ಸಿಬಿಐ ಎದುರು ಪ್ರತಿಭಟನೆ: ರಾಹುಲ್ ಸೇರಿ ಕಾಂಗ್ರೆಸ್ ನಾಯಕರ ಬಂಧನ

ಸಿಬಿಐ ಎದುರು ಪ್ರತಿಭಟನೆ: ರಾಹುಲ್ ಸೇರಿ ಕಾಂಗ್ರೆಸ್ ನಾಯಕರ ಬಂಧನ

ಹೊಸದಿಲ್ಲಿ :ಸಿಬಿಐ ಕಚೇರಿ ಎದುರು ಪ್ರತಿಭಟನೆಯಲ್ಲಿ ನಿರತರಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸಲಾಗಿದೆ ಎಂದು ಪಕ್ಷದ ವಕ್ತಾರ ರಣದೀಪ ಸುರ್ಜಿವಾಲೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಿಬಿಐ ಸಂಸ್ಥೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರವು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂದು  ಆರೋಪಿಸಿ ಕಾಂಗ್ರೆಸ್ ಪಕ್ಷ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ ಹಾಗೂ ರಾಕೇಶ ಅಸ್ತಾನಾ ಅವರು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಂಡಿದ್ದರಿಂದ ಅವರನ್ನು ಕೇಂದ್ರ ಸರಕಾರ ಕಡ್ಡಾಯ ರಜೆಯ ಮೇಲೆ […]

ಬೆಳಗಾವಿಯಲ್ಲಿ ಡಿಸೆಂಬರನಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿಯಲ್ಲಿ ಡಿಸೆಂಬರನಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ: ಡಿಸೆಂಬರನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳ ಕಲಾಪ ನಡೆಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸಚಿವ ಬಂಡೆಪ್ಪ ಕಾಶೇಂಪುರ ತಿಳಿಸಿದ್ದಾರೆ. ಕಲಾಪದ ದಿನಾಂಕವನ್ನು ಸಿಎಂ ಪ್ರಕಟಿಸಲಿದ್ದು, ಸದ್ಯ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಅವರು ತಿಳಿಸಿದರು. Views: 243

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಮೇಲೆ ಇಡಿ ದಾಳಿ !

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಮೇಲೆ ಇಡಿ ದಾಳಿ !

ಬೆಂಗಳೂರು: ಇಲ್ಲಿಯ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಮೇಲೆ ಗುರುವಾರ ಮಧ್ಯರಾತ್ರಿ 2 ಗಂಟೆಯಿಂದಲೇ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಈ ಶೋಧ ಕಾರ್ಯ ನಡೆದಿದೆ. Views: 120

ಪ್ರಶಾಂತ ಸಂಬರಗಿ ವಿರುದ್ಧ ಶೃತಿ ಹರಿಹರನ್ ದೂರು

ಪ್ರಶಾಂತ ಸಂಬರಗಿ ವಿರುದ್ಧ ಶೃತಿ ಹರಿಹರನ್ ದೂರು

ಬೆಂಗಳೂರು: ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ನಟಿ ಶೃತಿ ಹರಿಹರನ್ ಮೇಲೆ ಒಂದೆಡೆ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಿದ್ದರೆ ಇನ್ನೊಂದೆಡೆ ಸರ್ಜಾ ಆಪ್ತ ಪ್ರಶಾಂತ ಸಂಬರಗಿ ವಿರುದ್ಧ ಶೃತಿ ಕೊಲೆ ಆರೋಪ ದೂರು ದಾಖಲಿಸಿದ್ದಾರೆ. ನಿನ್ನೆ ತಡರಾತ್ರಿ 1 ಗಂಟೆಗೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಸಂಬರಗಿ ವಿರುದ್ಧ ದೂರು ದಾಖಲಿಸಿರುವ ಶೃತಿ, ತಮ್ಮ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಎಂದೂ ದೂಷಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿರುವ ನಡುವೆಯೇ ಶೃತಿ […]

