ಮಗನೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ಅಮ್ಮ !

ಮಗನೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ  ಅಮ್ಮ !

ಲುಧಿಯಾನಾ ( ಪಂಜಾಬ್): ವಿದ್ಯೆ ಕಲಿಯಲು ವಯಸ್ಸಿನ ಮಿತಿಯಿಲ್ಲ  ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬ ತಾಯಿ ಮಗನ ಜತೆಗೆ ಎಸ್ ಎಸ್ ಎಲ್ ಸಿ ಬೋರ್ಡ ಪರೀಕ್ಷೆಗೆ ಸಿದ್ದತೆ ನಡೆಸಿದ್ದಾರೆ. 44 ವರ್ಷದ  ರಾಣಿ ಬಾಲಾ 1989 ರಲ್ಲಿಯೇ 9 ನೇ ತರಗತಿ ಪಾಸಾಗಿದ್ದರು. ಮನೆತನದ ಪರಿಸ್ಥಿತಿ ಕಾರಣ ಮುಂದೆ ಓದಲಾಗಲಿಲ್ಲ.   ಅಷ್ಟೊತ್ತಿಗೆ ಮದುವೆ ಆಯ್ತು, ಸಂಸಾರವೂ ಶುರುವಾಯ್ತು ! ಶಿಕ್ಷಣವನ್ನು ಪೂರೈಸಿಕೊ ಎಂದು ನನ್ನ ಪತಿ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ನನಗೆ ಮೂವರು ಮಕ್ಕಳಿದ್ದು, ಅವರನ್ನು […]

ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಎಂ ಪಿ ಗುಡುಗು

ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಎಂ ಪಿ ಗುಡುಗು

ಗುವಾಹತಿ ( ಆಸ್ಸಾಂ): ಆಸ್ಸಾಮ್ ನಲ್ಲಿ  ಹೆಚ್ಚುತ್ತಿರುವ  ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ತೇಜಪುರ ಸಂಸದ  ಆರ್. ಪಿ. ಶರ್ಮಾ, ಇಂತಹ ಹೀನ  ಕೃತ್ಯ ಮಾಡುವವರನ್ನು ಸಾರ್ವಜನಿಕವಾಗಿಯೇ ಗುಂಡಿಟ್ಟು ಕೊಲ್ಲಬೇಕು ಎಂದು ಗುಡುಗಿದ್ದಾರೆ. ಮಹಿಳೆಯರಿಗೆ ಗೌರವ ಕೊಡದ  ವ್ಯಕ್ತಿಗಳಿಗೆ ಇಂತಹ ಶಿಕ್ಷೆಯೇ ಒಳ್ಳೆಯದು ಎಂದು ಅವರು ಹೇಳಿದ್ದಾರೆ. ಆಸ್ಸಾಂ ನ ನಾಗಾಂವ ಗಡಿಯಲ್ಲಿ ಇತ್ತೀಚೆಗೆ ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿ  ಅತ್ಯಾಚಾರ ನಡೆಸಿದ್ದ ಐವರು ದುಷ್ಕರ್ಮಿಗಳು  ಆ ಮಗುವಿಗೆ ಬೆಂಕಿ ಹಚ್ಚಿ ಸುಟ್ಟು […]

11 ಗಂಟೆಗೆ ಶುರುವಾಗಲಿದೆ ಸಿ. ಎಂ. ಚುನಾವಣಾ ಪ್ರಚಾರ !

11 ಗಂಟೆಗೆ ಶುರುವಾಗಲಿದೆ ಸಿ. ಎಂ. ಚುನಾವಣಾ ಪ್ರಚಾರ !

