ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ ಫೈನಲ್ !

ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ ಫೈನಲ್ !

ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣ ಗಣನೆ ಆರಂಭಗೊಂಡಿದ್ದು, ಯಾರು ಮಂತ್ರಿಯಾಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಈ ಮಧ್ಯೆ 16 ಸಂಭಾವ್ಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಸಿಎಂ ಕುಮಾರಸ್ವಾಮಿಯವರಿಗೆ ರವಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಉಳಿದಂತೆ ಇತರ ವಿವರಗಳನ್ನು ಪ್ರಮಾಣ ವಚನ ಸ್ವೀಕಾರದ ನಂತರ ಬಹಿರಂಗಗೊಳಿಸಲಾಗುವುದು ಎಂದು  ಹೇಳುವ ಮೂಲಕ ಪರಮೇಶ್ವರ ಯಾವುದೇ ಗುಟ್ಟು ಬಿಟ್ಟುಕೊಡದಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ಕೆಲವು […]

ಜೆಡಿಎಸ್ ಸಚಿವರ ಪಟ್ಟಿ ಫೈನಲ್: ಆಹ್ವಾನ ಬರುವುದೊಂದೇ ಬಾಕಿ !

ಜೆಡಿಎಸ್ ಸಚಿವರ ಪಟ್ಟಿ ಫೈನಲ್: ಆಹ್ವಾನ ಬರುವುದೊಂದೇ ಬಾಕಿ !

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲು ಇನ್ನು ಮೂರು ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಎರಡೂ ಪಕ್ಷಗಳ ಸಚಿವರ ಅಂತಿಮ ಪಟ್ಟಿ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಜೆಡಿಎಸ್ ನಿಂದ ಮಂತ್ರಿಗಳಾಗುವವರ ಹೆಸರುಗಳು ಬಹಿರಂಗಗೊಂಡಿದ್ದರೂ ರಾಜಭವನದಿಂದ ಯಾರಿಗೂ ಅಧಿಕೃತ ಆಹ್ವಾನ ಬಾರದಿರುವುದು ಬಹುತೇಕ ಶಾಸಕರನ್ನು ಆತಂಕದ ಮಡುವಿಗೆ ತಳ್ಳಿದೆ. ಎಚ್. ಡಿ. ರೇವಣ್ಣ, ಜಿ.ಟಿ. ದೇವೇಗೌಡ, ಸಾ. ರಾ. ಮಹೇಶ, ಪುಟ್ಟರಾಜು, ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪುರ, ಕುಮಾರಸ್ವಾಮಿ, ಮಹೇಶ  ಅವರ ಹೆಸರುಗಳು […]

ಪ್ರಮಾಣ ವಚನ 2 ರ ಬದಲು 2. 12 ಕ್ಕೆ !

ಪ್ರಮಾಣ ವಚನ 2 ರ ಬದಲು 2. 12 ಕ್ಕೆ !

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ನೂತನ ಸಚಿವರು ನಾಳೆ ಮಧ್ಯಾಹ್ನ 2 ಗಂಟೆಗೆ ಬದಲು 2.12 ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2.12 ಕ್ಕೆ ಕನ್ಯಾ ಲಗ್ನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ ಕಾಂಗ್ರೆಸ್ ಪಕ್ಷದಿಂದ ಯಾರು ಮಂತ್ರಿಯಾಗಲಿದ್ದಾರೆ ಎಂಬ ಕುರಿತು ರಾಹುಲ್ ಗಾಂಧಿಯವರು ರಾಜ್ಯ ಮುಖಂಡರೊಡನೆ ಚರ್ಚೆ ನಡೆಸುತ್ತಿದ್ದಾರೆ. ಕೆ.ಸಿ. ವೇಣುಗೋಪಾಲ, ಡಿಸಿಎಂ ಪರಮೇಶ್ವರ, ಮಾಜಿ ಸಿಎಂ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜನ ಖರ್ಗೆ ಮತ್ತು ಇತರ ನಾಯಕರೊಡನೆ […]

ದೋಸ್ತಿ ಸರಕಾರ: 4 ಕ್ಕೆ ಫೈನಲ್ ಸರ್ಕಸ್ !

ದೋಸ್ತಿ ಸರಕಾರ: 4 ಕ್ಕೆ ಫೈನಲ್ ಸರ್ಕಸ್ !

