“ಕೈ ” ಕಮಾಂಡ್ ಭೇಟಿ ಮಾಡ್ತಾರಾ ಕುಮಾರಸ್ವಾಮಿ?

“ಕೈ ” ಕಮಾಂಡ್ ಭೇಟಿ ಮಾಡ್ತಾರಾ ಕುಮಾರಸ್ವಾಮಿ?

ಹೊಸದಿಲ್ಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್  ಹೈಕಮಾಂಡ್ ಭೇಟಿ ಮಾಡಲು ಉದ್ದೇಶಿಸಿದ್ದಾರೆ. ರಾಜ್ಯ ಹೆದ್ದಾರಿ, ಮೇಕೆದಾಟು ಮೊದಲಾದ ಯೋಜನೆಗಳ ಕುರಿತು ಕೇಂದ್ರ ಸಚಿವರೊಡನೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಲುವಾಗಿ ಕಾಂಗ್ರೆಸ್ ಒಪ್ಪಿಗೆ ಪಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅನುಕೂಲ ಸಿಕ್ಕರೆ ಕಾಂಗ್ರೆಸ್ ಹೈ ಕಮಾಂಡ್ ಭೇಟಿ ಮಾಡುವುದಾಗಿ ಅವರು ತಿಳಿಸಿದರು. Views: 159

ಬಿಡಿಎ ಮುಖ್ಯ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

ಬಿಡಿಎ ಮುಖ್ಯ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಬಿಡಿಎ ಮುಖ್ಯ ಇಂಜಿನಿಯರ್ ಗೌಡಯ್ಯ ಅವರ ಬಸವೇಶ್ವರನಗರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಕಳೆದ ಏಳು ವರ್ಷಗಳಿಂದಲೂ ಬಿಡಿಎ ದಲ್ಲಿ ವಸತಿ ಸಮುಚ್ಚಯ ಉಸ್ತುವಾರಿಯಾಗಿರುವ ಗೌಡಯ್ಯ , ಅವರ ವಿರುದ್ಧ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಈ  ದಾಳಿ ನಡೆದಿದ್ದು, ಅಧಿಕಾರಿಗಳು ಶೋಧನೆ ಮುಂದುವರಿಸಿದ್ದಾರೆ. ಗೌಡಯ್ಯ ಕಚೇರಿಗೂ ಬೀಗ ಜಡಿಯಲಾಗಿದ್ದು, ಅಲ್ಲೂ ಕಾಗದ ಪತ್ರಗಳಿರುವ ಅನುಮಾನದ ಮೇಲೆ ಅಲ್ಲಿಯೂ ತಪಾಸಣೆ ಮಾಡುವ ಸಾಧ್ಯತೆಗಳಿವೆ. Views: 167

ಕೆಐಎಡಿಬಿ ಅಧಿಕಾರಿಗೆ ಎಸಿಬಿ ಶಾಕ್

ಕೆಐಎಡಿಬಿ ಅಧಿಕಾರಿಗೆ ಎಸಿಬಿ ಶಾಕ್

ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಮಲ್ಲೇಶ್ವರಂ ನಲ್ಲಿ ಎಸಿಬಿ ದಾಳಿ ನಡೆದಿದ್ದು, ಕೆಐಎಡಿಬಿ ಅಧಿಕಾರಿಯೊಬ್ಬರಿಗೆ ಶಾಕ್ ನೀಡಿದ್ದಾರೆ. ಮಂತ್ರಿಗ್ರೀನ್ಸ್ ನ 14 ಮಹಡಿಯಲ್ಲಿರುವ ಕೆಐಎಡಿಬಿ ಅಧಿಕಾರಿ ಟಿ. ಆರ್ ಸ್ವಾಮಿ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಬಾಗಿಲು ತೆರೆಯದ್ದರಿಂದ ಬೀಗ ಒಡೆದು ಒಳಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಐದು ಕೋಟಿ ರೂ. ನಗದು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಮನೆಯಿಂದ ಬ್ಯಾಗೊಂದನ್ನು ಹೊರಕ್ಕೆ ಎಸೆಯಲಾಗಿದೆ. ಬ್ಯಾಗು ಎರಡನೇ ಮಹಡಿಯ ಪೈಪ್ ಲೈನ್ ಮೇಲೆ ಪತ್ತೆಯಾಗಿದ್ದು, ಅದರಲ್ಲಿಯೂ […]

ಕಾಂಗ್ರೆಸ್ ಸೇರಲು ಮುಂದಾದ ಸಚಿವ ಶಂಕರ್ !

