ಧಾರಾಕಾರ ಮಳೆ: ತತ್ತರಿಸಿದ ದೇವರ ನಾಡು !

ಧಾರಾಕಾರ ಮಳೆ: ತತ್ತರಿಸಿದ ದೇವರ ನಾಡು !

ಕೊಚ್ಚಿ(ಕೇರಳ):ದೇವರನಾಡು ಕೇರಳದಲ್ಲಿ  ವರುಣನ ಆರ್ಭಟ ಮುಂದುವರಿದಿದ್ದು, ಬರೋಬ್ಬರಿ 67 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ 20 ಸಾವಿರಕ್ಕೂ ಹೆಚ್ಚು ಮನೆಗಳು ಮುಳುಗಿ ಹೋಗಿದ್ದು , ಕೋಟ್ಯಂತರ ರೂ. ನಷ್ಟ  ಉಂಟಾಗಿದೆ. ಕಲ್ಮಾಕೋಲು, ಬಾಜಿಗೋಡು, ಪಂಜ ಸೇರಿದಂತೆ ಹನ್ನೆರಡು ಜಿಲ್ಲೆಗಳಲ್ಲಿ ಸರಕಾರ ರೆಡ್ ಅಲರ್ಟ ಘೋಷಿಸಿದ್ದು ಅಲ್ಲಲ್ಲಿ ಭೂಕುಸಿತ ನಡೆದೇ ಇವೆ. ಎಷ್ಟೋ ಕಡೆಗಳಲ್ಲಿ ರಸ್ತೆಗಳು ಕುಸಿಯುತ್ತಿದ್ದು, ವಾಹನಗಳು ಅದರಡಿ ಸಿಲುಕುತ್ತಿವೆ. ಜನ ಗಾಬರಿಯಿಂದ ಓಡಾಡತೊಡಗಿದ್ದಾರೆ. 1924 ರಲ್ಲಿ ಕೇರಳದಲ್ಲಿ ಇಂತಹ ಭೀಕರ […]

ಪ್ರಾಣ ಉಳಿಸಿಕೊಳ್ಳಲು ಗುಡ್ಡ ಏರಿದ ಗ್ರಾಮಸ್ಥರು !

ಪ್ರಾಣ ಉಳಿಸಿಕೊಳ್ಳಲು ಗುಡ್ಡ ಏರಿದ ಗ್ರಾಮಸ್ಥರು !

ಕೊಡಗು: ಕೊಡಗು ಜಿಲ್ಲೆಯಾದ್ಯಂತ ವರುಣನ  ಆರ್ಭಟ ಜೋರಾಗಿದ್ದು, ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮವಾಗಿ 300 ಕ್ಕೂ ಹೆಚ್ಚು ಮಂದಿ ಗುಡ್ಡವೇರಿ ಕುಳಿತಿದ್ದಾರೆ ! ಮಡಿಕೇರಿ ತಾಲೂಕಿನ ಬದಿಗೆರೆ ಗ್ರಾಮದಲ್ಲಿ ಹತ್ತಿಹೊಳೆ ತುಂಬಿ ಹರಿಯುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಗುಡ್ಡ ಏರಿ ಕುಳಿತಿದ್ದಾರೆ ಎಂದು ವರದಿಗಳು ತಿಳಿಸಿವೆ. ಏತನ್ಮಧ್ಯೆ ಗುಡ್ಡ ಕೂಡ ಕುಸಿಯುವ ಅಪಾಯ ಕಾಡುತ್ತಿದ್ದು, ರಕ್ಷಣೆಗಾಗಿ ಗ್ರಾಮಸ್ಥರು ಮೊರೆ ಇಟ್ಟಿದ್ದಾರೆ. Mahantesh Yallapurmathhttp://Udayanadu.com

ಶಾಲೆಯಲ್ಲಿ ವಿದ್ಯಾರ್ಥಿ ಶವ !

ಶಾಲೆಯಲ್ಲಿ ವಿದ್ಯಾರ್ಥಿ ಶವ !

