ವಾಕಿಂಗ್ ಹೊರಟಿದ್ದ ಆ ಅಧ್ಯಾಪಕನನ್ನ ಗುಂಡಿಕ್ಕಿ ಕೊಂದಿದ್ದೇಕೆ ?!

ವಾಕಿಂಗ್ ಹೊರಟಿದ್ದ ಆ ಅಧ್ಯಾಪಕನನ್ನ ಗುಂಡಿಕ್ಕಿ ಕೊಂದಿದ್ದೇಕೆ ?!

ನಳಂದಾ ( ಬಿಹಾರ): ಅಪರಿಚಿತ ದುಷ್ಕರ್ಮಿಗಳು ಕಾಲೇಜು ಅಧ್ಯಾಪಕರೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ. ಪಿಎಂಎಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಜಲಾಲಪುರ ನಿವಾಸಿ ಅರವಿಂದ ಕುಮಾರ್ ಹತ್ಯೆಗೀಡಾದ ದುರ್ದೈವಿ. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ಅಧ್ಯಾಪಕನ ಮೇಲೆ ಗುಂಡು ಹಾರಿಸಲಾಗಿದ್ದು, ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶರೀಫ ಸರದಾರ ಆಸ್ಪತ್ರೆಗೆ ಸಾಗಿಸಲಾಗಿದೆ. ಕೊಲೆಗೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಮೃತ ಅಧ್ಯಾಪಕ ಯಾರೊಂದಿಗೂ ದ್ವೇಷ ಇಟ್ಟುಕೊಂಡಿರಲಿಲ್ಲ ಎಂದು ಹೆಚ್ಚುವರಿ […]

ತುರ್ತು ನಿಗಾ ಘಟಕದಲ್ಲಿ ನೇಪಾಳ ಪ್ರಧಾನಿ !

ತುರ್ತು ನಿಗಾ ಘಟಕದಲ್ಲಿ ನೇಪಾಳ ಪ್ರಧಾನಿ !

ಕಠ್ಮಂಡು (ನೇಪಾಳ): ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಆರೋಗ್ಯದಲ್ಲಿ ತೀವ್ರ  ಏರುಪೇರಾಗಿದ್ದು  ಮಹಾರಾಜಗುಂಜನ ಮನಮೋಹನ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿ ಓಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರದಿಂದಲೇ ಅವರು  ಶೀತ ಮತ್ತು ಕೆಮ್ಮಿನಿಂದ  ನರಳುತ್ತಿದ್ದು, ರವಿವಾರ ಸಂಜೆ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಡಾ. ಅರುಣ ಸವಾಮಿ ತಿಳಿಸಿದ್ದಾರೆ. ಈ ಮೊದಲು ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಕೆಪಿ ಶರ್ಮಾ ಓಲಿ, ಇದೀಗ ಎದೆಭಾಗದ ಸೋಂಕಿನಿಂದ ನರಳುತ್ತಿದ್ದಾರೆ. ಉಸಿರಾಟಕ್ಕೆ ತೀವ್ರ ಅಡಚಣಿ ಉಂಟಾದ ಪರಿಣಾಮ […]

ಗಗನಕ್ಕೇರುತ್ತಿದ್ದಂತೆಯೇ ಸಮುದ್ರ ಪಾಲಾದ ಆ ವಿಮಾನದಲ್ಲಿ ಎಷ್ಟು ಮಂದಿ ಇದ್ರು ಗೊತ್ತಾ?!

ಗಗನಕ್ಕೇರುತ್ತಿದ್ದಂತೆಯೇ ಸಮುದ್ರ ಪಾಲಾದ ಆ ವಿಮಾನದಲ್ಲಿ ಎಷ್ಟು ಮಂದಿ ಇದ್ರು ಗೊತ್ತಾ?!

