ಗಿರೀಶ ಕಾರ್ನಾಡ ವಿರುದ್ಧವೂ ದಾಖಲಾಯ್ತು ದೂರು !

ಗಿರೀಶ ಕಾರ್ನಾಡ ವಿರುದ್ಧವೂ ದಾಖಲಾಯ್ತು ದೂರು !

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5 ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ” ನಾನೂ ಕೂಡ ನಗರ ನಕ್ಸಲ್ ” ಎಂದು ಬರೆದಿದ್ದ ಬೋರ್ಡು ಹಿಡಿದುಕೊಂಡಿದ್ದ ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಗಿರೀಶ ಕಾರ್ನಾಡ ವಿರುದ್ದ ಬೆಂಗಳೂರು ಹೈಕೋರ್ಟ್ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ ! ಈ ವರ್ಷದ ಜನವರಿಯಲ್ಲಿ ನಡೆದ ಭೀಮಾ -ಕೋರೆಗಾಂವ ಹಿಂಸಾಚಾರ ಪ್ರಕರಣದ ಸಂದರ್ಭದಲ್ಲಿ ಹೋರಾಟಗಾರರು ನಕ್ಸಲ್ ರೊಂದಿಗೆ ಹೊಂದಿರಬಹುದಾದ ಸಂಪರ್ಕಗಳ ಕುರಿತು ಸಮಗ್ರ ತನಿಖೆ ನಡೆಸಲು ಸೂಚಿಸಬೇಕು […]

ಕುಸಿದು ಬಿದ್ದ ಅಂಬರೀಷ ಆಸ್ಪತ್ರೆಗೆ ದಾಖಲು

ಕುಸಿದು ಬಿದ್ದ ಅಂಬರೀಷ ಆಸ್ಪತ್ರೆಗೆ ದಾಖಲು

ಬೆಂಗಳೂರು: ಚಿತ್ರನಟ, ರಾಜಕಾರಣಿ ಅಂಬರೀಷ್ ಅವರು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು , ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಓಡಾಡುತ್ತಿದ್ದ ಅಂಬರೀಷ್ ಕುರ್ಚಿಯಿಂದ ಮೇಲಕ್ಕೇಳುವಾಗ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಕಾಲು ಸ್ನಾಯು ಸೆಳೆತದಿಂದ ಅಂಬರೀಷ್ ಕುಸಿದು ಬಿದ್ದರೆಂದು ಹೇಳಲಾಗಿದ್ದು, ರಾಕ್ ಲೈನ್ ವೆಂಕಟೇಶ ಅವರೊಂದಿಗೆ ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದರು.

ಮೇಲ್ ಮೂಲಕ ಅಶ್ಲೀಲ ಫೋಟೋ, ಸಂದೇಶ ರವಾನಿಸಿದ ವ್ಯಕ್ತಿಗೆ 2 ವರ್ಷ ಶಿಕ್ಷೆ

ಮೇಲ್ ಮೂಲಕ ಅಶ್ಲೀಲ ಫೋಟೋ, ಸಂದೇಶ ರವಾನಿಸಿದ ವ್ಯಕ್ತಿಗೆ 2 ವರ್ಷ ಶಿಕ್ಷೆ

ಬೆಂಗಳೂರು: ಪರಿಚಿತ ಯುವತಿಯೊಬ್ಬಳಿಗೆ  ಇ ಮೇಲ್‌ ಮೂಲಕ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಎರಡು ವರ್ಷ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಶಿವಪ್ರಸಾದ ಸಜ್ಜನ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. 10 ವರ್ಷಗಳ ಹಿಂದೆ  ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.  9 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿವಿಚಾರಣೆ ಆರಂಭವಾಗಿತ್ತು. ಸುದೀರ್ಘ ವಿಚಾರಣೆಯ ಬಳಿಕ ಮಾಹಿತಿ ತಂತ್ರಜ್ಞಾನ ಕಾಯಿದೆಯ ಕಲಂ 67ರ ಅಡಿ […]

ಸತೀಶ ಜಾರಕಿಹೊಳಿ ಸಿಎಂ ಆಗುವವರೆಗೂ ವಿಶ್ರಮಿಸುವುದಿಲ್ಲ: ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ !

