ಆಕೆಯ ಶೀಲ ಶಂಕಿಸಿದ ಆತ ಏನು ಮಾಡಿದ??!!

ಆಕೆಯ ಶೀಲ ಶಂಕಿಸಿದ ಆತ  ಏನು ಮಾಡಿದ??!!

ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿ ಮಹಾಶಯನೊಬ್ಬ ಕಲ್ಲಿನಿಂದ ಜಜ್ಜಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಂಜುನಾಥ ನಗರದಲ್ಲಿ ನಡೆದಿದೆ. ಪತಿ ಹನುಮಂತ ತನ್ನ ಪತ್ನಿ ಜಯಶ್ರೀ (32) ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿದವ. ಮೂಲತಃ ವಿಜಯಪುರದ ದಂಪತಿ ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದರು. ಟೆಂಪೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹನುಮಂತನನ್ನು ಬಸವೇಶ್ವರ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. Mahantesh Yallapurmathhttp://Udayanadu.com

ದೋಸ್ತಿ ಸರಕಾರದ ಬಗ್ಗೆ ಯತ್ನಾಳ ಹೇಳಿದ್ದೇನು ಗೊತ್ತೇ?

ದೋಸ್ತಿ ಸರಕಾರದ ಬಗ್ಗೆ ಯತ್ನಾಳ ಹೇಳಿದ್ದೇನು ಗೊತ್ತೇ?

ವಿಜಯಪುರ: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರ ಶ್ರಾವಣ ಕೊನೆಯ ಸೋಮವಾರದೊಳಗೆ ಪತನವಾಗುತ್ತದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಇನ್ನೂ ಟೇಕಾಫ್ ಆಗದ ಈ ಸರಕಾರ ಬೀಳು ಲೋಕಸಭಾ ಚುನಾವಣೆವರೆಗೆ ಕಾಯಬೇಕಿಲ್ಲ. ಇದೇ  ಶ್ರಾವಣದ ಕೊನೆಯ ಸೋಮವಾರದ ವೇಳೆಗೆ ಪತನವಾಗುತ್ತದೆ ಎಂದು ಅವರು ವಿಜಯಪುರದಲ್ಲಿ ಹೇಳಿಕೆ ನೀಡಿದ್ದಾರೆ. Mahantesh Yallapurmathhttp://Udayanadu.com

ವಿಡಿಯೋ: ವೈಮಾನಿಕ ಸಮೀಕ್ಷೆ ವೇಳೆ ಪೇಪರ್ ಓದುತ್ತ ಕುಳಿತ ಸಿಎಂ, ಬಿಸ್ಕಿಟ್ ಎಸೆದ ರೇವಣ್ಣ !!

ಕೊಡಗು: ಭಾರೀ ಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಎರಡು ದಿನ ಬೀಡು ಬಿಟ್ಟು ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಗಮನ ಸೆಳೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ , ಗಂಭೀರವಾಗಿ ನೆರೆ ಸಮೀಕ್ಷೆ ಮಾಡದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಮೀಕ್ಷೆ ನಡೆಸುತ್ತಿದ್ದ ವೇಳೆ ಪತ್ರಿಕೆ ಓದುತ್ತ ಕುಳಿತಿರುವ ಕುಮಾರಸ್ವಾಮಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಡಿ. ರೇವಣ್ಣ ಸಂತ್ರಸ್ತರಿಗೆ ಬಿಸ್ಕೀಟು ವಿತರಿಸಿದ ರೀತಿಯೂ ಸಾಕಷ್ಟು ಟೀಕೆಗೆ ಗುರಿಯಾಗಿದೆ. […]

ರಾಜೀವ ಗಾಂಧಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ನಾಯಕರು

ರಾಜೀವ ಗಾಂಧಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ನಾಯಕರು

ಹೊಸದಿಲ್ಲಿ: ದಿವಂಗತ ಪ್ರಧಾನಿ ರಾಜೀವಗಾಂಧಿ ಜನ್ಮ ದಿನದ ಅಂಗವಾಗಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಅವರು ವೀರ ಭೂಮಿಯಲ್ಲಿ ಸಮಾಧಿಗೆ  ಸೋಮವಾರ ಪುಷ್ಪ ನಮನ ಸಲ್ಲಿಸಿದರು. ಸದ್ಭಾವನಾ ದಿನವೆಂದು ಆಚರಿಸಲಾಗುವ ಈ ದಿನದಂದು ಮಾಜಿ ಪ್ರಧಾನಿ ಮನಮೋಹನಸಿಂಗ್, ಕಾಂಗ್ರೆಸ್ ನಾಯಕರಾದ ಗುಲಾಮನಭಿ ಆಝಾದ, ಅಶೋಕ ಗೆಲ್ಹೋಟ ಅವರೂ ರಾಜೀವ್ ಸಮಾಧಿಗೆ ನಮನ ಸಲ್ಲಿಸಿದರು. ಆಗಸ್ಟ್ 20, 1944 ರಂದು ಜನಿಸಿದ್ದ ರಾಜೀವಗಾಂಧಿ ಉತ್ತರ ಪ್ರದೇಶದ ಅಮೇಥಿ […]

