ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಕ್ಷಣಗಣನೆ

ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಕ್ಷಣಗಣನೆ

ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದ್ದು, ಕ್ಷಣ ಗಣನೆ ಆರಂಭವಾಗಿದೆ. http://sslc.kar.nic.in ಮತ್ತು http://karresults.nic.in ವೆಬ್ ಸೈಟ್ ನಲ್ಲಿ  ಫಲಿತಾಂಶ ನೋಡಬಹುದು. ರಾಜ್ಯದ ಎಲ್ಲ ಶಾಲೆಗಳಲ್ಲಿ ಮೇ 8 ರಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ. ಎಸ್ ಎಂ ಎಸ್ ಮೂಲಕವೂ ಫಲಿತಾಂಶ ನೋಡಬಹುದಾಗಿದ್ದು, R10<space> ROLLNUMBER ಬರೆದು 56263ಕ್ಕೆ ಕಳಿಸಿ ಫಲಿತಾಂಶ ಪಡೆದುಕೊಳ್ಳಬಹುದು. Mahantesh Yallapurmathhttp://Udayanadu.com

ಲಕ್ಷಾಂತರ ರೂ. ಮೌಲ್ಯದ ನೂರು ಐಫೋನ್ ವಶ: ಒಬ್ಬನ ಬಂಧನ

ಲಕ್ಷಾಂತರ ರೂ. ಮೌಲ್ಯದ ನೂರು ಐಫೋನ್ ವಶ: ಒಬ್ಬನ ಬಂಧನ

ಹೊಸದಿಲ್ಲಿ: ದುಬೈದಿಂದ ದೆಹಲಿ  ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯೊಬ್ಬನಿಂದ 85,61,169 ರೂ. ಮೌಲ್ಯದ ನೂರು ಐ ಫೋನ್ ಗಳನ್ನು ವಶಪಡಿಸಿಕೊಂಡಿರುವ ಸುಂಕ ಅಧಿಕಾರಿಗಳು  ಆತನನ್ನು ಬಂಧಿಸಿದ್ದಾರೆ. ಸುಂಕ ಕಾಯ್ದೆಯ 104 ನೇ ಸೆಕ್ಷನ್ ಅಡಿ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ದುಬೈನಿಂದ ಬಂದ ಇಂಡಿಗೋ ವಿಮಾನದಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ಆತನನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.   Mahantesh Yallapurmathhttp://Udayanadu.com

ಕಾಗವಾಡ ಶಾಸಕರು ಸ್ಲೋ ಅದಾರ, ಅವರನ್ನ ಬದಲಿಸ್ರೀ: ಸತೀಶ ಜಾರಕಿಹೊಳಿ

ಕಾಗವಾಡ ಶಾಸಕರು ಸ್ಲೋ ಅದಾರ, ಅವರನ್ನ ಬದಲಿಸ್ರೀ: ಸತೀಶ ಜಾರಕಿಹೊಳಿ

ಅಥಣಿ: ಕಾಗವಾಡ ಮತ್ತು ಅಥಣಿ ಕ್ಷೇತ್ರಗಳ ಇಬ್ಬರೂ ಶಾಸಕರು ಸ್ಲೋ ಅದಾರ. ಪಂಢರಪುರಕ್ಕೆ ಹೋಗೋ ಗಾಡಿ ಥರಾ ಹೊಂಟಾರ. ಅವರನ್ನ ಕೆಳಗ ಇಳಿಸ್ರೀ…ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ  ಹೇಳಿದ್ದಾರೆ. ಅಥಣಿ ಮತ್ತು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ರವಿವಾರ ಕಾಗವಾಡದಲ್ಲಿ  ಪ್ರಚಾರ ಭಾಷಣ ಮಾಡಿದ ಅವರು, ಪಂಢರಪುರಕ್ಕೆ ಹೋಗುವ ಗಾಡಿಯನ್ನು ಯಾರಾದರೂ, ಎಲ್ಲಿಯಾದರೂ ಹತ್ತಬಹುದು ಅಥವಾ ಇಳಿಯಬಹುದು. ಅವರೇನೂ ಬೆಂಗಳೂರಿಗೆ ಹೋಗಿ ರಸ್ತೆ ಮಾಡಿಸುವವರಲ್ಲ, ನೀರಾವರಿ ಯೋಜನೆ ತರುವವರೂ ಅಲ್ಲ. ಬೇಕಾದವ್ರು […]