ಬೆಂಗಳೂರು: ಆರನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತ ದೇಹ ಶಾಲಾ ಆವರಣದಲ್ಲಿ ಪತ್ತೆಯಾಗಿರುವ ಪ್ರಕರಣ ಬೆಂಗಳೂರು ಉತ್ತರ ತಾಲೂಕಿನ ಗಂಗೊಡಹಳ್ಳಿಯಿಂದ ವರದಿಯಾಗಿದೆ. ಗಂಗೊಂಡಹಳ್ಖಾಳಿಯ  ಖಾಸಗಿ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಸವರಾಜು-ಮಂಜುಳಾ ದಂಪತಿಯ ಪುತ್ರ ನಿರಂಜನ ಎಂಬಾತ ಸಾವಿಗೀಡಾದ ದುರ್ದೈವಿ. ಈತನ ಸಾವಿಗೆ ಏನು ಕಾರಣ ಎಂಬುದು ತೀರಾ ನಿಗೂಢವಾಗಿದೆ. ಮನೆಯಲ್ಲಿ ಅಭ್ಯಾಸ ಮಾಡಲು ಆಗುವುದಿಲ್ಲ. ಶಾಲೆಯಲ್ಲಿಯೇ ಅಭ್ಯಾಸ ಮಾಡುವುದಾಗಿ ನಿರಂಜನ ಪಾಲಕರಿಗೆ ಹೇಳಿದ್ದ ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Mahantesh Yallapurmathhttp://Udayanadu.com

ನಿರಂತರ ಮಳೆ: ಗೋಡೆ ಕುಸಿದು ಮಗು ಸಾವು

ನಿರಂತರ ಮಳೆ: ಗೋಡೆ ಕುಸಿದು ಮಗು ಸಾವು

ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ  ಮನೆ ಗೋಡೆ ಕುಸಿದು ಮಗುವೊಂದು ಸಾವಿಗೀಡಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇತ್ತೀಚೆಗಷ್ಟೇ ಪ್ರವಾಹದಲ್ಲಿ ಮಗುವೊಂದು ಕೊಚ್ಚಿಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. Mahantesh Yallapurmathhttp://Udayanadu.com

ಧಾರಾಕಾರ ಮಳೆ: ಮನೆ ಗೋಡೆ ಕುಸಿದು ತಾಯಿ-ಮಕ್ಕಳ ದಾರುಣ ಅಂತ್ಯ

ಧಾರಾಕಾರ ಮಳೆ: ಮನೆ ಗೋಡೆ ಕುಸಿದು ತಾಯಿ-ಮಕ್ಕಳ ದಾರುಣ ಅಂತ್ಯ

ಕಲಬುರಗಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ತಾಯಿ ಮತ್ತು ಇಬ್ಬರು ಮಕ್ಕಳು ದಾರುಣವಾಗಿ ಸಾವಿಗೀಡಾದ ಘಟನೆ ಆಳಂದ ತಾಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ಸಂಭವಿಸಿದೆ. ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಲಕ್ಷ್ಮಿಬಾಯಿ (30), ಆಕೆಯ ಮಕ್ಕಳಾದ ಯಲ್ಲಮ್ಮ (13) ಹಾಗೂ ಅಂಬಿಕಾ (10) ಮೃತ ದುರ್ದೈವಿಗಳು. ಮೃತಳ ಪತಿ ಪ್ರಭು ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ನಿಂಬರ್ಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಂಬರ್ಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. […]

ಲೋಕಸಭೆ ಚುನಾವಣೆ: ಬಿಜೆಪಿಯಲ್ಲೂ ಸಮನ್ವಯ ಸಮಿತಿ?

ಲೋಕಸಭೆ ಚುನಾವಣೆ: ಬಿಜೆಪಿಯಲ್ಲೂ ಸಮನ್ವಯ ಸಮಿತಿ?

ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಬಾರದು ಎಂಬ ಕಾರಣಕ್ಕೆ ಸಮನ್ವಯ ಸಮಿತಿ ರಚಿಸಿ ಅದಕ್ಕೆ ಸಿದ್ಧರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಈಗ ಹಳೆಯ ಸುದ್ದಿ. ಆದರೆ, ಇದೀಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮಟ್ಟದಲ್ಲಿ ಯಾವುದೇ ಅಸಮಾಧಾನಗಳು ಆಗಬಾರದು ಎಂಬುದಕ್ಕಾಗಿ ಬಿಜೆಪಿಯೂ ಸಮನ್ವಯ ಸಮಿತಿ ರಚನೆಗೆ ಚಿಂತನೆ ನಡೆಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳೂ ಒಂದುಗೂಡಿ ಬಿಜೆಪಿಯನ್ನು ಒಂಟಿಯಾಗಿಸಲು ಯತ್ನಿಸುತ್ತಿರುವ ನಡುವೆಯೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ಹೆಣೆಯುತ್ತಿರುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ […]

ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ

ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ

ಹೊಸದಿಲ್ಲಿ: ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ  ಆರೋಗ್ಯ ಗಂಭೀರವಾಗಿದೆ. ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ತರಾತುರಿಯಲ್ಲಿ ಆಸ್ಪತ್ರೆಗೆ ಧಾವಿಸಿ ಆರೋಗ್ಯ ವಿಚಾರಣೆ ಮಾಡಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಚಿವೆ ಸ್ಮ್ರತಿ ಇರಾಣಿ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಆರೋಗ್ಯ ವಿಚಾರಣೆ ಮಾಡಿದ್ದು, ಆತಂಕ ಹೆಚ್ಚಾಗಿದೆ. ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳಿಂದ ವಾಜಪೇಯಿ ಬಳಲುತ್ತಿದ್ದಾರೆ. Mahantesh […]

ಮುಗಳಖೋಡದಲ್ಲಿ ಬೈಕ್ ಗಳ ಡಿಕ್ಕಿ: ಇಬ್ಬರ ಸಾವು

ಮುಗಳಖೋಡದಲ್ಲಿ ಬೈಕ್ ಗಳ ಡಿಕ್ಕಿ: ಇಬ್ಬರ ಸಾವು

ಬೆಳಗಾವಿ:ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕು ಮುಗಳಖೋಡದಲ್ಲಿ ಸಂಭವಿಸಿದೆ. ಗಾಯಗೊಂಡಿರುವ  ಇಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹಾರೋಬೆಳವಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Mahantesh Yallapurmathhttp://Udayanadu.com

ಪ್ರವಾಹ : ಐದು ಜಿಲ್ಲೆಗಳಲ್ಲಿ ಹೈ ಅಲರ್ಟ ಘೋಷಿಸಿದ ಸಿಎಂ !

ಪ್ರವಾಹ : ಐದು ಜಿಲ್ಲೆಗಳಲ್ಲಿ ಹೈ ಅಲರ್ಟ ಘೋಷಿಸಿದ ಸಿಎಂ !

ಬೆಂಗಳೂರು: ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ 30 ಜಿಲ್ಲೆಗಳ ಪೈಕಿ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು,  ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಸಿಎಂ ಹೈ ಅಲರ್ಟ ಘೋಷಿಸಿದ್ದಾರೆ. ಅಲ್ಲಲ್ಲಿ ಭೂಕುಸಿತ ಮತ್ತು ಇತರೆ ಘಟನೆಗಳು ಸಂಭವಿಸಿದ್ದು ಎಲ್ಲದರ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಕೇರಳದಲ್ಲಿ ಪ್ರವಾಹದಿಂದಾಗಿ ಈಗಾಗಲೇ 40 […]

ಚಿಕ್ಕೋಡಿ: ಬೈಕ್ ಗಳ ಡಿಕ್ಕಿ: ಇಬ್ಬರ ಸಾವು

ಚಿಕ್ಕೋಡಿ: ಬೈಕ್ ಗಳ ಡಿಕ್ಕಿ: ಇಬ್ಬರ ಸಾವು

ಚಿಕ್ಕೋಡಿ:ಎರಡು ಬೈಕ್ ಗಳ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಚಿಕ್ಕೋಡಿ ತಾಲೂಕಿನ ಕಬ್ಬೂರು ಬಳಿ ಈ ದುರಂತ ಸಂಭವಿಸಿದ್ದು, ಮೃತರನ್ನು ಮುತ್ತಪ್ಪ ಪೂಜಾರಿ (22) ಹಾಗೂ ರಾಮಪ್ಪ ಮಾದರ (30) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. Mahantesh Yallapurmathhttp://Udayanadu.com