ಮಂಡ್ಯ ಕ್ಷೇತ್ರದಲ್ಲಿ ಇಂದು ಸಿಎಂ ಮತಬೇಟೆ

ಮಂಡ್ಯ ಕ್ಷೇತ್ರದಲ್ಲಿ ಇಂದು ಸಿಎಂ ಮತಬೇಟೆ

ಮಂಡ್ಯ: ನವೆಂಬರ್ 3 ರಂದು ನಡೆಯಲಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಎಲ್.ಆರ್. ಶಿವರಾಮೇಗೌಡ ಪರವಾಗಿ ಸಿಎಂ ಕುಮಾರಸ್ವಾಮಿ ಇಂದು ಮತಬೇಟೆ ಮಾಡಲಿದ್ದಾರೆ. ಉಪಚುನಾವಣೆ ಅಖಾಡಾಕ್ಕೆ ಇಂದಿನಿಂದ ಅಧಿಕೃತವಾಗಿ ಧುಮುಕಲಿರುವ ಕುಮಾರಸ್ವಾಮಿ, ಮಳವಳ್ಳಿ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವರು. ಪ್ರಚಾರ ಸಭೆಗಳ ನಂತರ ಸಿಎಂ ಇಂದು ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. Views: 106

ಶೃತಿ ಹರಿಹರನ್ ವಿರುದ್ಧ ಕೇಸ್: ಇಂದು ಮಧ್ಯಂತರ ತೀರ್ಪು

ಶೃತಿ ಹರಿಹರನ್ ವಿರುದ್ಧ ಕೇಸ್: ಇಂದು ಮಧ್ಯಂತರ ತೀರ್ಪು

ಬೆಂಗಳೂರು: ಬಹುಭಾಷಾ ನಟ ಅರ್ಜುನ ಸರ್ಜಾ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊರಿಸಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ನಟಿ ಶೃತಿ ಹರಿಹರನ್ ಅವರಿಗೆ ನಿರ್ಬಂಧಕಾಜ್ಞೆ ವಿಧಿಸಬೇಕೆ? ಎಂಬ ಕುರಿತಂತೆ ಇಂದು ಮಧ್ಯಂತರ ತೀರ್ಪು ಹೊರಬೀಳಲಿದೆ. ಇಲ್ಲಿಯ ಮೇಯೋ ಹಾಲ್ ಆವರಣದಲ್ಲಿರುವ ಸಿಟಿ ಸಿವಿಲ್ ಕೋರ್ಟ ನಲ್ಲಿ ಧ್ರುವ ನಾರಾಯಣ ಮೂಲಕ ನಟಿ ಶೃತಿ ವಿರುದ್ಧ  ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಅರ್ಜುನ  ಸರ್ಜಾ, ಐದು ಕೋಟಿ ರೂ. ಪರಿಹಾರ ಕೋರುವ ಜತೆಗೆ ನಿರ್ಬಂಧಕಾಜ್ಞೆ ವಿಧಿಸುವಂತೆ ಮನವಿ ಮಾಡಿದ್ದರು. […]

ನ್ಯಾಮಗೌಡ ಪರ ಇಂದು ಸತೀಶ ಜಾರಕಿಹೊಳಿ ಬಿರುಸಿನ ಪ್ರಚಾರ

ನ್ಯಾಮಗೌಡ ಪರ ಇಂದು ಸತೀಶ ಜಾರಕಿಹೊಳಿ ಬಿರುಸಿನ ಪ್ರಚಾರ

ಜಮಖಂಡಿ: ದಿವಂಗತ ಶಾಸಕ ಸಿದ್ದು ನ್ಯಾಮಗೌಡರಿಂದ ತೆರವಾಗಿರುವ ಜಮಖಂಡಿ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರ ರಂಗೇರುತ್ತಿದ್ದು, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಇಂದು ತುರುಸಿನ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆಲಬಾಳ , 11 ಕ್ಕೆ ಮುತ್ತೂರು, 12 ಕ್ಕೆ ಮೈಗೂರಿನಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಪ್ರಚಾರ ಕೈಗೊಳ್ಳುವರು. 1 ಗಂಟೆಗೆ ಶಿರಗು, 3 ಗಂಟೆಗೆ ಮರೇಗುದ್ದಿ, 4 ಕ್ಕೆ ಕೊಣ್ಣೂರು, 5 ಗಂಟೆಗೆ ಚಿನಗುಂಡಿ-ಜಕನೂರು, 6 ಕ್ಕೆ ಸನಾಳ ಗ್ರಾಮದಲ್ಲಿ ಪ್ರಚಾರ ಸಭೆ ನಡೆಯಲಿವೆ. […]