ಗೋಕಾಕ: ಸಹೋದರ ಸತೀಶ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರುವ ತನಕ ತಾವು ವಿಶ್ರಮಿಸುವುದಿಲ್ಲ ಎಂದು ಪೌರಾಡಳಿತ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ  ಹೊಸ ಬಾಂಬ್ ಹಾಕಿದ್ದಾರೆ ! ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬ ಮೊದಲಿನಿಂದಲೂ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದೆ. ಹೀಗಾಗಿ ಪಕ್ಷದಲ್ಲಿಯೇ ಕೆಲವು ಕಾಣದ “ಕೈ “ಗಳು ನಮ್ಮ ಕುಟುಂಬದ ವಿರುದ್ಧ ಪಿತೂರಿ ನಡೆಸಿವೆ ಎಂದು ಗಂಭೀರ ಆರೋಪ ಮಾಡಿದರು. ಇಂತಹ ಪಿತೂರಿಯಿಂದ ನೋವಾಗಿದೆ. […]

ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಿರ್ಧಾರ ಕೈಗೊಳ್ಳಲು ಸ್ವತಂತ್ರರು: ಸತೀಶ ಜಾರಕಿಹೊಳಿ

ಬೆಳಗಾವಿ: ಇಲ್ಲಿಯ ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿವಾದ ಸುಖಾಂತ್ಯ ಕಂಡಿರುವುದು ನನ್ನ ಅಥವಾ ಲಕ್ಷ್ಮಿ ಹೆಬ್ಬಾಳಕರ ಅವರ ಗೆಲುವಲ್ಲ, ಬದಲಾಗಿ ಪಕ್ಷದ ಗೆಲುವು ಎಂದು ಯಮಕನಮರಡಿ ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಸದಸ್ಯರ ಆಯ್ಕೆಯಲ್ಲಿ ಅಥವಾ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ತಾವು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮೂವರ ಪಾತ್ರವೂ ಇದೆ. ಹೀಗಾಗಿ ಇದು ತಮ್ಮ ಗೆಲುವು ಎಂದು ಯಾರೂ ಬೀಗುವುದು ಬೇಡ ಎಂದು ಅವರು […]

ಬೆಂಗಳೂರಿನಲ್ಲೇ ಏರ್ ಶೋ !

ಬೆಂಗಳೂರಿನಲ್ಲೇ ಏರ್ ಶೋ !

ಬೆಂಗಳೂರು: ಅಂತೂ ಬೆಂಗಳೂರಿನಲ್ಲಿಯೇ ಏರ್ ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಏರ್ ಶೋ ವನ್ನು ಉತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಲು ಕೇಂದ್ರ ಸರಕಾರ ಹುನ್ನಾರ ನಡೆದಿದೆ ಎಂಬ ಊಹಾಪೋಹಳಿಗೆ ತೆರೆ ಬಿದ್ದಿದ್ದು, ರಕ್ಷಣಾ ಇಲಾಖೆ ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. 2019 ರ ಫೆಬ್ರುವರಿ 20 ರಿಂದ 24 ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಏರ್ ಶೋ ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏರ್ ಶೋ ವನ್ನು ಉತ್ತರ […]

80 ರ ಗಡಿ ದಾಟಿದ ಪೆಟ್ರೋಲ್ ದರ !

80 ರ ಗಡಿ ದಾಟಿದ ಪೆಟ್ರೋಲ್ ದರ !

ಹೊಸದಿಲ್ಲಿ:ತೈಲ ದರ ಏರಿಕೆ ಮುಂದುವರಿದಿದ್ದು , ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರಿಗೆ 80.38 ರೂ. ತಲುಪಿದ್ದು, ಡೀಸೇಲ್  ಬೆಲೆ ಲೀಟರ್ ಗೆ 72.51 ರೂ. ಗಳಿಗೇರಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿಕೆ ಪ್ರಕಾರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ ಗೆ 39 ಪೈಸೆ ಹಾಗೂ ಡೀಸೇ್ಲ್ ಗೆ 44 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 87.77 ರೂ. ಹಾಗೂ ಡೀಸೇಲ್ 76.98 ರೂ. ಗಳಿಗೇರಿದೆ !  

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಿಂದ ಹೊರಗುಳಿದ ಯಡಿಯೂರಪ್ಪ !

