ಕ್ಷೇತ್ರದ ಕಡೆ ಸುಳಿಯದ ಸಂತೋಷ ಲಾಡ್ !

ಕ್ಷೇತ್ರದ ಕಡೆ ಸುಳಿಯದ ಸಂತೋಷ ಲಾಡ್ !

ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿರುವ ನಡುವೆಯೇ ಮಾಜಿ ಸಚಿವ ಸಂತೋಷ ಲಾಡ್ ಎಲ್ಲಿ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಉಪಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದರೂ ಪ್ರಚಾರದ  ಉಸ್ತುವಾರಿಗೆ ನೇಮಕವಾಗಿರುವ ಸಂತೋಷ ಲಾಡ್ ಇದುವರೆಗೂ ಕ್ಷೇತ್ರದತ್ತ ಸುಳಿಯದಿರುವುದು ಅಚ್ಚರಿ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಲಾಡ್ ದುಬೈನಲ್ಲಿ ಬೀಡು ಬಿಟ್ಟಿರುವುದಾಗಿ ಹೇಳಲಾಗುತ್ತಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಜತೆಗಿನ ಮುನಿಸಿನಿಂದಾಗಿ ಪ್ರಚಾರದಿಂದ ಅವರು ದೂರ ಉಳಿದಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. Views: 206

ಬಳ್ಳಾರಿಯಲ್ಲಿ ಇಂದು ಬಿಎಸ್ ವೈ ಪ್ರಚಾರ

ಬಳ್ಳಾರಿಯಲ್ಲಿ ಇಂದು ಬಿಎಸ್ ವೈ ಪ್ರಚಾರ

ಬಳ್ಳಾರಿ: ನವೆಂಬರ್ 3 ರಂದು ನಡೆಯಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರುತ್ತಿದ್ದು , ಬಿಜೆಪಿ ಅಭ್ಯರ್ಥಿ ಜಿ. ಶಾಂತಾ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ ನಗರದಲ್ಲಿ ನಡೆಯುವ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ನಂತರ ಸಂಜೆ ಕಲ್ಯಾಣಸ್ವಾಮಿ ಮಠಕ್ಕೆ ಬಿಎಸ್ ವೈ ಭೇಟಿ ನೀಡುವ ಕಾರ್ಯಕ್ರಮವಿದೆ. Views: 97

ಜಮಖಂಡಿ ಕ್ಷೇತ್ರದಲ್ಲಿ ಇಂದೂ ಸಿದ್ದು ಪ್ರಚಾರ

ಜಮಖಂಡಿ ಕ್ಷೇತ್ರದಲ್ಲಿ ಇಂದೂ ಸಿದ್ದು ಪ್ರಚಾರ

ಬಾಗಲಕೋಟೆ: ನವೆಂಬರ್ 3 ರಂದು ನಡೆಯಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷ ಭರದ ಪ್ರಚಾರ ಮುಂದುವರಿಸಿದ್ದು, ಆನಂದ ನ್ಯಾಮಗೌಡ ಪರವಾಗಿ ಇಂದೂ ಕೂಡ ಮಾಜಿ ಸಿಎಂ ಸಿದ್ಧರಾಮಯ್ಯ ಮತಬೇಟೆಯಾಡಲಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಾರಹಳ್ಳಿ, ತುಂಗಳ, ಲಿಂಗಾನೂರು ಗ್ರಾಮಗಳಲ್ಲಿ ನಡೆಯಲಿರುವ ಪ್ರಚಾರ ಸಭೆಗಳಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳುವರು. ಜಿಲ್ಲೆಯ ಹಲವು ಕೈ ನಾಯಕರು ಸಿದ್ದುಗೆ ಸಾಥ್ ನೀಡಲಿದ್ದಾರೆ. Views: 120

