ಟಿಪ್ಪರ್, ಸಿಮೆಂಟ್ ಲಾರಿ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಟಿಪ್ಪರ್, ಸಿಮೆಂಟ್ ಲಾರಿ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಕಲಬುರಗಿ: ಸಿಮೆಂಟ್ ಲಾರಿ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾದ ಸಿಮೆಂಟ್ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿ ಹೊರವಲಯದ ಸೇಡಂ ರಸ್ತೆಯ ಖರ್ಗೆ ಸರ್ಕಲ್ ಬಳಿ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.  ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳಖೇಡದಿಂದ‌ ಆಳಂದ ತಾಲೂಕಿನ ಪಟ್ನಾಕ್ಕೆ ಹೊರಟಿದ್ದ ಸಿಮೆಂಟ್ ಲಾರಿ ಹಾಗೂ ಹುಮ್ನಾಬಾದ್ ರಸ್ತೆಯಿಂದ ಜೇವರ್ಗಿ ಕಡೆ ಹೊರಟಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಎಮ್ ಬಿ […]

ಯಡಿಯೂರಪ್ಪ ಸಿಎಂ: ಶಹಾಪುರದಲ್ಲಿ ಸಂಭ್ರಮಾಚರಣೆ

ಯಡಿಯೂರಪ್ಪ ಸಿಎಂ: ಶಹಾಪುರದಲ್ಲಿ ಸಂಭ್ರಮಾಚರಣೆ

ಶಹಾಪುರ: ಕರ್ನಾಟಕ ರಾಜ್ಯದ ೨೪ ನೇ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕಾರ ಮಾಡಿದರು . ಅತ್ತ ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಗೆ ಪ್ರಮಾಣವಚನ ಸ್ವೀಕಾರ ಮಾಡುವಾಗಲೇ ಇತ್ತ ಶಹಾಪುರದ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ಬಿಜೆಪಿಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗುರು ಕಾಮ ಬಸ್ಸು ಎಸ್ .ಬಸವರಾಜ್ ಸತ್ಯಂಪೇಟ್ ಗುರುರಾಜ್ ಹಾಗೂ ಇತರರು ಹಾಜರಿದ್ದರು . Munna Bagwanhttp://udayanadu.com

ವಿನಯ ಕುಲಕರ್ಣಿ ಬೆಂಬಲಿಗರಿಂದ ಧಾರವಾಡದಲ್ಲಿ ಪ್ರತಿಭಟನೆ

ವಿನಯ ಕುಲಕರ್ಣಿ ಬೆಂಬಲಿಗರಿಂದ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ: ಚುನಾವಣೆ ಸಂದರ್ಭದಲ್ಲಿ ಇವಿಎಂ ಮಶಿನ್ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬೆಂಬಲಿಗರು ಬುಧವಾರ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿನ ಜ್ಯುಬಿಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು, ಬಿಜೆಪಿ ನಾಯಕರುಗಳ ವಿರುದ್ಧ ಘೋಷಣೆ ಕೂಗಿದರು. ಮತಯಂತ್ರದಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಬಿಜೆಪಿ ನಾಯಕರೇ ಹೇಳುವ ಪ್ರಕಾರ ಕಡಿಮೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂದಿದ್ದರು. ಆದರೆ,ಬಿಜೆಪಿ ಅಭ್ಯರ್ಥಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದನ್ನು […]

ನಿಂಬಣ್ಣವರ ಬಾಯಿಗೆ ಬಿದ್ದ ಧಾರವಾಡ ಪೇಡಾ..!

ನಿಂಬಣ್ಣವರ ಬಾಯಿಗೆ ಬಿದ್ದ ಧಾರವಾಡ ಪೇಡಾ..!

ಧಾರವಾಡ: ಹಾಲಿ ಕಾರ್ಮಿಕ ಸಚಿವರು ಹಾಗೂ ಕಲಘಟಗಿ ಮತಕ್ಷೇತ್ರದ ಪ್ರಭಾವಿ ಶಾಸಕರಾಗಿದ್ದ ಕಾಂಗ್ರೆಸ್ ನ ಸಂತೋಷ ಲಾಡ್ ಅವರ ವಿರುದ್ಧ ಸತತ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಸಿ.ಎಂ.ನಿಂಬಣ್ಣವರ ಅವರಿಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಲಕ್ಷ್ಮೀ ಒಲಿದಿದ್ದಾಳೆ. ಆ ಮೂಲಕ ಅವರ ಬಾಯಿಗೆ ಧಾರವಾಡ ಬಿದ್ದಿದೆ. ಸಂತೋಷ ಲಾಡ್ ಅವರ ವಿರುದ್ಧ ಸಿ.ಎಂ.ನಿಂಬಣ್ಣವರ ಅವರು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ವಿರೋಚಿತ ಗೆಲುವು ದಾಖಲಿಸುವ ಮೂಲಕ ಕಲಘಟಗಿಯಲ್ಲಿ ಕಮಲವನ್ನು ಅರಳಿಸಿದ್ದಾರೆ. ಫಲಿತಾಂಶ ಹೊರಬರುತ್ತಿದ್ದಂತೆ ಕೃಷಿ ವಿವಿಗೆ […]