ಗೋಕಾಕ ಪಟ್ಟಣ ಪತ್ತಿನ ಸಹಕಾರಿ ಬ್ಯಾಂಕಿನ ಚುನಾವಣೆ: ಹಳೆ ಪ್ಯಾನೆಲ್ ಗೆ ಭರ್ಜರಿ ಜಯ

ಗೋಕಾಕ ಪಟ್ಟಣ ಪತ್ತಿನ ಸಹಕಾರಿ ಬ್ಯಾಂಕಿನ ಚುನಾವಣೆ: ಹಳೆ ಪ್ಯಾನೆಲ್ ಗೆ ಭರ್ಜರಿ ಜಯ

ಗೋಕಾಕ: ಗೋಕಾಕ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನ ಆಡಳಿತ ಮಂಡಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಹಳೆ ಪ್ಯಾನೆಲ್ ಗೆ ಭರ್ಜರಿ ಜಯ ಲಭಿಸಿದೆ. ಆಯ್ಕೆಯಾದವರು ಇಂತಿದ್ದಾರೆ: ಬಸವರಾಜ ಕಲ್ಯಾಣ ಶೆಟ್ಟಿ, ರಾಜು ಮುನವಳ್ಳಿ, ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಚಿಂತಾಮಣಿ ತಾರಳಿ, ಸೋಮಶೇಖರ ಮಗದುಮ್, ಮಲ್ಲಿಕಾರ್ಜುನ ಚುನಮರಿ (ಎಲ್ಲರೂ ಸಾಮಾನ್ಯ ವರ್ಗ),  ಇತರೆ ಹಿಂದುಳಿದ ವರ್ಗದ ಅಶೋಕ ಹೆಗ್ಗಣ್ಣವರ, ಚಂದ್ರು ಕುರಬೇಟ್ ಮತ್ತು ಮಹಿಳೆಯರ ವಿಭಾಗದಿಂದ ಶಾಂತವ್ವ ಘೋಡಗೇರಿ, ಶೋಭಾ ಕುರಬೇಟ್ ಜಯ ಗಳಿಸಿದ್ದಾರೆ. Mahantesh […]

ಸಂತ್ರಸ್ತರ ನೆರವಿಗೆ ಕುಕ್ಕೆ ಶ್ರೀ ದೇವಾಲಯ

ಸಂತ್ರಸ್ತರ ನೆರವಿಗೆ ಕುಕ್ಕೆ ಶ್ರೀ ದೇವಾಲಯ

ಸುಳ್ಯ (ದಕ್ಷಿಣ ಕನ್ನಡ):ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದು ತೊಂದರೆಗೆ ಒಳಗಾಗಿರುವ ಜನರಿಗೆ ಪರಿಹಾರ ಒದಗಿಸಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ  ಆಡಳಿತ ಮಂಡಳಿ ಮುಂದಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ನೀಡುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಆಡಳಿತ ಮಂಡಳಿಯ  ಈ ನಿರ್ಧಾರವನ್ನು ಮುಖ್ಯಸ್ಥ ನಿತ್ಯಾನಂದ ಮಾಧ್ಯಮಗಳಿಗೆ ತಿಳಿಸಿದ್ದಾರೆ. Mahantesh Yallapurmathhttp://Udayanadu.com

