ಪರಿಷತ್ ಚುನಾವಣೆ: ನಾಲ್ವರು ಕೈ ಅಭ್ಯರ್ಥಿಗಳ ಹೆಸರು ಪ್ರಕಟ

ಪರಿಷತ್ ಚುನಾವಣೆ: ನಾಲ್ವರು ಕೈ ಅಭ್ಯರ್ಥಿಗಳ ಹೆಸರು ಪ್ರಕಟ

ಬೆಂಗಳೂರು: ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ನಾಲ್ವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಸಿ.ಎಂ. ಇಬ್ರಾಹಿಂ, ಗೋವಿಂದರಾಜು, ಕೆ . ಹರೀಷಕುಮಾರ ಹಾಗೂ ಅರವಿಂದಕುಮಾರ ಎಸ್ ಅರಳಿ ಅವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ವಿಧಾನಪರಿಷತ್ತಿನ ಹನ್ನೊಂದು ಸ್ಥಾನಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಹೆಸರು ಪ್ರಕಟಿಸಲಾಗಿದೆ. Views: 450

ರಾಹುಲ್ ಕೇಳುವುದಾದರೆ ನೀವ್ಯಾಕ್ರಿ ಭರವಸೆ ಕೊಟ್ರಿ ? : ಎಚ್ಡಿಕೆಗೆ ಬಿಎಸ್ ವೈ ಪ್ರಶ್ನೆ

ರಾಹುಲ್ ಕೇಳುವುದಾದರೆ ನೀವ್ಯಾಕ್ರಿ ಭರವಸೆ ಕೊಟ್ರಿ ? : ಎಚ್ಡಿಕೆಗೆ ಬಿಎಸ್ ವೈ ಪ್ರಶ್ನೆ

ಬೆಂಗಳೂರು: ಕುಮಾರಸ್ವಾಮಿ ಸರಕಾರ ರಾಜ್ಯ ರೈತರ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ತೀವ್ರವಾಗಿ ಟೀಕಿಸಿರುವ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯವರನ್ನು ಕೇಳಿ ಸಾಲ ಮನ್ನಾ ಮಾಡುವೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ತಾವೇಕೆ ಆಶ್ವಾಸನೆ ಕೊಡಬೇಕಿತ್ತು ಎಂದು ಯಡಿಯೂರಪ್ಪ ಖಾರವಾಗಿ ಪ್ರಶ್ನಿಸಿದರು. ಪರಮೇಶ್ವರ ಅವರನ್ನು ಪಕ್ಕದಲ್ಲಿ ಕೂಡ್ರಿಸಿಕೊಂಡು ರಾಜ್ಯದ ರೈತರ ಕಣ್ಣಿಗೆ ಕುಮಾರಸ್ವಾಮಿ ಮಣ್ಣೆರಚುತ್ತಿದ್ದಾರೆ. ಅವರ ಈ ಧೋರಣೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಶಾಸಕಾಂಗ ಪಕ್ಷದ ಸಭೆ […]

ಯಶಸ್ವಿನಿ ಯೋಜನೆ ಮುಂದುವರಿಕೆ: ಕುಮಾರಸ್ವಾಮಿ ಘೋಷಣೆ

ಯಶಸ್ವಿನಿ ಯೋಜನೆ ಮುಂದುವರಿಕೆ: ಕುಮಾರಸ್ವಾಮಿ ಘೋಷಣೆ

ಬೆಂಗಳೂರು: ಯಶಸ್ವಿನಿ ಯೋಜನೆಯನ್ನು ಮುಂದುವರಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ರೈತಪರ ಸಂಘಟನೆಗಳು ಮತ್ತು ಪ್ರಗತಿಪರ ರೈತರ ಸಭೆಯಲ್ಲಿ ಮಾತನಾಡಿದ ಸಿಎಂ, ತಾವು ರೈತರಿಗೆ ನೀಡಿರುವ ಭರವಸೆಗಳಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸಂಬಂಧಿಸಿದ  ಅಧಿಕಾರಿಗಳೊಂದಿಗೆ ಚರ್ಚಿಸಿ ಯಶಸ್ವಿನಿ ಯೋಜನೆ ಮುಂದುವರಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ಮೇ 31 (ನಾಳೆ) ಈ ಯೋಜನೆ ಕೊನೆಗೊಳ್ಳಲಿತ್ತು. * ಯಶಸ್ವಿನಿ ಯೋಜನೆ ಎಂದರೇನು?  ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ […]

