ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಜನಾರ್ದನ ರೆಡ್ಡಿ ಪೊಲೀಸರಿಗೆ ಶರಣಾಗ್ತಾರಾ?

ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಜನಾರ್ದನ ರೆಡ್ಡಿ ಪೊಲೀಸರಿಗೆ ಶರಣಾಗ್ತಾರಾ?

ಬೆಂಗಳೂರು: ಅಂಬಿಡೆಂಟ್ ಸಂಸ್ಥೆಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಬೇಕಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಒಂದೆಡೆ ನಿರೀಕ್ಷಣಾ ಜಾಮೀನು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದು, ಇನ್ನೊಂದೆಡೆ ಪೊಲೀಸರಿಗೆ ಶರಣಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ಹೈದರಾಬಾದನಲ್ಲಿ ತಲೆಮರೆಸಿಕೊಂಡಿರುವ ರೆಡ್ಡಿ ಪರ ವಕೀಲ ಚಂದ್ರಶೇಖರ ಸಿಟಿ ಸಿವಿಲ್ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಸಿಸಿಬಿ ಪೊಲೀಸರ ನಿರಂತರ ಶೋಧ ಕಾರ್ಯದಿಂದ ರೆಡ್ಡಿ ಕುಟುಂಬ ತೀವ್ರ ಒತ್ತಡಕ್ಕೆ ಒಳಗಾಗಿದೆ ಎನ್ನಲಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು […]

ನ.11 ರಂದು ವಾಲ್ಮೀಕಿ ಸಮುದಾಯದ ವಧು-ವರರ ಸಮಾವೇಶ

ನ.11 ರಂದು ವಾಲ್ಮೀಕಿ ಸಮುದಾಯದ ವಧು-ವರರ ಸಮಾವೇಶ

ಬೆಳಗಾವಿ: ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಸಹಯೋಗದಲ್ಲಿ ನವೆಂಬರ್ 11 ರಂದು ನಗರದಲ್ಲಿ ವಾಲ್ಮೀಕಿ ಸಮುದಾಯದ ವಧು-ವರರ ಸಮಾವೇಶ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಕಿರ್ಲೋಸ್ಕರ್ ರಸ್ತೆಯ ವಾಘ್ಮಯ ಚರ್ಚಾ ಮಂಡಳದಲ್ಲಿ ಈ ಸಮಾವೇಶ ಏರ್ಪಡಿಸಲಾಗಿದ್ದು, ವಿವರಗಳಿಗೆ ದೂರವಾಣಿ ಸಂಖ್ಯೆ 9742320408 ಸಂಪರ್ಕಿಸಲು ಕೋರಲಾಗಿದೆ. Views: 366

ಪ್ರತಿಭಟನೆಯಲ್ಲಿ ಶುಕ್ರವಾರ ಕಾಲ ಕಳೆದ ಕೈ-ಕಮಲ ಪಡೆಗಳು !

ಪ್ರತಿಭಟನೆಯಲ್ಲಿ ಶುಕ್ರವಾರ ಕಾಲ ಕಳೆದ ಕೈ-ಕಮಲ ಪಡೆಗಳು !

ಬೆಂಗಳೂರು: ರಾಜ್ಯ ಸರಕಾರ  ನಾಳೆ  ಟಿಪ್ಪು ಜಯಂತಿ ಆಚರಣಗೆ ಮುಂದಾಗಿರುವುದನ್ನು ಪ್ರತಿಭಟಿಸಿ ಭಾರತೀಯ ಜನತಾಪಕ್ಷವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ನೋಟು ನಿಷೇಧಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕರಾಳ ದಿನ ಆಚರಣೆ ಮಾಡಿತು. ಮೈಸೂರು, ಕೊಡಗು, ಚಿತ್ರದುರ್ಗಗಳಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಸ್ವಲ್ಪ ಜೋರಾಗಿಯೇ ಪ್ರತಿಭಟನೆ ನಡೆಸಿತು. ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಣೆಗೆ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದರು. ಬೆಂಗಳೂರಿನ ಮೌರ್ಯ ಸರ್ಕಲ್ […]