ಲಾರಿ ಡಿಕ್ಕಿ: ಅಂಬುಲೆನ್ಸ ನಲ್ಲಿದ್ದ ಮೂವರ ದುರ್ಮರಣ

ಲಾರಿ ಡಿಕ್ಕಿ: ಅಂಬುಲೆನ್ಸ ನಲ್ಲಿದ್ದ ಮೂವರ ದುರ್ಮರಣ

ಉಡುಪಿ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿ, ಇತರೆ ಮೂವರು ಗಾಯಗೊಂಡಿರುವ ಘಟನೆ ಕೋಟಮಣೂರು ಗ್ರಾಮದ ಬಳಿ ಸಂಭವಿಸಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟಮಣೂರು ಗ್ರಾಮದ ಬಳಿ ಈ ಭೀಕರ ದುರಂತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Views: 87

ಸಿದ್ದು ನ್ಯಾಮಗೌಡರ ಕನಸು ನನಸಾಗಿಸಲು ಕಾಂಗ್ರೆಸ್ ಗೆಲ್ಲಿಸಿ: ಸತೀಶ ಜಾರಕಿಹೊಳಿ ಮನವಿ

ಸಿದ್ದು ನ್ಯಾಮಗೌಡರ ಕನಸು ನನಸಾಗಿಸಲು ಕಾಂಗ್ರೆಸ್ ಗೆಲ್ಲಿಸಿ: ಸತೀಶ ಜಾರಕಿಹೊಳಿ ಮನವಿ

ಜಮಖಂಡಿ: ದಿವಂಗತ ಶಾಸಕ ಸಿದ್ದು ನ್ಯಾಮಗೌಡರು ಜಮಖಂಡಿ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕಂಡಿದ್ದ ಕನಸು ನನಸಾಗಿಸಲು ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮನವಿ ಮಾಡಿದರು. ನವೆಂಬರ್ 3 ರಂದು ನಡೆಯಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆನಂದ ನ್ಯಾಮಗೌಡರ ಪರವಾಗಿ ಸತತ ಎರಡನೇ ದಿನವೂ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಭರದ ಪ್ರಚಾರ ನಡೆಸಿದ ಅವರು ಸಾಮಾಜಿಕ ನ್ಯಾಯ, ಸಾಮಾಜಿಕ ಕಳಕಳಿ ಹೊಂದಿರುವುದರೊಂದಿಗೆ […]

ಮಾನನಷ್ಟ ಮೊಕದ್ದಮೆ: ಶೃತಿ ಹರಿಹರನ್ ಗೆ ಕೋರ್ಟ್ ನೋಟೀಸ್

ಮಾನನಷ್ಟ ಮೊಕದ್ದಮೆ: ಶೃತಿ ಹರಿಹರನ್ ಗೆ ಕೋರ್ಟ್ ನೋಟೀಸ್

ಬೆಂಗಳೂರು: ಬಹುಭಾಷಾ ನಟ ಅರ್ಜುನ ಸರ್ಜಾ ನಟಿ ಶೃತಿ ಹರಿಹರನ್ ವಿರುದ್ಧ  ಹೂಡಿರುವ ಮಾನನಷ್ಟ  ಮೊಕದ್ದಮೆ ಕುರಿತಂತೆ ಇಲ್ಲಿಯ ಸಿಟಿ ಸಿವಿಲ್ ಕೋರ್ಟ್ ಶೃತಿಗೆ ನೋಟೀಸು ಜಾರಿ ಮಾಡಿದೆ. ಶೃತಿಗೆ ನಿರ್ಬಂಧ ವಿಧಿಸಬೇಕು. ತಮಗೆ 5 ಕೋಟಿ ರೂ. ಗಳ ಪರಿಹಾರ ಭರಿಸಿಕೊಡಬೇಕು ಎಂದು ಅರ್ಜುನ ಸರ್ಜಾ ನಿನ್ನೆ ಧ್ರುವ ಸರ್ಜಾ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾದಿರಿಸಿತ್ತು. ಮೆಯೋ ಹಾಲ್ ನಲ್ಲಿರುವ ಸಿಟಿ ಸಿವಿಲ್ ಕೋರ್ಟ್ ನ […]

