸಿ ಬಂದರೆ ಸರಕಾರ ಬದಲಾಗುತ್ತೆ ಅಂತಾರೆ. ಬಿಜೆಪಿಯವರ ಕೈಯಲ್ಲಿ ಏನಾದರೂ ಮಂತ್ರದಂಡವಿದೆಯಾ? ಇದ್ದರೆ ಅದು ಏಕೆ ವರ್ಕೌಟ್ ಆಗುತ್ತಿಲ್ಲ  ಎಂದು ಕೇಳಿದರು. ಜನಾರ್ದನರೆಡ್ಡಿ […]

ರಾಮುಲು ವಿರುದ್ಧ ದಾಖಲೆ ಬಿಡುಗಡೆ ಮಾಡ್ತಾರಾ ಡಿಕೆಶಿ?

ರಾಮುಲು ವಿರುದ್ಧ ದಾಖಲೆ ಬಿಡುಗಡೆ ಮಾಡ್ತಾರಾ ಡಿಕೆಶಿ?

ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಖಾಡಾ ಪೂರ್ಣ ರಂಗೇರಿದ್ದು, ದೋಸ್ತಿ ಪಕ್ಷಗಳು ಮತ್ತು ಬಿಜೆಪಿ ಜಿದ್ದಾಜಿದ್ದಿಗೆ ಬಿದ್ದಂತೆ ವರ್ತಿಸುತ್ತಿವೆ. ಬಿಜೆಪಿ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ವಿರುದ್ಧ ಕತ್ತಿ ಮಸೆಯುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಇಬ್ಬರ ವಿರುದ್ಧವೂ ಮಹತ್ವದ ದಾಖಲೆ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಇದಕ್ಕೆಂದೇ ನಾಳೆ ಸುದ್ದಿಗೋಷ್ಠಿ ಕರೆದಿರುವ ಡಿಕೆಶಿ ಇಬ್ಬರ ವಿರುದ್ಧ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತೀಕಾರವೆಂಬಂತೆ ಇನ್ನೊಂದೆ ಡಿಕೆಶಿ ಸುದ್ದಿಗೋಷ್ಠಿ ನಂತರ ಪತ್ರಿಕಾಗೋಷ್ಠಿ […]

ಅಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 5.5 ಲಕ್ಷ ರೂ. ಮೌಲ್ಯದ ವಿದೇಶಿ ಮದ್ಯ !

ಅಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 5.5 ಲಕ್ಷ ರೂ. ಮೌಲ್ಯದ ವಿದೇಶಿ ಮದ್ಯ !

ಹೈದರಾಬಾದ (ತೆಲಂಗಾಣ): ಹೈದರಾಬಾದ ಪೊಲೀಸರು ನಡೆಸಿದ ಮಿಂಚಿನ ದಾಳಿಯೊಂದರಲ್ಲಿ ಅಂದಾಜು 5.5 ಲಕ್ಷ ರೂ. ಮೌಲ್ಯದ 96 ವಿದೇಶಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಬೇಗಂಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲರಾಮಯ್ಯ ಆರ್ಚ ಬಳಿ ನಡೆದ ದಾಳಿಯಲ್ಲಿ ಕಾರೊಂದರಲ್ಲಿ ಅಡಗಿಸಿಟ್ಟಿದ್ದ 96 ವಿದೇಶಿ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಾನಿ ವಾಕರ್ (12 ಬಾಟಲಿಗಳು), ಗ್ಲೆನಿವೆಟ್ (12), ಸಿರೋಕ್ (12), ಗ್ಲೆನ್ ಫೆಡಿ (12), ಜಗೇರ್ ಮಿಸ್ಟೆನ್ (12), ಗ್ಲೆನ್ ಫೆಡಿ ಗ್ರೀನ್ (12) ಹಾಗೂ ಗ್ಲೆನ್ […]

ದುನಿಯಾ ವಿಜಿ ಮೊದಲ ಪತ್ನಿ ಎಲ್ಲೋದ್ರು? ನಿಲ್ಲದ ಪೊಲೀಸರ ಹುಡುಕಾಟ !

ದುನಿಯಾ ವಿಜಿ ಮೊದಲ ಪತ್ನಿ ಎಲ್ಲೋದ್ರು? ನಿಲ್ಲದ ಪೊಲೀಸರ ಹುಡುಕಾಟ !

ಬೆಂಗಳೂರು: ವಿವಾದದ ಸುಳಿಯಲ್ಲಿ ಸಿಲುಕಿರುವ ನಟ ದುನಿಯಾ ವಿಜಯ ಅವರ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿರುವ ಮೊದಲ ಪತ್ನಿ ನಾಗರತ್ನ ಎಲ್ಲಿದ್ದಾರೆ? ನಾಗರತ್ನಾ ಮೇಲೆ ಹಲ್ಲೆ ಪ್ರಕರಣ ದಾಖಲಾಗಿ ನಾಲ್ಕು ದಿನಗಳು ಸಂದಿದ್ದರೂ ಬೆಂಗಳೂರಿನ ಗಿರಿನಗರ ಪೊಲೀಸರಿಗೆ ಈ ಪ್ರಶ್ನೆ ಕಾಡುವುದು ಬಿಟ್ಟಿಲ್ಲ. ನಾಗರತ್ನಾಗಾಗಿ ನಿತ್ಯವೂ ಶೋಧ ನಡೆಸಿರುವ ಗಿರಿನಗರ ಠಾಣೆ ಪೊಲೀಸರು, ಉಸ್ಸಪ್ಪಾ ಎನ್ನುವ ಸ್ಥಿತಿ ತಲುಪಿದ್ದಾರೆ. ನಾಗರತ್ನಾ ಮನೆಗೆ ನಿತ್ಯ ಎಡತಾಕುತ್ತಿರುವ ಪೊಲೀಸರು ಗೇಟಿಗೆ ಜಡಿದ ಬೀಗ […]