ಹಾಸನಾಂಬೆ ದರ್ಶನಕ್ಕೆ ಇಂದು ತೆರೆ

ಹಾಸನಾಂಬೆ ದರ್ಶನಕ್ಕೆ ಇಂದು ತೆರೆ

ಹಾಸನ: ಇಲ್ಲಿಯ ಪ್ರತಿಷ್ಠಿತ ಹಾಸನಾಂಬೆ ದೇವಾಲಯದ ಹಾಸನಾಂಬೆ ಉತ್ಸವಕ್ಕೆ ಇಂದು ತೆರೆಬೀಳಲಿದೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಾಸನಾಂಬೆ ದೇಗುಲದ ಗರ್ಭಗುಡಿಗೆ ಇಂದು ಮಧ್ಯಾಹ್ನ ಬೀಗ ಹಾಕಲಾಗುತ್ತದೆ. ಈ ವರ್ಷ ನವೆಂಬರ್ 1 ರಿಂದ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಕುಟುಂಬ ಸದಸ್ಯರೂ ಸೇರಿದಂತೆ ಸಾವಿರಾರು ಜನರು ಹಾಸನಾಂಬೆ ದರ್ಶನ ಪಡೆದುಕೊಂಡರು. ಹಾಸನಾಂಬೆಯ ನೇರ ದರ್ಶನಕ್ಕೆ ಶುಲ್ಕ ಹೆಚ್ಚಳ ಮಾಡಿದ್ದು ಭಕ್ತರ ಕೆಂಗಣ್ಣಿಗೂ ಗುರಿಯಾಗಿತ್ತು. Views: 53

ಈ ಬಾರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಈ ಬಾರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಸಮಾರಂಭ ನವೆಂಬರ್ 15 ರಂದು ನಡೆಯಲಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಬಾರಿ 63 ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 63 ಸಾಧಕರ  ಪಟ್ಟಿಯನ್ನು ಸಿಎಂ ಕುಮಾರಸ್ವಾಮಿ ಸಿದ್ದಪಡಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾಗೆ ಅಂತಿಮ ತೀರ್ಮಾನಕ್ಕಾಗಿ ಹಸ್ತಾಂತರಿಸಿದ್ದಾರೆ. Views: 175

ನಟ ದುನಿಯಾ ವಿಜಿ ಮೊದಲ ಪತ್ನಿಗೆ ಕೋರ್ಟ್ ಹೇಳಿದ್ದಾದರೂ ಏನು ?

ನಟ ದುನಿಯಾ ವಿಜಿ ಮೊದಲ ಪತ್ನಿಗೆ ಕೋರ್ಟ್ ಹೇಳಿದ್ದಾದರೂ ಏನು ?

ಬೆಂಗಳೂರು: ಪತ್ನಿಯಿಂದ ವಿಚ್ಛೇದನ ಕೊಡಿಸುವಂತೆ  ನಟ ದುನಿಯಾ ವಿಜಯ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದುನಿಯಾ ವಿಜಿ ಮನೆಗೆ ಹೋಗದಂತೆ ಕೌಟುಂಬಿಕ ನ್ಯಾಯಾಲಯ ನಾಗರತ್ನಾಗೆ ನಿರ್ಬಂಧ ವಿಧಿಸಿದೆ. ದುನಿಯಾ ವಿಜಿ ಅಥವಾ ಅವರ ಕುಟುಂಬದವರ ಬಗ್ಗೆ ಹೇಳಿಕೆ ನೀಡಕೂಡದು, ಅಥವಾ ಮಾಧ್ಯಮಗಳಿಗೆ ಸಂದರ್ಶನ ನೀಡಕೂಡದು ಎಂದು ನ್ಯಾಯಾಲಯ ತನ್ನ ಮಧ್ಯಂತರ ಆದೇಶದಲ್ಲಿ ಸೂಚಿಸಿದೆ. ದುನಿಯಾ ಅರ್ಜಿಯನ್ನು ಕೋರ್ಟಿನಲ್ಲಿ ಇನ್ ಕ್ಯಾಮರಾದಲ್ಲಿ ವಿಚಾರಣೆ ನಡೆಸುವುದಾಗಿಯೂ ನ್ಯಾಯಾಲಯ ತಿಳಿಸಿದೆ. Views: 125

ಟಿಪ್ಪು ಜಯಂತಿಗೆ ಗೈರಾಗಿ ಸಿಎಂ ಹೊರಟಿದ್ದೆಲ್ಲಿಗೆ ?

ಟಿಪ್ಪು ಜಯಂತಿಗೆ ಗೈರಾಗಿ ಸಿಎಂ ಹೊರಟಿದ್ದೆಲ್ಲಿಗೆ ?