ಕಾಂಗ್ರೆಸ್ ಸೇರಲು ಮುಂದಾದ ಸಚಿವ ಶಂಕರ್ !

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣೇಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿರುವ ಆರ್. ಶಂಕರ್ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಈ ಕುರಿತಂತೆ ಹೇಳಿಕೆ ನೀಡಿರುವ ಅರಣ್ಯ ಸಚಿವ ಶಂಕರ್ ತಾವು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ತಿಳಿಸಿದರು. ಒಳ್ಳೆಯ ಮುಹೂರ್ತ ನೋಡಿ ಪಕ್ಷ ಸೇರ್ಪಡೆಯಾಗುವುದಾಗಿಯೂ ಹೇಳಿರುವ ಅವರು ಕುಮಾರಸ್ವಾಮಿ ಸಂಪುಟದಲ್ಲಿ ತಮ್ಮ ಖಾತೆ ಬದಲಾವಣೆಯಾಗುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. Views: […]

ಕೊಡಗು ಪ್ರವಾಹ ಪರಿಹಾರ: ರಾಜನಾಥಸಿಂಗ್ ಗೆ ಸಿಎಂ ಮನಿ

ಕೊಡಗು ಪ್ರವಾಹ ಪರಿಹಾರ: ರಾಜನಾಥಸಿಂಗ್ ಗೆ ಸಿಎಂ ಮನಿ

ಹೊಸದಿಲ್ಲಿ: ದೆಹಲಿ ಪ್ರವಾಸದಲ್ಲಿರುವ  ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಎಚ್. ಡಿ. ರೇವಣ್ಣ ಅವರು ಇಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ, ರಾಜ್ಯದ ಕೆಲವೆಡೆ ಉಂಟಾಗಿರುವ ಬರ, ಋಣಮುಕ್ತ ಕಾಯ್ದೆ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಸಿದರು. ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ 3435 ಕೋಟಿ ರೂ. ಗಳಷ್ಟು ಹಾನಿ ಉಂಟಾಗಿದೆ. ಸಾಧ್ಯವಿದ್ದಷ್ಟು ಬೇಗನೇ ಎನ್ ಡಿ ಆರ್ ಎಫ್ ನಿಂದ […]

ವಾಯುಸೇನೆ ಲಘು ವಿಮಾನ ಪತನ: ಪೈಲಟ್ ಪಾರು

ವಾಯುಸೇನೆ ಲಘು ವಿಮಾನ ಪತನ: ಪೈಲಟ್ ಪಾರು

ಬಾಗಪತ್ ( ಉತ್ತರ ಪ್ರದೇಶ): ಲಘು ವಿಮಾನವೊಂದು ಪತನಗೊಂಡು ಪೈಲಟ್ ಅಚ್ಚರಿಕಾರಕ ರೀತಿಯಲ್ಲಿ ಪಾರಾಗಿರುವ ಘಟನೆ ಉತ್ತರ ಪ್ರದೇಶದ ಬಾಗಪತ್ ಬಳಿ ಶುಕ್ರವಾರ ಸಂಭವಿಸಿದೆ. ಏರ್ ಫೋರ್ಸ್ ದಿನಾಚರಣೆ ಪ್ರಯುಕ್ತ ಸಿದ್ದತೆ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯ ಉಂಟಾಗಿಲ್ಲ. Views: 132

ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಭಾರೀ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಭಾರೀ ಮಳೆ ಸಾಧ್ಯತೆ

ಬೆಂಗಳೂರು:ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ 9 ನೇ ತಾರೀಖಿನವರೆಗೂ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಸಂಜೆ ವೇಳೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಕರಾವಳಿ ಪ್ರದೇಶಗಳಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದ್ದು, ಲಕ್ಷದ್ವೀಪದಿಂದ ಕರಾವಳಿ ಪ್ರದೇಶದವರೆಗೆ ಭಾರೀ ಎತ್ತರದ ಅಲೆಗಳು ಏಳಲಿವೆ ಎಂದೂ ಇಲಾಖೆ ತಿಳಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಿರುವ ಇಲಾಖೆ ಅಧಿಕಾರಿಗಳು ಆಳ ಸಮುದ್ರ ಮೀನುಗಾರಿಕೆಗೆ ಹೋಗಿರುವವರು ಶುಕ್ರವಾರ […]

