ಸರಕಾರ ಐದು ವರ್ಷ ಇರುತ್ತೆ: ಪರಮೇಶ್ವರ

ಸರಕಾರ  ಐದು ವರ್ಷ  ಇರುತ್ತೆ: ಪರಮೇಶ್ವರ

ಚಿತ್ರದುರ್ಗ : ಜೆಡಿಎಸ್ -ಕಾಂಗ್ರೆಸ್  ದೋಸ್ತಿ ಸರಕಾರ ಐದು ವರ್ಷ ನಡೆಯುತ್ತದೆ ಎಂದು ಡಿಸಿಎಂ ಪರಮೇಶ್ವರ ಹೇಳಿದ್ದಾರೆ. ಚಿತ್ರದುರ್ಗದಿಂದ ಕೊಪ್ಪಳಕ್ಕೆ ತೆರಳುವ ಮುನ್ನ ಮಾತನಾಡಿದ ಅವರು ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಹೇಳಲಿಕ್ಕಾಗದು. ಆದರೆ, ಒಬ್ಬ ಡಿಸಿಎಂ ಆಗಿ, ಪಕ್ಷದ  ಅಧ್ಯಕ್ಷನಾಗಿ ಹೇಳ್ತಾ ಇದೀನಿ. ಒಪ್ಪಂದದಂತೆ ಸರಕಾರ ಐದು ವರ್ಷ ಪೂರೈಸುತ್ತದೆ ಎಂದು ಹೇಳಿದರು. ಸಿದ್ಧರಾಮಯ್ಯ ಏನು ಹೇಳಿದ್ದಾರೋ ನನಗೆ  ಗೊತ್ತಿಲ್ಲ. ಅವರು  ಹಾಗೇಕೆ ಹೇಳಿದ್ದಾರೋ ಅವರನ್ನೇ ಕೇಳಿ ಎಂದು ಸ್ವಲ್ಪ ಗರಂ   ಆಗಿಯೇ ಹೇಳಿದರು. […]

ಹಸಿರು ಚಿಣಗಿ ಹಾವಿಗೆ ಧಾರವಾಡ ಮಾವನ ಮನೆ ಈಗ!

ಹಸಿರು ಚಿಣಗಿ ಹಾವಿಗೆ ಧಾರವಾಡ ಮಾವನ ಮನೆ ಈಗ!

ಧಾರವಾಡ :ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆ ಕಿರು ಬೆರಳು ದೇಹ ಗಾತ್ರದ ಆಗಂತುಕ ಅತಿಥಿಯನ್ನು ಪಶ್ಚಿಮ ಘಟ್ಟದ ತಪ್ಪಲಿನ ಮಲೆನಾಡಿನಲ್ಲಿ ಕಾಣಸಿಗಬಹುದು. ಮಂಜುನಾಥಪುರ ಹಾಗೂ ಸರಸ್ವತಿಪುರ (ಸಾರಸ್ವತಪುರ) ಮನೆಗಳ ಮುಂದಿನ ಕೈತೋಟದ ಹೂವಿನ ಗಿಡಗಳಲ್ಲಿ ಇದು ಕಾಣಸಿಗುತ್ತಿದೆ. ಗಿಡಗಳ ಅತ್ಯಂತ ಎತ್ತರದ ಪುಟ್ಟ ಕೊಂಬೆಗಳ ಮೇಲೆ ಕುಳಿತು, ಸಹಜವಾಗಿ ಕಣ್ಣಾಡಿಸುವವರಿಗೆ ಕಾಣದಂತೆ ಗಿಡದ ರೆಂಬೆಯಂತೆ ಮಲಗಿ ಬಿಡುತ್ತದೆ! ಹಾಗಂತ ಆಲಸಿ ಎಂದುಕೊಳ್ಳಬೇಡಿ.. ಬಾಣದಂತೆ ಮೂತಿ ತೀರ ಚೂಪು; ಕಣ್ಣುಗಳು ಮೂಗಿನ […]

ಬ್ಯಾಂಕುಗಳಿಗೆ ನಾನು ಪೋಸ್ಟರ್ ಬಾಯ್ ಆದೆ ಎಂದು ವಿಷಾದಿಸಿದ ಮಲ್ಯ!

ಬ್ಯಾಂಕುಗಳಿಗೆ ನಾನು ಪೋಸ್ಟರ್ ಬಾಯ್ ಆದೆ ಎಂದು ವಿಷಾದಿಸಿದ ಮಲ್ಯ!

