ಸಂಪುಟ ವಿಸ್ತರಣೆ: ನಾಳೆ ಫೈನಲ್ !

ಸಂಪುಟ ವಿಸ್ತರಣೆ: ನಾಳೆ ಫೈನಲ್ !

ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ದೋಸ್ತಿ ಸರಕಾರದ ಸಂಪುಟ ರಚನೆಯ ಕಸರತ್ತು ಮುಗಿದಂತೆ ಕಂಡುಬಂದಿದ್ದು, ನಾಳೆಯೇ ಎಲ್ಲವೂ ಫೈನಲ್ ಆಗುವುದು ನಿಚ್ಚಳವಾಗಿದೆ. ಸಚಿವ ಸಂಪುಟ ವಿಸ್ತರಣೆ ಮತ್ತು ಸಮನ್ವಯ ಸಮಿತಿ ರಚನೆ ವಿಚಾರದಲ್ಲಿ ನಾಳೆ ಸುದ್ದಿಗೋಷ್ಠಿ ನಡೆಸಿ ವಿವರಿಸುವುದಾಗಿ ಸಿಎಂ ಕುಮಾರಸ್ವಾಮಿ ಇಂದು ವಿಧಾನಸೌಧದಲ್ಲಿ ಹೇಳುವ ಮೂಲಕ ಇದುವರೆಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ದಿನಾಂಕವನ್ನು ಚರ್ಚೆಯ ನಂತರ ನಿರ್ಧರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಡ್ಯಾನಿಷ ಅಲಿ ಹಾಗೂ ವೇಣುಗೋಪಾಲ […]

ಗೃಹ ಇಲಾಖೆಗೆ ಸಲಹೆಗಾರರು ಬೇಕಾಗಿಲ್ಲ: ಎಚ್ಡಿಕೆ

ಗೃಹ ಇಲಾಖೆಗೆ ಸಲಹೆಗಾರರು ಬೇಕಾಗಿಲ್ಲ: ಎಚ್ಡಿಕೆ

ಬೆಂಗಳೂರು: ರಾಜ್ಯ ಗೃಹ ಇಲಾಖೆಗೆ ಸಲಹೆಗಾರರ ಅಗತ್ಯವಿಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದದಲ್ಲಿ ಮಾತನಾಡಿದ ಅವರು ದೋಸ್ತಿ ಸರಕಾರದ ಸಂಪುಟ ರಚನೆಯಲ್ಲಿ ಯಾವುದೇ ತೊಡಕಿಲ್ಲ. ಒಂದೆರಡು ದಿನಗಳಲ್ಲಿ ನೂತನ ಸಂಪುಟ ಅಸ್ತಿತ್ವಕ್ಕೆ ಬರುತ್ತದೆ ಎಂದ ಹೇಳಿದರು. ಸಂಪುಟಕ್ಕಿಂತ ಹೆಚ್ಚಾಗಿ ಸುಗಮ ಆಡಳಿತಕ್ಕೆ ಸರಕಾರ ಒತ್ತು ಕೊಡುತ್ತಿದೆ. ಉತ್ತಮ ಆಡಳಿತ  ನೀಡುವುದು ನಮ್ಮೆಲ್ಲರ ಗುರಿ ಎಂದು ಅವರು ಹೇಳಿದರು. Views: 288

ಆರ್ ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ಗೆ ಭರ್ಜರಿ ಗೆಲುವು

ಆರ್ ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ಗೆ ಭರ್ಜರಿ ಗೆಲುವು

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಜಯ ದಾಖಲಿಸಿದ್ದಾರೆ. ವೋಟರ್ ಐಡಿ ಪತ್ತೆ ವಿವಾದದಲ್ಲಿ ಮೇ 12 ರಂದು ನಡೆಯಬೇಕಿದ್ದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿದ್ದ ಮುನಿರತ್ನ 1,08064 ಮತಗಳನ್ನು ಪಡೆಯುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜು ಗೌಡ (82572) ಅವರನ್ನು 25492 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಕಣದಲ್ಲಿದ್ದ ರಾಮಚಂದ್ರ ಅವರಿಗೆ ಕೇವ 60,360 […]

ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಹೊಸದಿಲ್ಲಿ: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಗೆ ಸಿಬಿಐ ಬಂಧಿಸದಂತೆ ಜುಲೈ 3 ರವರೆಗೆ ಮಧ್ಯಂತರ ನಿರೀಕ್ಷಣಾ  ಜಾಮೀನು ದೊರಕಿದೆ. ಚಿದಂಬರಂ ಪರವಾಗಿ ಈ ಪ್ರಕರಣದಲ್ಲಿ ವಕಾಲತ್ತು ವಹಿಸಿರುವ ಹಿರಿಯ ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ, ” ಈ ವಿಷಯ ಚರ್ಚಿಸಲು ಇದು ಸಕಾಲವಲ್ಲ ” ಎಂದು ಹೇಳುವ ಮೂಲಕ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಏರಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡ ಮಾರನೇ ದಿನವೇ ಚಿದಂಬರಂಗೆ  ಈ […]