ಜಕಾರ್ತ (ಇಂಡೋನೇಷ್ಯಾ): ಜಕಾರ್ತದಿಂದ ಪಾಂಗಕಲ್ ಪಿನಾಂಗ್ ಗೆ ತೆರಳುತ್ತಿದ್ದ ಲೈನ್ ಏರ್ ವಿಮಾನವು ಗಗನಕ್ಕೇರಿದ 13 ನಿಮಿಷಗಳಲ್ಲಿಯೇ ಸಮುದ್ರ ಪಾಲಾಗಿದೆ. ಲಯನ್ ಏರ್ ವಿಮಾನವು ಸ್ಥಳೀಯ ಸಮಯ ಬೆಳಗ್ಗೆ 6.20 ಕ್ಕೆ ನಿಲ್ದಾಣದಿಂದ ಹೊರಟಿತ್ತು. ಮುಂದೆ 6.33 ಕ್ಕೆ ಸಂಪರ್ಕ ಕಳೆದುಕೊಂಡಿತ್ತು ಎಂದು ಅಧಿಕಾರಿಗಳು ದೃಢಪಡಿಸಿರುವುದಾಗಿ ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ. ವಿಮಾನ ಸಮುದ್ರದಲ್ಲಿ ಪತನವಾಗಿರುವುದು ಖಚಿತವಾಗಿದೆ ಎಂದು ಪರಿಹಾರ ಕಾರ್ಯಾಚರಣೆ ಪಡೆಯ ವಕ್ತಾರ ಯೂಸುಫ್ ಲತೀಫ್ ಹೇಳಿದ್ದಾರೆ. ವಿಮಾನದಲ್ಲಿ 188 ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, […]

ಜೆಡಿಎಸ್ ಒಂದು ಶನಿ ಎಂದು ಬಣ್ಣಿಸಿದ ಈಶ್ವರಪ್ಪ !

ಜೆಡಿಎಸ್ ಒಂದು ಶನಿ ಎಂದು ಬಣ್ಣಿಸಿದ ಈಶ್ವರಪ್ಪ !

ಬಾಗಲಕೋಟೆ: ಜೆಡಿಎಸ್ ಪಕ್ಷ ಒಂದು ಶನಿ ಎಂದು ಬಣ್ಣಿಸಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ನವರು ಆ ಶನಿಯ ಜತೆಗೇ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ರಾಹು, ಕೇತು, ಶನಿ ಕಾರಣವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಲ್ಲಿ ರಾಹು ಎಂದರೆ ಉಪಮುಖ್ಯಮಂತ್ರಿ ಪರಮೇಶ್ವರ,  ಕೇತು ಎಂದರೆ ಪಿಡಬ್ಲೂಡಿ ಸಚಿವ ರೇವಣ್ಣ ಹಾಗೂ ಶನಿ ಎಂದರೆ ಎಚ್ ಡಿ ದೇವೇಗೌಡ ಎಂದು ಈಶ್ವರಪ್ಪ ವಿಶ್ಲೇಷಿಸಿದರು. ಜೆಡಿಎಸ್ ನೊಂದಿಗೆ ಹೋಗಿರುವ ಕಾಂಗ್ರೆಸ್ ಉದ್ಧಾರವಾಗುವುದಿಲ್ಲ . ಸಿದ್ದರಾಮಯ್ಯ […]

ಗಣಿನಾಡಿನಲ್ಲಿ ಇಂದು ಗುರು-ಶಿಷ್ಯರ ಸಮಾಗಮ !

ಗಣಿನಾಡಿನಲ್ಲಿ ಇಂದು ಗುರು-ಶಿಷ್ಯರ ಸಮಾಗಮ !

ಬಳ್ಳಾರಿ: ಗಣಿ ನಾಡಿನಲ್ಲಿ ಇಂದು ಒಂದು ಕಾಲಕ್ಕೆ ಬದ್ಧ ವೈರಿಗಳಾಗಿದ್ದ ಗುರು-ಶಿಷ್ಯರ ಸಮಾಗಮವಾಗಲಿದೆ ! ಹೌದು, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ದಿನಾಂಕ ಹತ್ತಿರವಾಗುತ್ತಿರುವ ನಡುವೆಯೇ ಅಖಾಡಾ ರಂಗೇರುತ್ತಿದ್ದು ,  ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಒಂದು ಕಾಲದ ಶಿಷ್ಯ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರವಾಗಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಕೂಡ್ಲಿಗಿಯಲ್ಲಿ ಪ್ರಚಾರ ಭಾಷಣ ಮಾಡುವರು. ಇದಕ್ಕೂ ಮೊದಲು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ , […]

ಲಂಚ ಕೇಳಿದ ಕಾಂಗ್ರೆಸ್ ಎಂಎಲ್ ಎ ಅಂದರ್ !