ರೈತರ ಸಾಲ ಮನ್ನಾ: ಮತ್ತೆ 15 ದಿನ ಕಾಲಾವಕಾಶ ಕೋರಿದ ಎಚ್ಡಿಕೆ

ರೈತರ ಸಾಲ ಮನ್ನಾ: ಮತ್ತೆ 15 ದಿನ ಕಾಲಾವಕಾಶ ಕೋರಿದ ಎಚ್ಡಿಕೆ

ಬೆಂಗಳೂರು: ರಾಜ್ಯದ ರೈತರ ಸಾಲ ಮನ್ನಾ ವಿಚಾರ ಮತ್ತೆ ಮುಂದಕ್ಕೆ ಹೋಗಿದ್ದು, ಅಂತಿಮ ನಿರ್ಧಾರಕ್ಕೆ  ಬರಲು ಹದಿನೈದು ದಿನಗಳ ಕಾಲಾವಕಾಶ ಕೊಡುವಂತೆ  ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ರೈತಪರ ಸಂಘಟನೆಗಳು ಮತ್ತು ಪ್ರಗತಿಪರ ರೈತರ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಕುಮಾರಸ್ವಾಮಿ, ಈ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿದ ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು. ಬೆಳೆ ಸಾಲ, ಕೃಷಿ ಸಾಲದ ಜತೆಗೆ ಚಿನ್ನ-ವಾಹನ ಖರೀದಿ, ವಿವಾಹ […]

ಮಹಾಮಳೆಗೆ ಚಿತ್ರನಿರ್ದೇಶಕ ಬಲಿ !

ಮಹಾಮಳೆಗೆ ಚಿತ್ರನಿರ್ದೇಶಕ ಬಲಿ !

ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ -ಪ್ರವಾಹಕ್ಕೆ ಇಂದು ಚಿತ್ರನಿರ್ದೇಶಕನೊಬ್ಬ ಬಲಿಯಾಗಿದ್ದಾರೆ. ಸಿನಿಮಾ ಶೂಟಿಂಗ್ ಗೆಂದು ಬಂದಿದ್ದ ನಿರ್ದೇಶಕ ಸಂತೋಷ ಶೆಟ್ಟಿ ಎರ್ಮಾಯ್ ಫಾಲ್ಸ್ ನಲ್ಲಿ ಪ್ರವಾಹಕ್ಕೆ ಸಿಲುಕಿ ಬುಧವಾರ ಸಾವಿಗೀಡಾಗಿದ್ದಾರೆ. ಫಾಲ್ಸ್ ಬಳಿ “ಕನಸು ” ಚಿತ್ರಕ್ಕೆ ಫೋಟೋ ಶೂಟ್ ಮಾಡುವಾಗ  ಬಂದ ಪ್ರವಾಹದಲ್ಲಿ ಕಾಲು ಜಾರಿ ಬಿದ್ದ ಶೆಟ್ಟಿ ಸಾವಿಗೀಡಾಗಿದ್ದಾರೆ. ಶೂಟಿಂಗ್ ಗಾಗಿ ನಾಲ್ಕು ಜನರ ತಂಡ ಬೆಳ್ತಂಗಡಿ ತಾಲೂಕು ಎರ್ಮಾಯ್ ಫಾಲ್ಸ್ ಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. Views: 338

ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಹೊಸದಿಲ್ಲಿ:  ಏರಸೆಲ್-ಮ್ಯಾಕ್ಸಿಸ್ ಬಹುಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ದೆಹಲಿಯ ಕೋರ್ಟೊಂದು ಜೂನ್ 5 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಇಂದು ಮುಂಜಾನೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಜೂನ್ 5 ರೊಳಗಾಗಿ ಪಿ.ಚಿದಂಬರಂ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರ್ಟು ಜಾರಿ ನಿರ್ದೇಶನಾಲಯಕ್ಕೆ  ಸೂಚನೆ ನೀಡಿದೆ. ಹಿರಿಯ ನ್ಯಾಯವಾದಿ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ , […]