ಮಾರ್ಕೆಟಿಂಗ್ ಪ್ರತಿನಿಧಿಗಳು ಬೇಕಾಗಿದ್ದಾರೆ

ಮಾರ್ಕೆಟಿಂಗ್ ಪ್ರತಿನಿಧಿಗಳು ಬೇಕಾಗಿದ್ದಾರೆ

ಬೆಳಗಾವಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ” ಉದಯ ನಾಡು ” ಪೋರ್ಟ್ ಲ್ ನ್ಯೂಸ್ ಗೆ  ಮಾರ್ಕೆಟಿಂಗ್ ನಲ್ಲಿ ಅನುಭವವಿರುವ ಮೂವರು ಸಿಬ್ಬಂದಿ ಬೇಕಾಗಿದ್ದಾರೆ. ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ , 1-2 ವರ್ಷ ಮಾರುಕಟ್ಟೆ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು. ಬಿಬಿಎ, ಎಂಬಿ ಎ ಪದವೀಧರರಿಗೆ ಆದ್ಯತೆ. ಆಕರ್ಷಕ ವೇತನವಿದ್ದು, ಆಸಕ್ತರು ತಕ್ಷಣ  ಈ  ಮುಂದೆ ನಮೂದಿಸಿರುವ ವಿಳಾಸಕ್ಕೆ ನಿಮ್ಮ ವಿವರಗಳನ್ನು ಕಳಿಸಿ. ವಿಳಾಸ: ಮುಖ್ಯಸ್ಥರು, ” ಉದಯನಾಡು ” ನ್ಯೂಸ್ ಪೋರ್ಟಲ್ , ಪ್ರಧಾನ […]

ಹೃದಯಾಘಾತದಿಂದ ಮಹಾರಾಷ್ಟ್ರ ಕೃಷಿ ಸಚಿವ ವಿಧಿವಶ

ಹೃದಯಾಘಾತದಿಂದ ಮಹಾರಾಷ್ಟ್ರ ಕೃಷಿ ಸಚಿವ ವಿಧಿವಶ

ಮುಂಬೈ (ಮಹಾರಾಷ್ಟ್ರ): ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರದ ಕೃಷಿ ಸಚಿವ ಪಾಂಡುರಂಗ ಪುಂಡಲೀಕ ಫಂಡಕರ ಗುರುವಾರ ಬೆಳಗಿನ ಜಾವ ನಿಧನಹೊಂದಿದರು. ಮಧುಮೇಹ ರೋಗದಿಂದಲೂ ಬಳಲುತ್ತಿದ್ದ ಸಚಿವರನ್ನು ಉಳಿಸಿಕೊಳ್ಳಲು ವೈದ್ಯರು ಮಾಡಿದ ಯತ್ನಗಳು ಫಲ ನೀಡಲಿಲ್ಲ. ಸಚಿವರ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, ಫಂಡಕರ ರೈತರ ಹಿತರಕ್ಷಣೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಎಂದು ಸ್ಮರಿಸಿದ್ದಾರೆ.   Views: 551

2 ಲಕ್ಷ ರೂ. ಇದ್ದ ಬ್ಯಾಗ್ ಎಗರಿಸಿದ ಮಂಗ !

2 ಲಕ್ಷ ರೂ. ಇದ್ದ ಬ್ಯಾಗ್ ಎಗರಿಸಿದ ಮಂಗ !

ಆಗ್ರಾ (ಉತ್ತರ ಪ್ರದೇಶ): ಬ್ಯಾಂಕಿನಿಂದ ಹೊರಬರುವ ಗ್ರಾಹಕರ ಹಣವನ್ನು ಖದೀಮರು ದೋಚಿರುವ ಘಟನೆಗಳನ್ನು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಆದರೆ , ಇಲ್ಲೊಂದು ಮಂಗ ಬ್ಯಾಂಕಿನಿಂದ ಹೊರಟಿದ್ದ ಅಪ್ಪ-ಮಗಳ 2 ಲಕ್ಷ ರೂ. ಬ್ಯಾಗನ್ನೇ ಎಗರಿಸಿದ ಪ್ರಸಂಗ ನಡೆದಿದೆ. ಆಗ್ರಾದ ನವಿಮಂಡಿಯ  ಇಂಡಿಯನ್ ಓವರಸಿಸ್ ಬ್ಯಾಂಕಿನ ಎದುರು ಈ ಘಟನೆ ನಡೆದಿದ್ದು, ಬ್ಯಾಂಕಿನ ಭದ್ರತಾ ಸಿಬ್ಬಂದಿ  ಮತ್ತು ಅಪ್ಪ-ಮಗಳು ಮಂಗನ ಬೆನ್ನು ಹತ್ತಿದರೂ ಹಣದ ಥೈಲಿ ಸಿಗಲಿಲ್ಲ. ಬದಲಾಗಿ ಬ್ಯಾಗು ಹರಿದು ಅಲ್ಲಲ್ಲಿ ಬಿದ್ದಿದ್ದ 60 ಸಾವಿರ ರೂ. […]