ಪ್ರವಾಹ ಸಂತ್ರಸ್ತ ಕೇರಳಕ್ಕೆ ತೆಲಂಗಾಣ ಸರಕಾರದಿಂದ 25 ಕೋಟಿ ರೂ. ನೆರವು

ಪ್ರವಾಹ ಸಂತ್ರಸ್ತ ಕೇರಳಕ್ಕೆ ತೆಲಂಗಾಣ ಸರಕಾರದಿಂದ 25 ಕೋಟಿ ರೂ. ನೆರವು

ತಿರುವನಂತಪುರಂ (ಕೇರಳ):ಭಾರೀ ಮಳೆಯಿಂದ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳ ರಾಜ್ಯಕ್ಕೆ ನೆರೆರಾಜ್ಯಗಳು ನೆರವಿನ ಹಸ್ತ ಚಾಚುತ್ತಿದ್ದು, ತೆಲಂಗಾಣದ ಗೃಹ ಸಚಿವ ನಯನಿ ನರಸಿಂದಹ 25 ಕೋಟಿ ರೂ.ಗಳ ಚೆಕ್ಕನ್ನು ರವಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಹಸ್ತಾಂತರಿಸಿದರು. ಇಷ್ಟೇ ಅಲ್ಲದೇ ತೆಲಂಗಾಣ ಸರಕಾರ ಸುಮಾರು 2. 5 ಕೋಟಿ ರೂ. ಮೊತ್ತದ 50 ಆರ್. ಒ ಯಂತ್ರಗಳನ್ನು ಕುಡಿಯುವ ನೀರಿಗಾಗಿ ಬೇಗಂಪೇಟನಿಂದ ವಿಮಾನ ಮೂಲಕ ಕಳುಹಿಸಿಕೊಟ್ಟಿದೆ. ಕೇರಳದಲ್ಲಿ ಸಂಭವಿಸಿರುವ ನೈಸರ್ಗಿಕ ದುರಂತದ ಬಗೆಗೆ ತೀವ್ರ ಆತಂಕ ವ್ಯಕ್ತಪಡಿಸಿರುವ […]

ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಹಣದ ಕೊರತೆ ಇಲ್ಲ: ಕುಮಾರಸ್ವಾಮಿ

ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಹಣದ ಕೊರತೆ ಇಲ್ಲ: ಕುಮಾರಸ್ವಾಮಿ

ಮಡಿಕೇರಿ: ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತ ಜನರಿಗೆ ಪರಿಹಾರ ಕಲ್ಪಿಸುವಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ರವಿವಾರ ಎರಡನೇ ಬಾರಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಪರಿಹಾರ ಕಾರ್ಯಾಚರಣೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಕುಶಾಲನಗರದಲ್ಲಿ ವಿಪರೀತ ಮಳೆ ನೀರು ನುಗ್ಗಿದ ಪರಿಣಾಮ ತೀವ್ರ ತೊಂದರೆ ಉಂಟಾಗಿತ್ತು. ಮೋಟಾರು ಪಂಪ್ ಮೂಲಕ ನೀರನ್ನು ಹೊರಹಾಕಲು ಯತ್ನ ನಡೆಸಲಾಗಿದೆ […]

ಮಡಿಕೇರಿ ತಾಲೂಕಿನಲ್ಲಿ ಮತ್ತೊಂದು ಗಂಜಿಕೇಂದ್ರ

ಮಡಿಕೇರಿ ತಾಲೂಕಿನಲ್ಲಿ ಮತ್ತೊಂದು ಗಂಜಿಕೇಂದ್ರ

ಕೊಡಗು: ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗಾಗಿ ರವಿವಾರ  ಇನ್ನೊಂದು ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಮಡಿಕೇರಿ ತಾಲೂಕಿನ ಮದೆನಾಡು, ಜೋಡುಪಾಲ ಗ್ರಾಮಗಳ ನಿರಾಶ್ರಿತರಿಗಾಗಿ  ಕಲ್ಲುಗುಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ Mahantesh Yallapurmathhttp://Udayanadu.com

ಕೇರಳಕ್ಕೆ ಓಡಿಸ್ಸಾದಿಂದಲೂ ಐದು ಕೋಟಿ ರೂ. ನೆರವು

ಕೇರಳಕ್ಕೆ ಓಡಿಸ್ಸಾದಿಂದಲೂ ಐದು ಕೋಟಿ ರೂ. ನೆರವು

ಓಡಿಸ್ಸಾ(ಭುವನೇಶ್ವರ):ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಸಹಾಯದ ಹಸ್ತ ಚಾಚಲು ಇಡೀ ದೇಶವೇ ಮುಂದಾಗಿದ್ದು, ಓಡಿಸ್ಸಾ ಸರಕಾರ ಐದು ಕೋಟಿ ರೂ ,ಗಳ ನೆರವು ಘೋಷಿಸಿದೆ. ಓಡಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಿಕ್ , ಈ ಮೊದಲು ಐದು ಕೋಟಿ ರೂ.ಗೆ ಇನ್ನೂ  ಐದು ಕೋಟಿ ರೂ. ಹೆಚ್ಚುವರಿ ಪರಿಹಾರ  ಧನವನ್ನೂ ಘೋಷಿಸಿದ್ದು , ಇದರ ಜತೆಗೆ 8 ಕೋಟಿ ರೂ. ಮೊತ್ತದ ಪಾಲಿಥಿನ್ ಶೀಟ್ಗಳನ್ನೂ ಮಂಜೂರು ಮಾಡಿದ್ದಾರೆ. 244 ಅಗ್ನಿ ಶಾಮಕ ದಳದ ಸಿ  ಬ್ಬಂದಿ 65 ಬೋಟುಗಳನ್ನೂ […]