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ

1) ಯಾದಗಿರಿ ವಿಧಾನಸಭೆ ಕ್ಷೇತ್ರ: ಬಿಜೆಪಿ ಗೆಲುವು ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಪಡೆದ ಮತಗಳು :62,227 ಗೆಲುವಿನ ಅಂತರ: 12,881 ಪ್ರತಿಸ್ಪರ್ಧಿ ಕಾಂಗ್ರೆಸ್ ನ ಡಾ.ಎ.ಬಿ.ಮಾಲಕರೆಡ್ಡಿ ಪಡೆದ ಮತಗಳು : 49,346 ಸೋಲು ಮೂರನೇ ಸ್ಥಾನ ಜೆಡಿಎಸ್ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳು: 25,774 2) ಗುರುಮಠಕಲ್ ವಿಧಾನಸಭೆ ಕ್ಷೇತ್ರ : ಜೆಡಿಎಸ್ ಗೆಲುವು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಪಡೆದ ಮತಗಳು : 79,627 ಗೆಲುವಿನ ಅಂತರ:24,480 ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ […]

ಧಾರವಾಡದಲ್ಲಿ ಐದು ಕ್ಷೇತ್ರಗಳಲ್ಲಿ ಅರಳಿದ ಕಮಲ: ಇಬ್ಬರು ಸಚಿವರಿಗೆ ತೀವ್ರ ಮುಖಭಂಗ

ಧಾರವಾಡದಲ್ಲಿ ಐದು ಕ್ಷೇತ್ರಗಳಲ್ಲಿ ಅರಳಿದ ಕಮಲ: ಇಬ್ಬರು ಸಚಿವರಿಗೆ ತೀವ್ರ ಮುಖಭಂಗ

ಧಾರವಾಡ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವ ಮೂಲಕ ಧಾರವಾಡದಲ್ಲಿ ಬಿಜೆಪಿ ಕೋಟೆಯನ್ನು ಕಟ್ಟಿಕೊಂಡಿದೆ. ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಧಾರವಾಡ ಗ್ರಾಮೀಣ ಹಾಗೂ ಕಲಘಟಗಿ ಮತಕ್ಷೇತ್ರಗಳು ಸಾಕಷ್ಟು ಗಮನಸೆಳೆದಿದ್ದವು. ಆದರೆ, ಆ ಕ್ಷೇತ್ರಗಳು ಇದೀಗ ಬಿಜೆಪಿ ಪಾಲಾಗುವ ಮೂಲಕ ಕಾಂಗ್ರೆಸ್ ನ ಹಾಲಿ ಸಚಿವರಿಗೆ ತೀವ್ರ ಮುಖಭಂಗ ಉಂಟು ಮಾಡಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ […]

ಧಾರವಾಡದಲ್ಲಿ ಸಚಿವ ವಿನಯ ಕುಲಕರ್ಣಿಗೆ ಭಾರಿ ಹಿನ್ನಡೆ

ಧಾರವಾಡದಲ್ಲಿ ಸಚಿವ ವಿನಯ ಕುಲಕರ್ಣಿಗೆ ಭಾರಿ ಹಿನ್ನಡೆ

ಧಾರವಾಡ: ಗ್ರಾಮೀಣ ‌ಕ್ಷೇತ್ರದಲ್ಲಿ 8 ನೇ ಸುತ್ತಿನಲ್ಲಿ ಮತ ಎಣಿಕೆಯಲ್ಲಿಯೂ ಅಮೃತ ದೇಸಾಯಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಅಮೃತ ದೇಸಾಯಿ 12,853 ಮತಗಳಿಂದ ಮುಂದಿದ್ದು, ಸಚಿವ ವಿನಯ ಕುಲಕರ್ಣಿ ಭಾರಿ ಹಿನ್ನಡೆ ಸಾಧಿಸಿದ್ದಾರೆ, ನವಲಗುಂದ- ಬಿಜೆಪಿಯ ಶಂಕರ್ ಪಾಟೀಲ ಮುನೇನಕೊಪ್ಪ ಮುನ್ನಡೆ ಕುಂದಗೋಳ-  ಕಾಂಗ್ರೆಸ್ ನ CS ಶಿವಳ್ಳಿ ಮುನ್ನಡೆ ಹುಬ್ಬಳ್ಳಿ ಧಾರವಾಡ ( ಪೂರ್ವ) ಕಾಂಗ್ರೆಸ್ ಪ್ರಸಾದ ಅಬ್ಬಯ್ಯ ಮುನ್ನಡೆ ಹುಬ್ಬಳ್ಳಿ ಧಾರವಾಡ ಕೇಂದ್ರ ಬಿಜೆಪಿ ಜಗದೀಶ ಶೆಟ್ಟರ್ ಮುನ್ನಡೆ ಹುಬ್ಬಳ್ಳಿ ಧಾರವಾಡ ಪಶ್ಚಿಮ- […]

