ಬಿಜೆಪಿ- ಆರ್ ಎಸ್ ಎಸ್ ಮಣಿಸಲು ಸಮಾನ ಮನಸ್ಕರೊಂದಿಗೆ ಕಾಂಗ್ರೆಸ್ ಮೈತ್ರಿ?

ಬಿಜೆಪಿ- ಆರ್ ಎಸ್ ಎಸ್ ಮಣಿಸಲು ಸಮಾನ ಮನಸ್ಕರೊಂದಿಗೆ ಕಾಂಗ್ರೆಸ್ ಮೈತ್ರಿ?

ಹೊಸದಿಲ್ಲಿ:ಮುಂಬರುವ 2019 ರ ಚುನಾವಣೆಯಲ್ಲಿ ಬಿಜೆಪಿ-ಆರ್ ಎಸ್ ಎಸ್ ಸೋಲಿಸಲು  ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಕಾಂಗ್ರೆಸ್ ನೀಡಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ- ಆರ್ ಎಸ್ ಎಸ್ ಮಣಿಸಲು ಸಮಾನ ಮನಸ್ಕ ಪಕ್ಷಗಳೊಂದಿಗ ಹೊಂದಾಣಿಕೆ ಮಾಡಿಕೊಂಡು ಕಾರ್ಯಕ್ರಮ   ಆಧಾರಿತ ಸೂತ್ರವೊಂದನ್ನು ರೂಪಿಸಲಾಗುವುದು ಎಂದು ಪಕ್ಷದ ರಾಜಕೀಯ ಗೊತ್ತುವಳಿಯಲ್ಲಿ ತಿಳಿಸಲಾಗಿದೆ. ಇಲೆಕ್ಟ್ರಾನಿಕ್ ಮತಯಂತ್ರಗಳ ವಿಷಯ ಕುರಿತಂತೆಯೂ ಗೊತ್ತುವಳಿಯಲ್ಲಿ ಪ್ರಸ್ತಾಪಿಸಿರುವ ಕಾಂಗ್ರೆಸ್, ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವಂತೆ ಚುನಾವಣೆ ಆಯೋಗ ನೋಡಿಕೊಳ್ಳಬೇಕಲ್ಲದೇ ಮತದಾನ ಮತ್ತು […]

ಬೆಂಗಳೂರು ನಿಲ್ದಾಣದಲ್ಲಿ ವಾಲಿದ ವಿಮಾನ: ರನ್ ವೇ ಲೈಟುಗಳಿಗೆ ಹಾನಿ

ಬೆಂಗಳೂರು ನಿಲ್ದಾಣದಲ್ಲಿ ವಾಲಿದ ವಿಮಾನ: ರನ್ ವೇ ಲೈಟುಗಳಿಗೆ ಹಾನಿ

ಬೆಂಗಳೂರು: ಹೈದರಾಬಾದನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ( ಎಸ್ಜಿ 1238) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಆಯತಪ್ಪಿ ದ ಪರಿಣಾಮ ನಾಲ್ಕು ರನ್ ವೇ ದೀಪಗಳು ಜಖಂಗೊಂಡಿವೆ. ಈ ಸಂದರ್ಭದಲ್ಲಿ ರನ್ ವೇ ಬಂದ್ ಆಗಿದ್ದರಿಂದ ಹತ್ತು ವಿಮಾನಗಳ ಪಥವನ್ನು ಬದಲಿಸಬೇಕಾಯಿತು. ವಿಮಾನವು ಇಳಿಯುವ ವೇಳೆ ಆಯತಪ್ಪಿ  ವಾಲಿದ್ದರಿಂದ ರನ್ ವೇ ಎಡಕ್ಕೆ ತಗುಲಿ ಲೈಟುಗಳಿಗೆ ಹಾನಿ   ಉಂಟಾಯಿತು. ಪೈಲಟ್ ಸುಧಾರಿಸಿಕೊಂಡು ವಿಮಾನವನ್ನು ರನ್ ವೇಗೆ ತಂದರು. ಯಾವುದೇ ಪ್ರಾಣಾಪಾಯವಾಗಿಲ್ಲ  ಎಂದು ಸ್ಪಸ್ […]