ರೈತರ ಸಾಲ ಮನ್ನಾ: ಇಂದು ತೀರ್ಮಾನ

ರೈತರ ಸಾಲ ಮನ್ನಾ: ಇಂದು ತೀರ್ಮಾನ

ಬೆಂಗಳೂರು:ರೈತರ ಸಾಲ ಮನ್ನಾ ಕುರಿತಂತೆ ಇಂದು ತೀರ್ಮಾನ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ. ರೈತ ಪರ ಸಂಘಟನೆಗಳು, ಪ್ರಗತಿಪರ ರೈತರ ಸಭೆಗೂ ಮುನ್ನ ವಿಧಾನಸೌಧದ ಆವರಣದಲ್ಲಿ ಮಾತನಾಡಿದ ಅವರು, ಇಂದು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಇಂದು 2-3 ಸಭೆಗಳಿದ್ದು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು. Views: 237

ಮತ್ತೊಬ್ಬ ಬಿಜೆಪಿ ಎಂಎಲ್ ಎ ವಿರುದ್ಧ ಅತ್ಯಾಚಾರದ ದೂರು!

ಮತ್ತೊಬ್ಬ ಬಿಜೆಪಿ ಎಂಎಲ್ ಎ ವಿರುದ್ಧ ಅತ್ಯಾಚಾರದ ದೂರು!

ಬರೇಲಿ (ಉತ್ತರ ಪ್ರದೇಶ): ಬದೌನ್  ಕ್ಷೇತ್ರದ ಬಿಜೆಪಿ ಶಾಸಕ ಕುಶಗ್ರಾ ಸಾಗರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬರೇಲಿ ಯ ಮಹಿಳೆಯೊಬ್ಬಳು ಆರೋಪಿಸಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷಗಳ ಕಾಲ ಸಾಗರ ಅತ್ಯಾಚಾರವೆಸಗಿದ್ದಾನೆ ಎಂದು ದೂರಿದ್ದಾರೆ. ನನ್ನ ತಾಯಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ನಾನೂ ಅಲ್ಲಿಗೆ ಹೋಗುತ್ತಿದ್ದೆ. ಆತ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷ ಅತ್ಯಾಚಾರ ಎಸಗಿದ್ದಾನೆ. ಈಗ ಮದುವೆಗೆ ನಿರಾಕರಿಸುತ್ತಿದ್ದಾನೆ  ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಪೊಲೀಸ […]

ನಲಪಾಡ ಜಾಮೀನು ಅರ್ಜಿ: ನಾಳೆಗೆ ತೀರ್ಪು

ನಲಪಾಡ ಜಾಮೀನು ಅರ್ಜಿ: ನಾಳೆಗೆ ತೀರ್ಪು

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿದ್ವತ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಜಾಮೀನು  ಅರ್ಜಿಯ ಮೇಲಿನ ತೀರ್ಪನ್ನು ಸೇಷನ್ಸ್ ನ್ಯಾಯಾಲಯ ನಾಳೆಗೆ ಕಾದಿರಿಸಿದೆ. ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪನ್ನು ಕಾದಿರಿಸಿದರು. ನಲಪಾಡ್  ಹಲ್ಲೆ ನಡೆಸಿರುವ ಬಗ್ಗೆ ಹದಿನೈದು ಪ್ರಬಲ ಸಾಕ್ಷಿಗಳು ಹೇಳಿಕೆ ನೀಡಿದ್ದು, ವಿಡಿಯೋ ತುಣುಕುಗಳೂ ಸಾಕ್ಷಿ ನೀಡುತ್ತಿವೆ. ಜಾಮೀನು ನೀಡಬಾರದು ಎಂದು ಸರಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ಇದನ್ನು […]

ಮುಂಬೈ: ರೈಲು ಬೋಗಿಗೆ ಬೆಂಕಿ !

ಮುಂಬೈ: ರೈಲು ಬೋಗಿಗೆ ಬೆಂಕಿ !

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಬೋಗಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿಕೊಂಡಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲವಾದರೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಪರಿಹಾರ ಕಾರ್ಯಾಚರಣೆ ನಡೆದಿದೆ. ವಿವರಗಳು ಬರಬೇಕಿದೆ.   Views: 127