ಧಾರವಾಡ: 6 ನೇ ಸುತ್ತಿನಲ್ಲಿಯೂ ಸಚಿವ ವಿನಯಗೆ ಹಿನ್ನಡೆ

ಧಾರವಾಡ: 6 ನೇ ಸುತ್ತಿನಲ್ಲಿಯೂ ಸಚಿವ ವಿನಯಗೆ ಹಿನ್ನಡೆ

ಧಾರವಾಡ: ತೀವ್ರ ಕುತೂಹಲ ಕೆರಳಿಸಿರುವ ಧಾರವಾಡ ವಿಧಾನಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಆರನೇ ಸುತ್ತಿನಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ. 6351 ಮತಗಳಿಂದ ಅಮೃತ ದೇಸಾಯಿ ಮುನ್ನಡೆ ಸಾಧಿಸಿದ್ದಾರೆ. ಹು-ಧಾ ಪೂರ್ವದಲ್ಲಿ 5892 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಮುನ್ನಡೆ ಸಾಧಿಸಿದರೆ,  ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ ಮುನೆನಕೊಪ್ಪ ಮುಂದಿದ್ದಾರೆ. Munna Bagwanhttp://udayanadu.com

ಶಹಾಪುರ:ಶುರುವಾಗಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಶಹಾಪುರ:ಶುರುವಾಗಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಶಹಾಪುರ: 2018 ನೇ ಸಾಲಿನ ಶಹಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಢವಢವ ಶುರುವಾಗಿದೆ. ಶಹಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಶರಣಬಸ್ಸಪ್ಪಗೌಡ ದರ್ಶನಾಪುರ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗುರು ಪಾಟೀಲ್ ಶಿರವಾಳ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಅಮೀನರೆಡ್ಡಿ ಪಾಟೀಲ್ ಯಾಳಗಿ ಇವರು ಸ್ಪರ್ಧಿಸಿದ್ದು ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಯಲ್ಲಿದ್ದರೆ ಜೆಡಿಎಸ್ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಒಂಚೂರು ಮುಂಚೂಣಿಯಲ್ಲಿದೆ. ಜಯದ ಮಾಲೆ ಯಾರ ಕೊರಳಿಗೆ […]

ನಿಷೇದವಿದ್ದರೂ ಮತಗಟ್ಟೆಯಲ್ಲಿ ಮೊಬೈಲ್ ಬಳಕೆ: ಮತದಾನ ಬಹಿರಂಗ

ನಿಷೇದವಿದ್ದರೂ ಮತಗಟ್ಟೆಯಲ್ಲಿ ಮೊಬೈಲ್ ಬಳಕೆ: ಮತದಾನ ಬಹಿರಂಗ

ಜಮಖಂಡಿ: ಮತದಾನ ಗುಪ್ತ ವಾಗಿರಲು ಚುನಾವಣಾ ಆಯೋಗ ಸಕಲ ರೀತಿಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು ಸಹ ಕೆಲವರು ತಮ್ಮ ಮೊಬೈಲ್ ಗಳಲ್ಲಿ ಮತದಾನ ಮಾಡಿದ  ಫೋಟೊಗಳನ್ನು ಚಿತ್ರಿಸಿಕೊಂಡು ಬಹಿರಂಗ ಪಡಿಸಿರುವ ಘಟನೆ ಕ್ಷೇತ್ರದಲ್ಲಿ ನಡೆದಿದೆ. ಸುರಕ್ಷತೆಗಾಗಿ ಮತಗಟ್ಟೆ ಕೇಂದ್ರಗಳಲ್ಲಿ ಮೊಬೈಲ್ ಗಳನ್ನು ನಿಷೇಧಿಸಲಾಗಿದೆ. ಆದರೆ ಕೆಲವರು ಸಿಬ್ಬಂದಿಗಳ ಕಣ್ಣು ತಪ್ಪಿಸಿ ಮತಗಟ್ಟೆಗಳಲ್ಲಿ ಪೋನ್ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ತಾವು ಮತಚಲಾಯಿಸಿದ ವಿಡಿಯೋ ಹಾಗೂ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಗುಪ್ತ ಮತದಾನವನ್ನು ಬಹಿರಂಗ […]

1 2 3 362