ಸಂಜೆ ಹೊತ್ತಿಗೆ ಸ್ಪಷ್ಟವಾಗಲಿದೆ ಕಣಚಿತ್ರಣ !

ಸಂಜೆ ಹೊತ್ತಿಗೆ ಸ್ಪಷ್ಟವಾಗಲಿದೆ ಕಣಚಿತ್ರಣ !

ಬೆಂಗಳೂರು: ಮುಂಬರುವ ವಿಧಾನ ಸಭೆ ಚುನಾವಣೆಯ ಅಂತಿಮ ಕಣದಲ್ಲಿ ಯಾರುಳಿಯುತ್ತಾರೆ ? ಎಂಬ ಕುತೂಹಲಕ್ಕೆ ಇಂದು ಸಂಜೆಯೇ ತೆರೆ ಬೀಳಲಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಲ್ಲಿಸಲಾಗಿರುವ  ನಾಮಪತ್ರಗಳ ಪರಿಶೀಲನೆ ಮುಗಿದಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಇಂದು ಕೊನೆಯ ದಿನವಾಗಿದೆ. ಸಂಜೆಯ ವೇಳೆಗೆ ಎಲ್ಲ ಕ್ಷೇತ್ರಗಳ ಕಣ ಚಿತ್ರಣ ಸ್ಪಷ್ಟವಾಗಲಿದೆ. ರಾಜ್ಯಾದ್ಯಂತ 3374 ನಾಮಪತ್ರಗಳು ಸಲ್ಲಿಕೆಯಾಗಿದ್ದು, 3115 ಪುರುಷ ಅಭ್ಯರ್ಥಿಗಳು, 259 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಕೆಲವೆಡೆ […]

ಸುಪ್ರೀಂಗೆ ಹೊಸ ಜಡ್ಜ್:” ಇಂದು” ಅಧಿಕಾರ

ಸುಪ್ರೀಂಗೆ ಹೊಸ ಜಡ್ಜ್:” ಇಂದು” ಅಧಿಕಾರ

ಹೊಸದಿಲ್ಲಿ: ಹಿರಿಯ ನ್ಯಾಯವಾದಿ ಇಂದು ಮಲ್ಹೋತ್ರಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ನೂತನ ನ್ಯಾಯಮೂರ್ತಿ ಅಧಿಕಾರ ಸ್ವೀಕರಿಸುವರು. ಇಂದು ಮಲ್ಹೋತ್ರಾ  ನೇರವಾಗಿ ನೇಮಕಗೊಂಡಿರುವ ಪ್ರಥಮ ಮಹಿಳಾ ನ್ಯಾಯವಾದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. Mahantesh Yallapurmathhttp://Udayanadu.com

ಮೂಡಲಗಿ ಪುರಸಭೆ ಸದಸ್ಯನ ಮನೆ ಮೇಲಿ ಐಟಿ ದಾಳಿ

ಮೂಡಲಗಿ ಪುರಸಭೆ ಸದಸ್ಯನ ಮನೆ ಮೇಲಿ ಐಟಿ ದಾಳಿ

ಗೋಕಾಕ: ಮೂಡಲಗಿ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಅವರ ತೋಟದ ಮನೆಗೆ ಗುರುವಾರ ರಾತ್ರಿ ಆದಾಯ ಕರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾ ಮೂಲದ ಐಟಿ ಅಧಿಕಾರಿಗಳು ರಾತ್ರಿ 10 ಗಂಟೆ ಸುಮಾರಿಗೆ ಮಿಂಚಿನ ದಾಳಿ ನಡೆಸಿದ್ದು, ರಾತ್ರಿ ಇಡೀ ದಾಖಲೆಗಳ ಪರಿಶೀಲನೆ ಮಾಡಿದರು. ಏನೇನು ದಾಖಲೆಗಳು ಪತ್ತೆಯಾಗಿವೆ ಎಂಬುದರ ಬಗ್ಗೆ ವಿವರಗಳು ಲಭ್ಯವಾಗಿಲ್ಲ. Mahantesh Yallapurmathhttp://Udayanadu.com

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸತೀಶ ಜಾರಕಿಹೊಳಿ

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸತೀಶ ಜಾರಕಿಹೊಳಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ನಾಳೆಯೇ ಕೊನೆಯ ದಿನವಾಗಿದ್ದು, ಒಂದು ದಿನ ಮುಂಚೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿವೆ. ಎರಡೂ ಪಕ್ಷಗಳು ತಲಾ 40 ಜನ ನಾ ಯಕರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.  ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರ ಜತೆಗೆ ರಾಜ್ಯದ ಹಲವು ಮುಖಂಡರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ,  ಹಾಲಿ ಅಧ್ಯಕ್ಷ […]