ಕರಾಳ ದಿನಾಚರಣೆಗೆ ಪುಂಡ ಮರಾಠಿಗರಿಗೆ ಸಿಗುತ್ತಾ ಅವಕಾಶ ?

ಕರಾಳ ದಿನಾಚರಣೆಗೆ ಪುಂಡ ಮರಾಠಿಗರಿಗೆ ಸಿಗುತ್ತಾ ಅವಕಾಶ ?

ಬೆಳಗಾವಿ: ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಜಿಲ್ಲಾಡಳಿತ ಅನುಮತಿ ನೀಡುತ್ತಾ? ಈ ಕುತೂಹಲಕಾರಿ ಪ್ರಶ್ನೆಗೆ ಇಂದು ಸಂಜೆ 4 ಗಂಟೆ ನಂತರ ಉತ್ತರ ಸಿಗಲಿದೆ. ಪ್ರತಿವರ್ಷವೂ ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸುವುದು ಪುಂಡ ಮರಾಠಿಗರ ಪರಿಪಾಠ. ಆದರೆ, ಅದಕ್ಕೆ ಅವಕಾಶ ಕೊಡಬಾರದು ಎಂದು ಕನ್ನಡಪರ ಹೋರಾಟಗಾರರು ಪದೇ ಪದೇ ಮಾಡಿಕೊಳ್ಳುವ ಮನವಿಗೆ ಜಿಲ್ಲಾಡಳಿತ ಸ್ಪಂದಿಸುವುದೇ ಇಲ್ಲ ಎಂಬುದು ಸತತವಾಗಿ ಕೇಳಿಕೊಂಡು ಬಂದಿರುವ ದೂರು. ಈ ಬಾರಿಯೂ ಸಹ  ಹೇಳಿಕೊಳ್ಳಲು […]

ಇಂದು ಏಕತಾ ದಿನ: ಅತಿ ಎತ್ತರದ ಸರ್ದಾರ ಪ್ರತಿಮೆ ಲೋಕಾರ್ಪಣೆ

ಇಂದು ಏಕತಾ ದಿನ: ಅತಿ ಎತ್ತರದ ಸರ್ದಾರ ಪ್ರತಿಮೆ ಲೋಕಾರ್ಪಣೆ

ಹೊಸದಿಲ್ಲಿ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್ದಾರ್ ಪಟೇಲ್ ರ ಅತಿ ಎತ್ತರದ ಪ್ರತಿಮೆ ಇಂದು ಅನಾವರಣಗೊಳ್ಳಲಿದೆ. ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿರುವ ಪಟೇಲರ ಜನ್ಮದಿನವನ್ನು ಇಂದು ಏಕತಾ ದಿನ ಎಂದು ಆಚರಿಸುತ್ತಿರುವ ಮೋದಿ ಸರಕಾರ, ಬರೋಬ್ಬರಿ 182 ಮೀಟರ್ ಎತ್ತರದ ಪ್ರತಿಮೆಯನ್ನು ಇಂದು ಗುಜರಾತ್ ನಲ್ಲಿ ಅನಾವರಣಗೊಳಿಸಲಿದೆ. ಗುಜರಾತ್ ನರ್ಮದಾನ ಕೆವಾಡಿಯಾ ಗ್ರಾಮದ ಸರ್ದಾರ್ ಸರೋವರ ಅಣೆಕಟ್ಟು ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಬೆಳಗ್ಗೆ 10 […]

ಇಂದು ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಸಮಾವೇಶ

ಇಂದು ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಸಮಾವೇಶ

ಶಿವಮೊಗ್ಗ:ನವೆಂಬರ್ 3 ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವ ಬಿಜೆಪಿ ಇಂದು ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ. ಬಿಎಸ್ ವೈ ಪುತ್ರ ಬಿ.ವೈ. ರಾಘವೇಂದ್ರ ಕಣದಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಬಲ ಸ್ಪರ್ಧೆ ಒಡ್ಡಿದ್ದು, ಈ ಕ್ಷೇತ್ರದಲ್ಲಿ ಸೋಲುಣಿಸುವ ಮೂಲಕ ಬಿಎಸ್ ವೈ ರಾಜಕೀಯವನ್ನೇ ಮುಗಿಸಬೇಕು ಎಂದು ದೋಸ್ತಿ ಪಕ್ಷಗಳು ಹವಣಿಸುತ್ತಿವೆ. ಅದಕ್ಕೆಂದೇ ಮಾಜಿ ಪ್ರಧಾನಿ ದೇವೇಗೌಡ ತನ್ನ ಬದ್ಧ ವೈರಿಯಾಗಿದ್ದರೂ ಕಾಂಗ್ರೆಸ್ಸಿನ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು ಬಿಜೆಪಿ […]