ಹೊಸದಿಲ್ಲಿ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ ರಚನೆಯ ಕಸರತ್ತು ಇನ್ನೂ ಮುಂದುವರಿದಿದ್ದು, ಇಂದು ಮಧ್ಯಾಹ್ನ 4 ಗಂಟೆಗೆ ರಾಹುಲಗಾಂಧಿ ನಿವಾಸದಲ್ಲಿ ಸಭೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಡಿಸಿಎಂ ಪರಮೇಶ್ವರ, ಸಿಎಂ ಸಿದ್ಧರಾಮಯ್ಯ ಅವರಿಗೆ ಸಭೆಗೆ ಆಹ್ವಾನ ನೀಡಲಾಗಿದ್ದು, ಅಗತ್ಯವಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸುವ ನಿರೀಕ್ಷೆ ಇದೆ. ಸಂಪುಟ ವಿಸ್ತರಣೆ ಜತೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಕುರಿತಂತೆಯೂ ಸಭೆಯಲ್ಲಿ ಚರ್ಚೆ  ನಡೆಯುವ ಸಾಧ್ಯತೆಗಳಿವೆ. Views: 342

ಲಿಂಗಾಯತರು ,ಹಿಂದುಳಿದವರಿಗೆ ತಲಾ ನಾಲ್ಕು ಮಂತ್ರಿ ಸ್ಥಾನ?

ಲಿಂಗಾಯತರು ,ಹಿಂದುಳಿದವರಿಗೆ ತಲಾ ನಾಲ್ಕು ಮಂತ್ರಿ ಸ್ಥಾನ?

ಹೊಸದಿಲ್ಲಿ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲು ಕ್ಷಣ ಗಣನೆ ಆರಂಭವಾಗಿದ್ದು, ಜಾತಿ ಲೆಕ್ಕಾಚಾರದ ಮೇಲೆ ಮಂತ್ರಿಗಿರಿ ಸಿಗುತ್ತಿರುವುದು ಹೆಚ್ಚು -ಕಡಿಮೆ ಖಾತ್ರಿಯಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಹಾಗೂ ಇತರ ನಾಯಕರು ಇಂದು ದೆಹಲಿಯಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದು , ಯಾವ ಸಮುದಾಯಕ್ಕೆ ಎಷ್ಟು ಮಂತ್ರಿ ಸ್ಥಾನ ನೀಡಬೇಕು ಎಂದು ಪ್ರಾಥಮಿಕ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನ್ಯೂಸ್ ಪೋರ್ಟಲ್ ಗೆ ಪಕ್ಷದ ಉನ್ನತ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ […]

ನಾಳೆ ಮಧ್ಯಾಹ್ನ 2 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ

ನಾಳೆ ಮಧ್ಯಾಹ್ನ 2 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ

ಹೊಸದಿಲ್ಲಿ: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ನೂತನ ಸಚಿವ ಸಂಪುಟ ನಾಳೆ ಮಧ್ಯಾಹ್ನ 2 ಗಂಟೆಗೆ ಅಸ್ತಿತ್ವಕ್ಕೆ ಬರಲಿದೆ. ಇಂದು ಮಧ್ಯಾಹ್ನ ಕಾಂಗ್ರೆಸ್ ಸಚಿವರ ಪಟ್ಟಿ ಅಂತಿಮವಾಗಲಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಸಚಿವರ ಪಟ್ಟಿಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿರುವುದನ್ನು ಉಪಮುಖ್ಯಮಂತ್ರಿ ಪರಮೇಶ್ವರ ದೆಹಲಿಯಲ್ಲಿ ಖಚಿತಪಡಿಸಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಜೆಡಿಎಸ್ ನ 9 ಹಾಗೂ ಕಾಂಗ್ರೆಸ್ಸಿನ 10-12 […]

ಜೆಡಿಎಸ್ ವರಿಷ್ಠರ ವಿರುದ್ಧ ಎಂಎಲ್ ಸಿಗಳು ಗರಂ !

ಜೆಡಿಎಸ್ ವರಿಷ್ಠರ ವಿರುದ್ಧ  ಎಂಎಲ್ ಸಿಗಳು ಗರಂ !

ಬೆಂಗಳೂರು: ಕುಮಾರಸ್ವಾಮಿ ಸಂಪುಟದಲ್ಲಿ ಎಂಎಲ್ ಸಿ ಗಳಿಗೆ ಮಂತ್ರಿಸ್ಥಾನ ನೀಡಲಾಗುವುದಿಲ್ಲ ಎಂಬ ಜೆಡಿಎಸ್ ವರಿಷ್ಠರ ನಿರ್ಣಯ  ಈಗ ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದಿರುವ ತಮಗೆ ಶಾಸಕಾಂಗ ಪಕ್ಷದ ಸಭೆಗೆ ಆಹ್ವಾನ ನೀಡದಿರುವ ಕುರಿತಂತೆ ಹೊರಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದು, ಸಂಜೆ ಅತೃಪ್ತ ಎ.ಎಲ್. ಸಿಗಳ ಸಭೆ ನಡೆಸಲು ನಿರ್ಧರಿಸಿದ್ದಾರೆ. ಸಭೆಯ ನಂತರ ಮುಂದಿನ ಹೆಜ್ಜೆ ಬಗ್ಗೆ ತೀರ್ಮಾನವಾಗಲಿದೆ. ತಮಗೆ ಮಂತ್ರಿ ಸ್ಥಾನವೂ ಬೇಡ, ಸಭಾಪತಿ ಹುದ್ದೆಯೂ […]

ಕೆಪಿಸಿಸಿಗೆ ಅಧ್ಯಕ್ಷರು ಯಾರಾಗ್ತಾರೆ ?