ಸಿಬಿಐ ಎದುರು ಪ್ರತಿಭಟನೆ: ರಾಹುಲ್ ಸೇರಿ ಕಾಂಗ್ರೆಸ್ ನಾಯಕರ ಬಂಧನ

ಸಿಬಿಐ ಎದುರು ಪ್ರತಿಭಟನೆ: ರಾಹುಲ್ ಸೇರಿ ಕಾಂಗ್ರೆಸ್ ನಾಯಕರ ಬಂಧನ

ಹೊಸದಿಲ್ಲಿ :ಸಿಬಿಐ ಕಚೇರಿ ಎದುರು ಪ್ರತಿಭಟನೆಯಲ್ಲಿ ನಿರತರಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸಲಾಗಿದೆ ಎಂದು ಪಕ್ಷದ ವಕ್ತಾರ ರಣದೀಪ ಸುರ್ಜಿವಾಲೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಿಬಿಐ ಸಂಸ್ಥೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರವು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂದು  ಆರೋಪಿಸಿ ಕಾಂಗ್ರೆಸ್ ಪಕ್ಷ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ ಹಾಗೂ ರಾಕೇಶ ಅಸ್ತಾನಾ ಅವರು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಂಡಿದ್ದರಿಂದ ಅವರನ್ನು ಕೇಂದ್ರ ಸರಕಾರ ಕಡ್ಡಾಯ ರಜೆಯ ಮೇಲೆ […]

ಬೆಳಗಾವಿಯಲ್ಲಿ ಡಿಸೆಂಬರನಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿಯಲ್ಲಿ ಡಿಸೆಂಬರನಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ: ಡಿಸೆಂಬರನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳ ಕಲಾಪ ನಡೆಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸಚಿವ ಬಂಡೆಪ್ಪ ಕಾಶೇಂಪುರ ತಿಳಿಸಿದ್ದಾರೆ. ಕಲಾಪದ ದಿನಾಂಕವನ್ನು ಸಿಎಂ ಪ್ರಕಟಿಸಲಿದ್ದು, ಸದ್ಯ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಅವರು ತಿಳಿಸಿದರು. Views: 241

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಮೇಲೆ ಇಡಿ ದಾಳಿ !

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಮೇಲೆ ಇಡಿ ದಾಳಿ !

ಬೆಂಗಳೂರು: ಇಲ್ಲಿಯ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಮೇಲೆ ಗುರುವಾರ ಮಧ್ಯರಾತ್ರಿ 2 ಗಂಟೆಯಿಂದಲೇ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಈ ಶೋಧ ಕಾರ್ಯ ನಡೆದಿದೆ. Views: 120

ಪ್ರಶಾಂತ ಸಂಬರಗಿ ವಿರುದ್ಧ ಶೃತಿ ಹರಿಹರನ್ ದೂರು

ಪ್ರಶಾಂತ ಸಂಬರಗಿ ವಿರುದ್ಧ ಶೃತಿ ಹರಿಹರನ್ ದೂರು

ಬೆಂಗಳೂರು: ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ನಟಿ ಶೃತಿ ಹರಿಹರನ್ ಮೇಲೆ ಒಂದೆಡೆ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಿದ್ದರೆ ಇನ್ನೊಂದೆಡೆ ಸರ್ಜಾ ಆಪ್ತ ಪ್ರಶಾಂತ ಸಂಬರಗಿ ವಿರುದ್ಧ ಶೃತಿ ಕೊಲೆ ಆರೋಪ ದೂರು ದಾಖಲಿಸಿದ್ದಾರೆ. ನಿನ್ನೆ ತಡರಾತ್ರಿ 1 ಗಂಟೆಗೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಸಂಬರಗಿ ವಿರುದ್ಧ ದೂರು ದಾಖಲಿಸಿರುವ ಶೃತಿ, ತಮ್ಮ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಎಂದೂ ದೂಷಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿರುವ ನಡುವೆಯೇ ಶೃತಿ […]