ಲಂಡನ್ ಕೋರ್ಟ್ ಗೆ ಮಲ್ಯ ಹಾಜರು

ಲಂಡನ್ ಕೋರ್ಟ್ ಗೆ ಮಲ್ಯ ಹಾಜರು

ಲಂಡನ್(ಯು.ಕೆ):ಭಾರತಕ್ಕೆ ಹಸ್ತಾಂತರಿಸುವ ಪ್ರಕರಣ ಕುರಿತಂತೆ ಮದ್ಯದ ದೊರೆ ವಿಜಯ ಮಲ್ಯ   ಅವರನ್ನು ಲಂಡನ್ನಿನ ವೆಸ್ಟ ಮಿನಿಸ್ಟರ್  ಮ್ಯಾಜಿಸ್ಟ್ರೇಟ್ ಕೋರ್ಟಗೆ  ಹಾಜರುಪಡಿಸಲಾಯಿತು. 9000 ಕೋಟಿ ರೂ ವಂಚನೆ ಸೇರಿದಂತೆ  ಹಲವು ಹಣಕಾಸು ಅವ್ಯವಹಾರಗಳಲ್ಲಿ ಪಾಲ್ಗೊಂಡಿರುವ   ಆರೋಪ  ಎದುರಿಸುತ್ತಿರುವ ಮಲ್ಯ  ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೇ ಎಂಬ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಕಳೆದ ಜನೇವರಿಯಲ್ಲಿ ಮಲ್ಯಗೆ ನೀಡಿದ್ದ ಜಾಮೀನನ್ನು ಏಪ್ರಿಲ್ 2 ರ ವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿತ್ತು. ಹಸ್ತಾಂತರ ವಾರಂಟ್ ಮೇಲೆ ಕಳೆದ ವರ್ಷ  ಏಪ್ರಿಲ್ […]

ದೇಶದ ಪ್ರಗತಿ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ-ರಾಹುಲ್

ದೇಶದ  ಪ್ರಗತಿ  ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ-ರಾಹುಲ್

ಕಾಂಗ್ರೆಸ್ ಮಹಾಧಿವೇಶನದಲ್ಲಿ ಮೊದಲ ಭಾಷಣ ಹೊಸದಿಲ್ಲಿ:ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ  ಎಂದು ಪಕ್ಷದ  ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ  ಮಹಾಅಧಿವೇಶನದಲ್ಲಿ ಮೊದಲ ಬಾರಿ ಶನಿವಾರ ಮಾತನಾಡಿದ  ಅವರು, ಕೈ  ಚಿಹ್ನೆಯು  ಕಾಂಗ್ರೆಸ್ ನ ಸಂಕೇತ. ಕಾಂಗ್ರೆಸ್ ಪಕ್ಷ ಮಾತ್ರ ದೇಶದ ಜನತೆಯನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು  ಹೇಳಿದರು. ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ಅಭಿನಂದಿಸಿದ ರಾಹುಲ್ ಗಾಂಧಿ, ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು ಎಲ್ಲರ ಮಾರ್ಗದರ್ಶನ  ಅಗತ್ಯ  […]

ಟಂ ಟಂ ಪಲ್ಟಿ: ಮೂವರ ಸಾವು

ಟಂ ಟಂ ಪಲ್ಟಿ: ಮೂವರ ಸಾವು

ಬಾದಾಮಿ (ಬಾಗಲಕೋಟೆ):  ಟಂಟಂ ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿ್ರುವ ಘಟನೆ ತಾಲೂಕಿನ ೆಸ್. ಎನ್. ಕರಡಿಗುಡ್ಡ ಗ್ರಾಮದಲ್ಲಿ ಶಾಲಾ ಶಿಕ್ಷಕಿ  ಸಂಗವ್ವ ಗಾಣಿಗೇರ ಸೇರಿ ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 215