ಬಸ್ ದುರಂತ: ಶಾಲಾ ಮಕ್ಕಳ ಸಾವಿನ ಸಂಖ್ಯೆ 13 ಕ್ಕೆ

ಬಸ್ ದುರಂತ: ಶಾಲಾ ಮಕ್ಕಳ ಸಾವಿನ ಸಂಖ್ಯೆ 13 ಕ್ಕೆ

ಖುಷಿನಗರ (ಉತ್ತರ ಪ್ರದೇಶ): ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಉಂಟಾದ ದುರಂತದಲ್ಲಿ ಸಾವಿಗೀಡಾದ ಮಕ್ಕಳ ಸಂಖ್ಯೆ 13 ಕ್ಕೇರಿದೆ. ಖುಷಿನಗರದಲ್ಲಿ 20 ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಖುಷಿನಗರದಲ್ಲಿ ಕಾವಲುರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ರೈಲು ಗಾಡಿಗೆ ಡಿಕ್ಕಿ ಹೊಡೆದು, 11 ಮಕ್ಕಳು ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಬಸ್ ಚಾಲಕನು  ಇಯರ್ ಫೋನ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದುದರಿಂದ ರೈಲಿನ ಶಬ್ದ ಕೇಳದೇ ಈ ದುರಂತ ಸಂಭವಿಸಿದೆ. ಮಕ್ಕಳೆಲ್ಲ ಡಿವೈನ್ ಪಬ್ಲಿಕ್ ಶಾಲೆಗೆ ಸೇರಿದವರು. (ಎಎನ್ ಐ)   […]

ಅಂದು ಲೂಟಿ ಮಾಡಿದವರು ಇಂದು ಒಂದಾಗಿದ್ದಾರೆ: ಸಿಎಂ ಕಟುಟೀಕೆ

ಅಂದು ಲೂಟಿ ಮಾಡಿದವರು ಇಂದು ಒಂದಾಗಿದ್ದಾರೆ: ಸಿಎಂ ಕಟುಟೀಕೆ

ಕುಮಟಾ (ಉತ್ತರ ಕನ್ನಡ): ಜೈಲಿಗೆ ಹೋಗಿ ಬಂದ ಲೂಟಿಕೋರರೆಲ್ಲಾ ಒಂದಾಗಿದ್ದಾರೆ. ಮತ್ತೊಮ್ಮೆ ಲೂಟಿ ಮಾಡಲು ಅವರಿಗೆ ಅವಕಾಶ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕುಮಟಾದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದ ಸಿಎ, 2008 ರಲ್ಲಿ ಲೂಟಿ ಮಾಡಿದ ಯಡಿಯೂರಪ್ಪ, ಜನಾರ್ದನ ರೆಡ್ಡಿ ಎಲ್ಲ ಈಗ ಮತ್ತೆ ಒಂದಾಗಿದ್ದಾರೆ ಎಂದು ಟೀಕಿಸಿದರು. ಅಂಥವರಿಗೆ ವೋಟು ಹಾಕ್ತೀರಾ ? ಎಂದು ಮತದಾರರನ್ನು ಪ್ರಶ್ನಿಸಿದ ಅವರು, ನಾವು ಕೆಲಸ ಮಾಡಿದವರಿಗೆ ಕೂಲಿ  ಕೇಳಲು […]

ಹೈವೋಲ್ಟೇಜ್ ಕ್ಷೇತ್ರದಲ್ಲಿ ಸಿಎಂ ಗೆಲುವಿಗೆ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಕಾರ್ಯತಂತ್ರ

ಹೈವೋಲ್ಟೇಜ್ ಕ್ಷೇತ್ರದಲ್ಲಿ ಸಿಎಂ ಗೆಲುವಿಗೆ  ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಕಾರ್ಯತಂತ್ರ

ಬಾದಾಮಿ : ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ರಾಮುಲು ಪಟ್ಟ ಕಟ್ಟಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಡುವೆಯೇ ಕಾಂಗ್ರೆಸ್  ನಾಯಕರು ಗುರುವಾರ ಬಾದಾಮಿಯಲ್ಲಿ ಸುದೀರ್ಘ ಸಭೆ ನಡೆಸಿ ಸಿಎಂ ಸಿದ್ಧರಾಮಯ್ಯನವರನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಿದರು. ಸಿಎಂ ಗೆಲುವಿಗಾಗಿ ಕ್ಷೇತ್ರದ  ಉಸ್ತುವಾರಿ ವಹಿಸಿಕೊಂಡಿರುವ ಎಐಸಿಸಿ ಕಾರ್ಯದರ್ಶಿ , ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅಕ್ಕಮಹಾದೇವಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸಿಎಂ ಗೆಲ್ಲಿಸಲು ಕ್ಷೇತ್ರದಲ್ಲಿ ನಡೆಸಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲಾಯಿತು. ಮಾಜಿ ಸಚಿವರಾದ ಸಿ.ಎಂ. ಇಬ್ರಾಹಿಂ, […]

