ವಿದ್ಯುತ್ ಸ್ಪರ್ಷ: ವೃದ್ಧೆ ಸಾವು

ವಿದ್ಯುತ್ ಸ್ಪರ್ಷ: ವೃದ್ಧೆ ಸಾವು

ಕೊಡಗು: ಗಾಳಿ ಮಳೆಯಿಂದ ಉಂಟಾದ ತೀವ್ರ ತೊಂದರೆಗೆ ವೃದ್ಧೆಯೊಬ್ಬಳು ಬಲಿಯಾಗಿದ್ದಾಳೆ. ಕೊಡಗು ತಾಲೂಕಿನ ಮಡಿಕೇರಿ ಸಮೀಪದ ತಾಳತ್ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್ತ ತಂತಿಗೆ ಅಮ್ಮವ್ವ ಎಂಬ ಮಹಿಳೆ ಸಾವಿಗೀಡಾಗಿದ್ದಾಳೆ Mahantesh Yallapurmathhttp://Udayanadu.com

ರಾಜಭವನದಲ್ಲಿ ಔತಣಕೂಟ

ರಾಜಭವನದಲ್ಲಿ ಔತಣಕೂಟ

ಬೆಂಗಳೂರು: ದೇಶದ 72 ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ರಾಜ್ಯಪಾಲರು ನಿನ್ನೆ ರಾತ್ರಿ ಉಪಾಹಾರ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ, ಮುಖ್ಯ ಕಾರ್ಯದರ್ಶಿ  ವಿಜಯ ಭಾಸ್ಕರ್, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸೇರಿದಂತೆ ಅನೇಕ Mahantesh Yallapurmathhttp://Udayanadu.com

ಅಬ್ಬಾ, ಆ ಧ್ವಜದ ಉದ್ದ ಎಷ್ಟಿತ್ತು ಗೊತ್ತಾ?!

ಅಬ್ಬಾ, ಆ ಧ್ವಜದ ಉದ್ದ ಎಷ್ಟಿತ್ತು ಗೊತ್ತಾ?!

ಸೂರತ್ (ಗುಜರಾತ್):  ಇಡೀ ದೇಶ 72 ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಮುಳುಗೇಳುತ್ತಿರುವ ನಡುವೆಯೇ ಗುಜರಾತ್ ನ ಸೂರತ್ ಪಟ್ಟಣದಲ್ಲಿ ದೇಶದಲ್ಲಿಯೇ ಅತಿ   ಉದ್ದನೆಯ ಧ್ವಜವೊಂದು ಅನಾವರಣಗೊಂಡಿದೆ. ಬರೋಬ್ಬರಿ 1100 ಅಡಿ ಉದ್ದ, 9 ಅಡಿ ಅಗಲದ ಧ್ವಜವನ್ನು ಸಾವಿರಾರು ಜನರು ಇಂದು ಹಾರಿಸುವ ಮೂಲಕ ಗಮನ ಸೆಳೆದರು. ಅಗರವಾಲ್ ವಿಕಾಸ ಟ್ರಸ್ಟ್ ಆಯೋಜಿಸಿದ್ದ ಶಾನ್ -ಇ-ತಿರಂಗಾ 5  ಕಿ.ಮೀ.  ರ್ಯಾಲಿಯಲ್ಲಿ  ಸಾವಿರಾರು ಜನರು ಭಾಗವಹಿಸಿದ್ದರು. ನಾನಾ ಧರ್ಮ-ಜಾತಿಯ ಜನಗಳು ಒಂದೆಡೆ ಸೇರಿ ಧರ್ಮಕ್ಕಿಂತ ರಾಷ್ಟ್ರೀಯತೆ ದೊಡ್ಡದು ಎಂಬ […]

ಹುರುಳಿಲ್ಲದ ಮೋದಿ ಭಾಷಣ: ಸುರ್ಜಿವಾಲಾ ಕಟುಟೀಕೆ

ಹುರುಳಿಲ್ಲದ ಮೋದಿ ಭಾಷಣ: ಸುರ್ಜಿವಾಲಾ ಕಟುಟೀಕೆ

ಹೊಸದಿಲ್ಲಿ: 72 ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಯಾವುದೇ ಹುರುಳಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಣದೀಪ ಸುರ್ಜಿವಾಲೆ ಟೀಕಿಸಿದ್ದಾರೆ. ಪ್ರಧಾನಿಯವರು ರಫಾಲೆ ಹಗರಣ, ಛತ್ತೀಸಗಡದ ಪಿಡಿಎಸ್ ಹಗರಣ, ಡೋಕಲಮ್ ನಲ್ಲಿ ಚೀನಾದ ಅತಿಕ್ರಮಣ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ದ್ವೇಷದ ವಾತಾವರಣ ಮೊದಲಾದ ಅಂಶಗಳ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲೇ ಇಲ್ಲ ಎಂದೂ ಸುರ್ಜಿವಾಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕಾರಾವಧಿಯ ಕಡೆಯ ಭಾಷಣದಲ್ಲಾದರೂ ಅವರು ಸತ್ಯವನ್ನು […]