ನಂ. 1 ಮುಖ್ಯಮಂತ್ರಿ ಸಿದ್ಧರಾಮಯ್ಯ ಕೈ ಬಲಪಡಿಸಿ: ಸತೀಶ ಜಾರಕಿಹೊಳಿ

ನಂ. 1 ಮುಖ್ಯಮಂತ್ರಿ ಸಿದ್ಧರಾಮಯ್ಯ ಕೈ ಬಲಪಡಿಸಿ: ಸತೀಶ ಜಾರಕಿಹೊಳಿ

ಅಥಣಿ: ಕಳೆದ ಐದು ವರ್ಷಗಳ  ಅವಧಿಯಲ್ಲಿ ದಕ್ಷ ಮತ್ತು ಸ್ವಚ್ಛ ಆಡಳಿತ ನೀಡಿರುವ ಸಿಎಂ ಸಿದ್ಧರಾಮಯ್ಯ ನಂ. 1 ಮುಖ್ಯಮಂತ್ರಿ ಎಂದು ಬಣ್ಣಿಸಿರುವ  ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ, ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ  ಅವರ ಕೈ ಬಲಪಡಿಸೋಣ ಎಂದು ಹೇಳಿದರು. ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಟಳ್ಳಿ ಪ್ರಚಾರಾರ್ಥ ರವಿವಾರ  ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ  ಅವಧಿಯಲ್ಲಿ ಸಿದ್ದರಾಮಯ್ಯ ಸರಕಾರ ಎಲ್ಲ ರಂಗಗಳಲ್ಲಿಯೂ […]

ಕಾಂಗ್ರೆಸ್ಸಿನಿಂದ ವೋಟ್ ಬ್ಯಾಂಕ್ ರಾಜಕಾರಣ: ಮೋದಿ ಟೀಕೆ

ಕಾಂಗ್ರೆಸ್ಸಿನಿಂದ ವೋಟ್ ಬ್ಯಾಂಕ್ ರಾಜಕಾರಣ: ಮೋದಿ ಟೀಕೆ

ಚಿತ್ರದುರ್ಗ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂಷಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರ ಹಕ್ಕುಗಳನ್ನು ರಕ್ಷಿಸಲು ಹೋರಾಡಿದವರನ್ನು ಮರೆತು ದೇಶ ವಿರೋಧಿಗಳ ಜನ್ಮದಿನ ಆಚರಿಸಲು ಹೊರಟಿದೆ ಎಂದು ಟೀಕಿಸಿದರು. ಕೋಟೆನಾಡು ಚಿತ್ರದುರ್ಗದಲ್ಲಿ ಪ್ರಚಾರ  ಭಾಷಣ ಮಾಡಿದ ಮೋದಿ, ಸುಲ್ತಾನರನ್ನು ಹಿಮ್ಮೆಟ್ಟಿಸಿದ ಒನಕೆ ಓಬವ್ವನ ಸಾಹಸವನ್ನು ಕೊಂಡಾಡಿದರಲ್ಲದೇ ಇಂತಹ ಮಹಾರಪುರುಷರನ್ನು ಕಾಂಗ್ರೆಸ್ ಮರೆತಿದೆ ಎಂದು ಆಪಾದಿಸಿದರು. ಒನಕೆ ಓಬವ್ವನ ಶೌರ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ದುರಾದೃಷ್ಟವೆಂದರೆ ಶೂರ ಮಹಿಳೆ ಮತ್ತು ಪುರುಷರನ್ನು […]

ಅರಬಾವಿಯಲ್ಲಿ ಏಕಾಂಗಿಯಾದರೆ ಬಾಲಚಂದ್ರ ಜಾರಕಿಹೊಳಿ ?

ಅರಬಾವಿಯಲ್ಲಿ ಏಕಾಂಗಿಯಾದರೆ ಬಾಲಚಂದ್ರ ಜಾರಕಿಹೊಳಿ ?

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಯಲ್ಲಿ ಅರಬಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಏಕಾಂಗಿಯೇ ಹೋರಾಟ ಮಾಡುತ್ತಿದ್ದಾರೆಯೇ? ನಾಲ್ಕು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿರುವ ಅವರು ಇದೀಗ ಐದನೇ ಬಾರಿ ಅಖಾಡಾ ಪ್ರವೇಶಿಸಿದ್ದು, ಕಾರ್ಯಕರ್ತರ ನೆರವಿನೊಂದಿಗೆ ಭರ್ಜರಿ ಪ್ರಚಾರ ನಡೆಸಿದ್ದಾರೆ. 2013 ರ ಚುನಾವಣೆಯಲ್ಲಿ 75 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದ ಅವರು ಈ ಬಾರಿಯ ಇನ್ನೂ ಹೆಚ್ಚಿನ  ಅಂತರದಿಂದ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿದ್ದಾರೆ. ವಿಶೇಷವೆಂದರೆ ಪಕ್ಕದಲ್ಲಿಯೇ […]

ಮೋದಿಗೆ ಈಗೇಕೆ ಮೂಡಿತು ಮಹದಾಯಿ ಮೋಹ?

ಮೋದಿಗೆ ಈಗೇಕೆ ಮೂಡಿತು ಮಹದಾಯಿ ಮೋಹ?