ನಲಪಾಡ ಜಾಮೀನು ಅರ್ಜಿ ಮತ್ತೆ ವಜಾ

ನಲಪಾಡ ಜಾಮೀನು ಅರ್ಜಿ ಮತ್ತೆ ವಜಾ

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹ್ಮದ ನಲಪಾಡ್  ಹ್ಯಾರಿಸ್ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ ಬುಧವಾರ ವಜಾಗೊಳಿಸಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ನಿನ್ನೆ ಪೂರ್ಣಗೊಳಿಸಿದ್ದ ನ್ಯಾಯಾಧೀಶರು ತೀರ್ಪನ್ನು ಇಂದಿಗೆ ಕಾದಿರಿಸಿದ್ದರು. ಜಾಮೀನು ಅರ್ಜಿ ವಜಾಗೊಳಿಸಿ ಬುಧವಾರ ಸಂಜೆ ನ್ಯಾಯಾಧೀಶರು ಆದೇಶ ಹೊರಡಿಸಿದರು. ಕಳೆದ 99 ದಿನಗಳಿಂದ ಜೈಲಿನಲ್ಲಿರುವ ನಲಪಾಡ್ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. Views: 185

ಮಂತ್ರಿಯಾದರೆ ಈ ಬಾರಿ ಸರಕಾರಿ ಕಾರು ಬಳಕೆ: ಸತೀಶ ಜಾರಕಿಹೊಳಿ

ಮಂತ್ರಿಯಾದರೆ ಈ ಬಾರಿ ಸರಕಾರಿ ಕಾರು ಬಳಕೆ: ಸತೀಶ ಜಾರಕಿಹೊಳಿ

ಯಮಕನಮರಡಿ: ಜೆಡಿಸ್ -ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಈ ಬಾರಿ  ಮಂತ್ರಿಯಾದರೆ ಸರಕಾರಿ ವಾಹನ ಪಡೆದುಕೊಳ್ಳುವುದರ ಜತೆಗೆ ಬೆಂಗಾವಲು ವಾಹನ ಸೌಲಭ್ಯವನ್ನೂ ಪಡೆದುಕೊಳ್ಳುವುದಾಗಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಕ್ಷೇತ್ರವ್ಯಾಪ್ತಿಯ ಅಲ್ದಾಳ ಅತಿಥಿಗೃಹದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ  ಅವರು, ಈ ಹಿಂದೆ ಜವಳಿ, ಅಬಕಾರಿ ಹಾಗೂ ಸಣ್ಣ ಕೈಗಾರಿಕೆ ಹೀಗೆ ಬೇರೆ ಬೇರೆ ಖಾತೆ ಸಚಿವನಾಗಿದ್ದಾಗ ಸರಕಾರಿ ಕಾರು ಬಳಸಿರಲಿಲ್ಲ. ಬೆಂಗಾವಲು ಪಡೆಯ ಸೌಲಭ್ಯವನ್ನೂ ಪಡೆದುಕೊಂಡಿರಲಿಲ್ಲ. ಆದರೆ, ಈ ಬಾರಿ ಹಾಗೆ ಮಾಡುವುದಿಲ್ಲ ಎಂದು […]

ಅಕ್ರಮ ಮರಳು ಸಾಗಾಟ ತಡೆಗೆ ಎಂಟು ದಿನಗಳ ಗಡುವು ನೀಡಿದ ಸತೀಶ ಜಾರಕಿಹೊಳಿ

ಅಕ್ರಮ ಮರಳು ಸಾಗಾಟ ತಡೆಗೆ ಎಂಟು ದಿನಗಳ ಗಡುವು ನೀಡಿದ ಸತೀಶ ಜಾರಕಿಹೊಳಿ

ಪೊಲೀಸ್ ಠಾಣೆ ಎದುರು ಖುದ್ದು ಪ್ರತಿಭಟನೆಯ ಎಚ್ಚರಿಕೆ ಯಮಕನಮರಡಿ: ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿನ ಅಕ್ರಮ ಮರಳು ಸಾಗಾಟ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಪೊಲೀಸರಿಗೆ ಎಂಟು ದಿನಗಳ ಗಡುವು ನೀಡಿದ್ದಾರೆ. ಈ ಅಕ್ರಮ ಮರಳು ಸಾಗಾಟ ವ್ಯವಹಾರದಲ್ಲಿ ಪೊಲೀಸರಿಗೆ ಸೇರಿದ ಎಂಟು ವಾಹನಗಳೂ ಇವೆ. ಈ ವ್ಯವಹಾರ ತಡೆಯದಿದ್ದರೆ ಎಂಟು ದಿನಗಳ ನಂತರ ಯಮಕನಮರಡಿ ಪೊಲೀಸ್ ಠಾಣೆ ಎದುರು ಖುದ್ದು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು. ರಾಜ್ಯ ವಿಧಾನಸಭೆ […]