ಸೆ. 25 ರಿಂದ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ: ಮೋದಿ ಘೋಷಣೆ

ಸೆ. 25 ರಿಂದ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ: ಮೋದಿ ಘೋಷಣೆ

ಹೊಸದಿಲ್ಲಿ: “ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ “ವು ಸೆಪ್ಟೆಂಬರ್ 25 ರಿಂದ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ವರ್ಷಾರಂಭದಲ್ಲಿ ಕೇಂದ್ರ ಸರಕಾರ ಘೋಷಿಸಿದ್ದ ಆರೋಗ್ಯ ಕಾಳಜಿ ನೀತಿಯ ಆಯುಷ್ಮಾನ ಭಾರತ ದ ಒಂದು ಭಾಗವಾಗಿ ಈ ಅಭಿಯಾನ ಆರಂಭವಾಗಲಿದೆ. ರಾಜಧಾನಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ದೇಶದ ಬಡ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಯೋಜನೆ ನೆರವಾಗಲಿದೆ ಎಂದು  ಹೇಳಿದರು. ದೇಶದ 50 ಕೋಟಿ […]

ಯಮಕನಮರಡಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಧ್ವಜಾರೋಹಣ

ಯಮಕನಮರಡಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಧ್ವಜಾರೋಹಣ

ಯಮಕನಮರಡಿ: ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎರಡು  ಕಡೆ ಧ್ವಜಾರೋಹಣ ನೆರವೇರಿಸಿದರು. ಯಮಕನಮರಡಿ ಗ್ರಾಮಪಂಚಾಯ್ತಿ ಆವರಣದಲ್ಲಿ  ಹಾಗೂ ಹುಣಸಿಕೊಳ್ಳಮಠ ಶ್ರೀಗುರು ರಾಚೋಟಿ ಮಹಾಸ್ವಾಮಿಗಳ ಸರಕಾರಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ  ಆವರಣದಲ್ಲಿ ಶಾಸಕರು ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅವ್ವಕ್ಕ ಮಾದರ, ಜಿ.ಪಂ. ಸದಸ್ಯೆ ಫಕೀರವ್ವ ಹಂಚಿನಮನಿ, ತಾ.ಪಂ. ಸದಸ್ಯೆ ಸುನಿತಾ ಬಿಸಿರೊಟ್ಟಿ, ಬಾಳಾರಾವ್ ರಜಪೂತ, ಸುಹಾಸ ಜೋಶಿ, ಶರೀಫ್ ಬೇಪಾರಿ, […]

ಮಹದಾಯಿ ತೀರ್ಪು ಗೋವಾ ರಾಜ್ಯಕ್ಕಾದ ಹಿನ್ನಡೆ ಎಂದು ಬಣ್ಣಿಸಿದ ಕಾಂಗ್ರೆಸ್ !

ಮಹದಾಯಿ ತೀರ್ಪು ಗೋವಾ ರಾಜ್ಯಕ್ಕಾದ ಹಿನ್ನಡೆ ಎಂದು ಬಣ್ಣಿಸಿದ ಕಾಂಗ್ರೆಸ್ !

ಪಣಜಿ (ಗೋವಾ): ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧೀಕರಣದ ತೀರ್ಪಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಗೋವಾ ಕಾಂಗ್ರೆಸ್ ಪಕ್ಷ  ಈ ತೀರ್ಪು ಗೋವಾ ಮತ್ತು ಗೋವಾದ ಜನತೆಯ ಹಿನ್ನಡೆ ಎಂದು ಬಣ್ಣಿಸಿದೆ. ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ ಚೋದನಕರ  ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಗೋವಾ ಸರಕಾರ ಹೇಳಿಕೊಂಡಿರುವಂತೆ ಇದು ಜಯವಲ್ಲ. ಮುಂದಿನ ದಿನಗಳಲ್ಲಿ ಗೋವಾ ಸರಕಾರದ ಮೇಲೆ ಈ ತೀರ್ಪು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಗೋವಾ ಮುಖ್ಯಮಂತ್ರಿಯು ಕರ್ನಾಟಕದ ಭಾರತೀಯ […]

ಇಟಲಿಯಲ್ಲಿ ಸೇತುವೆ ಕುಸಿದು 35 ಜನರ ದುರ್ಮರಣ !

ಇಟಲಿಯಲ್ಲಿ ಸೇತುವೆ ಕುಸಿದು 35 ಜನರ ದುರ್ಮರಣ !