ಮೈಸೂರು: ಬರುವ ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನ ಸಭೆ ಚುನಾವಣೆಗೆ  ಸಜ್ಜಾಗಿರುವ ಸಿ ಎಂ ಸಿದ್ಧರಾಮಯ್ಯ ಗುರುವಾರ  ಅಧಿಕೃತ ಪ್ರಚಾರ  ಆರಂಭಿಸಲಿದ್ದಾರೆ. ತಾವು ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದಿಂದ ಬೆಳಗ್ಗೆ 11 ಗಂಟೆಗೆ  ಅಧಿಕೃತ ಪ್ರಚಾರ  ಆರಂಭಿಸಲಿರುವ ಸಿದ್ಧರಾಮಯ್ಯ, ಚುನಾವಣೆ ದಿನಾಂಕ ಘೋಷಣೆ ಬಳಿಕ  ಇದೇ ಮೊದಲ ಬಾರಿ ಪ್ರಚಾರ ಶುರು ಮಾಡಲಿದ್ದಾರೆ. ರಣದಮ್ನನ ಹಳ್ಳಿಯಲ್ಲಿ ಪ್ರಚಾರ ಕಾರ್ಯಕ್ರಮ   ಆಯೋಜಿಸಲಾಗಿದ್ದು, ಕಾಳಸಿದ್ದನಹುಂಡಿ, ಹಂಚಾ ಗಳಗರ ಹುಂಡಿ, ಉದ್ದೂರು ಸೇರಿದಂತೆ ಹಲವು ಗ್ರಾಮಗಳಿಗೆ ಸಿ ಎಂ ಭೇಟಿ […]

ಭಾರೀ ಅಂತರದಿಂದ ಕಾಂಗ್ರೆಸ್ ಗೆಲ್ಲಿಸಿ: ಸತೀಶ ಜಾರಕಿಹೊಳಿ ಮನವಿ

ಭಾರೀ ಅಂತರದಿಂದ ಕಾಂಗ್ರೆಸ್ ಗೆಲ್ಲಿಸಿ: ಸತೀಶ ಜಾರಕಿಹೊಳಿ ಮನವಿ

ಯಮಕನಮರಡಿ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರೀ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಇಸ್ಲಾಂಪುರ, ಶಹಾಬಂದರ ಹಾಗೂ ಪಾಶ್ವಾಪುರ  ಗ್ರಾಮಗಳಿಗೆ ಬುಧವಾರ   ಭೇಟಿ ನೀಡಿ, ಮುಖಂಡರು, ಗ್ರಾಮದ ಯುವಕರು, ಹಿರಿಯರೊಂದಿಗೆ ಚುನಾವಣೆ ಕುರಿತಂತೆ ಅವರು ಸಮಾಲೋಚನೆ ನಡೆಸಿದರು. ಕಳೆದ ಹತ್ತು ವರ್ಷಗಳ  ಅವಧಿಯಲ್ಲಿ ತಾವು ಶಾಸಕರಾಗಿ ಈ ಭಾಗದ  ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಆ  ಸಾಧನೆಗಳನ್ನು ಮತದಾರರಿಗೆ ಮನೆದಟ್ಟು ಮಾಡಿಕೊಡಬೇಕು.  […]

ಬಾಂಬ್ ಬೆದರಿಕೆ: ದೆಹಲಿಗೆ ವಾಪಾಸ್ಸಾದ ವಿಮಾನ !

ಬಾಂಬ್ ಬೆದರಿಕೆ: ದೆಹಲಿಗೆ ವಾಪಾಸ್ಸಾದ ವಿಮಾನ !