ಕೆಪಿಸಿಸಿಗೆ ಅಧ್ಯಕ್ಷರು ಯಾರಾಗ್ತಾರೆ ?

ಹೊಸದಿಲ್ಲಿ: ಕುಮಾರಸ್ವಾಮಿ ಸಂಪುಟದಲ್ಲಿ ಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆಯ ನಡುವೆಯೇ ಈಗ ಕೆಪಿಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲದ ಪ್ರಶ್ನೆ ಎದುರಾಗಿದೆ. ನೂತನ ಸಚಿವ ಸಂಪುಟದಲ್ಲಿ ಹಿರಿಯರು-ಕಿರಿಯರು ಒಟ್ಟಾಗಿಯೇ ಇರುತ್ತಾರೆ ಎಂಬ ಸಮಜಾಯಷಿಯ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಗಾದಿ ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲಗಾಂಧಿ ಜತೆಗೆ ಇಂದು ಮಧ್ಯಾಹ್ನ ರಾಜ್ಯ ಮುಖಂಡರ ಸಭೆ ನಡೆಯಲಿದ್ದು, ಮಂತ್ರಿ ಪಟ್ಟಿಯ ಜತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಕುರಿತಂತೆಯೂ ಚರ್ಚೆಯಾಗಲಿದೆ ಎನ್ನಲಾಗುತ್ತಿದೆ. ಹೈಕಮಾಂಡ್ […]

ಹಿರಿಯರಿಗೂ ಮಂತ್ರಿ ಪಟ್ಟ; ಪರಮೇಶ್ವರ ಸ್ಪಷ್ಟನೆ

ಹಿರಿಯರಿಗೂ ಮಂತ್ರಿ ಪಟ್ಟ; ಪರಮೇಶ್ವರ ಸ್ಪಷ್ಟನೆ

ಹೊಸದಿಲ್ಲಿ: ಹಿರಿಯರಿಗೆ ಮಂತ್ರಿ ಸ್ಥಾನ ಇಲ್ಲ ಎಂಬುದು ವದಂತಿ ಮಾತ್ರ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳುವ ಮೂಲಕ ಹತ್ತಾರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಪಕ್ಷದ  ಇಂತಹ ನಿರ್ಣಯದಿಂದ ಹಲವು ಹಿರಿಯ ತಲೆಗಳಿಗೆ ಮಂತ್ರಿ ಪಟ್ಟ ಸಿಗುವುದಿಲ್ಲ ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಆದರೆ, ಹಿರಿಯರು -ಕಿರಿಯರು ಮಂತ್ರಿ ಮಂಡಳದಲ್ಲಿ ಇರಲಿದ್ದಾರೆ. ಹಿರಿಯರಿಗೆ ಮಂತ್ರಿ ಸ್ಥಾನ ಕೊಡದಿರುವ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ ಎಂದು ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ ರಾಜ್ಯ ಕಾಂಗ್ರೆಸ್ […]

ಕಾಂಗ್ರೆಸ್ಸಿನ ಹತ್ತು ಶಾಸಕರು ಮಾತ್ರ ನಾಳೆ ಮಂತ್ರಿಗಳು ?

ಕಾಂಗ್ರೆಸ್ಸಿನ ಹತ್ತು ಶಾಸಕರು ಮಾತ್ರ ನಾಳೆ ಮಂತ್ರಿಗಳು ?

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಮೊದಲ ಹಂತದಲ್ಲಿ ಕಾಂಗ್ರೆಸ್ಸಿನ 10 ಶಾಸಕರು ಮಾತ್ರ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಸುದ್ದಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ಉಪಮುಖ್ಯಮಂತ್ರಿಯೂ ಸೇರಿದಂತೆ ಒಟ್ಟು 22 ಜನರಿಗೆ ಮಂತ್ರಿ ಸ್ಥಾನದ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ, ಭಿನ್ನಮತ ಶಮನ ಮಾಡುವ ತಂತ್ರವಾಗಿ ಮೊದಲ ಹಂತದಲ್ಲಿ ಹತ್ತು ಜನರಿಗೆ ಮಾತ್ರ ಅವಕಾಶ ಮಾಡಿಕೊಡುತ್ತಿರುವುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್ ಪಕ್ಷವು ಮೊದಲ ಹಂತದಲ್ಲಿ ಒಂಭತ್ತು ಶಾಸಕರಿಗೆ ಅವಕಾಶ ಮಾಡಿಕೊಡುವ ತಂತ್ರ ಹೆಣೆದ ಬೆನ್ನಲ್ಲೇ […]