ಜಿನೋವಾ (ಇಟಲಿ): ಇಟಲಿಯ ಜಿನೋವಾ ನಗರದಲ್ಲಿ ಮಂಗಳವಾರ ರಾತ್ರಿ ಮೊರಾಂಡಿ ಮೋಟರ್ ವೇ ಸೇತುವೆಯ ಒಂದು ಭಾಗ  ಇದ್ದಕ್ಕಿದ್ದಂತೆಯೇ ಕುಸಿದ ಪರಿಣಾಮ ಕನಿಷ್ಠ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ! ಈ ಘಟನೆಯಲ್ಲಿ ಹದಿಮೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಟಾಲಿಯನ್ ನಾಗರಿಕ ರಕ್ಷಣಾ ಪಡೆಯ ಮುಖ್ಯಸ್ಥ  ಎಂಜಿಲೋ ಬೊರ್ರೆಲ್ಲಿ ತಿಳಿಸಿದ್ದಾರೆ. ಸೇತುವೆ ಮೇಲೆ ಸಂಚರಿಸುತ್ತಿದ್ದ 30 ಕ್ಕೂ ಹೆಚ್ಚು ವಾಹನಗಳು ಹಾಗೂ ಕೆಲವು ಭಾರೀ ವಾಹನಗಳು ಹಾನಿಗೊಳಗಾಗಿವೆ. […]

72 ನೇ ಸ್ವಾತಂತ್ರೋತ್ಸವ: ನಾಡಿನ ಜನತೆಗೆ ಶುಭಕೋರಿದ ಸತೀಶ ಜಾರಕಿಹೊಳಿ

72 ನೇ ಸ್ವಾತಂತ್ರೋತ್ಸವ: ನಾಡಿನ ಜನತೆಗೆ ಶುಭಕೋರಿದ ಸತೀಶ ಜಾರಕಿಹೊಳಿ

ಬೆಳಗಾವಿ:ಯಮಕನಮರಡಿ  ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ನಾಡಿನ ಸಮಸ್ತ ಜನತೆಗೆ 72 ನೇ ಸ್ವಾತಂತ್ರೋತ್ಸವದ ಶುಭಾಶಯ ಕೋರಿದ್ದಾರೆ. ನೂರಾರು ವರ್ಷಗಳ ಕಾಲ ಆಂಗ್ಲರ ಕಪಿ ಮುಷ್ಟಿಯಲ್ಲಿ ಸಿಲುಕಿದ್ದ ಭಾರತವನ್ನು ಸ್ವತಂತ್ರಗೊಳಿಸಲು ನಮ್ಮ ನೂರಾರು ಹಿರಿಯರು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಅವರೆಲ್ಲರನ್ನೂ ನೆನಪಿಸಿಕೊಳ್ಳಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ ಎಂದು ಅವರು ತಮ್ಮ ಶುಭಸಂದೇಶದಲ್ಲಿ ಹೇಳಿದ್ದಾರೆ. ಭಾರತ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಹುದೊಡ್ಡ  ಇತಿಹಾಸವೇ ಇದೆ.  ದೇಶವನ್ನು ಸ್ವತಂತ್ರಗೊಳಿಸಲು ಅನೇಕ ಮಹನೀಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. […]

ಮಹದಾಯಿ ತೀರ್ಪು ಸ್ವಾಗತಿಸಿದ ಶಾಸಕ ಸತೀಶ ಜಾರಕಿಹೊಳಿ !

ಮಹದಾಯಿ ತೀರ್ಪು ಸ್ವಾಗತಿಸಿದ ಶಾಸಕ ಸತೀಶ ಜಾರಕಿಹೊಳಿ !

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧೀಕರಣ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಯಮಕನಮರಡಿ ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸದ್ಯ ನ್ಯಾಯಾಧೀಕರಣ ನೀಡಿರುವ ತೀರ್ಪು ಪೂರ್ಣ ಪ್ರಮಾಣದ ಸಮಾಧಾನ ನೀಡದಿದ್ದರೂ ಸಾಂದರ್ಭಿಕವಾಗಿ ಸಂತೋಷ ತಂದಿದೆ. ಇದು ಉತ್ತರ ಕರ್ನಾಟಕದ ಜನತೆಗೆ ಸಂದ ಜಯ ಎಂದು ಅವರು ಹೇಳಿದ್ದಾರೆ. ಯಾವುದೇ ತೀರ್ಪುಗಳನ್ನು ನಾವು ಅಂತಿಮ ಎಂದು ಪರಿಗಣಿಸಬೇಕಾಗಿಲ್ಲ. ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕೆಂದು ಹೋರಾಟ ಮಾಡಲು ಸಾಕಷ್ಟು ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ನಮಗೆ […]