ಹೊಸದಿಲ್ಲಿ:  ಕೋಲ್ಕತ್ತಾಕ್ಕೆ ತೆರಳುತ್ತಿದ್ದ ವಿಮಾನವೊಂದು ಬಾಂಬ್ ಬೆದರಿಕೆ ಪರಿಣಾಮ  ದೆಹಲಿಗೆ ಹಿಂತಿರುಗಿ ಬಂದ ಪ್ರಸಂಗ ಬುಧವಾರ ನಡೆಯಿತು. ನ್ಯಾಷನಲ್ ಕ್ಯಾರೀಯರ್ಸ ಕಾಲ್ ಸೆಂಟರಿನಿಂದ ಬಾಂಬ್ ಬೆದರಿಕೆ  ಕರೆ ಬಂದ ಹಿನ್ನೆಲೆಯಲ್ಲಿ ಎಐ-020 ವಿಮಾನ ದೆಹಲಿ ನಿಲ್ದಾಣಕ್ಕೆ ಮರಳಿ ಬಂತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಕಳೆದ ವರ್ಷ ನವೆಂಬರ್ 8 ರಂದು ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನವೂ  ಬಾಂಬ್ ಬೆದರಿಕೆಯಿಂದಾಗಿ ವಾಪಾಸ್ಸಾಗಿತ್ತು. (ಮೂಲ :  ಎಎನ್ ಐ) Views: 147

ನೀರವ್ ಮೋದಿ ಆಪ್ತನ ಬಂಧನ

ನೀರವ್ ಮೋದಿ ಆಪ್ತನ ಬಂಧನ

ಹೊಸದಿಲ್ಲಿ:ಕೋಟ್ಯಂತರ ರೂ. ಹಗರಣದ ರೂವಾರಿ ನೀರವ್ ಮೋದಿಯ ಪರಮಾಪ್ತ ಫೈರ್ ಸ್ಟಾರ್  ಗ್ರುಪ್ ನ  ಉಪಾಧ್ಯಕ್ಷ ಶಾಂ ಸುಂದರ ವಾಡ್ವಾನನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ವಂಚನೆ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯವು ಶನಿವಾರವಷ್ಟೇ  ನೀರವ್ ಮೋದಿ, ಮೆಹುಲ್ ಛೋಕ್ಸಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 251 ಕಡೆ ಶೋಧ ಕಾರ್ಯ ನಡೆಸಲಾಗಿದ್ದು, ಅಪಾರ ಪ್ರಮಾಣದ ವಜ್ರ, ಚಿನ್ನ, ಬೆಲೆಬಾಳುವ  ಕಲ್ಲು ಮತ್ತಿತರ ವಸ್ತುಗಳನ್ನು […]

ಪ್ರಶ್ನೆ ಪತ್ರಿಕೆ ಸೋರಿಕೆ: 2 ವಿಷಯಗಳ ಮರುಪರೀಕ್ಷೆಗೆ ಸಿಬಿಎಸ್ ಸಿ ತೀರ್ಮಾನ

ಪ್ರಶ್ನೆ ಪತ್ರಿಕೆ ಸೋರಿಕೆ: 2 ವಿಷಯಗಳ ಮರುಪರೀಕ್ಷೆಗೆ ಸಿಬಿಎಸ್ ಸಿ  ತೀರ್ಮಾನ

ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾದ  ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಸೆಕೆಂಡರಿ ಪರೀಕ್ಷಾ ಮಂಡಳಿಯು 10 ನೇ ತರಗತಿಯ ಗಣಿತ ಮತ್ತು 12 ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಿಗೆ ಮರುಪರೀಕ್ಷೆ ನಡೆಸಲಿದೆ. ಪರೀಕ್ಷೆಯಲ್ಲಿ ನಡೆದಿರುವ ವಿದ್ಯಮಾನಗಳನ್ನು ಮಂಡಳಿಯು ಗಮನಿಸಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿನ ಶಿಸ್ತು ಕಾಯ್ದುಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ  ಒದಗಿಸುವ ನಿಟ್ಟಿನಲ್ಲಿ ಈ ಎರಡೂ ವಿಷಯಗಳಲ್ಲಿ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆ ನಡೆಯುವ ದಿನಾಂಕಗಳನ್ನು ಒಂದು ವಾರದೊಳಗೆ ಸಿಬಿಎಸ್ ಸಿ ವೆಬ್ ಸೈಟ್ ನಲ್ಲಿ […]

ಎಂ ಎಲ್ ಎ ಹೆಸರು ಹೇಳಿ ಹೊಡೆದ್ರು..: ಪೊಲೀಸರಿಗೆ ದೇಸಾಯಿ ದೂರು !