ಜೆಡಿಎಸ್ ಗೆ ಹೆಚ್ಚು ಸ್ಥಾನ: ಕುಮಾರಸ್ವಾಮಿ ವಿಶ್ವಾಸ

ಜೆಡಿಎಸ್ ಗೆ ಹೆಚ್ಚು ಸ್ಥಾನ: ಕುಮಾರಸ್ವಾಮಿ ವಿಶ್ವಾಸ

ಮೈಸೂರು :ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಲಿತರ ಮತಗಳಷ್ಟೇ ಎಲ್ಲ ವರ್ಗದವರೂ ತಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ. ಕರ್ನಾಟಕದ ಜನತೆ ಬುದ್ಧಿವಂತರಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಏನು ಎಂದು ಅವರಿಗೆ ಗೊತ್ತಿದೆ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ  ಹೇಳಿದರು. ಆ ಪಕ್ಷಗಳ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದಾರೆ. ಬದಲಾವಣೆ ಬಯಸಿರುವ ಜನರು ಜೆಡಿಎಸ್ ಮತ್ತು ಬಿಎಸ್ ಪಿಯತ್ತ ವಾಲಿದ್ದಾರೆ […]

ಆಪರೇಷನ್ ಕಮಲದತ್ತ ಜನಾರ್ದನ ರೆಡ್ಡಿ ಒಲವು ?

ಆಪರೇಷನ್ ಕಮಲದತ್ತ ಜನಾರ್ದನ ರೆಡ್ಡಿ ಒಲವು ?

ಚಿತ್ರದುರ್ಗ: ಭಿನ್ನಮತದ ಬೇಗುದಿಯಲ್ಲಿರುವ ಮೊಳಕಾಲ್ಮೂರುಕ್ಷೇತ್ರದಲ್ಲಿ ಶ್ರೀರಾಮುಲು ಗೆಲುವಿಗೆ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದ್ದು, ರಾಮುಲು ಪರ ಬ್ಯಾಟಿಂಗ್ ಮಾಡುತ್ತಿರುವ  ಮಾಜಿ ಸಚಿವ ಜನಾರ್ದನ ರೆಡ್ಡಿ ಆಪರೇಷನ್ ಕಮಲ ಕ್ಕೆ ಕೈಹಾಕಿದ್ದಾರೆಂದು  ಹೇಳಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಆಪರೇಷನ್ ಕಮಲ  ನಡೆಸುವ ಮೂಲಕ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಹೆಣೆಯಲಾಗುತ್ತಿದ್ದು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರಿಗೆ ಗಾಳ ಹಾಕುವ ಯತ್ನ ನಡೆದಿದೆ ಎನ್ನಲಾಗುತ್ತಿದೆ. ಶ್ರೀರಾಮುಲುಗೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಾಸಕ  ಎನ್. ತಿಪ್ಪೇಸ್ವಾಮಿ ಅವರೊಂದಿಗೆ ರೆಡ್ಡಿ ಮಾತುಕತೆ […]

ಆದಿವಾಸಿ ಕಾಂಗ್ರೆಸ್ ಸಲಹಾ ಸಮಿತಿ ಕಾರ್ಯಕಾರಿಣಿ ಸದಸ್ಯರಾಗಿ ಜಾರಕಿಹೊಳಿ ಬ್ರದರ್ಸ್ ನೇಮಕ

ಆದಿವಾಸಿ ಕಾಂಗ್ರೆಸ್ ಸಲಹಾ ಸಮಿತಿ ಕಾರ್ಯಕಾರಿಣಿ ಸದಸ್ಯರಾಗಿ ಜಾರಕಿಹೊಳಿ ಬ್ರದರ್ಸ್ ನೇಮಕ

ಹೊಸದಿಲ್ಲಿ: ಅಖಿಲ ಭಾರತ  ಆದಿವಾಸಿ ಕಾಂಗ್ರೆಸ್ ಸಲಹಾ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಟಿ ಈಶ್ವರ  ಸೇರಿದಂತೆ 52  ಮುಖಂಡರನ್ನು ನೇಮಕ ಮಾಡಲಾಗಿದೆ. ಮಹಾರಾಷ್ಟ್ರ, ಜಾರ್ಖಂಡ ಹಾಗೂ ಛತ್ತೀಸ್ ಘಡ ರಾಜ್ಯಗಳ  ಆದಿವಾಸಿ ಕಾಂಗ್ರೆಸ್  ಅಧ್ಯಕ್ಷರು ಹಾಗೂ ಎಂಟು ಜನ ರಾಜ್ಯ ಸಂಯೋಜಕರ ಪಟ್ಟಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅನುಮೋದನೆ ನೀಡಿದ್ದಾರೆ. ವಿ. ಕಿಶೋರಚಂದ್ರ ಡಿಯೋ ಕಾರ್ಯಕಾರಿ ಸಮಿತಿ […]