ರಾಜ್ಯಸಭೆ ಚುನಾವಣೆ: ಅಂತಿಮ ಕಣದಲ್ಲಿ ಐವರು

ರಾಜ್ಯಸಭೆ ಚುನಾವಣೆ: ಅಂತಿಮ ಕಣದಲ್ಲಿ ಐವರು

ಬೆಂಗಳೂರು: ರಾಜ್ಯಸಭೆಗೆ   ಮಾರ್ಚ 23 ರಂದು ನಡೆಯಲಿರುವ ಚುನಾವಣೆಗೆ ರಾಜ್ಯದಿಂದ  ಐವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ಸಿನ  ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ಜೆ. ಸಿ. ಚಂದ್ರಶೇಖರ, ಜೆಡಿಎಸ್ ನಿಂದ ಬಿ.ಎಂ. ಫಾರೂಕಿ ಹಾಗೂ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ ಕಣದಲ್ಲಿರುವ  ಅಭ್ಯರ್ಥಿಗಳು. ನಾಮಪತ್ರ ಹಿಂದಕ್ಕೆ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಆದರೆ, ಯಾರೂ ನಾಮಪತ್ರ ಹಿಂದಕ್ಕೆ ಪಡೆದಿಲ್ಲವಾದ್ದರಿಂದ ಐದು ಜನ   ಅಂತಿಮ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಎಸ್ ಮೂರ್ತಿ ತಿಳಿಸಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ […]

ಬಿಎಸ್ಪಿಯೊಂದಿಗೆ ಮೈತ್ರಿ: ಸಮಾಜವಾದಿ ಮುಖಂಡರ ಇಂಗಿತ

ಬಿಎಸ್ಪಿಯೊಂದಿಗೆ ಮೈತ್ರಿ: ಸಮಾಜವಾದಿ ಮುಖಂಡರ ಇಂಗಿತ

ಲಕ್ನೋ (ಉತ್ತರ ಪ್ರದೇಶ): ಮುಂಬರುವ ದಿನಗಳಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ   ಇಂಗಿತವನ್ನು ಸಮಾಜವಾದಿ ಪಕ್ಷದ ಮುಖಂಡ ರಾಮಗೋವಿಂದ ಚೌಧರಿ ಗುರುವಾರ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ  ಎರಡು ಲೋಕಸಭಾ ಕ್ಷೇತ್ರಗಳಲ್ಲಿ ನಡೆದ  ಉಪಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ನೆರವಿನಿಂದಲೇ ಸಮಾಜವಾದಿ  ಪಕ್ಷ ಗೆಲುವು ಸಾಧಿಸಲು ಸಾಧ್ಯವಾಯಿತು. ಅದಕ್ಕಾಗಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಯನ್ನು ಅಭಿನಂದಿಸುವುದಾಗಿ ಅವರು ಹೇಳೀದರು. ಮುಂಬರುವ ದಿನಗಳಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಜಯಮಾಲೆ ಕೊರಳಿಗೆ ಹಾಕಿಕೊಳ್ಳುವುದು ಸುಲಭವಾಗುತ್ತದೆ ಎಂದು ಅವರು ಹೇಳಿದರು. […]