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಿಂದ ಹೊರಗುಳಿದ ಯಡಿಯೂರಪ್ಪ !

ಬೆಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸದೇ ದಿಢೀರ್ ಬೆಂಗಳೂರಿಗೆ ವಾಪಸ್ಸಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಲೋಕಸಭೆ ಚುನಾವಣೆಗೆ  ತಯಾರಿ ನಡೆಸುವ ಸಲುವಾಗಿ ಇಂದು ಮತ್ತು ನಾಳೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳಲೆಂದೇ ಯಡಿಯೂರಪ್ಪ ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದರು. ಆದರೆ, ಇದ್ದಕ್ಕಿದ್ದಂತೆ ಬೆಂಗಳೂರಿಗೆ ವಾಪಸ್ಸಾಗಿದ್ದು ಕುತೂಹಲ ಕೆರಳಿಸಿದೆ. ರಾಜ್ಯದ ೊಟ್ಟು 6-7 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದ್ದು, ಈ ಕುರಿತಂತೆ ಕಾರ್ಯಕಾರಿಣಿ ಸಭೆಯಲ್ಲಿ ಇಂದು […]

ಬೆಳಗಾವಿ: ಪಿಎಲ್ ಡಿ ಬ್ಯಾಂಕಿಗೆ ಬಿಗಿ ಭದ್ರತೆ

ಬೆಳಗಾವಿ: ಪಿಎಲ್ ಡಿ ಬ್ಯಾಂಕಿಗೆ ಬಿಗಿ ಭದ್ರತೆ

ಬೆಳಗಾವಿ: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿ ರಾಜ್ಯಾದ್ಯಂತ ಸುದ್ದಿ ಮಾಡಿರುವ ಇಲ್ಲಿನ ಪಿಎಲ್ ಡಿ ಬ್ಯಾಂಕಿನ ಚುನಾವಣೆ ಸಂಬಂಧ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಾಲಚಂದ್ರ ಸಿಂಗ್ಯಾಗೋಳ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಪೊಲೀಸರು ಬ್ಯಾಂಕಿನ ಸುತ್ತ ಬಿಗಿ ಪಹರೆ ಹಾಕಿದ್ದು, ಯಾವುದೇ ಅಹಿಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ, ಬ್ಯಾಂಕಿನ ಆವರಣದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದ್ದು, ಅಹಿತಕರ ಘಟನೆಗೆ ಅವಕಾಶ ನೀಡದಿರಲು ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾಧಿ ಕಾರಿ ಮಂಜುಳಾ ನಾಯಕ ನೇತೃತ್ವದಲ್ಲಿ ಚುನಾವಣೆಗೆ […]

ಜಾರಕಿಹೊಳಿ ಬ್ರದರ್ಸ, ಲಕ್ಷ್ಮಿ ಜತೆ ಖಂಡ್ರೆ ಪ್ರತ್ಯೇಕ ಮಾತುಕತೆ

ಜಾರಕಿಹೊಳಿ ಬ್ರದರ್ಸ, ಲಕ್ಷ್ಮಿ ಜತೆ ಖಂಡ್ರೆ ಪ್ರತ್ಯೇಕ ಮಾತುಕತೆ

ಬೆಳಗಾವಿ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಮೇಲೆಯೇ ಪರಿಣಾಮ ಬೀರಬಹುದು ಎಂದು ಊಹಿಸಲಾಗಿರುವ ಇಲ್ಲಿಯ ಪಿಎಲ್ ಡಿ ಬ್ಯಾಂಕಿನ ಚುನಾವಣೆ ವಿಷಯದಲ್ಲಿ ತಲೆದೋರಿರುವ ಬಿಕ್ಕಟ್ಟು ಶಮನಕ್ಕಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ  ಈಶ್ವರ ಖಂಡ್ರೆ ಬೆಳಗಾವಿಗೆ ದೌಡಾಯಿಸಿದ್ದು, ಖಾಸಗಿ ಹೋಟೆಲ್ ನಲ್ಲಿತಂಗಿದ್ದಾರೆ. ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವ ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಜತೆ ಖಂಡ್ರೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳಕರ ನಡುವಣ ಭಿನ್ನಮತ ಸಂಪೂರ್ಣ ತಾರಕಕ್ಕೆ […]