ಜಮಖಂಡಿಯಲ್ಲಿ ಇಂದು, ನಾಳೆ ಸಿದ್ದರಾಮಯ್ಯ ಪ್ರಚಾರ

ಜಮಖಂಡಿಯಲ್ಲಿ ಇಂದು, ನಾಳೆ ಸಿದ್ದರಾಮಯ್ಯ ಪ್ರಚಾರ

ಜಮಖಂಡಿ :ನವೆಂಬರ್  ರಂದು ನಡೆಯಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಣದಲ್ಲಿರುವ  ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಪರವಾಗಿ ಪ್ರಚಾರ ಮಾಡಲು ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಜಮಖಂಡಿಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಕಾಲ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಲಿರುವ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ. ಇಂದು ಬೆಳಗ್ಗೆ 11 ಕ್ಕೆ ಚಿಕ್ಕಲಕಿ, 12.30 ಕ್ಕೆ ಹಿರೆಪಡಸಲಗಿ, 4.30 ಕ್ಕೆ ಮುತ್ತೂರ, 6.30 ಕ್ಕೆ ಕಡಪಟ್ಟಿ,7.30 ಕ್ಕೆ ಹುನ್ನೂರಿನಲ್ಲಿ ಪ್ರಚಾರ […]

ನಟಿ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಅರ್ಜುನ ಸರ್ಜಾ !

ನಟಿ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಅರ್ಜುನ ಸರ್ಜಾ !

ಬೆಂಗಳೂರು: ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಿರುವ ನಟಿ ಶೃತಿ ಹರಿಹರನ್ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವ ಬಹುಭಾಷಾ ನಟ ಅರ್ಜುನ ಸರ್ಜಾ , ಶೃತಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಧ್ರುವ ಸರ್ಜಾ ಮೂಲಕ ಬೆಂಗಳೂರಿನ ಸಿವಿಲ್ ಕೋರ್ಟನಲ್ಲಿ ದಾವೆ ಹೂಡಿರುವ ಅರ್ಜುನ ಸರ್ಜಾ ಚಾರಿತ್ರ್ಯವಧೆಯ ದೃಷ್ಟಿಯಿಂದ ಶೃತಿ ಈ ಆರೋಪ ಮಾಡಿದ್ದು, 5 ಕೋಟಿ ರೂ. ಗಳ ನಷ್ಟಪರಿಹಾರ ಕೊಡಿಸಬೇಕು ಮತ್ತು ನಟಿಗೆ ನಿರ್ಬಂಧಕಾಜ್ಞೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ. ಇಂದು ಸಂಜೆ ಅಥವಾ […]

ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಶಿವಮೊಗ್ಗಕ್ಕೆ ತೆರಳಿದ ಸಿದ್ದರಾಮಯ್ಯ !

ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಶಿವಮೊಗ್ಗಕ್ಕೆ ತೆರಳಿದ ಸಿದ್ದರಾಮಯ್ಯ !

ಬೆಂಗಳೂರು: ನವೆಂಬರ್ 3 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಪ್ರಚಾರಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಜಮೀರ್ ಅಹ್ಮದ ಖಾನ್ ಮೊದಲಾದ ನಾಯಕರು ಒಂದೇ ಹೆಲಿಕ್ಯಾಪ್ಟರಿನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದಾರೆ. ಶಿವಮೊಗ್ಗದಿಂದ  ಉಡುಪಿ ಜಿಲ್ಲೆ ಬೈಂದೂರಿಗೆ ತೆರಳಲಿರುವ ನಾಯಕರು ಅಲ್ಲಿ ಪ್ರಚಾರ ನಡೆಸಿದ ನಂತರ ಶಿಕಾರಿಪುರದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವರು. ನಂತರ ಭದ್ರಾವತಿಯಲ್ಲೂ ಜೆಡಿಎಸ್ ಅಭ್ಯರ್ಥಿ ಪರ ಎಲ್ಲರೂ ಬ್ಯಾಟಿಂಗ್ ಮಾಡಲಿದ್ದಾರೆ. Views: 198