ಬಿಜೆಪಿ ಮುಖಂಡನ ಮೇಲೆ ಉಗ್ರರ ದಾಳಿ

ಬಿಜೆಪಿ ಮುಖಂಡನ ಮೇಲೆ ಉಗ್ರರ ದಾಳಿ

ಪುಲ್ವಾಮಾ( ಜಮ್ಮು ಕಾಶ್ಮೀರ): ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಖಾನ್ಮೋಹ ಪ್ರದೇಶದಲ್ಲಿ ಬಿಜೆಪಿ ನಾಯಕ  ಅನ್ವರಖಾನ್ ಮೇಲೆ ಭಯೋತ್ಪಾದಕರು ಗುರುವಾರ ದಾಳಿ ನಡೆಸಿದ್ದಾರೆ. ಈ ದಾಳಿ ಕಾಲಕ್ಕೆ ಒಬ್ಬ ಪೊಲೀಸ್ ಪೇದೆಗೆ ಗಾಯಗಳಾಗಿದ್ದು, ಉಳಿದಂತೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆಚ್ಚಿನ ವಿವರಗಳಿಗೆ ಕಾಯಲಾಗುತ್ತಿದೆ. (ಮೂಲ: ಎಎನ್ ಐ) Views: 153

ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ವಿರುದ್ಧ ಸಹೋದರ ಲಖನ್ ಸ್ಪರ್ಧೆ: 25 ರಂದು ಬಿಜೆಪಿ ಸೇರ್ಪಡೆ?

ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ವಿರುದ್ಧ ಸಹೋದರ ಲಖನ್  ಸ್ಪರ್ಧೆ: 25 ರಂದು ಬಿಜೆಪಿ ಸೇರ್ಪಡೆ?

ಕಾವೇರುತ್ತಿದೆ ಚುನಾವಣಾ ಚಿತ್ರಣ ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ   ಇನ್ನೂ ಪ್ರಕಟವಾಗಿಲ್ಲವಾದರೂ ಕಾವು ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣೆಗೆ ಆರು ತಿಂಗಳ ಮೊದಲೇ ಪಕ್ಷಾಂತರ ಪರ್ವ ಆರಂಭವಾಗಿದ್ದು, ಇದೀಗ ಬೆಳಗಾವಿ ಜಿಲ್ಲೆ ಯಮಕಮರಡಿ ಕ್ಷೇತ್ರ ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾಗುವ   ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಹಾಲಿ ಶಾಸಕ,  ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರ ವಿರುದ್ಧ ಸ್ವತಃ ಅವರ ಸಹೋದರ ಲಖನ್  ಜಾರಕಿಹೊಳಿ ಕಣಕ್ಕಿಳಿಯಲು ಸಜ್ಜಾಗಿರುವುದು ಈಗಿನ ಹಾಟ್ ನ್ಯೂಸ್! ಕೈ ಪಾಳೆಯ ತೊರೆದು ಹಿರಿಯ […]

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮತ್ತೊಂದು ಹಗರಣ !

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮತ್ತೊಂದು ಹಗರಣ !

ಹೊಸದಿಲ್ಲಿ:ಪಂಜಾಬ್ ನ್ಯಾಷನಲ್ ಬ್ಯಾಂಕು ಮತ್ತೊಂದು ಬಹುಕೋಟಿ ಹಗರಣ  ಪತ್ತೆ ಹಚ್ಚಿದ್ದು, ಮುಂಬೈ ಶಾಖೆಯೊಂದರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 9.9 ಕೋಟಿ ರೂ. ಹಗರಣದ ಕುರಿತಂತೆ ಪೊಲೀಸ್ ಠಾಣೆಗ ದೂರು ಸಲ್ಲಿಸಲಾಗಿದೆ. ಪ್ರತಿಷ್ಠಿತ  ಆಭರಣ ವ್ಯಾಪಾರಿ ನೀರವ್ ಮೋದಿ, ಹಲವು ಬ್ಯಾಂಕುಗಳಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು 1.77 ಬಿಲಿಯನ್ ಅಮೇರಿಕನ್ ಡಾಲರ್ ನಷ್ಟು ಹಣ ವಂಚಿಸಿರುವ ಪ್ರಕರಣ  ಇನ್ನೂ ಚರ್ಚೆಯಲ್ಲಿರುವಾಗಲೇ ಮತ್ತೊಂದು ಹಗರಣ ಹೊರಬಿದ್ದಿರುವುದು ಬ್ಯಾಂಕಿಂಗ್ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಸಂಬಂಧ ನೀರವ್ ಮೋದಿ ಹಾಗೂ […]