ಬಿಬಿಎಂಪಿ ಉಪಮೇಯರ್ ರಮೀಳಾ ಹಠಾತ್ ನಿಧನ

ಬಿಬಿಎಂಪಿ ಉಪಮೇಯರ್ ರಮೀಳಾ ಹಠಾತ್ ನಿಧನ

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಉಪಮೇಯರ್ ರಮೀಳಾ ಉಮಾಶಂಕರ್ (44) ತೀವ್ರ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗಂಗಾಂಬಿಕಾ ಮೇಯರ್ ಹಾಗೂ ಜೆಡಿಎಸ್ ನ ರಮೀಳಾ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ನಿನ್ನೆ ಮೆಟ್ರೋ ಟ್ರೀನ್ ವೊಂದರ  ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ, ಮೇಯರ್ ಗಂಗಾಂಬಿಕೆ ಅವರೊಂದಿಗೆ ಪಾಲ್ಗೊಂಡಿದ್ದರು. ದೇವೇಗೌಡ ಕಂಬನಿ: ಸಾಮಾಜಿಕ ಕಳಕಳಿ ಹೊಂದಿದ್ದ ರಮೀಳಾ ನಿಧನಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕಂಬನಿ ಮಿಡಿದಿದ್ದಾರೆ. ದೆಹಲಿ […]

ದಲಿತರಿಗೆ ಖಾಸಗಿ ನೌಕರಿಯಲ್ಲೂ ಮೀಸಲು ?

ದಲಿತರಿಗೆ ಖಾಸಗಿ ನೌಕರಿಯಲ್ಲೂ ಮೀಸಲು ?

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗಾದಿ ಹಿಡಿಯುವ ಕನಸು ಕಾಣುತ್ತಿರುವ ಪ್ರಧಾನಿ ಮೋದಿ ಸರಕಾರ ಇದೀಗ  ಖಾಸಗಿ ಸಂಸ್ಥೆಗಳಲ್ಲಿಯೂ ಎಸ್ .ಸಿ/ಎಸ್ ಟಿ ಸಮುದಾಯಕ್ಕೆ ಮೀಸಲು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಖಾಸಗಿ ವಲಯದಲ್ಲಿ ಈಗ ಎಸ್ .ಸಿ./ ಎಸ್ .ಟಿ ಸಮುದಾಯದ ಅಂಕಿ-ಸಂಖ್ಯೆಗಳನ್ನು ಒದಗಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಕಾರ್ಮಿಕ ಇಲಾಖೆ ಮತ್ತು ಖಾಸಗಿ ಕಂಪನಿಗಳಿಗೆ ಸುತ್ತೋಲೆ ಹೊರಡಿಸಿದೆ. ಖಾಸಗಿ ವಲಯದಲ್ಲಿಯೂ ಮೀಸಲು ವ್ಯವಸ್ಥೆ ಕಲ್ಪಿಸಬೇಕೆಂದು ದಲಿತ ಸಮುದಾಯ ಬೇಡಿಕೆ ಇಟ್ಟಿತ್ತು. […]

ಪೆಟ್ರೋಲ್ , ಡೀಸೇಲ್ ದರ ರಾಜ್ಯದಲ್ಲಿ ಕೇವಲ 2.50 ರೂ. ಅಗ್ಗ ??

ಪೆಟ್ರೋಲ್ , ಡೀಸೇಲ್ ದರ ರಾಜ್ಯದಲ್ಲಿ ಕೇವಲ 2.50 ರೂ. ಅಗ್ಗ ??

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್ , ಡೀಸೇಲ್ ದರದಲ್ಲಿ 2.50 ರೂ. ಗಳಷ್ಟು ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಪ್ರಕಟಿಸುವ ಜತೆಗೆ ರಾಜ್ಯ ಸರಕಾರಗಳೂ ಇಷ್ಟೇ ದರ  ಕಡಿತಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ 2.50 ರೂ. ದರ ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ತೈಲ ದರದಲ್ಲಿ 2 ರೂ. ಕಡಿಮೆ ಮಾಡಿ ಇನ್ನೂ ತಿಂಗಳಾಗಿಲ್ಲ. ಈಗ ಮತ್ತೆ 2.50 ರೂ. ಕಡಿಮೆ ಮಾಡುವ ಕುರಿತಂತೆ ಸಭೆ ನಡೆಸಲಾಗುವುದು […]