ನೀರು ಹಂಚಿಕೆ ವಿಚಾರದಲ್ಲಿ ಸೋನಿಯಾ ಹಾದಿ ತುಳಿದ ಮೋದಿ ಬೆಳಗಾವಿ: ಉತ್ತರ ಕರ್ನಾಟಕದ ಜೀವನಾಡಿ ಎನಿಸಿರುವ ಮಹದಾಯಿ ನೀರು ಹಂಚಿಕೆ ವಿಷಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈಗ ಇದ್ದಕ್ಕಿದ್ದಂತೆ ನೆನಪಾಗಿದ್ದು ಯಾಕೆ? ಪ್ರತಿಷ್ಠಿತ ಚುನಾವಣೆ ಸಂದರ್ಭದಲ್ಲಿ  ಮೋದಿಗೆ ಬಂದಿರುವ ಈ ಮಹದಾಯಿ ಮೋಹ ಈ ಭಾಗದ ರೈತರಿಗೆ ನಿಜವಾಗಿಯೂ ವರದಾನವಾಗಲಿದೆಯೇ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡತೊಡಗಿವೆ. ದಲಿತ, ಭ್ರಷ್ಟಾಚಾರ ಅಸ್ತ್ರಗಳನ್ನಷ್ಟೇ ತಮ್ಮ ಪ್ರಚಾರ ಸಭೆಗಳಲ್ಲಿ ಇದುರವರೆಗೆ ಬಳಸಿಕೊಳ್ಳುತ್ತಿದ್ದ ಮೋದಿ, ಗದಗನಲ್ಲಿ ಶನಿವಾರ ನಡೆದ ಬಹಿರಂಗ ಸಭೆಯಲ್ಲಿ ಇದ್ದಕ್ಕಿದ್ದಂತೆಯೇ […]

ಇಂದು ನಾಲ್ಕು ಕಡೆ ಮೋದಿ ಪ್ರಚಾರ

ಇಂದು ನಾಲ್ಕು ಕಡೆ ಮೋದಿ ಪ್ರಚಾರ

ಬೆಂಗಳೂರು: ಮತದಾನ ದಿನಾಂಕ ಸಮೀಪಿಸುತ್ತಿರುವಂತೆಯೇ ಚುನಾವಣಾ ಅಖಾಡಾದಲ್ಲಿ ಕಾವು ಹೆಚ್ಚಾಗತೊಡಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ ರಾಜ್ಯದ ನಾಲ್ಕು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದು ಈಗಾಗಲೇ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ರಾಯಚೂರು, ಜಮಖಂಡಿ ಹಾಗೂ ಹುಬ್ಬಳ್ಳಿಯಲ್ಲೂ ಮೋದಿ ಸಾರ್ವಜನಿಕ ಭಾಷಣ ಮಾಡುವರು. ನಿನ್ನೆ ಕೂಡ ಮೋದಿ ನಾಲ್ಕು ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು. ಅಮಿತ ಶಾ ಕೂಡ ರಾಜ್ಯದ ಹಲವೆಡೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 9 ರಂದೂ ಮೋದಿ ಮತ್ತೆ ಕರ್ನಾಟಕದ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.   Mahantesh Yallapurmathhttp://Udayanadu.com

ಬೆಳಗಾವಿಗೆ ಇಂದು ಅಮಿತ ಶಾ

ಬೆಳಗಾವಿಗೆ ಇಂದು ಅಮಿತ ಶಾ

ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿರುವ ಬಿಜೆಪಿ ನಾಯಕ ಅಮಿತ ಶಾ ಇಂದು ಮತ್ತೆ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಮತದಾರರ ಗಮನ ಸೆಳೆಯಲಿರುವ ಶಾ, ಸಂಜೆ ರಾಮದುರ್ಗದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಈಗಾಗಲೇ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಿದ್ದ ಶಾ, ಗೋಕಾಕ ಪಟ್ಟಣದಲ್ಲಿ ರೋಡ್ ಶೋ ಕೂಡ ನಡೆಸಿಹೋಗಿದ್ದಾರೆ. ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ […]

ಗೋಕಾಕಕ್ಕೆ ಮೋದಿ ಬದಲು ಆದಿ !

ಗೋಕಾಕಕ್ಕೆ ಮೋದಿ ಬದಲು ಆದಿ !

ಬೆಳಗಾವಿ: ಜಿಲ್ಲೆಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗೋಕಾಕ ವಿಧಾನಸಭೆ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿಯವರನ್ನು ಮೇ 9 ಕ್ಕೆ ಕರೆಸಲು ಉದ್ದೇಶಿಸಿದ್ದ ಬಿಜೆಪಿ, ಕೊನೆ ಗಳಿಗೆಯಲ್ಲಿ ಅವರನ್ನು ಕೈಬಿಟ್ಟಿದ್ದು, ಇದೀಗ ಮೇ 7 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬರಮಾಡಿಕೊಳ್ಳುತ್ತಿದೆ. ಕೋಳಿ ಕೂಟ ಸಮೀಪದ ಬಿಸಿಎ ಕಾಲೇಜು ಆವರಣದಲ್ಲಿ ಮಧ್ಯಾಹ್ನ 3 ಕ್ಕೆ ಯೋಗಿ ಆದಿತ್ಯನಾಥ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಅಭ್ಯರ್ಥಿ ಅಶೋಕ ಪೂಜಾರಿ, ಸಂಸದ ಸುರೇಶ ಅಂಗಡಿ, ಈರಪ್ಪ  ಕಡಾಡಿ […]