ಲಂಚ ಕೇಳಿದ ಕಾಂಗ್ರೆಸ್ ಎಂಎಲ್ ಎ ಅಂದರ್ !

ಮೊರಬಿ( ಗುಜರಾತ್) ನೀರಾವರಿ ಇಲಾಖೆಯ ಇಂಜಿನಿಯರ್ ಒಬ್ಬರಿಗೆ ಭಾರೀ ಪ್ರಮಾಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂಎಲ್ ಎ ಒಬ್ಬರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಧ್ರಂಗದ್ರಾ ಪ್ರದೇಶದ ಕಾಂಗ್ರೆಸ್ ಎಂಎಲ್ ಎ ಪರಸೋತ್ತಮ್ ಸಬಾಹಿತ ಬಂಧಿತ ಆರೋಪಿ. ಎಂಎಲ್ ಎ ಜತೆ ನ್ಯಾಯವಾದಿ ಭರತ ಗಣೇಶ, ಒಬ್ಬ ಸಹಾಯಕ ಇಂಜಿನಿಯರ್, ಒಬ್ಬ ಗುತ್ತಿಗೆದಾರ ಹಾಗೂ ಇನ್ನಿಬ್ಬರನ್ನೂ ಬಂಧಿಸಲಾಗಿದೆ. ನೀರಾವರಿ ಇಲಾಖೆ ಇಂಜಿನಿಯರ್ ಗೆ ಎಂಎಲ್ ಎ 60 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದು 35 ಲಕ್ಷಕ್ಕೆ […]

ಶೃತಿ ಹರಿಹರನ್ ಗೆ ನಿರ್ಬಂಧಕಾಜ್ಞೆ : ಇಂದು ತೀರ್ಪು

ಶೃತಿ ಹರಿಹರನ್ ಗೆ ನಿರ್ಬಂಧಕಾಜ್ಞೆ : ಇಂದು ತೀರ್ಪು

ಬೆಂಗಳೂರು: ತಮ್ಮ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ನಟಿ ಶೃತಿ ಹರಿಹರನ್ ವಿರುದ್ಧ ಬಹುಭಾಷಾ ನಟ ಅರ್ಜುನ ಸರ್ಜಾ ಹೂಡಿರುವ ಮಾನಹಾನಿ ಮೊಕದ್ದಮೆಯ ಮೇಲಿನ ಮಹತ್ವದ ತೀರ್ಪು ಇಂದು ಹೊರಬೀಳಲಿದೆ. ಶೃತಿಗೆ ನಿರ್ಬಂಧ ಹೇರಬೇಕು, ಐದು ಕೋಟಿ ರೂ. ಪರಿಹಾರ ಕೊಡಿಸಬೇಕು ಎಂದು ಅರ್ಜುನ ಸರ್ಜಾ ಸಿಟಿ ಸಿವಿಲ್ ಕೋರ್ಟನಲ್ಲಿ ದಾವೆ ಹೂಡಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಮೆಯೋ ಹಾಲ್ ನಲ್ಲಿರುವ ಸಿಟಿ ಸಿವಿಲ್ ಕೋರ್ಟ್ 29 ನೇ ನ್ಯಾಯಾಲಯವು ಶೃತಿಗೆ ನಿರ್ಬಂಧ ಹೇರುವ ಕುರಿತಾದ […]