ಎಂ ಎಲ್ ಎ ಹೆಸರು ಹೇಳಿ ಹೊಡೆದ್ರು..: ಪೊಲೀಸರಿಗೆ ದೇಸಾಯಿ ದೂರು !

ಥಳಿಸಿದವರು ಉಲ್ಟಾ ಹೊಡೆದರು ಬೆಳಗಾವಿ: ಎಂ.ಎಲ್ ಎ ವಿರುದ್ಧ   ಅಪಪ್ರಚಾರ  ಮಾಡುತ್ತಿದ್ದಿ ಎಂದು ಹೇಳಿಕೊಂಡು 20-25 ಜನರ ಗುಂಪು  ತಮ್ಮ ಮೇಲೆ ಹಲ್ಲೆ ನಡೆಸಿ, ಅವಮಾನಗೊಳಿಸಿದೆ ಎಂದು ವ್ಯಾಪಾರಿ, ಸಮಾಜ ಸೇವಕ ಮಹ್ಮದ ರಫೀಕ ದೇಸಾಯಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಕತಿವೇಸ್ ನ ತೌಫಿಕ್ ಅಲವಾಡಕರ, ಅಜಮನಗರದ  ಅಬ್ದು ಮುಲ್ಲಾ ಹಾಗೂ ಇಮ್ತಿಯಾಜ  ಎಂಬುವವರು 20-25 ಜನರ ಗುಂಪು ಕಟ್ಟಿಕೊಂಡು ಬಂದು ಮಂಗಳವಾರ ಬೆಳಗ್ಗೆ ತಮ್ಮ ನ್ಯಾನೋ ಕಾರು ತಡೆದು ಹಲ್ಲೆ ನಡೆಸಿದರು ಎಂದು […]

ಕಾರು- ಬೈಕ್ ಡಿಕ್ಕಿ: ಒಬ್ಬ ಸಾವು

ಕಾರು- ಬೈಕ್ ಡಿಕ್ಕಿ: ಒಬ್ಬ ಸಾವು

ಸವದತ್ತಿ : ಎರಡು ಕಾರು ಮತ್ತು  ಬೈಕ್ ನುವೆ ಡಿಕ್ಕಿ ಸಂಭವಿಸಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ. ಸವದತ್ತಿ  ಪಟ್ಟಣದ ಸಮೀಪ  ಈ ದುರಂತ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ವಿಠ್ಠಲ ಮಾದರ (32) ಎಂದು ಗುರುತಿಸಲಾಗಿದೆ. ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಬೈಕೊಂಡು ಕಾರಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ. ಸವದತ್ತಿ   ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Views: 119

ಪುತ್ರ ಶೋಕ: ವೈದ್ಯ ದಂಪತಿ ಆತ್ಮಹತ್ಯೆ

ಪುತ್ರ ಶೋಕ: ವೈದ್ಯ ದಂಪತಿ ಆತ್ಮಹತ್ಯೆ

ಮೈಸೂರು: ಪುತ್ರಶೋಕದೊಂದ ನೊಂದ ವೈದ್ಯ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದದೆ. ಮೈಸೂರಿನ ಸರಸ್ವತಿಪುರ 14 ನೇ ಮುಖ್ಯ ರಸ್ತೆಯ ನಿವಾಸಿಗಳಾದ ಡಾ. ಸತೀಶ, ಡಾ. ವೀಣಾ ಅವರೇ ಆತ್ಮಹತ್ಯೆ   ಮಾಡಿಕೊಂಡ ವೈದ್ಯ ದಂಪತಿ. ಪುತ್ರ ಶೋಕದಿಂದ ಖಿನ್ನತೆಗೊಳಗಾಗಿದ್ದ  ಈ ದಂಪತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದಿದ್ದಾರೆ. Views: 107