ಲಂಡನ್ ( ಯುನೈಟೆಡ್ ಕಿಂಗಡಂ): ಸುಮಾರು 9000 ಕೋಟಿ ರೂ. ಗಳನ್ನು ಬ್ಯಾಂಕಿಗೆ ವಂಚನೆ ಮಾಡಿರುವ ವಿಷಯದಲ್ಲಿ ಸುದ್ದಿಗೆ ಗ್ರಾಸವಾಗಿರುವ ಮದ್ಯದ ದೊರೆ ವಿಜಯ ಮಲ್ಯ ಕೊನೆಗೂ ಮೌನ ಮುರಿದಿದ್ದು, ತಮ್ಮನ್ನು ತಪ್ಪಿತಸ್ಥ ಎಂದು ಬ್ಯಾಂಕುಗಳು ಬಿಂಬಿಸಿದ್ದು, ಬ್ಯಾಂಕ್ ರುಗಳಿಗೆ ನಾನೊಬ್ಬ ಪೋಸ್ಟರ್ ಬಾಯ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತಂತೆ  ಏಪ್ರಿಲ್ 15, 2016 ರಂದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ  ಅರುಣ ಜೈಟ್ಲಿ ಅವರಿಗೆ ತಾವು ಪತ್ರ ಬರೆದಿದ್ದು, ಇಬ್ಬರೂ ಯಾವುದೇ […]

ಕುಮಾರಸ್ವಾಮಿ ಸರಕಾರ ಐದು ವರ್ಷ ಡೌಟು !

ಕುಮಾರಸ್ವಾಮಿ ಸರಕಾರ ಐದು ವರ್ಷ ಡೌಟು !

ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರ ಐದು ವರ್ಷ ಪೂರ್ಣಗೊಳಿಸುವುದು ಡೌಟಾ? ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಾಜಿ ಸಿಎಂ ಸಿದ್ಧರಾಮಯ್ಯ   ನೀಡಿರುವ ಹೇಳಿಕೆ ಇಂತಹ  ಒಂದು ಡೌಟ್ ಗೆ ಕಾರಣವಾಗಿದೆ. ತಮ್ಮನ್ನು ಭೇಟಿ ಮಾಡಲು ಬಂದ ಆಪ್ತರೊಡನೆ ಸಿದ್ದು ಮಾತನಾಡಿರುವ ಆಡಿಯೋ ಮಾಧ್ಯಮಗಳಲ್ಲಿ ಸ್ಫೋಟಗೊಂಡಿದ್ದು, ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿದ್ದು ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಜೆಟ್ ಮಂಡನೆ ವಿಷಯದಲ್ಲೂ ಕುಮಾರಸ್ವಾಮಿ […]

ಅಘೋಷಿತ ತುರ್ತು ಪರಿಸ್ಥಿತಿ ಹೇರಿದ ಬಿಜೆಪಿ ಕ್ಷಮೆ ಕೇಳಲಿ: ಅಹ್ಮದ ಪಟೇಲ್

ಅಘೋಷಿತ ತುರ್ತು ಪರಿಸ್ಥಿತಿ ಹೇರಿದ ಬಿಜೆಪಿ ಕ್ಷಮೆ ಕೇಳಲಿ: ಅಹ್ಮದ ಪಟೇಲ್

ಹೊಸದಿಲ್ಲಿ: 1975 ರ ತುರ್ತು ಪರಿಸ್ಥಿತಿಯನ್ನು ಟೀಕೆ ಮಾಡುತ್ತಿರುವ ಭಾರತೀಯ ಜನತಾಪಕ್ಷದ ಮೇಲೆ ಹರಿಹಾಯ್ದಿರುವ ಹಿರಿಯ ಕಾಂಗ್ರೆಸ್ ಮುಖಂಡ  ಅಹ್ಮದ ಪಟೇಲ್, ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಅಘೋಷಿತ ತುರ್ತು ಪರಿಸ್ಥಿತಿ ಬಗ್ಗೆ ಬಿಜೆಪಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳ ಅವಧಿಯಲ್ಲಿ ಜನರನ್ನು ಗಲ್ಲಿಗೇರಿಸಲಾಯಿತು, ಬೆದರಿಸಲಾಯಿತು, ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ, ಆರ್ಥಿಕ ಮತ್ತು ನಾಗರಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಈ ಅಘೋಷಿತ ತುರ್ತು ಸ್ಥಿತಿಯ ಬಗ್ಗೆ ಅವರು ಕ್ಷಮೆ ಕೇಳುತ್ತಾರೆಯೇ ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ. […]

ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ: ಜಾರ್ಜ್

ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ: ಜಾರ್ಜ್

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಪೂರ್ಣಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ ಎಂದು ಬೃಹತ್  ಕೈಗಾರಿಕೆ ಸಚಿವ ಟಿ.ಜೆ.ಎಸ್. ಜಾರ್ಜ ಹೇಳಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಜಾರ್ಜ್ ಈ ವಿಷಯ ತಿಳಿಸಿದ್ದಾರೆ. ಇದಕ್ಕೂ ಮೊದಲು ಸಿಎಂ ಕುಮಾರಸ್ವಾಮಿ ಕೂಡ ಬೆಳಗ್ಗೆ ಹೇಳಿಕೆ ನೀಡಿ ಬಜೆಟ್ ಮಂಡಿಸಿಯೇ ತೀರುವುದಾಗಿ ತಿಳಿಸಿದ್ದರು. ಸಾಲ ಮನ್ನಾ ವಿಷಯದಲ್ಲಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಕುರಿತಂತ ಕಳೆದ  ಎರಡು ದಿನಗಳಿಂದ ಗೊಂದಲಕಾರಿ ಹೇಳಿಕೆಗಳು ಕೇಳಿಬಂದಿದ್ದವು. […]

ಹತ್ತು ತಿಂಗಳ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ !

ಹತ್ತು ತಿಂಗಳ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ !

ಔರಂಗಾಬಾದ (ಮಹಾರಾಷ್ಟ್ರ): ಹತ್ತು ತಿಂಗಳು ಮಗುವನ್ನು ನೀರಿನಲ್ಲಿ ಮುಳುಗಿಸಿದ ಮಹಿಳೆಯನ್ನು ಔರಂಗಾಬಾದ ಪೊಲೀಸರು ಬಂಧಿಸಿದ್ದಾರೆ. ತನ್ನ ಮಗ ಪ್ರೇಮಪರಮೇಶ್ವರನ್ನು ತಾಯಿ ರಾಧಿಕಾಳೇ ಶನಿವಾರ ರಾತ್ರಿ ಕೊಲೆಗೈದಿದ್ದಾಳೆಂದು ಆರೋಪಿಸಲಾಗಿದೆ. ದೂರು ದಾಖಲಾದ ಹಿನ್ನೆಯಲ್ಲಿ ಮಹಿಳೆಯನ್ನು ಬಂಧಿಸಿದ ಪೊಲೀಸರು ಆಕೆ ವಾಸಿಸುತ್ತಿದ್ದ ಮನೆಯಲ್ಲಿ ಶೋಧ ನಡೆಸಿದಾಗ ನೀರಿನ  ಡ್ರಮ್ ನಲ್ಲಿ ಮಗುವಿನ ಶವ  ಪತ್ತೆಯಾಯಿತು. ಈ ಮಗು ನನಗೆ ಇಷ್ಟವಿರಲಿಲ್ಲ. ನನಗೆ ಹೆಣ್ಣು ಮಗು ಬೇಕಾಗಿತ್ತು. ಅದಕ್ಕಾಗಿ ಅವನನ್ನು ನೀರಿನಲ್ಲಿ ಮುಳುಗಿಸಿ ಕೊಂದು ಬಿಟ್ಟೆ ಎಂದು ಮಹಿಳೆ ಪೊಲೀಸರೆದುರು ಬಾಯಿಬಿಟ್ಟಿದ್ದಾಳೆ. […]

ಆಪ್ತರೊಡನೆ ಯಡಿಯೂರಪ್ಪ ಸಭೆ

ಆಪ್ತರೊಡನೆ ಯಡಿಯೂರಪ್ಪ ಸಭೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮ  ಆಪ್ತರ ಜತೆ ಸಭೆ ನಡೆಸುತ್ತಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸಕ್ಕೆ ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಅರುಣ ಶಹಾಪುರ, ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ ಸೇರಿದಂತೆ ಅನೇಕ ಶಾಸಕರು ಭೇಟಿ ನೀಡಿದ್ದು ಮಾತುಕತೆ ನಡೆಯುತ್ತಿದೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕನ ನೇಮಕ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದಿವೆ ಎಂದು ಹೇಳಲಾಗಿದ್ದು, ನಿನ್ನೆ ಅಹಮದಾಬಾದಗೆ ತೆರಳಿದ್ದ ಬಿಎಸ್ ವೈ ಅಲ್ಲಿ ಅಮಿತ ಶಾ […]