ತೋಂಟದಾರ್ಯ ಮಠಕ್ಕೆ ಸಿದ್ದರಾಮಶ್ರೀ ಪೀಠಾರೋಹಣ ಇಂದು

ತೋಂಟದಾರ್ಯ ಮಠಕ್ಕೆ ಸಿದ್ದರಾಮಶ್ರೀ ಪೀಠಾರೋಹಣ ಇಂದು

ಗದಗ: ಇಲ್ಲಿಯ ಸುಪ್ರಸಿದ್ಧ ತೋಂಟದಾರ್ಯಮಠದ ನೂತನ ಪೀಠಾಧಿಪತಿಯಾಗಿ ಬೆಳಗಾವಿ ನಾಗನೂರು ಮಠದ ಡಾ. ಸಿದ್ಧರಾಮಸ್ವಾಮೀಜಿ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತೋಂಟದಾರ್ಯ ಮಠದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀಮಠದ 20 ನೇ ಪೀಠಾಧಿಪತಿಯಾಗಿ ಡಾ. ನಿರಂಜನ ಸಿದ್ಧರಾಮ ಶ್ರೀಗಳಾಗಿ ಅಧಿಕಾರ ವಹಿಸಿಕೊಳ್ಳುವರು. ಹುಬ್ಬಳ್ಳಿ ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸುವರು. ನೂತನ ಪೀಠಾಧಿಪತಿ ಡಾ. ನಿರಂಜನ ಸಿದ್ಧರಾಮ ಸ್ವಾಮೀಜಿ ಈಗಾಗಲೇ ಪೂಜಾ ಕೈಂಕರ್ಯ ಆರಂಭಿಸಿದ್ದಾರೆ. Views: 103

ಜಮಖಂಡಿಯಲ್ಲಿ ಇಂದು ಬಿಎಸ್ ವೈ ಬ್ಯಾಟಿಂಗ್

ಜಮಖಂಡಿಯಲ್ಲಿ ಇಂದು ಬಿಎಸ್ ವೈ ಬ್ಯಾಟಿಂಗ್

ಜಮಖಂಡಿ: ನವೆಂಬರ್ 3 ರಂದು ನಡೆಯಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಇಂದು ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರಣ್ಇ ಪರ ಯಡಿಯೂರಪ್ಪ ಪ್ರಚಾರ ನಡೆಸುವರು. ದಿವಂಗತ ಶಾಸಕ ಸಿದ್ದು ನ್ಯಾಮಗೌಡರ ಪುತ್ರ ಆನಂದ ನ್ಯಾಮಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದ ಕಣದಲ್ಲಿದ್ದು,ಅವರ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಎಚ್. ವೈ. ಮೇಟಿ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಅನೇಕ ಮುಖಂಡರು […]

667 ಕೋಟಿ ರೂ. ಡೀಲ್ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಅಂದರ್ !!

667 ಕೋಟಿ ರೂ. ಡೀಲ್ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಅಂದರ್ !!

ಬಾಗಲಕೋಟೆ: ಅಮಾನ್ಯಗೊಂಡಿರುವ ನೋಟುಗಳ ವಿನಿಮಯದ ಭಾರೀ ಜಾಲವೊಂದನ್ನು ಭೇದಿಸಿರುವ ಬಾಗಲಕೋಟೆ ನವನಗರ ಠಾಣೆ ಪೊಲೀಸರು ಈ ಸಂಬಂಧ ನಾನಾ ರಾಜ್ಯಗಳ 12 ಜನರನ್ನು ಬಂಧಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ತಾನ, ಗೋವಾ ಮೂಲದ ಒಟ್ಟು ಹನ್ನೆರಡು ಜನರು ಈ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಆರೋಪಿಗಳು ನಗರದ ಪ್ರತಿಷ್ಠಿತ ಹೋಟೆಲೊಂದರಲ್ಲಿ  ನಾಲ್ಕು ದಿನಗಳಿಂದ ತಂಗಿ ಡೀಲ್ ನಡೆಸಿದ್ದರು. ಬರೋಬ್ಬರಿ 667 ಕೋಟಿ ರೂ. ಗಳ ಡೀಲ್ ಅದಾಗಿತ್ತು. ನೂರು ರೂ. ಗೆ 30 ರೂ. ಕಮಿಷನ್ ಪಡೆಯುವ […]