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಗೈರುಹಾಜರಾಗಲಿರುವ ಸಿಎಂ ಕುಮಾರಸ್ವಾಮಿ ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿಗಾಗಿ ಹೊರಟು ನಿಂತಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಜತೆ ಸೇರಿ ಮೈಸೂರಿನ ಖಾಸಗಿ ಸ್ಥಳವೊಂದರಲ್ಲಿ ಸಿಎಂ ವಿಶ್ರಾಂತಿ ಪಡೆಯುವರು. ವೈದ್ಯರ ಸೂಚನೆ ಮೇರೆಗೆ ಸಿಎಂ ವಿಶ್ರಾಂತಿಗೆ ತೆರಳಿದ್ದು, ಈ ಕುರಿತಂತೆ ಸಚಿವ ಜಮೀರ್ ಅಹ್ಮದ ಗೆ ಮೊದಲೇ ತಿಳಿಸಿದ್ದರು ಎಂದು ಹೇಳಲಾಗಿದೆ. ಹಾಗಾಗಿಯೇ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕುವುದು ಬೇಡ ಎಂದು ಅವರು […]

ಮಹದಾಯಿ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಮಹದಾಯಿ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಟ್ರಿಬ್ಯುನಲ್ ನೀಡಿರುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ನವೆಂಬರ್ 12 ರಂದು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ತೀರ್ಪಿನ ಸ್ಪಷ್ಟೀಕರಣ ಕೋರಿ ನವೆಂಬರ್ 13 ರಂದು ಅರ್ಜಿ ಸಲ್ಲಿಕೆಯಾಗಲಿದೆ. ಗೋವಾ ಸರಕಾರವು ತೀರ್ಪಿನ ಸ್ಪಷ್ಟೀಕರಣ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದೆ. ಕುಡಿಯುವ ನೀರಿಗಾಗಿ 7.5 ಟಿಎಂಸಿ ಪಾಲು ನೀಡುವಂತೆ ರಾಜ್ಯ ಸರಕಾರ ಕೋರಿದೆ. Views: 85

ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಇನ್ನಿಲ್ಲ

ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಇನ್ನಿಲ್ಲ

ಜಮಖಂಡಿ: ಮಾಜಿ ಶಾಸಕ ಬಾಬುರೆಡ್ಡಿ ತುಂಗಳ (84) ವಿಧಿವಶರಾಗಿದ್ದಾರೆ. ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. 1985 ರಲ್ಲಿ ಅವರು ಬೀಳಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಾರ್ಚ್ 13, 1933 ರಲ್ಲಿ ಜನಿಸಿದ್ದ ಅವರು, ಪತ್ರಿಕೋದ್ಯಮದ ಮೂಲಕವೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕುರುಕ್ಷೇತ್ರ, ದಡಲ್ ಬಾಜಿ ಅವರ ಸಂಪಾದಕತ್ವದ ಪತ್ರಿಕೆಗಳಾಗಿದ್ದವು. Views: 255

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸ್ತಾರಾ ಜನಾರ್ದನರೆಡ್ಡಿ ?

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸ್ತಾರಾ ಜನಾರ್ದನರೆಡ್ಡಿ ?

ಬೆಂಗಳೂರು: ಅಂಬಿಡೆಂಟ್ ಸಂಸ್ಥೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಬೇಕಾಗಿರುವ ಮಾಜಿ ಸಚಿವ ಜನಾರ್ದನರೆಡ್ಡಿಗಾಗಿ ಒಂದೆಡೆ ಶೋಧ ಕಾರ್ಯ ನಿರಂತರ ಮುಂದುವರಿದಿದ್ದು, ಇನ್ನೊಂದೆಡೆ ಅವರ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಕಳೆದ ಕೆಲವು ದಿನಗಳಿಂದ ವಿವಿಧ ತಂಡಗಳಲ್ಲಿ ಸಿಸಿಬಿ ಪೊಲೀಸರು ಬೆಂಗಳೂರು, ಹೈದರಾಬಾದ ನ ಹೋಟೆಲು, ರೆಸಾರ್ಟ್ , ರೆಡ್ಡಿ ಆಪ್ತರು, ಸಂಬಂಧಿಗಳ ಮನೆಗಳಲ್ಲಿ ತಲಾಶ್ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ. ಈ ನಡುವೆ ನಗರದ ಸಿಟಿ ಸಿವಿಲ್ ಕೋರ್ಟ್ […]