ಕಾಂಗ್ರೆಸ್ ಟೀಕಿಸಲು ಕಪ್ಪು ದಿನಾಚರಣೆ ಮಾಡಿಲ್ಲ: ಮೋದಿ

ಕಾಂಗ್ರೆಸ್ ಟೀಕಿಸಲು ಕಪ್ಪು ದಿನಾಚರಣೆ ಮಾಡಿಲ್ಲ: ಮೋದಿ

ಮುಂಬೈ: ಭಾರತೀಯ ಜನತಾಪಕ್ಷವು ಕಾಂಗ್ರೆಸ್ ನ್ನು ಟೀಕಿಸಲು ಕಪ್ಪು ದಿನವನ್ನು ಆಚರಿಸುತ್ತಿಲ್ಲ. ಬದಲಾಗಿ ತುರ್ತು ಪರಿಸ್ಥಿತಿ ಬಗೆಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಕಪ್ಪುದಿನ  ಆಚರಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತುರ್ತು ಪರಿಸ್ಥಿಯಲ್ಲಿ ಏನಾಯ್ತು ಎಂಬುದನ್ನು ಯುವಜನರಿಗೆ ತಿಳಿಸಬೇಕಾಗಿದೆ.  ತುರ್ತು ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯವಿಲ್ಲದೇ ಬದುಕಿದಾಗ  ಏನಾಗಿತ್ತು ಎಂಬುದು ಯುವಜನರಿಗೆ ಗೊತ್ತಾಗಬೇಕಿದೆ ಎಂದು ಅವರು ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹೇಳಿದರು. ಕಾಂಗ್ರೆಸ್ ಯಾವಾಗಲೂ ಒಂದು ನಿಗೂಢ ಭಯ ಹುಟ್ಟಿಸುತ್ತಿರುತ್ತದೆ ಎಂದು ಮೋದಿ ಆಪಾದಿಸಿದರು. ಒಂದು […]

ಹೆಣ್ಣು ಮಗುವೆಂದು ಜೀವಂತ ಸಮಾಧಿಗೆ ಯತ್ನಿಸಿದರು !

ಹೆಣ್ಣು ಮಗುವೆಂದು ಜೀವಂತ ಸಮಾಧಿಗೆ ಯತ್ನಿಸಿದರು !

ಬೆಳಗಾವಿ: ಹೆಣ್ಣು ಮಗು ಜನಿಸಿತೆಂಬ  ಕಾರಣಕ್ಕೆ ಆ ಮಗುವನ್ನು ಜೀವಂತವಾಗಿಯೇ ಅಂತ್ಯಕ್ರಿಯೆ ನಡೆಸಲು ಯತ್ನಿಸಿದ ಅಮಾನವೀಯ ಘಟನೆ ಇಲ್ಲಿಯ ಶಹಪೂರದಲ್ಲಿ ನಡೆದಿದೆ. ನಿನ್ನೆ ಸಂಜೆ ಶಹಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಮಶಾನವೊಂದರಲ್ಲಿ ಮಗುವನ್ನು ಜೀವಂತವಾಗಿ ಅಂತ್ಯಕ್ರಿಯೆ ತಂದಿದ್ದ ನಾಲ್ವರ ಬಗ್ಗೆ ಸ್ಥಳೀಯರಿಗೆ ಸಂಶಯ ಬಂದಿದೆ. ಮಗು ಅಳುತ್ತಿರುವುದನ್ನು ಕಂಡು ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಸಂಶಯದಿಂದ ಪ್ರಶ್ನಿಸಿದ್ದಾರೆ. ಹೂವು, ತೆಂಗಿನಕಾಯಿ, ಮಗುವಿನ ಒಂದು ಅಂಗಿಯನ್ನು ತಂದಿದ್ದ  ಆಗಂತುಕರು , ಅವನ್ನೆಲ್ಲ ಸ್ಮಶಾನದಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಸಾರ್ವಜನಿಕರ ಪ್ರಶ್ನೆಗೆ ಕಕ್ಕಾವಿಕ್ಕಿಯಾದ […]